` richard anthony, - chitraloka.com | Kannada Movie News, Reviews | Image

richard anthony,

 • 7 ವರ್ಷಗಳ ನಂತರ ಡೈರೆಕ್ಟರ್ ರಕ್ಷಿತ್ ಶೆಟ್ಟಿ ವಾಪಸ್

  7 ವರ್ಷಗಳ ನಂತರ ಡೈರೆಕ್ಟರ್ ರಕ್ಷಿತ್ ಶೆಟ್ಟಿ ವಾಪಸ್

  ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿಯಲ್ಲಿರೋ 7 ವರ್ಷಗಳ ನಂತರ ನಾನು ರೆಡಿ ಎನ್ನುತ್ತಿದ್ದಾರೆ. ರಿಚರ್ಡ್ ಆಂಟನಿ ರೂಪದಲ್ಲಿ. ಇದು ಉಳಿದವರು ಕಂಡಂತೆ ಚಿತ್ರದ ಸೀಕ್ವೆಲ್ಲಾ.. ಪ್ರೀಕ್ವೆಲ್ಲಾ.. ಎರಡೂ ಇರಬಹುದು. 2014ರಲ್ಲಿ ರಿಲೀಸ್ ಆಗಿದ್ದ ಉಳಿದವರು ಕಂಡಂತೆ ಡಿಫರೆಂಟ್ ಅನ್ನೋ ಕಾರಣಕ್ಕೆ ಸದ್ದು ಮಾಡಿದ್ದ ಸಿನಿಮಾ. ಈಗ ರಿಚರ್ಡ್ ಆಂಟನಿಯಾಗಿ ತೆರೆಗೆ ತರಲು ಹೊರಟಿದ್ದಾರೆ ರಕ್ಷಿತ್ ಶೆಟ್ಟಿ. ಬಂಡವಾಳ ಹೂಡುತ್ತಿರುವುದು ದೇಶದ ಪ್ರತಿಷ್ಠಿತ ಬ್ಯಾನರುಗಳಲ್ಲಿ ಒಂದಾದ ಹೊಂಬಾಳೆ ಫಿಲಮ್ಸ್.

  ಈ ಚಿತ್ರದ ಕಥೆ ಎರಡು ಭಾಗಗಲ್ಲಿ ನಡೆಯುತ್ತೆ. ರಿಚ್ಚಿ ಪಾತ್ರದ ಕಥೆ ಶುರುವಾಗುತ್ತದಲ್ಲಾ.. ಅಲ್ಲಿಂದ ಉಳಿದವರು ಕಂಡಂತೆ ಸಿನಿಮಾ ಮುಗಿಯುವವರೆಗೆ ಒಂದು ಭಾಗ.. ಇನ್ನೊಂದು ಉಳಿದವರು ಕಂಡಂತೆ ಚಿತ್ರದ ನಂತರದ್ದು ಎಂದಿರೋ ರಕ್ಷಿತ್ ಶೆಟ್ಟಿ ಟೀಸರ್‍ನಲ್ಲಿ ರಿಚ್ಚಿಯ ಸಮಾಧಿ, ಕಡಲ ರಾಜನ ಬಗ್ಗೆ ಮಾತನಾಡೋ ಅಚ್ಯುತ್, ಸಮಾಧಿಯನ್ನು ಕುಕ್ಕುತ್ತಿರುವ ಕಾಗೆ.. ಜೊತೆ ಜೊತೆಗೆ ಹೃದಯಕ್ಕೇ ನಾಟುವ ಸಂಭಾಷಣೆ.. ಇಷ್ಟನ್ನು ಟೀಸರ್‍ನಲ್ಲಿ ತೋರಿಸಿದ್ದಾರೆ ರಕ್ಷಿತ್ ಶೆಟ್ಟಿ.

  ವಿಜಯ್ ಕಿರಗಂದೂರು ಪ್ರೊಡ್ಯೂಸರ್ ಆದರೆ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕರಮ್ ಚಾವ್ಲಾ ಕ್ಯಾಮೆರಾ ಚಿತ್ರಕ್ಕಿದೆ.

