` raana, - chitraloka.com | Kannada Movie News, Reviews | Image

raana,

  • Raana Movie Review, Chitraloka Rating 3.5/5

    Raana Movie Review, Chitraloka Rating 3.5/5

    Film: Raana

    Director: Nanda Kishore

    Cast: Shreyas Manju, Reeshma Nanaiah, Mohan Dhanraj, Samyuktha Hegde, Rajini Bharadwaj, Kote Prabhakar

    Certificate: U/A

    Duration: 119 minutes

    Platform: Theatres

    Review by S Shyam Prasad 

    Unabashedly masala

     Director Nanda Kishore takes a routine story and repackages it into an action thriller that unabashedly caters to the mass audience. This is the biggest plus point of Raana, the second outing of Shreyas Manju after Paddehuli. Raana, unlike his first film, boldly sticks to a formula and delivers. Shreyas too has been remodeled by the director to suit an action image.

    The plot is about a poor youth who aspires to be a cop. He is successful and awaits his posting. But in the meantime, he gets embroiled in the mess of bad elements. Our hero needs to ward off these villains before rightly staking his claim to the police force. Will the rogues allow him to fulfill his destiny? And there are the typical friends of the hero who will go to any lengths to help him out. So who wins in the fight between the few good men and a hoard of villains? The answer is an open secret.

    If you have watched enough masala films, you know what is going to happen. But you still watch it for the excitement and kick such plots provide. The underdog coming up trumps against the bad elements is a story as old as the hills, but it does not prevent us from enjoying it every time. So has the team delivered on packaging it right? The director has done a decent job on this front.

    The rough edge of Shreyas which was present in his debut film is gone. He now looks, acts and performs like a polished actor. Credit should go to the director for polishing him to a neat finish. Even the story is tailor made for the mass audience with its mix of romance, action, songs and one-liners.

    The plot where the hero is trapped in a mistake he has not done but becomes the suspect for the unsavory elements is nicely schemed out. The action choreography in this film is one of the best you have seen in recent times. Ravi Varma shows why he is the best in the business. The film is a crisp two hours long. KM Prakash has wielded sharp scissors to make sure the narrative is fast paced and there is not a single dull moment anywhere.

    Chandan Shetty comes up with some peppy numbers and a melody as well. Shreyas, as mentioned earlier, has emerged a more mature and sensible actor. His chemistry with Reeshma Nanaiah is good. While the heroines have very little to do in an action film like this, Reeshma still manages to mark her presence.

    If action is your staple, this is just what you would order. Have no second thoughts; Raana is just the two-hour power workout your brain was planning to do.

  • ಉಧೋ ಉಧೋ ತಾಯೇ ಹುಲಿಗೆಮ್ಮ..

    ಉಧೋ ಉಧೋ ತಾಯೇ ಹುಲಿಗೆಮ್ಮ..

    ಉಧೋ.. ಉಧೋ.. ಉಧೋ.. ಉಧೋ.. ತಾಯೇ ಹುಲಿಗೆಮ್ಮ..

    ಹಾಡು ಕೇಳುತ್ತಿದ್ದರೇನೇ ಎದೆಯೊಳಗೆ ತಮಟೆಯ ಢಮಢಮ ಸದ್ದು ಕೇಳಬೇಕು. ಇದು ರಾಣಾ ಚಿತ್ರದ ಮೊದಲ ಹಾಡು.

    ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ನಟಿಸಿರೋ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶಕ. ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಈ ಹಾಡನ್ನು ಬೇರೆಯದೇ ಲೆವೆಲ್ಲಿಗೆ ಎತ್ತಿಕೊಂಡು ಹೋಗಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅಷ್ಟೇ ತಾಕತ್ತು ಕೊಟ್ಟಿರೋದು ಹಾಡುಗಾರ ಕರಿಬಸವ ತಾಡಕ್ಕಲ್. ಗುಜ್ಜಲ್ ಪುರುಷೋತ್ತಮ್ ನಿರ್ಮಾಪಕರಾಗಿರೋ ಚಿತ್ರ ರಾಣಾ. 

  • ಎಣ್ಣೆಗೂ ಹೆಣ್ಣಿಗೂ ಹಾಡು ಹುಟ್ಟಿದ ಕಥೆ

    ಎಣ್ಣೆಗೂ ಹೆಣ್ಣಿಗೂ ಹಾಡು ಹುಟ್ಟಿದ ಕಥೆ

    ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ.. ಏಕ್ ಲವ್ ಯಾ ಚಿತ್ರದ ಈ ಹಾಡು ಈಗ ಎಲ್ಲರ ಹಾಟ್ & ಹಾರ್ಟ್ ಫೇವರಿಟ್. ಗಂಡು ಮಕ್ಕಳಿಗೆ ಬ್ರೇಕಪ್ ಆದಾಗ ಹಾಡೋಕೆ.. ಕುಣಿಯೋಕೆ ಬೇಜಾನ್ ಹಾಡುಗಳಿದ್ದರೂ, ಹೆಣ್ಣು ಮಕ್ಕಳಿಗೆಂದೇ ಒಂದು ಬ್ರೇಕಪ್ ಸಾಂಗ್ ಇರಲಿಲ್ಲ. ಆ ಕೊರತೆಗೆ ಫುಲ್ ಸ್ಟಾಪ್ ಇಟ್ಟಿದೆ ಏಕ್ ಲವ್ ಯಾ ಸಾಂಗ್.

    ಈ ಹಾಡು ಹಿಟ್ ಆಗುತ್ತೆ ಅನ್ನೋ ಕಲ್ಪನೆ ಮತ್ತು ನಿರೀಕ್ಷೆ ಎರಡೂ ಇತ್ತು ಅಂತಾರೆ ಹಾಡಿಗೆ ಸಾಹಿತ್ಯ ಬರೆದಿರೋ ಜೋಗಿ ಪ್ರೇಮ್. ಹಾಡಿನ ಸಾಹಿತ್ಯ ಹುಟ್ಟಿದ್ದು ಪಬ್‍ಗಳಲ್ಲಂತೆ. ಪಬ್‍ಗಳಲ್ಲಿ ಬ್ರೇಕಪ್ ಮಾಡಿಕೊಂಡ ಹೆಣ್ಣು ಮಕ್ಕಳು ದಿಸ್ ಗಯ್ ಈಸ್ ಬುಲ್‍ಶಿಟ್ ಯಾ.. ಎಂದು ತಮ್ಮ ತಮ್ಮ ಬಾಯ್‍ಫ್ರೆಂಡ್‍ಗಳ ಬಗ್ಗೆ ಮಾತನಾಡಿಕೊಂಡಿದ್ದು ಕೇಳಿ ಹುಟ್ಟಿದ ಸಾಲುಗಳೇ ಎಣ್ಣೆಗೂ ಹೆಣ್ಣಿಗೂ ಹಾಡಿನ ಸಾಹಿತ್ಯ. ಎಣ್ಣೆಗೂ ಹೆಣ್ಣಿಗೂ.. ಅನ್ನೋ ಪದ ಬಂದೊಡನೆ ಹಾಡು ಹಿಟ್ ಆಗುತ್ತೆ ಎನಿಸಿಬಿಟ್ಟಿತು ಎನ್ನುತ್ತಾರೆ ಪ್ರೇಮ್.

