` ram charan teja, - chitraloka.com | Kannada Movie News, Reviews | Image

ram charan teja,

 • ಆರ್.ಆರ್.ಆರ್. ಮಾರ್ಚ್ 18ಕ್ಕೋ.. ಏಪ್ರಿಲ್ 28ಕ್ಕೋ..?

  ಆರ್.ಆರ್.ಆರ್. ಮಾರ್ಚ್ 18ಕ್ಕೋ.. ಏಪ್ರಿಲ್ 28ಕ್ಕೋ..?

  ವೀಕೆಂಡ್ ಕಫ್ರ್ಯೂ, 50:50 ರೂಲ್ಸ್ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ದೇಶಾದ್ಯಂತ ಆರ್.ಆರ್.ಆರ್. ಹವಾ ಎದ್ದಿರಬೇಕಿತ್ತು. ಅನಿವಾರ್ಯವಾಗಿ ರಿಲೀಸ್ ಡೇಟ್ ಮುಂದೂಡಿದ ಸಂಸ್ಥೆ ಈಗಲೂ ಗೊಂದಲದಲ್ಲಿಯೇ ಇದೆ. ಆರ್.ಆರ್.ಆರ್. ಮುಂದೀಗ ಕೆಲವು ಡೇಟ್ಸ್ ಇವೆ.

  ಮಾರ್ಚ್ 18ಕ್ಕೆ ರಿಲೀಸ್ ಮಾಡೋದು ಮೊದಲ ಪ್ಲಾನ್. ಆಗ ಏಪ್ರಿಲ್ 1ರಂದು ರಿಲೀಸ್ ಆಗಲಿರುವ ದೊಡ್ಡ ಚಿತ್ರಗಳಿಗೆ ಗ್ಯಾಪ್ ಸಿಕ್ಕಂತಾಗುತ್ತೆ. ಏಪ್ರಿಲ್ 1ಕ್ಕೆ ತೆಲುಗಿನಲ್ಲೆ ಮಹೇಶ್ ಬಾಬು ಮತ್ತು ಚಿರಂಜೀವಿ ಸಿನಿಮಾಗಳಿವೆ.

  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ಮತ್ತು ಲಾಲ್ ಸಿಂಗ್ ಚಡ್ಡಾ ಇದೆ. ಮಾರ್ಚ್ 18ನ್ನು ಬಿಟ್ಟರೆ ಆರ್.ಆರ್.ಆರ್. ಚಿತ್ರಕ್ಕೆ ಡೇಟ್ ಸಿಕ್ಕೋದು ಏಪ್ರಿಲ್ 28ಕ್ಕೆ. ಒಟ್ಟಿನಲ್ಲಿ ಮಾರ್ಚ್ ಮಧ್ಯಾಂತರದ ನಂತರ ದೇಶಾದ್ಯಂತ ಚಿತ್ರ ಪ್ರೇಮಿಗಳಿಗೆ ಸುಗ್ಗಿಯೋ ಸುಗ್ಗಿ.

 • ಆರ್‍ಆರ್‍ಆರ್ ಕನ್ನಡದಲ್ಲಿ ಕೊಟ್ಟ ಥ್ರಿಲ್

  ಆರ್‍ಆರ್‍ಆರ್ ಕನ್ನಡದಲ್ಲಿ ಕೊಟ್ಟ ಥ್ರಿಲ್

  ಆರ್‍ಆರ್‍ಆರ್. ರಾಜಮೌಳಿ ನಿರ್ದೇಶನದ ಸಿನಿಮಾದ ಟ್ರೇಲರ್ ಸಂಚಲನವನ್ನೇ ಸೃಷ್ಟಿಸಿದೆ. ಟ್ರೇಲರ್‍ನಲ್ಲೇ ಇಡೀ ಕಥೆ ಹೇಳಿರುವ ರಾಜಮೌಳಿ ಮತ್ತೊಮ್ಮೆ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಗೆದ್ದಿದ್ದಾರೆ. ಅದರಲ್ಲೂ ಕನ್ನಡದವರಿಗೆ ಆರ್‍ಆರ್‍ಆರ್ ಕೊಟ್ಟಿರೋ ಥ್ರಿಲ್ ಬೇರೆಯದೇ ರೀತಿಯದ್ದು. ಕನ್ನಡದಲ್ಲಿಯೂ ಆರ್‍ಆರ್‍ಆರ್ ಟ್ರೇಲರ್ ರಿಲೀಸ್ ಆಗಿದೆ.

