ಅಲ್ಲಿ ಪುಟ್ಟ ಮಗು ಮತ್ತು ಮಾಮನ ಪ್ರೀತಿಯಿದೆ.. ಅಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಅನ್ನೋ ಗೆಳೆಯರ ಸ್ನೇಹವಿದೆ. ಆದಿತಿ ಮತ್ತು ಕೃಷ್ಣರ ನಡುವಿನ ಪ್ರೀತಿಯ ಕಥೆಯೂ ಇದೆ..
ಹೋರಾಟವಿದೆ.. ಭಾವನೆಗಳಿವೆ. ಕೊಲೆಗಳಿವೆ..ಕ್ರೈಂ ಇದೆ.. ಇವೆಲ್ಲವುಗಳ ಜೊತೆ ಜೊತೆಯಲ್ಲೇ ಭಾವನೆಗಳ ತಾಕಲಾಟವಿದೆ. ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರದ ಟ್ರೇಲರಿನಲ್ಲಿ ಈ ಎಲ್ಲವುಗಳ ಸ್ಪರ್ಶವಿದೆ.
ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರವನ್ನು ನಿರ್ದೇಶಿಸಿದ್ದ ಕುಶಾಲ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಧನಂಜಯ, ಆದಿತಿ ಪ್ರಭುದೇವ, ಪ್ರಾಣ್ಯ ಪಿ.ರಾವ್, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಮಯೂರಿ ನಟರಾಜ್.. ಹೀಗೆ ಘಟಾನುಘಟಿಗಳ ದಂಡೇ ಚಿತ್ರದಲ್ಲಿದೆ. ಎಲ್ಲರ ನಿರೀಕ್ಷೆಯೂ ಇರುವುದು ಬಾಲನಟಿ ಪ್ರಾಣ್ಯ ಪಿ.ರಾವ್ ಅವರ ಮೇಲೆ. ಇಡೀ ಕಥೆ ನಡೆಯುವುದು ಅವರ ಸುತ್ತಲೇ ಎನ್ನುವುದು ವಿಶೇಷ.
ನಿಹಾರಿಕಾ ಮೂವೀಸ್‍ನಲ್ಲಿ ಶ್ರೀಹರಿ ನಿರ್ಮಾಣ ಮಾಡಿರುವ ಚಿತ್ರ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಈ ಚಿತ್ರಕ್ಕೆ ಇಬ್ಬರು ಮ್ಯೂಸಿಕ್ ಡೈರೆಕ್ಟರ್ಸ್ ಇದ್ದಾರೆ. ಹಿನ್ನೆಲೆ ಸಂಗೀತ ಅನೂಪ್ ಸಿಳೀನ್ ಅವರದ್ದಾದರೆ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರದ್ದು. ಡಾಲಿ ಧನಂಜಯ್ ಅವರ ಬೇರೆಯದೇ ತೆರನಾದ ಲುಕ್ ನೋಡೋಕೇ ವಿಭಿನ್ನವಾಗಿಯೂ ಇದೆ. ಅಂದಹಾಗೆ ಈ ವರ್ಷವೇ ರಿಲೀಸ್ ಆಗುತ್ತಿರುವ ಈ ಚಿತ್ರ, ಈ ವರ್ಷದ ಧನಂಜಯ್ ನಟನೆಯ 6ನೇ ಸಿನಿಮಾ. ಡಿ.30ರಂದು ಸಿನಿಮಾ ತೆರೆ ಕಾಣಲಿದೆ.