` v harikrishna, - chitraloka.com | Kannada Movie News, Reviews | Image

v harikrishna,

  • ಸೆಂಚುರಿ ಸ್ಟಾರ್ ಆದರು ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ

    v harikrishna now century star

    ಹರಿಕೃಷ್ಣ ಸೆಂಚುರಿ ಕೃಷ್ಣನಾಗಿಬಿಟ್ಟಿದ್ದಾರೆ. ಅದೂ ಕೇವಲ 11 ವರ್ಷಗಳಲ್ಲಿ. ಹರಿಕೃಷ್ಣ ಸಂಗೀತ ನೀಡಿರುವ ಮುಗುಳುನಗೆ ಚಿತ್ರ ಅವರಿಗೆ 100ನೇ ಚಿತ್ರವಂತೆ. ಅಲ್ಲಿಗೆ ಕನ್ನಡ ಚಿತ್ರರಂಗದ ನೂರು ಚಿತ್ರಗಳಿಗೆ ಸಂಗೀತ ನೀಡಿರುವ ಅತಿರಥರ ಸಾಲಿಗೆ ಸೇರಿದ್ದಾರೆ ಹರಿಕೃಷ್ಣ.

    ಹರಿಕೃಷ್ಣ ಸಂಗೀತ ನೀಡಿದ ಮೊದಲ ಚಿತ್ರ ಜೊತೆ ಜೊತೆಯಲಿ. ಅವಕಾಶ ನೀಡಿದ್ದು ದರ್ಶನ್. ಅದುವರೆಗೆ ಹಂಸಲೇಖ, ವಿ.ರವಿಚಂದ್ರನ್, ಸಾಧು ಕೋಕಿಲ, ಗುರುಕಿರಣ್ ಬಳಿ ಅಸಿಸ್ಟೆಂಟ್ ಆಗಿದ್ದ ಹರಿಕೃಷ್ಣ, ನಂತರ ಬೆಳೆದ ದಾರಿ ಸರಳವಾದದ್ದೇನಲ್ಲ. ಬಹುಶಃ, ಸಾಧುಕೋಕಿಲ ಬುದ್ದಿ ಹೇಳದೇ ಹೋಗಿದ್ದರೆ, ಮೆಕಾನಿಕ್ ಆಗಿರುತ್ತಿದ್ದ ಹರಿಕೃಷ್ಣ, ಈಗ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ.

    ದರ್ಶನ್ ನಿರ್ಮಾಣದ ಚಿತ್ರದಿಂದ ಶುರುವಾದ ಸಂಗೀತ ನಿರ್ದೇಶನದ ಯಾತ್ರೆಯಲ್ಲಿ ಹರಿಕೃಷ್ಣ, ಕನ್ನಡ ಚಿತ್ರರಂಗದ ಸಮಸ್ತ ಸ್ಟಾರ್ಗಳ ಚಿತ್ರಗಳಿಗೂ ಮ್ಯೂಸಿಕ್ ಕೊಟ್ಟಿದ್ದಾರೆ ಎನ್ನುವುದು ಹೆಗ್ಗಳಿಕೆ. ಇದುವರೆಗೆ ಇಂಥಾದ್ದೊಂದು ಹೆಮ್ಮೆ ಹಂಸಲೇಖ ಅವರಿಗೆ ಮಾತ್ರ ಇತ್ತು. ಗುರುವಿನ ಹಾದಿಯಲ್ಲೇ ಸಾಗಿರುವ ಹರಿಕೃಷ್ಣ, ಸಾಹಿತ್ಯ ರಚನೆಗೆ ಮಾತ್ರ ಕೈ ಹಾಕಿಲ್ಲ. ಸತತ 10 ವರ್ಷ ಬೇಡಿಕೆ ಉಳಿಸಿಕೊಳ್ಳುವುದೆಂದರೆ ಸಾಮಾನ್ಯದ ಮಾತಲ್ಲ.

    ಪುನೀತ್, ಸುದೀಪ್, ದರ್ಶನ್, ಉಪೇಂದ್ರ, ಯಶ್, ಗಣೇಶ್, ದುನಿಯಾ ವಿಜಿ, ಪ್ರೇಮ್ ಸೇರಿದಂತೆ ಎಲ್ಲ ಸ್ಟಾರ್ಗಳ ಜೊತೆ ಕೆಲಸ ಮಾಡಿದ್ದಾರೆ. ಹೊಸಬರ ಚಿತ್ರಗಳಿಗೂ ಸಂಗೀತ ನೀಡಿ ಗೆಲ್ಲಿಸಿರುವ ಹೆಮ್ಮೆ ಹರಿಕೃಷ್ಣ ಅವರಿಗೆ ಇದೆ. ಅಷ್ಟೇ ಅಲ್ಲ, ಹಾಲಿ ಚಿತ್ರರಂಗದ ಆಲ್ಮೋಸ್ಟ್ ಎಲ್ಲ ಸ್ಟಾರ್ ಡೈರೆಕ್ಟರ್ಗಳ ಜೊತೆಯಲ್ಲೂ ಕೆಲಸ ಮಾಡಿರುವ ಪ್ರತಿಭೆ ಹರಿಕೃಷ್ಣರದ್ದು. ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಸೇರಿದಂತೆ ಸಂಗೀತ ನಿರ್ದೇಶನಕ್ಕೆ ದಕ್ಕಬಹುದಾದ ಪ್ರಶಸ್ತಿಗಳೆಲ್ಲ ಬುಟ್ಟಿಗೆ ಬಿದ್ದಿವೆ.

    ಜೊತೆ  ಜೊತೆಯಲಿಯಿಂದ ಶುರುವಾದ ಯಾತ್ರೆಯಲ್ಲಿ ಜಾಕಿ, ಸಾರಥಿ, ಬಚ್ಚನ್, ಗಾಳಿಪಟ, ಜಂಗ್ಲಿ, ದೊಡ್ಮನೆ ಹುಡ್ಗ, ರಾಜಕುಮಾರ, ಮಿಸ್ಟರ್ & ಮಿಸೆಸ್ ರಾಮಾಚಾರಿ..ಹೀಗೆ ಹಿಟ್ ಚಿತ್ರಗಳ ದೊಡ್ಡ ಸಾಲೇ ಇದೆ. ಸ್ವತಃ ಆಡಿಯೋ ಕಂಪೆನಿಯನ್ನೂ ಹೊಂದಿರುವ ಹರಿಕೃಷ್ಣ ನಿರ್ಮಾಪಕರೂ ಹೌದು. ಹರಿಕೃಷ್ಣ ಚಿತ್ರ ಯಾತ್ರೆ ಹೀಗೆಯೇ ಮುಂದುವರಿಯಲಿ. ಕನ್ನಡಿಗರ ಕಿವಿಗಳಲ್ಲಿ ಹರಿಕೃಷ್ಣ ಕೇಳುತ್ತಲೇ ಇರಲಿ.

  • Airavatha Audio Taken Over by Lahari - Exclusive

    airavatha image

    In a sudden development he Darshan starrer Airavatha movie's audio has been taken over by Lahari Music. The audio was officially released in Mysuru on 16th September by D Beats company of V Harikrishna. Now Lahari Music has taken over the rights of Airavatha audio to their company.

    Speaking to Chitraloka.com Lahari Velu said that there was some formalities and they have  acquired the rights of Airavatha. "From tommorrow auido will hit the market from our company. For this producer Sandesh Nagaraj and V Harikrishna has also signed the documents said Velu."

    The movie is planned for an October release.

    Also See

    Airavatha Release in October? - Exclusive

    Mr Airavatha Album is Trendy

    Airavatha Teaser on Sandesh Nagaraj's Birthday

    Ananthnag Plays a Freedom Fighter in Airavatha - Exclusive

    Airavatha Motion Poster on Wednesday

    Airavatha is now Mr Airavatha - Exclusive

    Darshan Tones Down his Body for Airavatha - Exclusive

    Darshan and son act Together in Airavatha

  • Arjun's Music And Harikrishna's Background Score For Darshan's Films

    arjun's musc and harikrishna's back ground score for odeya

    'Challenging Star' Darshan has said through his Twitter account, that Arjun will be composing music for 'Odeya' and 'Robert', while V Harikrishna who is known as the 'Re-recording King' will be doing the background music for both the films.

    V Harikrishna was the permanent music director for Darshan's films once upon a time and their combination was a huge hit. In the past few years, Arjun Janya has been roped in to compose music for 'Chakravarthy' and 'Odeya'. 'Robert' director Tharun Sudhir recently had disclosed that Arjun will be composing the music for his latest film. 