  ಈ ಟ್ರೇಲರ್‍ನಲ್ಲಿ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಸ್ವತಃ ತಾವೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಎನ್‍ಟಿಆರ್ ಅವರ ತಾಯಿಯೇನೋ ಕನ್ನಡದವರು. ಹೀಗಾಗಿ ಎನ್‍ಟಿಆರ್‍ಗೆ ಸ್ವಲ್ಪ ಕನ್ನಡ ಗೊತ್ತು. ಆದರೆ ರಾಮ್ ಚರಣ್ ತೇಜ ಹಾಗಲ್ಲ. ಆದರೂ.. ಇಬ್ಬರ ಧ್ವನಿ.. ಅದೂ ಕನ್ನಡದ ಧ್ವನಿ ಥ್ರಿಲ್ ಕೊಡುತ್ತಿದೆ.

  ಆದರೆ.. ಇಬ್ಬರೂ ಕನ್ನಡದಲ್ಲಿ ಇಡೀ ಸಿನಿಮಾದಲ್ಲಿ  ಡಬ್ ಮಾಡಿದ್ದಾರಾ..? ಗೊತ್ತಿಲ್ಲ. ಅದಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಲೇಬೇಕು.

 • ಮತ್ತೆ ಕೊರೊನಾ ಭಯ : ಆರ್.ಆರ್.ಆರ್ ರಿಲೀಸ್ ಮುಂದಕ್ಕೆ

  ಮತ್ತೆ ಕೊರೊನಾ ಭಯ : ಆರ್.ಆರ್.ಆರ್ ರಿಲೀಸ್ ಮುಂದಕ್ಕೆ

  ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಎಲ್ಲವೂ ಸಿದ್ಧವಾಗಿತ್ತು. ಪ್ರಚಾರವೂ ಚೆನ್ನಾಗಿಯೇ ನಡೆದಿತ್ತು. ಪ್ರೇಕ್ಷಕರ ನಿರೀಕ್ಷೆಯೂ ಮುಗಿಲೆತ್ತರದಲ್ಲಿತ್ತು. ಸೂಪರ್ ಹಿಟ್ ಆಗುವ ಎಲ್ಲ ನಿರೀಕ್ಷೆಗಳೂ ಇದ್ದವು. ಇದೆಲ್ಲದರ ನಡುವೆಯೇ ಜನವರಿ 14ರಂದು ರಿಲೀಸ್ ಆಗಬೇಕಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್‍ನ್ನು ಮುಂದೆ ಹಾಕಿದೆ ಚಿತ್ರತಂಡ. ಕಾರಣ ಕೊರೊನಾ ಭಯ.

  ಸದ್ಯಕ್ಕೆ ಕೊರೊನಾ ಇಲ್ಲ. ಆದರೆ ಒಮಿಕ್ರಾನ್, ಡೆಮಿಕ್ರಾನ್, ಫ್ಲೋರೈನ್.. ಹೀಗೆ ಕೊರೊನಾದ ಚಿತ್ರವಿಚಿತ್ರ ಹೆಸರುಗಳು ಮತ್ತೆ ಕೇಳಿ ಬರುತ್ತಿವೆ.  ಹೀಗಾಗಿಯೇ ಅಕಸ್ಮಾತ್ ಮತ್ತೆ ಲಾಕ್ ಡೌನ್ ಆದರೆ ಅನ್ನೋ ಭಯ, ಪ್ರೇಕ್ಷಕರ ಭರ್ತಿಗೆ ಶೇ.50ರ ನಿರ್ಬಂಧ ವಿಧಿಸಿದರೆ ಅನ್ನೋ ಭಯ.. ಈ ನಿರ್ಧಾರಕ್ಕೆ ಕಾರಣವಾಗಿದೆ.