    ನಂತರ ಆ ಹಾಡಿಗೆ ಶಕ್ತಿ ತುಂಬಿದ್ದು ಅರ್ಜುನ್ ಜನ್ಯಾ ಮತ್ತು ಮಂಗ್ಲಿ. ಹಾಡಿನಲ್ಲಿ ಹೆಜ್ಜೆ ಹಾಕಿರೋದು ರಾಣಾ ಮತ್ತು ರಚಿತಾ ರಾಮ್. ಹಾಡು ಈಗಾಗಲೇ ಮಿಲಿಯನ್‍ಗಟ್ಟಲೆ ವೀಕ್ಷಣೆ ಕಂಡಿದೆ. ಹೀಗಾಗಿ ಈಗ ಪ್ರೇಮ್ ಎಣ್ಣೆ ಸಾಂಗಿಗೂ ಸಕ್ಸಸ್ಸಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ ಎಂದು ಇನ್ನೊಂದು ಹಾಡು ಬರೆಯಬಹುದು.

  • ಏಕ್ ಲವ್ ಯಾ ಎಣ್ಣೆ ಸಾಂಗ್ ಬಂತು..

    ಏಕ್ ಲವ್ ಯಾ ಎಣ್ಣೆ ಸಾಂಗ್ ಬಂತು..

    ಎಣ್ಣೆಗೂ.. ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ..

    ಬಾರಲ್ಲಿ ಹೆಣ್ ಹೈಕ್ಳು ಕುಡಿಯೋದು ತಪ್ಪಂತಾ ಯಾರಾನಾ ಬೋರ್ಡ್ ಹಾಕವ್ರಾ..

    ಅಯ್ಯೋ ನಮ್ಗೂನೂ ಲವ್ವಲ್ಲಿ ಬ್ರೇಕಪ್ಪು ಆಗೈತೆ.. ಒಂದೆರಡು ಪೆಗ್ ಹಾಕ್ತೀರಾ.. ಶಿವನೇ.. ಒಂದೆರಡು ಪೆಗ್ ಹಾಕ್ತೀರಾ..

    ಹೀಗೆ ಸಾಗೋ ಹಾಡು.. ಗುಂಗು ಹಿಡಿಸುತ್ತಾ ಕಿಕ್ಕೇರಿಸುತ್ತೆ. ಒನ್ಸ್ ಎಗೇಯ್ನ್ ಪ್ರೇಮ್ ಹಾಡಿನ ಮೋಡಿಯನ್ನು ಕಂಟಿನ್ಯೂ ಮಾಡಿದ್ದಾರೆ. ಇದು ಏಕ್ ಲವ್ ಯಾ ಚಿತ್ರದ ಎಣ್ಣೆ ಸಾಂಗ್.

    ಕಿಕ್ಕೇರಿಸೋ ಸಾಹಿತ್ಯಕ್ಕೆ ಅಕ್ಷರ ಕೊಟ್ಟಿರೋದು ಶೋಮ್ಯಾನ್ ಪ್ರೇಮ್ ಅರ್ಥಾತ್ ಜೋಗಿ ಪ್ರೇಮ್. ಅದಕ್ಕೆ ಇನ್ನಷ್ಟು ಕಿಕ್ಕೇರಿಸಿರೋದು ಮಂಗ್ಲಿ ಮತ್ತು ಕೈಲಾಶ್ ಖೇರ್. ಕಣ್ಣಿನಲ್ಲೇ ಕಿಕ್ಕೇರಿಸಿರೋ ರಚಿತಾ ರಾಮ್ ಎದುರು ಅಷ್ಟೇ ಕಾನ್ಫಿಡೆಂಟ್ ಆಗಿ ಹೆಜ್ಜೆ ಹಾಕಿರೋದು ರಾಣಾ. ಜನವರಿ 21ಕ್ಕೆ ರಿಲೀಸ್ ಆಗುತ್ತಿರೋ ಏಕ್ ಲವ್ ಯಾ ಚಿತ್ರಕ್ಕೆ ಎಂದಿನಂತೆ ಅದ್ಧೂರಿ ಪ್ರಚಾರ ಶುರು ಮಾಡಿದ್ದಾರೆ ಪ್ರೇಮ್.

  • ಏಕ್ ಲವ್ ಯಾ ಟ್ರೇಲರ್ ರಿಲೀಸ್ ಸದ್ಯಕ್ಕಿಲ್ಲ. ರಿಲೀಸ್?

    ಏಕ್ ಲವ್ ಯಾ ಟ್ರೇಲರ್ ರಿಲೀಸ್ ಸದ್ಯಕ್ಕಿಲ್ಲ. ರಿಲೀಸ್?

    ಇದೇ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಏಕ್ ಲವ್ ಯಾ. ಜೋಗಿ ಪ್ರೇಮ್ ಡೈರೆಕ್ಷನ್‍ನ ಚಿತ್ರದ ಮೂಲಕ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡಬೇಕಿರುವ ಸಿನಿಮಾ ಏಕ್ ಲವ್ ಯಾ. ಈಗಾಗಲೇ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಒಂದು ಲೆವೆಲ್ಲಿಗೆ ಪ್ರಚಾರವನ್ನೂ ಮುಗಿಸಿತ್ತು ಪ್ರೇಮ್ ಟೀಂ. ಜೊತೆಗೆ ರಚಿತಾ ರಾಮ್-ರಾಣಾ ಕಿಸ್ಸಿಂಗ್ ಬೇರೆಯದೇ ಸೆನ್ಸೇಷನ್ ಸೃಷ್ಟಿಸಿತ್ತು.

    ಇಷ್ಟೆಲ್ಲ ಆಗಿ ಇವತ್ತು ಅರ್ಥಾತ್ ಜನವರಿ 4ಕ್ಕೆ ರಿಲೀಸ್ ಆಗಬೇಕಿದ್ದ ಏಕ್ ಲವ್ ಯಾ ಟ್ರೇಲರ್ ಬಿಡುಗಡೆ ಮುಂದಕ್ಕೆ ಹೋಗಿದೆ. ನೀಡಿರುವುದು ತಾಂತ್ರಿಕ ಕಾರಣಗಳೇ ಆದರೂ, ಕಾರಣ ಬೇರೆಯದೇ ಇದೆ ಎನ್ನಲಾಗಿದೆ. ಅಕಸ್ಮಾತ್ ಸರ್ಕಾರ 50:50 ರೂಲ್ಸ್ ಜಾರಿಗೆ ತಂದರೆ ಏನು ಮಾಡುವುದು ಎಂಬ ಭಯ ಚಿತ್ರ ತಂಡದ್ದು. ಟ್ರೇಲರ್ ರಿಲೀಸ್ ಮಾಡದೆ ಪ್ರಚಾರ ಮಾಡುವುದೂ ಕಷ್ಟ. ಹೀಗಾಗಿ ಚಿತ್ರದ ರಿಲೀಸ್ ಕೂಡಾ ಮುಂದಕ್ಕೆ ಹೋದರೆ ಆಶ್ಚರ್ಯವಿಲ್ಲ.

    ಆದರೆ ಸದ್ಯಕ್ಕಂತೂ ಜೋಗಿ ಪ್ರೇಮ್ ಜನವರಿ 21ಕ್ಕೆ ಸಿನಿಮಾ ರಿಲೀಸ್ ಮಾಡುವುದು ಪಕ್ಕಾ ಎಂದಿದ್ದಾರೆ. ಚಿತ್ರದ ಇನ್ನೊಂದು ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

  • ಏಕ್ ಲವ್ ಯಾ ನೋಡಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಏಕ್ ಲವ್ ಯಾ ನೋಡಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಏಕ್ ಲವ್ ಯಾ ಚಿತ್ರದ ಪ್ರಚಾರ ಜೋರಾಗುತ್ತಿದೆ. ನಿರೀಕ್ಷೆಯಂತೆಯೇ ಪ್ರೇಮ್ ತಮ್ಮ ಚಿತ್ರವನ್ನು ಅದ್ಧೂರಿಯಾಗಿ ಪ್ರಮೋಟ್ ಮಾಡುತ್ತಿದ್ದಾರೆ.  ಈ ಬಾರಿ ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತೆರೆಗೆ ತರುತ್ತಿರೋದು ತಮ್ಮ ಪತ್ನಿ ರಕ್ಷಿತಾ ಅವರ ತಮ್ಮ ರಾಣಾನನ್ನು. ಹೀಗಾಗಿ ಚಿತ್ರದ ಬಗ್ಗೆ ಅದ್ಧೂರಿ ಪ್ರಚಾರ ಕೈಗೊಂಡಿದ್ದಾರೆ.

