` mugilpete - chitraloka.com | Kannada Movie News, Reviews | Image

mugilpete

  • 100 + ಗರುಡ ಗಮನ ವೃಷಭ ವಾಹನ + ಮುಗಿಲ್ ಪೇಟೆ

    100 + ಗರುಡ ಗಮನ ವೃಷಭ ವಾಹನ + ಮುಗಿಲ್ ಪೇಟೆ

    ಒಂದು ಫ್ಯಾಮಿಲಿ ಥ್ರಿಲ್ಲರ್. ಇನ್ನೊಂದು ಅಂಡರ್‍ವಲ್ರ್ಡ್ ಥ್ರಿಲ್ಲರ್. ಮತ್ತೊಂದು ಲವ್ಲೀ ಥ್ರಿಲ್ಲರ್. ಈ ವಾರದ ಸ್ಪೆಷಲ್ ಸಿನಿಮಾಗಳಿವು.

    100 ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನವಿದೆ. ಅವರೇ ಹೀರೋ. ರಚಿತಾ ರಾಮ್ ಮತ್ತು ಪೂರ್ಣ ನಾಯಕಿಯಾಗಿರೋ ಚಿತ್ರದಲ್ಲಿ ಸೈಬರ್ ಕ್ರೈಂ ಸ್ಟೋರಿ ಇದೆ. ಇದು ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿಯೇ ಜಗತ್ತು ನೋಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ನೋಡಬೇಕಾದ ಸಿನಿಮಾ.

    ಗರುಡ ಗಮನ ವೃಷಭ ವಾಹನ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಒಟ್ಟಿಗೇ ನಟಿಸಿರೋ ಸಿನಿಮಾ. ಮೊಟ್ಟೆ ನಂತರ ರಾಜ್ ಬಿ.ಶೆಟ್ಟಿ ನಿರ್ದೇಶನವನ್ನೂ ಮಾಡಿರುವ ಸಿನಿಮಾ. ಕರಾವಳಿ ಭೂಗತ ಜಗತ್ತನ್ನು ಬೇರೆಯದೇ ಶೇಡ್‍ನಲ್ಲಿ ತೋರಿಸಿರೋ ಚಿತ್ರದಲ್ಲಿ ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್, ಹಾಡು ಗಮನ ಸೆಳೆದಿವೆ.

    ಇದೇ ವಾರ ರಿಲೀಸ್ ಆಗುತ್ತಿರೋ ಯೂಥ್ ಲವ್ ಸ್ಟೋರಿ ಮುಗಿಲ್ ಪೇಟೆ. ಮನುರಂಜನ್ ರವಿಚಂದ್ರನ್, ಕಯಾದು ನಟಿಸಿರೋ ಚಿತ್ರದಲ್ಲಿ ಲವ್ ಫೀಲಿಂಗ್ ಸಖತ್ತಾಗಿಯೇ ಇದೆ. ಭರತ್ ಎಸ್.ನಾವುಂದ ನಿರ್ದೇಶನದ ಚಿತ್ರ ಪ್ರೇಮಿಗಳಿಗೆ ಪ್ರೀತಿಯ ಪರಾಕಾಷ್ಠೆ ತೋರಿಸೋ ನಿರೀಕ್ಷೆಯಂತೂ ಇದೆ. 

  • ಕಾಲೇಜ್ ಹುಡುಗೀರ ಜೊತೆ ಮನುರಂಜನ್ ಮಸ್ತ್ ಮಸ್ತ್ ಡ್ಯಾನ್ಸ್

    ಕಾಲೇಜ್ ಹುಡುಗೀರ ಜೊತೆ ಮನುರಂಜನ್ ಮಸ್ತ್ ಮಸ್ತ್ ಡ್ಯಾನ್ಸ್

    ಅಂದು ಅಪ್ಪ.. ಇಂದು ಮಗ.. ರವಿಚಂದ್ರನ್ ಪುತ್ರ ಮನುರಂಜನ್ ನಟಿಸಿರೋ ಮುಗಿಲ್ ಪೇಟೆ ಇದೇ ನವೆಂಬರ್ 19ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ಕಾಲೇಜುಗಳಿಗೆ ಭೇಟಿ ಕೊಡುತ್ತಿದೆ ಮುಗಿಲ್‍ಪೇಟೆ ಟೀಂ. ಮೈಸೂರಿಗೆ ಭೇಟಿ ನೀಡಿದ್ದ ಮುಗಿಲ್‍ಪೇಟೆ ಟೀಂ, ಮಹಾರಾಜ, ಯುವರಾಜ ಹಾಗೂ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳನ್ನು ಭೇಟಿ ಮಾಡಿತು.

    ಈಗಾಗಲೇ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೆ ಇಷ್ಟವಾಗಿರೋ ಹಾಡುಗಳಿಗೆ ಫಿದಾ ಆಗಿರೋ ವಿದ್ಯಾರ್ಥಿ ಬಳಗ, ಮನುರಂಜನ್ ಜೊತೆ ಹಾಡಿ ಕುಣಿದು ಕುಪ್ಪಳಿಸಿತು. ಕಯಾದು ಲೋಹರ್ ನಾಯಕಿಯಾಗಿ

    ರೋ ಚಿತ್ರದಲ್ಲಿರೋದು ಪಕ್ಕಾ ಲವ್ ಸ್ಟೋರಿ. ಭರತ್ ಎಸ್.ನಾವುಂದ ನಿರ್ದೇಶನದ ಚಿತ್ರವಿದು. ರಕ್ಷಾ ವಿಜಯ್ ಕುಮಾರ್ ನಿರ್ಮಾಪಕರು.

  • ದೀಪಾವಳಿಗೆ ಮುಗಿಲ್ ಪೇಟೆ ಪಟಾಕಿ

    ದೀಪಾವಳಿಗೆ ಮುಗಿಲ್ ಪೇಟೆ ಪಟಾಕಿ

    ಮನೋರಂಜನ್ ರವಿಚಂದ್ರನ್ ಅಭಿನಯದ 2ನೇ ಸಿನಿಮಾ ಮುಗಿಲ್‍ಪೇಟೆ. ಕೊರೊನಾ ಫಸ್ಟ್ ಲಾಕ್‍ಡೌನ್ ಹೊತ್ತಿಗೆ ಆಲ್‍ಮೋಸ್ಟ್ ಸಿದ್ಧವಾಗಿದ್ದ ಚಿತ್ರಕ್ಕೀಗ ಬಿಡುಗಡೆ ಭಾಗ್ಯ. ಹೆಚ್ಚೂ ಕಡಿಮೆ 2 ತಿಂಗಳು ಮೊದಲೇ ಮುಗಿಲ್‍ಪೇಟೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ದೀಪಾವಳಿಗೆ ರಿಲೀಸ್ ಆಗಲಿದೆಯಂತೆ ಮುಗಿಲ್‍ಪೇಟೆ.

    ಇದು ರಕ್ಷಾ ವಿಜಯ್ ಕುಮಾರ್ ನಿರ್ಮಾಣದ ಸಿನಿಮಾ. ಭರತ್ ಎಸ್.ನಾವುಂದ ನಿರ್ದೇಶಕರಾಗಿರೋ ಮುಗಿಲ್‍ಪೇಟೆ ಚಿತ್ರದಲ್ಲಿ ಕಯಾದು ಲೋಹರ್ ನಾಯಕಿ.

  • ಪ್ರಾಸ.. ಮುತ್ತು.. ಪ್ರೇಮಲೋಕದ ಮರು ಸೃಷ್ಟಿ.....!!!!!

    ಪ್ರಾಸ.. ಮುತ್ತು.. ಪ್ರೇಮಲೋಕದ ಮರು ಸೃಷ್ಟಿ.....!!!!!

    ಪ್ರೇಮಲೋಕ. ಕನ್ನಡ ಚಿತ್ರರಂಗದ ಲವ್ಲೀ ಲವ್ಲೀ ಲವ್ ಸ್ಟೋರಿ. ದಶಕಗಳೇ ಕಳೆದರೂ.. ಪ್ರೇಮಲೋಕ ಇವತ್ತಿಗೂ ಕ್ರೇಜ್ ಇಟ್ಟುಕೊಂಡಿದೆ. ಪ್ರೇಮಲೋಕದ ಸೃಷ್ಟಿಕರ್ತ ವಿ.ರವಿಚಂದ್ರನ್. ಅವರ ಸೃಷ್ಟಿಯನ್ನೇ ಮರುಸೃಷ್ಟಿಸಲು ಪ್ರಯತ್ನಿಸಿರೋದು ಅವರ ಪುತ್ರ ಮನುರಂಜನ್.

    ಮನುರಂಜನ್ ಅಭಿನಯದ ಮುಗಿಲ್ ಪೇಟೆಯಲ್ಲಿ ಪ್ರೇಮಲೋಕದ ದೃಶ್ಯವನ್ನು ಮರುಸೃಷ್ಟಿಸಲಾಗಿದೆಯಂತೆ. ಮುಗಿಲ್‍ಪೇಟೆ ಪ್ರೇಮಲೋಕವನ್ನು ಮೀಟ್ ಮಾಡಿದರೆ.. ಅನ್ನೋ ಕಲ್ಪನೆಯಲ್ಲೇ ದೃಶ್ಯ ಸೃಷ್ಟಿಸಲಾಗಿದೆ.

    ಪ್ರೇಮಲೋಕದ ಸೀನ್ ಇದೆಯಲ್ಲ.. ಪ್ರಾಸ ಮತ್ತು ಮುತ್ತಿನ ಕಥೆ.. ಅದನ್ನೇ ಯಥಾವತ್ ಮಾಡಿದ್ದಾರೆ. ಅಲ್ಲಿ ರವಿ ಮತ್ತು ಜ್ಯೂಹಿ ಚಾವ್ಲಾ. ಇಲ್ಲಿ ಮನುರಂಜನ್ ಮತ್ತು ಕಯಾದು ಲೋಹರ್. ಮರುಸೃಷ್ಟಿಕರ್ತ.. ಮುಗಿಲ್‍ಪೇಟೆ ನಿರ್ದೇಶಕ ಭರತ್ ಎಸ್.ನಾವುಂದ. ರಕ್ಷಾ ವಿಜಯ್ ಕುಮಾರ್ ನಿರ್ಮಾಣದ ಮುಗಿಲ್ ಪೇಟೆ, ರಿಲೀಸ್ ಆಗೋಕೆ ಸಿದ್ಧವಾಗಿ ನಿಂತಿದೆ.

  • ಮುಗಿಲ್ ಪೇಟೆ ಮುದ್ ಮುದ್ದಾದ ಹಾಡು ನೋಡಿದ್ರಾ?

    ಮುಗಿಲ್ ಪೇಟೆ ಮುದ್ ಮುದ್ದಾದ ಹಾಡು ನೋಡಿದ್ರಾ?

    ಮುಗಿಲ್ ಪೇಟೆ ಸಿನಿಮಾ ರಿಲೀಸ್ ಆಗೋಕೆ ರೆಡಿ. ತಾರೀಫು ಮಾಡಲು ತಾರೀಕು ನೋಡಿದೆ.. ಅನ್ನೋ ರೊಮ್ಯಾಂಟಿಕ್ ಸಾಂಗ್.. ಮೈ ಬೆಚ್ಚಗಾಗಿಸುವಂತಿದೆ. ಮನುರಂಜನ್ ರವಿಚಂದ್ರನ್ ಮತ್ತು ಕಯಾದು ಲೋಹರ್ ಮೈಚಳಿ ಬಿಟ್ಟು ನಟಿಸಿದ್ದಾರೆ. ರವಿಚಂದ್ರನ್ ಅವರ ಹಳೆಯ ಸಾಂಗುಗಳು ನೆನಪಾದರೆ ಅಚ್ಚರಿಯಿಲ್ಲ.

    ರಕ್ಷಾ ವಿಜಯ್ ಕುಮಾರ್ ನಿರ್ಮಾಣದ ಮುಗಿಲ್ ಪೇಟೆಗೆ ಭರತ್ ಎಸ್.ನವುಂದ ನಿರ್ದೇಶಕರು. ಶ್ರೀಧರ್ ವಿ. ಸಂಭ್ರಮ್ ಮ್ಯೂಸಿಕ್ಕಿಗೆ ಸಾಹಿತ್ಯ ನೀಡಿರುವುದು ಸ್ವತಃ ಡೈರೆಕ್ಟರ್ ಭರತ್ ನವುಂದ. ಹಾಡಿಗೆ ತಕ್ಕಂತೆ ರೊಮ್ಯಾಂಟಿಕ್ ವಾಯ್ಸ್ ನೀಡಿರುವುದು ನಕುಲ್ ಅಭಯಂಕರ್ ಮತ್ತು ಶ್ವೇತಾ ದೇವನಹಳ್ಳಿ. ದೀಪಾವಳಿಗೆ ಮುಗಿಲ್ ಪೇಟೆ ದರ್ಶನ ಮಾಡಬಹುದು