  ರಾಜಮೌಳಿ ನಿರ್ದೇಶನದ ಜ್ಯೂ.ಎನ್‍ಟಿಆರ್, ರಾಮ್ ಚರಣ್ ತೇಜ, ಅಜಯ್ ದೇವಗನ್, ಅಲಿಯಾ ಭಟ್.. ಮೊದಲಾದವರು ನಟಿಸಿರೋ ಚಿತ್ರ ಆರ್‍ಆರ್‍ಆರ್. ಬಹುಶಃ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

 • ಸ್ಕರ್ ರೇಸ್‍ಗೆ ತಾನೇ ಎಂಟ್ರಿಕೊಟ್ಟ RRR

  ಸ್ಕರ್ ರೇಸ್‍ಗೆ ತಾನೇ ಎಂಟ್ರಿಕೊಟ್ಟ RRR

  RRR. ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಇಂಡಿಯನ್ ಸಿನಿಮಾ. ಸ್ವಾತಂತ್ರ್ಯ ಹೋರಾಟಗಾರರ ಕಥೆಗೆ ರೋಚಕತೆಯ ಕಲ್ಪನೆ ಬೆರೆಸಿ ಪ್ರೇಕ್ಷಕರಿಗೆ ರೋಮಾಂಚನ ನೀಡಿದ್ದ ಸಿನಿಮಾ. ಆಸ್ಕರ್ ಪ್ರಶಸ್ತಿಗೆ ಹೋಗಲಿದೆ ಎಂದು ನಿರೀಕ್ಷಿಸಿದ್ದ ಸಿನಿಮಾವನ್ನ ಕೇಂದ್ರ ಸರ್ಕಾರ ಪರಿಗಣಿಸಲಿಲ್ಲ. ಬದಲಿಗೆ ಗುಜರಾತಿ ಚಿತ್ರವೊಂದಕ್ಕೆ ಪಟ್ಟ ಸಿಕ್ಕಿತ್ತು. ಈಗ RRR ಸ್ವತಃ ತಾನೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದೆ.

  ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿಯೂ ಸ್ಪರ್ಧಿಸಬಹುದು. ಆ ಸ್ಪರ್ಧೆಯಲ್ಲಿ 14 ವಿಭಾಗಗಳಲ್ಲಿ ಆರ್.ಆರ್.ಆರ್. ರೇಸ್‍ಗೆ ಬಿದ್ದಿದೆ.

  ಅತ್ಯುತ್ತಮ ನಿರ್ದೇಶಕ : ರಾಜಮೌಳಿ

  ಅತ್ಯುತ್ತಮ ನಟ : ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜ

  ಪೋಷಕ ನಟ : ಅಜಯ್ ದೇವಗನ್

  ಪೋಷಕ ನಟಿ : ಅಲಿಯಾ ಭಟ್

  ಬೆಸ್ಟ್ ವೊರಿಜಿನಲ್ ಸಾಂಗ್ : ನಾಟ್ಟು ನಾಟ್ಟು

  ಕ್ಯಾಮೆರಾ : ಸೆಂಥಿಲ್ ಕುಮಾರ್

  ಸಂಕಲನ : ಶ್ರೀಕರ್ ಪ್ರಸಾದ್

  ಕಾಸ್ಟ್ಯೂಮ್ ಡಿಸೈನರ್ : ರಮಾ ರಾಜಮೌಳಿ

  ಚಿತ್ರಕಥೆ : ಬೆಸ್ಟ್ ಸೌಂಡಿಂಗ್ : ಮೇಕಪ್ : ಪ್ರೊಡಕ್ಷನ್ : ಗ್ರಾಫಿಕ್ಸ್.. ಹೀಗೆ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧಿಸಿದೆ ಆರ್.ಆರ್.ಆರ್.