    ಚಿತ್ರದ ಪ್ರೀಮಿಯರ್ ಷೋವನ್ನು ಫೆಬ್ರವರಿ 23ರಂದು ಇಟ್ಟುಕೊಂಡಿದ್ದಾರೆ. 24ಕ್ಕೆ ರಾಜ್ಯಾದ್ಯಂತ ರಿಲೀಸ್. ಆ ಪ್ರೀಮಿಯರ್ ಶೋಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ  ಪ್ರೇಮ್. ಜೊತೆಗೆ ಎಂದಿನಂತೆ ಪ್ರೇಮ್ ಅವರ ಚಿತ್ರರಂಗದ ಬಳಗ ಇರಲಿದೆ.

    ಏಕ್ ಲವ್ ಯಾ ಚಿತ್ರಕ್ಕೆ ರಾಣಾ ಹೀರೋ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಹೀರೋಯಿನ್ಸ್. ರಕ್ಷಿತಾ ಪ್ರೇಮ್ ನಿರ್ಮಾಪಕಿ. ಪ್ರೇಮ್ ಅವರೇ ಹೇಳಿರೋ ಹಾಗೆ ಚಿತ್ರದ ಇನ್ನೊಬ್ಬ ಹೀರೋ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಪ್ರೇಮ್ ಆಹ್ವಾನ ನೀಡಿದ್ದಾರೆ.

  • ಏಕ್ ಲವ್ ಯಾ ಮೀಟ್ ಮಾಡಣ..

    ಏಕ್ ಲವ್ ಯಾ ಮೀಟ್ ಮಾಡಣ..

    ಅದು ಚಿತ್ರದ ಹಾಡೂ ಹೌದು.. ಅಭಿಮಾನಿಗಳಿಗೆ ಕಾರ್ಯಕ್ರಮಕ್ಕೆ ಇನ್ವಿಟೇಷನ್ನೂ ಹೌದು.. ಅಪ್ಪ ಅಮ್ಮ ಮದುವೆಯಾಗು ಎನ್ನುತ್ತಿದ್ದರೂ.. ಕಿವಿಗೆ ಬಿದ್ದೇ ಇಲ್ಲ ಎಂದು ಓಡಾಡೋ ಯುವಕ ಯುವತಿಯರ ರಾಷ್ಟ್ರಗೀತೆಯೂ ಹೌದು.. ಅದು ಏಕ್ ಲವ್ ಯಾ ಹಾಡು.. 5ನೇ ಹಾಡು.. ಮೀಟ್ ಮಾಡಣ..

    ಈಗಾಗಲೇ ಚಿತ್ರದ 4 ಹಾಡುಗಳು ರಿಲೀಸ್ ಆಗಿವೆ. ನಾಲ್ಕಕ್ಕೆ ನಾಲ್ಕೂ ಹಿಟ್. 5ನೇ ಹಾಡು ರಿಲೀಸ್ ಆಗುತ್ತಿರೋದು ಶಿವಮೊಗ್ಗದಲ್ಲಿ. ರಿಲೀಸ್ ಆಗಲಿರೋ ಹಾಡಿನ ಸಾಹಿತ್ಯದ ಟೋಟಲ್ ಶಕ್ತಿಯೇ ಮೀಟ್ ಮಾಡಣ..

    ರಕ್ಷಿತಾ ಪ್ರೇಮ್ ಸೋದರ ರಾಣಾ ಹೀರೋ ಆಗಿ ಎಂಟ್ರಿ ಕೊಡ್ತಿರೋ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಮತ್ತು ರಚಿತಾ ರಾಮ್ ಹೀರೋಯಿನ್ಸ್. ತುಂಟಾಟ, ತರಲೆ, ರೊಮ್ಯಾನ್ಸ್, ಹಾಟ್ ಕಿಸ್.. ಎಲ್ಲವೂ ಇರೋ ಚಿತ್ರ ಏಕ್ ಲವ್ ಯಾ. ಅರ್ಜುನ್ ಜನ್ಯಾ ಈಗಾಗಲೇ ಗುಂಗು ಹಿಡಿಸಿದ್ದಾಗಿದೆ. ಜೋಗಿ ಪ್ರೇಮ್ ಚಿತ್ರ ಎಂದಮೇಲೆ ಅಷ್ಟು ಸದ್ದು ಮಾಡಲೇ ಬೇಕು. ಓಕೆ.. ಮೀಟ್ ಮಾಡಣ..

  • ಏಕ್ ಲವ್ ಯಾ ಮ್ಯೂಸಿಕಲ್ ರೈಟ್ಸ್‍ಗೆ ಎಷ್ಟು ಕೋಟಿ?

    ಏಕ್ ಲವ್ ಯಾ ಮ್ಯೂಸಿಕಲ್ ರೈಟ್ಸ್‍ಗೆ ಎಷ್ಟು ಕೋಟಿ?

    ಏಕ್ ಲವ್ ಯಾ ಚಿತ್ರದ ಎಲ್ಲ ಹಾಡುಗಳೂ ಗುನುಗುವಂತಿವೆ. ಒಂದಕ್ಕಿಂತ ಒಂದು ಹಿಟ್. ಪ್ರೇಮ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ. ಹಾಗಾದರೆ ಏಕ್ ಲವ್ ಯಾ ಸಂಗೀತಕ್ಕೆ ಎಷ್ಟು ಕೋಟಿ ಬಂದಿರಬಹುದು? ಪ್ರೇಮ್ ಮತ್ತು ಜನ್ಯ ಕಾಂಬಿನೇಷನ್ ಇರೋ ಕಾರಣಕ್ಕೆ ದೊಡ್ಡ ಮಟ್ಟದ ಮೊತ್ತವೇ ಸಿಕ್ಕಿರಬಹುದು ಎಂಬ ನಿರೀಕ್ಷೆ ಇದೆಯೇ?

    ಏಕ್ ಲವ್ ಯಾ ಚಿತ್ರದ ಆಡಿಯೋ ರೈಟ್ಸ್‍ನ್ನು ಎ2 ಮ್ಯೂಸಿಕ್ 75 ಲಕ್ಷಕ್ಕೆ ಕೊಂಡುಕೊಂಡಿದೆ. ಉಳಿದಂತೆ ಚಿತ್ರದ ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್‍ನ್ನು ಝೀ5 ಖರೀದಿಸಿದೆ.  

