ಮೈಸೂರಿನಿನಿಂದ ಹೆಚ್.ಡಿ.ಕೋಟೆಗೆ ಹೋಗುವ ಮಾರ್ಗ ಮಧ್ಯೆ ಹಾಲಾಳು ಎಂಬ ಗ್ರಾಮವಿದೆ. ಅಲ್ಲಿ ಸುಮಾರು 11 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಮಾರಕವಿದು. ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಭವ್ಯ ಮೆರವಣಿಗೆ ನಡೆಸಿದ್ರು. ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗದಿಂದ ಸ್ಮಾರಕ ಸ್ಥಳಕ್ಕೆ ಅಭಿಮಾನಿಗಳು ಬೈಕ್ ಱಲಿ ಮೂಲಕ ತೆರಳಿದ್ರು. ಈ ವೇಳೆ ವಿಷ್ಣುವರ್ಧನ್ ಗೀತೆಗಳಿಗೆ ಫ್ಯಾನ್ಸ್ ಭರ್ಜರಿ ಡ್ಯಾನ್ಸ್ ಮಾಡಿದ್ದು, ಸಾಹಸ ಸಿಂಹನ ಪರ ಜೈಕಾರ ಕೂಗಿ ಸಂಭ್ರಮಿಸಿದ್ರು. ಹಲವು ವರ್ಷಗಳ ನಂತರ ನಮ್ಮ ಆಸೆ ಈಡೇರುತ್ತಿದೆ. ವಿಷ್ಣು ಸ್ಮಾರಕ ಮಾಡಿದ ಸರ್ಕಾರಕ್ಕೆ ಅಭಿನಂದನೆಗಳು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮಿಸಿದರು.
ಒಟ್ಟು 2.75 ಎಕರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗಿದೆ. . ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ .ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ.ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ. ಆಡಿಟೋರಿಯಂ ಕೂಡ ಇಲ್ಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತು ನಾಟಕಗಳ ಚಟುವಟಿಕೆ ನಡೆಸುವ ಕುರಿತು ವಿಷ್ಣು ಕುಟುಂಬಸ್ಥರು ಯೋಜನೆ ರೂಪಿಸಿದ್ದಾರೆ.
ಭಾರತಿ ವಿಷ್ಣುವರ್ಧನ್, ಅನಿರುದ್ಧ, ಪುತ್ರಿ ಕೀರ್ತಿ ವಿಷ್ಣುವರ್ಧನ್ ಹಾಗೂ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ವಿಷ್ಣುವರ್ಧನ್ ಅವರನ್ನು ಮನಸಾರೆ ಹೊಗಳಿಸಿದರು. 13 ವರ್ಷಗಳ ನಂತರ ನಿರ್ಮಾಣವಾಗಿರುವ ಈ ಸ್ಮಾರಕ ಪ್ರವಾಸಿ ತಾಣವಾಗಬೇಕು ಎಂದರು. ಪುಟ್ಟ ಮಗುವೊಂದು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂಬ ಮನವಿಯಿಟ್ಟರು. ಇವುಗಳಿಗೆ ವೇದಿಕೆಯಲ್ಲಿಯೇ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ ನೀವು ಬೋರ್ಡ್‍ಗಳ ಮೂಲಕ ಇಟ್ಟಿರುವ ಬೇಡಿಕೆಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲನೆ ಮಾಡಲಿದೆ ಎಂದರು. ಇದುವರೆಗೆ 10 ಮಂದಿಗೆ ಕರ್ನಾಟಕ ರತ್ನ ನೀಡಲಾಗಿದೆ. ಚಿತ್ರರಂಗದಿಂದ ಇಬ್ಬರು ಕರ್ನಾಟಕ ರತ್ನ ಪುರಸ್ಕøತರು. ಡಾ.ರಾಜ್ ಹಾಗೂ ಮರಣೋತ್ತರವಾಗಿ ಡಾ.ಪುನೀತ್ ರಾಜಕುಮಾರ್ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ.