` sringara kitty, - chitraloka.com | Kannada Movie News, Reviews | Image

sringara kitty,

  • ಗೌಳಿ ಕಿಟ್ಟಿಗೆ ಪಾವನಾ ಜೋಡಿ

    ಗೌಳಿ ಕಿಟ್ಟಿಗೆ ಪಾವನಾ ಜೋಡಿ

    ಪಾವನಾ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿ ಹೋಗಿದ್ದಾರೆ. ಈಗಾಗಲೇ ಕೈಲಿ 8 ಚಿತ್ರಗಳಿವೆ. ಇದರ ಜೊತೆ 9ನೇ ಸಿನಿಮಾ. ಶ್ರೀನಗರ ಕಿಟ್ಟಿ ಕಮ್ ಬ್ಯಾಕ್ ಮಾಡುತ್ತಿರುವ ಗೌಳಿ ಚಿತ್ರಕ್ಕೆ ಪಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಇತ್ತೀಚೆಗೆ ನನಗೆ ಒಳ್ಳೊಳ್ಳೆಯ ಪಾತ್ರಗಳೇ ಸಿಗುತ್ತಿವೆ. ಕಥೆಗಳು ಹೊಸದಾಗಿವೆ. ಕೇಳಿದ ಕಥೆಗಳಲ್ಲಿ ಗೌಳಿಯ ನನ್ನ ಪಾತ್ರ ಇಷ್ಟವಾಯಿತು ಎಂದಿದ್ದಾರೆ ಪಾವನಾ.

    ರಘು ಸಿಂಗಂ ನಿರ್ಮಾಣದ ಗೌಳಿ ಚಿತ್ರಕ್ಕೆ ಸೂರ ನಿರ್ದೇಶಕ. ಆಗಸ್ಟ್ 3ನೇ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ.

    ಸದ್ಯಕ್ಕೆ ಪಾವನಾ ಕೈಲಿ ತೂತುಮಡಿಕೆ, ರುದ್ರಿ, ಕಲಿವೀರ, ಮೈಸೂರು ಡೈರೀಸ್, ಕನ್ನಡಿಗ, ಸದ್ದು, ಫೈಟರ್, ಮೆಹಬೂಬ ಚಿತ್ರಗಳಿವೆ. ಫೈಟರ್ ಮತ್ತು ಮೆಹಬೂಬ ಬಿಟ್ಟರೆ ಉಳಿದ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಬಿಡುಗಡೆ ಹಂತದಲ್ಲಿವೆ.

  • ಗೌಳಿ ಭಯಂಕರ

    ಗೌಳಿ ಭಯಂಕರ

    ಶ್ರೀನಗರ ಕಿಟ್ಟಿ ನಟಿಸಿರೋ ಚಿತ್ರವಿದು. ಗೌಳಿ. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಮೊದಲ ನೋಟಕ್ಕೇ ಮೆಚ್ಚುಗೆ ಗಿಟ್ಟಿಸೋ ಟ್ರೇಲರ್, ಚೆಂದದ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅನ್ನೋ ಭರವಸೆ ಹುಟ್ಟಿಸಿದೆ. ರಗಡ್ ಲುಕ್‍ನಲ್ಲಿ ಎಂಟ್ರಿ ಕೊಡೋ ಕಿಟ್ಟಿ,  ಟ್ರೇಲರ್‍ನ ಕೊನೆಯಲ್ಲಿ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡು ಕಥೆಯ ಕುತೂಹಲ ಹೆಚ್ಚಿಸುತ್ತಾರೆ.

    ಟ್ರೇಲರ್‍ನಲ್ಲಿ ಕಾಣಿಸಿಕೊಳ್ಳೋದು ಶ್ರೀನಗರ ಕಿಟ್ಟಿ, ಶರತ್ ಲೋಹಿತಾಶ್ವ, ರಂಗಾಯಣ ರಘು ಮತ್ತು  ಪಾವನಾ ಗೌಡ ಪಾತ್ರಗಳು.

    ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿರೋದು ಸೂರ. ರಘು ಸಿಂಗಂ ನಿರ್ಮಾಣದ ಚಿತ್ರಕ್ಕೆ ನಾಗೇಶ್ ಮತ್ತು ರಾಜು ಸಹ ನಿರ್ಮಾಪಕರು. ಟ್ರೇಲರ್‍ನಲ್ಲಿ ಶ್ರೀನಗರ ಕಿಟ್ಟಿ ಗಡ್ಡಧಾರಿಯಾಗಿ ಭಯ ಹುಟ್ಟಿಸಿದರೆ ಸ್ಟಂಟುಗಳಲ್ಲಿ ವಿಕ್ರಂ ಮೋರ್, ಅರ್ಜುನ್ ರಾಜ್ ವ್ಹಾವ್ ಎನಿಸುತ್ತಾರೆ. ಅದಕ್ಕೆ ಕಳಶವಿಟ್ಟಂತೆ ಮೊರೆಯುವುದು ಶಶಾಂಕ್ ಶೇಷಗಿರಿ ಮ್ಯೂಸಿಕ್ಕು. ಚಿತ್ರ ರೆಡಿಯಾಗಿದೆ. ರಿಲೀಸ್ ಡೇಟ್ ಶೀಘ್ರದಲ್ಲೇ ಅನೌನ್ಸ್ ಆಗಬಹುದು.

  • ಹೆಣ್ಣು ಮಕ್ಕಳನ್ನು ಪ್ರೀತಿಸುವವರು ಈ ಹಾಡನ್ನ ಖಂಡಿತಾ ಮೆಚ್ಚಿಕೊಳ್ತಾರೆ..

    ಹೆಣ್ಣು ಮಕ್ಕಳನ್ನು ಪ್ರೀತಿಸುವವರು ಈ ಹಾಡನ್ನ ಖಂಡಿತಾ ಮೆಚ್ಚಿಕೊಳ್ತಾರೆ..

    ಮಗಳೇ ಹೆಗಲೇ ವಿಮಾನ ನಿನಗೆ..

    ನಿನ್ನ ಖುಷಿಯೇ ಪ್ರಧಾನ ನನಗೆ..

    ಋಣವೇ ನೀನು.. ನನ್ನ ತಾಯಿ ಹಾಗೆ

    ಮಗಳಿಗಾಗಿ ಅಪ್ಪ ಹಾಡುವ ಹಾಡು. ಅದ್ಭುತ  ಮೇಕಿಂಗ್ ಮೂಲಕ ಗುರುತಿಸಿಕೊಳ್ಳುತ್ತಿರುವ ಗೌಳಿ ಸಿನಿಮಾದ ತಂದೆ, ಮಗಳ ನಡುವಿನ ಬಾಂಧವ್ಯದ ಹಾಡು ಬಿಡುಗಡೆ ಆಗಿದೆ. ಹಾಡಿನ ಸಾಹಿತ್ಯ, ಸಂಗೀತ ಮತ್ತೂ ಒಂದ್ಸಲ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ವಿಜಯ ಪ್ರಕಾಶ್ , ಶೃತಿ ಪ್ರಹ್ಲಾದ್ ಅದ್ಭುತ ಧ್ವನಿ, ಶಂಕರ್ ಶೇಷಗಿರಿ ಸಂಗೀತ ಹಾಗೂ ಡಾ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಡಿಗೆ ಮೆರುಗು ಹೆಚ್ಚಿಸಿವೆ.

    ನಟ ಶ್ರೀನಗರ ಕಿಟ್ಟಿ ಹಾಗೂ ಪಾವನಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬೇನಿ ನಯನ ಮಗಳ ಪಾತ್ರದಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಸೂರ ನಿರ್ದೇಶನದ ಚಿತ್ರವಿದು. ರಘು ಸಿಂಗಮ್ ಚಿತ್ರದ ನಿರ್ಮಾಪಕರು.