  • ಏಕ್ ಲವ್ ಯಾದಲ್ಲಿ ಮಿಸ್ ಆದ ಮುತ್ತು ರಾಣಾಗೆ ಸಿಕ್ಕೇಬಿಡ್ತು..!

    raana image

    ರೀಷ್ಮಾ ನಾಣಯ್ಯ. ಏಕ್ ಲವ್ ಯಾ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಜೋಗಿ ಪ್ರೇಮ್ ಶೋಧನೆಯ ಹುಡುಗಿಗೆ ನಂದ ಕಿಶೋರ್ ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ಏಕ್ ಲವ್ ಯಾದಲ್ಲಿ ಮುಗ್ಧ ಪ್ರೇಮಿಯಾಗಿ, ತ್ಯಾಗಮಯಿಯಾಗಿ ಅತ್ಯಾಚಾರಕ್ಕೊಳಗಾಗಿ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಳ್ಳುವ ಹುಡುಗಿಯಾಗಿ ಗಮನ ಸೆಳೆದಿದ್ದರು ರೀಷ್ಮಾ ನಾಣಯ್ಯ. ಅಲ್ಲಿಯೂ ಹೀರೋಗೆ ಮುತ್ತು ಕೊಡುವ ದೃಶ್ಯವಿತ್ತಾದರೂ ಮುತ್ತು ಕೊಟ್ಟಿದ್ದು ಹೀರೋಯಿನ್ ರೀಷ್ಮಾ ಆಗಿರಲಿಲ್ಲ. ರಚಿತಾ ರಾಮ್ ಹೀರೋ ಜೊತೆ ಲಿಪ್ ಲಾಕ್ ಮಾಡಿದ್ದರು. ಆದರೆ ರಾಣಾದಲ್ಲಿ ಶ್ರೇಯಸ್ ಮಂಜು ಜೊತೆ ರೀಷ್ಮಾ ನಾಣಯ್ಯ ತುಟಿಗೆ ತುಟಿ ಒತ್ತಿದ್ದಾರೆ.

    ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದಲ್ಲಿರುವ ಗಲ್ಲಿಬಾಯ್ ಹಾಡಿನಲ್ಲಿ ತುಟಿಗೆ ತುಟಿ ಸೀನ್ ಬರುತ್ತದೆ. ಮುತ್ತಿನಲ್ಲಿ ಮತ್ತಿನಲ್ಲಿ ಕಳೆದುಹೋಗುವುದು ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ. ಗಲ್ಲಿಬಾಯ್ ಹಾಡಿಗೆ ಚಂದನ್ ಶೆಟ್ಟಿಯವರದ್ದೇ ಸಾಹಿತ್ಯವೂ ಇದೆ. ಅನಿರುದ್ಧ ಶಾಸ್ತ್ರಿ ಮತ್ತು ಆದಿತಿ ಸಾಗರ್ ಹಾಡಿರುವ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿರುವುದು ರೀಷ್ಮಾ ನಾಣಯ್ಯ. ಮಾದಕ ಹೆಜ್ಜೆಗೆ ಮೋಹಕವಾಗಿ ಕರಗಿ ಹೋಗುವುದು ಶ್ರೇಯಸ್ ಮಂಜು. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಸಿನಿಮಾ ಇದೇ ನವೆಂಬರ್ 11ರಂದು ರಿಲೀಸ್ ಆಗಲಿದೆ.

  • ಕನ್ನಡಕ್ಕೆ ಸಿಕ್ಕ ಹೊಸ ಹೀರೋ

    ಕನ್ನಡಕ್ಕೆ ಸಿಕ್ಕ ಹೊಸ ಹೀರೋ

    ಈ ವಾರ ರಿಲೀಸ್ ಆಗಿರೋ ಏಕ್ ಲವ್ ಯಾ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಎಕ್ಸ್‍ಕ್ಯೂಸ್ ಮಿ ನಂತರ ಲವ್ ಸ್ಟೋರಿ ಮಾಡಿದ್ದ ಪ್ರೇಮ್, ಗೆದ್ದಿದ್ದಾರೆ. ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಬಾವ ಬಾಮೈದ ಅನ್ನೋ ರಿಲ್ಯಾಕ್ಸ್ ಇರಲಿಲ್ಲ. ಬೈಸಿಕೊಂಡಿದ್ದು, ಉಗಿಸಿಕೊಂಡಿದ್ದು ಎಲ್ಲವೂ ಇದೆ. ಪ್ರೇಮ್ ಡೈರೆಕ್ಷನ್ ಮಾಡೋಕೆ ನಿಂತಾಗ ಡೈರೆಕ್ಟರ್ ಮಾತ್ರ. ಅಲ್ಲಿ ಸಂಬಂಧಗಳಿರೋದಿಲ್ಲ ಎಂದಿದ್ದರು ರಾಣಾ.

    ಪ್ರೇಮ್ ಅವರ ಆ ಎಲ್ಲ ಶ್ರಮದ ಪ್ರತಿಫಲವೇ ರಾಣಾ. ಏಕ್ ಲವ್ ಯಾ ನೋಡಿದವರಿಗೆ ಕನ್ನಡಕ್ಕೆ ಹೊಸ ಹೀರೋ ಸಿಕ್ಕ ಅಂತನ್ನಿಸದೇ ಇರದು. ಎಮೋಷನ್ಸ್, ಆ್ಯಕ್ಷನ್, ತುಂಟಾಟ, ಮುಗ್ದತೆ, ತರಲೆ.. ಹೀಗೆ ಎಲ್ಲದರಲ್ಲೂ ಗೆದ್ದಿರೋ ರಾಣಾ ಹೊಸ ಹುಡುಗ ಅನ್ನಿಸಲ್ಲ ಅನ್ನೋದು ಅವರಿಗೆ ಸಿಕ್ಕಿರೋ ಕಾಂಪ್ಲಿಮೆಂಟು. ವಾಯ್ಸ್ ಮಾಡ್ಯುಲೇಷನ್ ಕಡೆ ಇನ್ನೊಂದಿಷ್ಟು ಗಮನ ಹರಿಸಿದರೆ ಇನ್ನೂ ಒಳ್ಳೆಯದು.

  • ಗಲ್ಲಿಬಾಯ್ ಹಾಡಿನಲ್ಲಿ ರೀಷ್ಮಾಗೆ ಪಪ್ಪಿ ಕೊಟ್ಟ ಶ್ರೇಯಸ್ ಮಂಜು

    ಗಲ್ಲಿಬಾಯ್ ಹಾಡಿನಲ್ಲಿ ರೀಷ್ಮಾಗೆ ಪಪ್ಪಿ ಕೊಟ್ಟ ಶ್ರೇಯಸ್ ಮಂಜು

    ರಾಣಾ ಚಿತ್ರದ ಗಲ್ಲಿಭಾಯ್ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿದೆ. ಹಾಡಿನಲ್ಲಿ ಮೈಮನ ಬಿಚ್ಚಿ ಹಾಡಿ ಕುಣಿದಿರುವ ಜೋಡಿ ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ.. ತುಟಿಗೆ ತುಟಿ ಒತ್ತಿರುವುದು ವಿಶೇಷ. ಚಂದನ್ ಶೆಟ್ಟಿ ಹಾಡಿನ ಸಾಲುಗಳೇ ಹಾಗಿವೆ. ಮ್ಯೂಸಿಕ್ ಕೂಡಾ ಚಂದನ್ ಶೆಟ್ಟಿ ಅವರದ್ದೇ. ಅನಿರುದ್ಧ ಶಾಸ್ತ್ರಿ ಮತ್ತು ಆದಿತಿ ಸಾಗರ್ ಹಾಡಿರುವ ಹಾಡಿದು.

    ನಂದ ಕಿಶೋರ್ ನಿರ್ದೇಶನದ ರಾಣಾ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ನಾಯಕ. ಗಲ್ಲಿಭಾಯ್ ಹಾಡನ್ನು ರಿಲೀಸ್ ಮಾಡಿದ್ದು ಜೋಗಿ ಪ್ರೇಮ್.

    ಸಿನಿಮಾದ ಹಾಡು, ಮೇಕಿಂಗ್ ನೋಡಿ ಖುಷಿಯಾಯ್ತು. ನಾಯಕ, ನಾಯಕಿ ಇಬ್ಬರೂ ಅದ್ಭುತವಾಗಿ ಕುಣಿದಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ ಎಂದು ಹಾರೈಸಿದರು ಪ್ರೇಮ್.