   

 • Rakshith Shetty Back To Direction With 'Richard Anthony'

  Rakshith Shetty Back To Direction With 'Richard Anthony'

  It's been nearly seven years since Rakshith Shetty directed his debut film 'Ulidavaru Kandanthe'. After that he is busy as an actor and has acted in many films. including 'Kirik Party', 'Avane Srimannarayana' to name a few. Now Rakshith Shetty is all set to direct his second venture with 'Richard Anthony'.

  Hombale Films had earlier announced that it will be revealing the details of its 10th venture. There were speculations that a film starring Rakshith Shetty might be announced. However, Hombale Films has surprised everyone by announcing the second directorial venture of Rakshith Shetty. Rakshith will not be writing and directing the film, but also will star in it.

  'Richard Anthony' is much related to 'Ulidavaru Kandanthe' and is said to be either prequel or sequel of the original film. The starcast and technicians of the film have been retained here also. Karam Chawla will be heading cinematography, while Ajaneesh Lokananth is the music director.

  The film will be launched in January 2022. 

 • ರಿಚರ್ಡ್ ಆಂಟನಿ : ಕೆಲಸ ಮಾತನಾಡುತ್ತಿದೆ..

  ರಿಚರ್ಡ್ ಆಂಟನಿ : ಕೆಲಸ ಮಾತನಾಡುತ್ತಿದೆ..

  ನಾವು ಮಾತನಾಡಬಾರದು.. ನಮ್ಮ ಕೆಲಸವಷ್ಟೇ ಮಾತನಾಡಬೇಕು.. ರಿಚರ್ಡ್ ಆಂಟನಿ ಟೀಸರ್ ಬಿಡುಗಡೆಗೂ ಮುನ್ನ ರಕ್ಷಿತ್ ಶೆಟ್ಟಿ ಹೇಳಿದ್ದ ಮಾತಿದು. ಅದಕ್ಕೆ ತಕ್ಕಂತೆಯೇ ರಿಚರ್ಡ್ ಆಂಟನಿ ಟೀಸರ್ ಮಾತನಾಡುತ್ತಿದೆ. ಬಿಡುಗಡೆಯಾದ ನಂತರ ದಾಖಲೆ ಬರೆಯುತ್ತಿದೆ.

  ಜುಲೈ 11ರಂದು ರಿಲೀಸ್ ಆದ ಟೀಸರ್ 3 ದಿನಗಳಲ್ಲಿ ಪಡೆದ ವೀಕ್ಷಕರ ಸಂಖ್ಯೆ 1 ಕೋಟಿಗೂ ಹೆಚ್ಚು. ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೆಲ್ & ಸೀಕ್ವೆಲ್ ಎರಡೂ ಕತೆ ರಿಚರ್ಡ್ ಆಂಟನಿಯಲ್ಲಿದೆ ಎಂದು ಈಗಾಗಲೇ ಹೇಳಿದ್ದಾರೆ ರಕ್ಷಿತ್. ಅದಕ್ಕೆ ತಕ್ಕಂತೆ ಟೀಸರ್ನ ಮೇಕಿಂಗ್ ಕೂಡಾ ಗಮನ  ಸೆಳೆದಿದೆ. ಹೊಂಬಾಳೆ ಬ್ಯಾನರಿನ ಮತ್ತೊಂದು ಚಿತ್ರ ದಾಖಲೆ ಬರೆಯುವ ಉತ್ಸಾಹದಲ್ಲಿದೆ.

  ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರಾದರೆ, ರಕ್ಷಿತ್ ಶೆಟ್ಟಿಯೇ ಕಥೆಗಾರ ಮತ್ತು ನಿರ್ದೇಶಕ ಹಾಗೂ ನಾಯಕ. 14 ತಿಂಗಳಲ್ಲಿ ಸಿನಿಮಾ ಮುಗಿಸುವ ಪಣ ತೊಟ್ಟಿರುವ ರಕ್ಷಿತ್ ಶೆಟ್ಟಿ, ಹೇಳಿದ ಮಾತಿನಂತೆ ಕೆಲಸ ಮಾತನಾಡುತ್ತಿದೆ.