  • ಜನವರಿ 4ಕ್ಕೆ ಮೈಸೂರಿನಲ್ಲಿ ಏಕ್ ಲವ್ ಯಾ ಟ್ರೇಲರ್

    ಜನವರಿ 4ಕ್ಕೆ ಮೈಸೂರಿನಲ್ಲಿ ಏಕ್ ಲವ್ ಯಾ ಟ್ರೇಲರ್

    ಜೋಗಿ ಪ್ರೇಮ್ ಡೈರೆಕ್ಷನ್‍ನಲ್ಲಿ ಶುರುವಾದ ಏಕ್ ಲವ್ ಯಾ ಸೆಟ್ಟೇರಿದ ದಿನದಿಂದಲೂ ಸುದ್ದಿ ಮಾಡುತ್ತಿದೆ. ರಕ್ಷಿತಾ ಪ್ರೇಮ್ ತಮ್ಮ ರಾಣಾ ಹೀರೋ ಆಗಿ ಬರುತ್ತಿರೋ ಮೊದಲ ಚಿತ್ರವಿದು. ಚಿತ್ರದ ಒಂದೊಂದು ಹಾಡುಗಳೂ ಸೂಪರ್ ಹಿಟ್ ಆಗಿವೆ. ಹಾಡುಗಳು ಅದ್ಭುತ ಎನ್ನುತ್ತಿದ್ದಾರೆ ಕೇಳಿದವರು. ಅದು ಪ್ರೇಮ್ ಸ್ಪೆಷಾಲಿಟಿ. ಈಗ ಚಿತ್ರದ ಟ್ರೇಲರ್ ರಿಲೀಸ್ ಮಾಡೋಕೆ ಡೇಟ್ ಫಿಕ್ಸ್ ಮಾಡಿದ್ದಾರೆ ಪ್ರೇಮ್.

    ಒಂದೊಂದು ಹಾಡುಗಳ ಬಿಡುಗಡೆಯನ್ನು ಒಂದೊಂದು ರೀತಿ ಮಾಡಿದ್ದ ಪ್ರೇಮ್ ಈಗಾಗಲೇ ಗದಗ, ಧಾರವಾಡ, ಶಿವಮೊಗ್ಗ ರೌಂಡ್ಸ್ ಹಾಕಿದ್ದಾರೆ. ಟ್ರೇಲರ್ ರಿಲೀಸ್ ಮಾಡೋಕೆ ಹೋಗುತ್ತಿರುವುದು ಮೈಸೂರಿಗೆ. ಮೈಸೂರಿನ ಡಿಆರ್‍ಸಿ ಪರದೆಯಲ್ಲಿಟ್ರೇಲರ್ ರಿಲೀಸ್ ಆಗಲಿದೆ. ಅದೇ ವೇಳೆ ಅವರ ಯೂಟ್ಯೂಬ್ ಚಾನೆಲ್‍ನಲ್ಲೂ ಟ್ರೇಲರ್ ಬರಲಿದೆ.

    ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಟಿಸಿರೋ ಚಿತ್ರದಲ್ಲಿ ಯೂತ್‍ಫುಲ್ ಲವ್ ಸ್ಟೋರಿ ಇದೆ. ಈಗಿನ ಜನರೇಷನ್‍ನ ಲವ್ ಸ್ಟೋರಿಯನ್ನು ಪ್ರೇಮ್ ಹೇಗೆ ತೆರೆ ಮೇಲೆ ತರಲಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಜನವರಿ 21ರಂದು ಸಿಗಲಿದೆ.

  • ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

    ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

    ಏಕ್ ಲವ್ ಯಾ ಚಿತ್ರ ಜನವರಿಯಲ್ಲಿ ರಿಲೀಸ್ ಆಗುತ್ತಿದೆ. 5 ಭಾಷಗಳಲ್ಲಿ ಬರುತ್ತಿರೋ ಚಿತ್ರದ ಹಾಡು, ಟೀಸರ್ ನೋಡಿದವರಿಗೆ ಇದು ಹೊಸ ನಟನ ಚಿತ್ರ ಎಂಬ ಫೀಲಿಂಗ್ ಬರುತ್ತಿಲ್ಲ. ಬದಲಿಗೆ ಇದು ಒಬ್ಬ ಸ್ಟಾರ್ ನಟನ ಚಿತ್ರ ಇರಬೇಕು ಎಂಬ ಭಾವನೆ ಬರುತ್ತಿದೆ. ಜೋಗಿ ಪ್ರೇಮ್ ಮೋಡಿಯೇ ಅಂಥದ್ದು. ಚಿತ್ರದ ಹಾಡು, ಟೀಸರ್‍ಗಳು ಕನ್ನಡದಲ್ಲಿ ಮೋಡಿ ಮಾಡಿವೆ. ಆ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯೋಕೆ, ತಮ್ಮ ಪ್ರೀತಿಯ ತಮ್ಮನನ್ನು ತೆಲುಗಿನಲ್ಲಿ ಲಾಂಚ್ ಮಾಡೋಕೆ ಹೊರಟಿದ್ದಾರೆ ರಕ್ಷಿತಾ ಪ್ರೇಮ್.

    ರಕ್ಷಿತಾಗೆ ತೆಲುಗು ಇಂಡಸ್ಟ್ರಿ ಹೊಸದಲ್ಲ. ಒಂದು ಕಾಲದಲ್ಲಿ ರಕ್ಷಿತಾ ಆಳಿದ್ದ ಚಿತ್ರರಂಗವದು. ಅಲ್ಲಿ ಏಕ್ ಲವ್ ಯಾ ಚಿತ್ರದ ಈವೆಂಟ್ ಮಾಡುವುದು ರಕ್ಷಿತಾ ಯೋಜನೆ. ಇನ್ನು ರಕ್ಷಿತಾಗೆ ಪುರಿ ಜಗನ್ನಾಥ್, ಮಹೇಶ್ ಬಾಬು, ರವಿತೇಜ ಸೇರಿದಂತೆ ತೆಲುಗು ಇಂಡಸ್ಟ್ರಿಯ ದಿಗ್ಗಜರ ಜೊತೆ ಒಳ್ಳೆಯ ಬಾಂಧವ್ಯ ಈಗಲೂ ಇದೆ. ತಮ್ಮ ರಾಣಾನನ್ನು ಪರಿಚಯಿಸುವ ಕಾರ್ಯಕ್ರಮವನ್ನು ಅವರೆಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡೋಕೆ ರಕ್ಷಿತಾ ರೆಡಿಯಾಗಿದ್ದಾರೆ.

  • ನಿರ್ದೇಶಕ ಮೆಚ್ಚಿಕೊಂಡ ರಾಣ

    ನಿರ್ದೇಶಕ ಮೆಚ್ಚಿಕೊಂಡ ರಾಣ

    ಒಬ್ಬ ನಿರ್ದೇಶಕರಿಗೆ ತನ್ನ ಚಿತ್ರದ ಹೀರೋ ಯಾವತ್ತಿಗೂ ಅಚ್ಚುಮೆಚ್ಚು. ಆದರೆ ನಂದ ಕಿಶೋರ್ ಎಂಬ ಹಿಟ್ ಚಿತ್ರಗಳನ್ನೇ ಕೊಟ್ಟ ನಿರ್ದೇಶಕ, ಇನ್ನೂ 2ನೇ ಸಿನಿಮಾ ಮಾಡಿರುವ ಹೀರೋ ಶ್ರೇಯಸ್ ಮಂಜು ಬಗ್ಗೆ ಮೆಚ್ಚುಗೆಯ ಮಾತನ್ನಾಡುವುದಿದೆಯಲ್ಲ. ಅದು ಶ್ರೇಯಸ್ ಮಂಜು ಪ್ರತಿಭೆ.

    ಶ್ರೇಯಸ್ ಮಂಜು ಒಂದು ಅದ್ಭುತ ಪ್ಯಾಕೇಜ್. ವಿಭಿನ್ನ ಪಾತ್ರಗಳಿಗೆ ಹೊಸ ಹೀರೋನನ್ನು ಕೂರಿಸುವುದು ಒಂದು ಚಾಲೆಂಜ್. ಸ್ಟಾರ್ ನಟರಾಗಿದ್ದರೆ ಕೆಲವೊಂದು ಸಬ್ಜೆಕ್ಟ್ ಹೇಳುವುದು ಸುಲಭ. ಅದನ್ನು ಶ್ರೇಯಸ್ ಮಂಜು ಯಶಸ್ವಿಯಾಗಿ ಮಾಡಿದ್ದಾರೆ ಎನ್ನುತ್ತಾರೆ ನಂದಕಿಶೋರ್. ಅಧ್ಯಕ್ಷ, ರನ್ನ, ಪೊಗರು, ಟೈಗರ್, ಬೃಹಸ್ಪತಿ.. ಹೀಗೆ ದೊಡ್ಡ ದೊಡ್ಡ ನಟರ ಚಿತ್ರಗಳನ್ನೇ ನಿರ್ದೇಶಿಸಿ ಗೆದ್ದ ನಂದಕಿಶೋರ್, ಶ್ರೇಯಸ್ ಮಂಜು ಅವರಿಗಾಗಿ ಕಥೆ ಮಾಡಿರಲಿಲ್ಲವಂತೆ.

    ಕಥೆಯೂ ಸಿದ್ಧವಿತ್ತು. ಪ್ರೊಡ್ಯೂಸರ್ ಸಿಕ್ಕಿದ್ರು. ಆ ಕಥೆಗೆ ಶ್ರೇಯಸ್ ಮಂಜು ಫಿಟ್ ಆದ್ರು. ಅವರೊಬ್ಬ ಒಳ್ಳೆ ನಟ. ಡ್ಯಾನ್ಸರ್. ಸ್ಟಂಟ್ಸ್ ಕೂಡಾ ಚೆನ್ನಾಗಿ ಮಾಡುತ್ತಾರೆ. ಒಳ್ಳೆ ಪರ್ಸನಾಲಿಟಿಯೂ ಇದೆ. ಒಳ್ಳೆ ಲುಕ್ ಇದೆ. ಟೋಟಲ್ಲಿ ಗುಡ್ ಓವರ್‍ಆಲ್ ಪ್ಯಾಕೇಜ್ ಎನ್ನುವ ನಂದ ಕಿಶೋರ್ ನಾcಯಕಿ ರೀಷ್ಮಾ ನಾಣಯ್ಯ ಅವರ ಬಗ್ಗೆ ಕೂಡಾ ಪ್ರೀತಿಯಿಂದ ಹೇಳುತ್ತಾರೆ. ಕೆ.ಮಂಜು ಅರ್ಪಿಸಿ, ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಿರುವ ರಾಣ ನಾಳೆ ತೆರೆ ಕಾಣುತ್ತಿದೆ.

  • ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ..

    ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ..

    ಯಾರೆ ಯಾರೇ.. ನೀನು ನಂಗೆ..

    ಹೊತ್ತಿಲ್ಲದ ಹೊತ್ತು.. ತುತ್ತಿಲ್ಲದೆ ನಿಂತು. ಕಾದಿದ್ದೆ ನಿನಗಾಗಿ ಯಾಕೆ.. ಹೇಳು ಯಾಕೆ..

    ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳು ಭಗವಂತ..

    ಒಂದರ ಹಿಂದೊಂದು ಬಂದ ಮೂರು ಹಾಡುಗಳೂ ಹಿಟ್ ಆಗಿವೆ. ಎಲ್ಲವೂ ಜೋಗಿ ಪ್ರೇಮ್ ಮತ್ತು ಅರ್ಜುನ್ ಜನ್ಯಾ ಮ್ಯಾಜಿಕ್. ಪ್ರತಿ ಹಾಡೂ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಹಾಡುಗಳ ಹ್ಯಾಟ್ರಿಕ್ ನಂತರ 4ನೇ ಹಾಡಿಗೂ ರೆಡಿಯಾಗಿದ್ದಾರೆ ಪ್ರೇಮ್. 4ನೇ ಹಾಡು ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ…

    ಇದು ಪ್ರೀತಿಯ ಹಾಡಂತೆ. ಗವಾಯಿಗಳ ಶಿಷ್ಯ ಬರೆದಿರೋ ಪ್ರೀತಿಯ ಹಾಡಿನ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ಆ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡೋ ಪ್ಲಾನ್ ಹಾಕಿದ್ದಾರೆ ಪ್ರೇಮ್.

    ಏಕ್ ಲವ್ ಯಾದಲ್ಲಿ ಇದೇ ಮೊದಲ ಬಾರಿಗೆ ನಟಿ ರಕ್ಷಿತಾ ಸಹೋದರ ರಾಣಾ ಹೀರೋ ಆಗಿದ್ದಾರೆ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಇಬ್ಬರೂ ಹೀರೋಯಿನ್ಸ್. ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂನಲ್ಲೂ ಏಕಕಾಲಕ್ಕೆ ಜನವರಿಯಲ್ಲೇ ರಿಲೀಸ್ ಆಗುತ್ತಿದೆ. ಸಂಕ್ರಾಂತಿ ಸಂಭ್ರಮ ಹೆಚ್ಚಿಸಲಿದೆ. ಕನ್ನಡದಲ್ಲಿ ಮಾತ್ರ ಪ್ರೇಮ್ ಅವರೇ ವಿತರಣೆ ಮಾಡಲಿದ್ದು, ಬೇರೆ ಭಾಷೆಗಳಿಗೆ ಈಗಾಗಲೇ ಮಾರಾಟ ಮಾಡಿದ್ದಾರಂತೆ.

  • ಮಳ್ಳಿ ಮಳ್ಳಿ.. ಜವಾರಿ ಸಾಹಿತ್ಯದ ಮೇಲೆ ರಾಣಾ-ಸಂಯುಕ್ತಾ ಸವಾರಿ

    ಮಳ್ಳಿ ಮಳ್ಳಿ.. ಜವಾರಿ ಸಾಹಿತ್ಯದ ಮೇಲೆ ರಾಣಾ-ಸಂಯುಕ್ತಾ ಸವಾರಿ

    ಕನ್ನಡದಲ್ಲಿ ಉತ್ತರ ಕರ್ನಾಟಕದ ಸೊಗಡನ್ನು ಯಶಸ್ವಿಯಾಗಿ ಬಳಸಿಕೊಂಡಿರುವವರು ಬಹಳ ಅಪರೂಪ. ಹಾಗೆ ಪ್ರಯೋಗ ಮಾಡಿ ಪ್ರಯತ್ನ ಮಾಡಿದಾಗಲೆಲ್ಲ ಗೆಲುವು ಸಿಕ್ಕಿದೆ. ಈ ಬಾರಿ ಗೆದ್ದಿರೋದು ರಾಣಾ.

    ನಂದಕಿಶೋರ್ ನಿರ್ದೇಶನದ ರಾಣಾ ಚಿತ್ರದ ಮಳ್ಳಿ ಮಳ್ಳಿ ಹಾಡು ಹೊರಬಿದ್ದಿದೆ. ಚಂದನ್ ಶೆಟ್ಟಿ ಬೀಟ್ಸ್‍ಗೆ ಬೊಂಬಾಟ್ ಸ್ಟೆಪ್ಸ್ ಹಾಕಿರೋದು ಶ್ರೇಯಸ್ ಮಂಜು ಮತ್ತು ಸಂಯುಕ್ತಾ ಹೆಗಡೆ. ಉತ್ತರ ಕರ್ನಾಟಕದ ಸಾಹಿತ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಲಗ್ಗೆಯಿಟ್ಟಿದೆ ಶ್ರೇಯಸ್-ಸಂಯುಕ್ತಾ ಜೋಡಿ.

    ಚುಟು ಚುಟು ಖ್ಯಾತಿಯ ಶಿವು ಬೆರ್ಗಿ ಬರೆದಿರೋ ಹಾಡನ್ನು ಅಷ್ಟೇ ಖಡಕ್ಕಾಗಿ ಹಾಡಿರೋದು ಚಂದನ್ ಶೆಟ್ಟಿ ಮತ್ತು ದಿವ್ಯಾ ರಾಮಚಂದ್ರ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ನಾಯಕಿ ಅಲ್ಲ. ಈ ಸ್ಪೆಷಲ್ ಹಾಡಿಗೆ ಕುಣಿದಿದ್ದಾರೆ ಅಷ್ಟೆ. ಚಿತ್ರದ ನಾಯಕಿ ಏಕ್ ಲವ್ ಯಾ ರಿಲೀಸ್‍ಗೆ ಕಾಯ್ತಿರೋ ರೀಷ್ಮಾ ನಾಣಯ್ಯ.

  • ಯಶ್ ಸಿನಿಮಾ ಟೈಟಲ್ ಶ್ರೇಯಸ್ ಮಂಜುಗೆ ಸಿಕ್ಕಿದ್ದು ಹೇಗೆ?

    ಯಶ್ ಸಿನಿಮಾ ಟೈಟಲ್ ಶ್ರೇಯಸ್ ಮಂಜುಗೆ ಸಿಕ್ಕಿದ್ದು ಹೇಗೆ?

    ರಾಣಾ. ನಾಳೆ ಬಿಡುಗಡೆಯಾಗುತ್ತಿರುವ ಶ್ರೇಯಸ್ ಮಂಜು ಸಿನಿಮಾ. ನಂದ ಕಿಶೋರ್ ನಿರ್ದೇಶನದ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಆ್ಯಕ್ಷನ್-ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಇರೋ ಚಿತ್ರದ ಟೈಟಲ್, ರಾಣಾ ತಂಡಕ್ಕೆ ಸಿಕ್ಕಿದ್ದರ ಹಿಂದೊಂದು ಕಥೆಯಿದೆ. ಏಕೆಂದರೆ ಈ ರಾಣಾ ಅನ್ನೋ ಟೈಟಲ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡಬೇಕಿತ್ತು.

    ಗಜಕೇಸರಿ ಚಿತ್ರ ಯಶಸ್ವಿಯಾದ ನಂತರ ಎ.ಹರ್ಷ ಮತ್ತು ಯಶ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗಬೇಕಿದ್ದ ಸಿನಿಮಾಗೆ ರಾಣಾ ಅನ್ನೋ ಟೈಟಲ್ ಇಡಲಾಗಿತ್ತು. ನಿರ್ಮಾಪಕ ರಮೇಶ್ ಕಶ್ಯಪ್ ರೆಡಿಯಾಗಿದ್ದರು. ಆದರೆ ಸಿನಿಮಾ ಟೇಕಾಫ್ ಆಗಲಿಲ್ಲ. ಕೊನೆಗೆ ಶ್ರೇಯಸ್ ಮಂಜು ಚಿತ್ರಕ್ಕೆ ಪವರ್‍ಫುಲ್ ಟೈಟಲ್ ಬೇಕು ಎನ್ನಿಸಿದಾಗ ರಾಣಾ ಟೈಟಲ್ ನೆನಪಾಯ್ತು. ರಮೇಶ್ ಕಶ್ಯಪ್ ಬಳಿ ಕೇಳಿ ಚಿತ್ರದ ಟೈಟಲ್ ತೆಗೆದುಕೊಂಡವರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.

    ರಾಣಾ ಎಂದರೆ ಮಹಮ್ಮದ್ ಘಜ್ನಿಯ ವಿರುದ್ಧ ಅಪ್ರತಿಮ ಹೋರಾಟ ಮೆರೆದಿದ್ದ ರಾಣಾ ಪ್ರತಾಪ್ ಸಿಂಗ್ ನೆನಪಾಗುತ್ತಾರೆ. ರಾಣಾ ಎಂದರೇನೇ ಯೋಧ. ಚಿತ್ರದ ಕಥೆಗೆ ತಕ್ಕಂತೆ ಮ್ಯಾಚ್ ಆಗುತ್ತೆ ಎನ್ನಿಸಿತು ಎನ್ನುತ್ತಾರೆ ಶ್ರೇಯಸ್ ಮಂಜು. ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  • ರಕ್ಷಿತಾ ಹೇಳಿದ ಏಕ್ ಲವ್ ಯಾ ಸ್ಟೋರೀಸ್

    ರಕ್ಷಿತಾ ಹೇಳಿದ ಏಕ್ ಲವ್ ಯಾ ಸ್ಟೋರೀಸ್

    ಏಕ್ ಲವ್ ಯಾ ರಿಲೀಸ್ ಆಗಿದೆ. ಪ್ರೀಮಿಯರ್ ಷೋನಲ್ಲಿ ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದು ರಕ್ಷಿತಾ ತಮ್ಮ ರಾಣಾನನ್ನು ಹೀರೋ ಆಗಿ ಪರಿಚಯಿಸುತ್ತಿರೋ ಸಿನಿಮಾ. ಪ್ರೇಮ್ ನಿರ್ದೇಶಕ. ಈ ವೇಳೆ ರಕ್ಷಿತಾ ಹೇಳಿದ ಸ್ವಾರಸ್ಯದ ಕಥೆಗಳು ಇಲ್ಲಿವೆ.

    ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಶುರು ಮಾಡಿದ್ದೇ ನನ್ನ ತಮ್ಮನಿಗಾಗಿ. ಅವನನ್ನು ಹೀರೋ ಮಾಡೋದಾದರೆ ನಾನೇ ಮಾಡಬೇಕು ಅನ್ನೋದು ಅಮ್ಮನ ಕನಸಾಗಿತ್ತು. ನನ್ನ ಹೆಸರಲ್ಲೇ ಇರಬೇಕು ಅನ್ನೋ ಆಸೆಯಿತ್ತು. ಹೀಗಾಗಿ ಎರಡು ಪ್ರೊಡಕ್ಷನ್ ಹೌಸ್ ಇದ್ದರೂ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಶುರು ಮಾಡಿದ್ದು.

    ಚಿತ್ರಕ್ಕೆ ಪ್ರೇಮ್ ಹಣ ಹಾಕಿಲ್ಲ. ಪ್ರೇಮ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವನೊಬ್ಬ ಒಳ್ಳೆಯ ಡೈರೆಕ್ಟರ್. ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರೇಮ್ ಇಡೀ ಟೀಂಗೆ ಸಿನಿಮಾ ತೋರಿಸಿದ್ದಾರೆ. ಪ್ರೇಮ್ ಬಳಿ ಇರೋದು ಎಂತಹ ಟೀಂ ಎಂದರೆ ಇಷ್ಟವಾಗಲಿಲ್ಲ ಅನ್ನೋದನ್ನೂ ಅಷ್ಟೇ ಡೈರೆಕ್ಟ್ ಆಗಿ ಹೇಳಿದ್ದಾರೆ. ಅವರೆಲ್ಲರೂ ಮೆಚ್ಚಿದ್ದಾರೆ.

    ನನಗೆ ಅಪ್ಪು ಸಿನಿಮಾ ನೆನಪಾಗುತ್ತೆ. ಅಪ್ಪು ರಿಲೀಸ್ ಆಗುವಾಗಲೇ ಅಪ್ಪು ಸ್ಟಾರ್ ನಟ. ಹೀರೋ ಆಗಿ ಮೊದಲ ಸಿನಿಮಾ ಆಗಿದ್ದರೂ ಅವರಾಗಲೇ ಸ್ಟಾರ್. ಇಡೀ ಟೀಂನಲ್ಲಿ ನಾನಷ್ಟೇ ಹೊಸಬಳು. ಹೀಗಾಗಿ ಟೆನ್ಷನ್ ಇತ್ತು. ಈಗ ಏಕ್ ಲವ್ ಯಾಗೆ ಕೂಡಾ ಅಂತದ್ದೇ ಟೆನ್ಷನ್ ಇದೆ.

    ನಿರ್ಮಾಪಕಿಯಾಗಿದ್ದು ತಮ್ಮನಿಗಾಗಿ. ಏಕ್ ಲವ್ ಯಾ ಮುಗಿಸಿದರೆ ಸಾಕು ಎನಿಸಿತ್ತು. ಆದರೆ ಈಗ ಇನ್ನಷ್ಟು ಹೊಸ ಸಿನಿಮಾ ಮಾಡು ವ ಪ್ಲಾನ್ ಇದೆ. ಕೆಲವರ ಬಳಿ ಕಥೆ ಕೇಳಿದ್ದೇನೆ. ರಾಜ್ ಬಿ.ಶೆಟ್ಟಿ ಹಾಗೂ ಧನಂಜಯ್ ಚಿತ್ರಗಳು ಇಷ್ಟವಾಗುತ್ತಿವೆ. ರಾಜ್ ಬಿ.ಶೆಟ್ಟಿ ಬಳಿ ಈಗಾಗಲೇ ಕಥೆ ಕೇಳಿದ್ದೇನೆ. ಬೇರೆಯವರಿಗೂ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ ರಕ್ಷಿತಾ ಪ್ರೇಮ್.

  • ರಾಣ ಚಿತ್ರದ ಹೈಲೈಟ್ಸ್ : ಉಧೋ ಉಧೋ ಹುಲಿಗೆಮ್ಮ ಹಾಡಿನಿಂದ ಬೊಂಬಾಟ್ ಆ್ಯಕ್ಷನ್ಸ್‍ವರೆಗೆ..

    ರಾಣ ಚಿತ್ರದ ಹೈಲೈಟ್ಸ್ : ಉಧೋ ಉಧೋ ಹುಲಿಗೆಮ್ಮ ಹಾಡಿನಿಂದ ಬೊಂಬಾಟ್ ಆ್ಯಕ್ಷನ್ಸ್‍ವರೆಗೆ..

    ರಾಣ. ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ಪ್ರಧಾನ ಪಾತ್ರದಲ್ಲಿರೋ ಸಿನಿಮಾ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಡ್ರಾಮಾ ಇರೋ ಸಿನಿಮಾ ರಾಣ. ನಂದ ಕಿಶೋರ್ ಒಂದು ಪವರ್‍ಫುಲ್ ಎಂಟರ್‍ಟೇನ್‍ಮೆಂಟ್ ಪ್ಯಾಕೇಜ್ ರೆಡಿ ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಇಷ್ಟೇ ಅಲ್ಲ, ಒಂದು ಚೆಂದದ ಮೆಸೇಜ್ ಕೂಡಾ ಇದೆ.

    ಉಧೋ ಉಧೋ ಹುಲಿಗೆಮ್ಮ.. ಹಾಡು ಉತ್ತರ ಕರ್ನಾಟಕದವರಿಗೆ ಮೆಚ್ಚುಗೆಯಾಗುವುದು ಖಚಿತ. ಭಕ್ತರಿಗಂತೂ ಹೇಳಿ ಮಾಡಿಸಿದಂತಿದೆ. ಚಂದನ್ ಶೆಟ್ಟಿ ಹಾಡು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತೆ.

    ಗಲ್ಲಿಬಾಯ್ ಹಾಡು ರೊಮ್ಯಾಂಟಿಕ್ ಆಗಿದ್ದರೆ, ಸಂಯುಕ್ತಾ ಹೆಗ್ಡೆ ಹೆಜ್ಜೆ ಹಾಕಿರುವ ಮಳ್ಳಿ ಮಳ್ಳಿ ಹಾಡು ಕುರ್ಚಿಯಲ್ಲಿ ಕುಳಿತವರೂ ಡ್ಯಾನ್ಸ್ ಮಾಡುವಂತಿದೆ.

    ಪೊಲೀಸ್ ಆಫೀಸರ್ ಆಗುವ ಕನಸು ಹೊತ್ತು ಹಳ್ಳಿಯಿಂದ ಸಿಟಿಗೆ ಬರುವ ನಾಯಕ ಎದುರಿಸುವ ಸವಾಲುಗಳ ಕಥೆ ಚಿತ್ರದಲ್ಲಿದೆ. ಲವ್ ಸ್ಟೋರಿಯಲ್ಲಿ ರೀಷ್ಮಾ ನಾಣಯ್ಯ ಜಾತಕಕ್ಕೆ ಶ್ರೇಯಸ್ ಮಂಜು ಜಾತಕ ಹೊಂದಾಣಿಕೆಯಾಗಬೇಕು. ಕ್ಯೂಟ್ ಲವ್ ಸ್ಟೋರಿ ಮಧ್ಯೆ ಕಿಸ್ಸಿಂಗ್ ರೊಮ್ಯಾನ್ಸ್ ಎಲ್ಲವೂ ಇದೆ.

    ಚಿತ್ರದಲ್ಲಿರುವ ಪವರ್ ಫುಲ್ ಆ್ಯಕ್ಷನ್ ಸೀನ್ಸ್ ಪ್ರೇಕ್ಷಕರ ಮೈನವಿರೇಳಿಸುವಂತಿದೆ. ಎಲ್ಲದರ ಜೊತೆಗೊಂದು ಚೆಂದದ ಸಂದೇಶವೂ ಇದೆ. ರಾಣ ಚಿತ್ರದ ಹೈಲೈಟ್ಸ್ ಇದು. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ರಾಣ ಚಿತ್ರ ಈಗ ಥಿಯೇಟರಿನಲ್ಲಿದೆ.

  • ರಾಣನಿಗೆ ಜೊತೆಯಾದ ರಾಗಿಣಿ

    ragini image

    ರಾಣ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಾಯಕರಾಗಿರೋ ಸಿನಿಮಾ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೀಗ ರಾಗಿಣಿ ದ್ವಿವೇದಿ ಎಂಟ್ರಿ ಕೊಟ್ಟಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಚಿತ್ರದ ನಾಯಕಿಯರು. ಇಬ್ಬರು ಹೀರೋಯಿನ್ ಇರೋವಾಗ ರಾಗಿಣಿಗೇನು ಕೆಲಸ ಅಂತೀರಾ..?

    ರಾಗಿಣಿ ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ.. ಹಾಡಿನ ಮೂಲಕ ಹಿಂದೊಮ್ಮೆ ಕಿಚ್ಚು ಹಚ್ಚಿದ್ದರು ರಾಗಿಣಿ. ಅದೇ ನಂದಕಿಶೋರ್ ಚಿತ್ರದಲ್ಲಿ.. ಆ ಹಾಡು ಬರೆದಿದ್ದ ಶಿವು ಭೇರ್ಗಿಯವರೇ ಹೊಸ ಹಾಡು ಬರೆದಿದ್ದು, ರಾಗಿಣಿ ಆ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡುತ್ತಿರೋದು ಚಂದನ್ ಶೆಟ್ಟಿ.