    It is being said that Darshan's fans were upset that V Harikrishna who is a permanent in Darshan's films is slowly making way for Arjun. So, after Darshan's fans expressed their displeasure, Darshan has made an arrangement, where in both Harikrishna and Arjun are being accommodated. While, Arjun will be composing music for 'Odeya' and 'Robert', Harikrishna has been given the responsibility of composing background music for both the films.

  • Chennai Floods Affects Sandalwood Too

    masterpiece image

    The humanitarian crisis faced by people in Chennai due to the rains and floods has affected other people too including Sandalwood. Along with the common people many Sandalwood celebrities are also concentrating their efforts in helping the people of Chennai. Composer V Harikrishna, who has close affinity with the city, is concentrating on helping people there.

    Other Sandalwood celebrities are also pitching in. Back home the film industry is affected in Kannada. But Sandalwood people are not complaining. The audio launch of Yash's Masterpiece is affected and the structured release of songs of the film is now out of schedule.

    The Telugu version of Kishan's C/o Footpath 2 named Manja was not completed on time and its release has been postponed. Only the Kannada version will release this Friday. But nobody is blaming but ready to show solidarity with the people of Chennai who are suffering. Those celebrities who are unable to do ground support are doing their best online providing logistic support. 

  • Harikrishna is Not out of my camp: Darshan

    v harikrishna, darshan image

    Actor 'Challenging Star' Darshan has clarified that music composer Harikrishna who is a regular is in his camp is not out of the camp and is still composing songs for the film. Earlier, there were rumours that V Harikrishna has fallen out of Darshan's camp in the recent times and will not be composing songs for his future films. To add more spice to that Darshan starrer 'Jaggu Dada' which is all set to be launched on his birthday (February 16) has another music director composing two songs along with V Harikrishna. So, there were rumours that Harikrishna has fallen out from Darshan's camp.

    But Darshan has rubbished away such rumours saying that though 'Jaggu Dada' has Harikrishna composing music along with Paresh, Harikrishna is still a very good friend and indeed is one of the member of the camp. Even director Raghavendra Hegde said that Paresh is his long time friend and he has given a chance to compose music for the sake of friendship and nothing else. 

  • Puneeth Sings For Rudrathandava

    puneeth rajkumar singing image

    Actor Puneeth Rajkumar is very busy singing these days. The actor who was seen singing songs for films like 'Aryan, 'Savaari 2, 'Tirupathi Express', 'Dove', 'Melukote Manja' and others have sung a song for Chiranjeevi Sarja starrer 'Rudrathandava'.

    Recently, the star actor has sung a song under the music direction of well known music composer V Harikrishna. The love song tells about the love story of the hero and when the composition was done, it was decided by the team that the song must be sung by Puneeth Rajkumar himself. Puneeth has obliged the team's wish and has sung the song.

    The songs of the film is likely to be released on the 02nd of January.

  • Ranna Audio Release on 16th of April

    ranna image

    The shooting for Sudeep starrer ‘Ranna’ is finally been completed and director Nandakishore is busy with the post-production of the film. Meanwhile, it has been announced that the audio of the film will be releasing on the 16th of April.

    The songs of ‘Ranna’ has been composed by well known music composer V Harikrishna and already songs like ‘Babbar Sher’ and ‘Seere Seere’ have become quite popular with the audience. The two songs of the film have already been released in Youtube and both the songs have been quite popular among the listeners. The rest of the songs will be releasing in the coming days and the audio Cds of the film are scheduled to be releasing on the 16th of April.

    Harikrishna’s D Beats has acquired the audio rights of the film and the details about the audio release are yet to be announced.

  • Rishab Shetty Releases The Trailer Of 'Shardoola'

    rishab shetty releases the trailer of sharadoola

    Aravind Kaushik's new film 'Shardoola' which was launched last year, is finally ready for release. Recently, actor-director Rishab Shetty released the trailer of the film.

    Rishab Shetty who launched the trailer of the film said, Aravind Kaushik is his mentor and he has learnt a lot about cinema making from Aravind. Rishab also said he met Rakshith Shetty, who was also working with Aravind and that is how he became friends with Rakishith.

    'Shardoola' is written and directed by Aravind Kaushik, while the film is produced by Rohith and Kalyan. Satish Babu is the music director, while Manu is the cinematographer. 'Shardoola' stars Chethan Chandra, Kruthika Narayan, Raviteja and others play prominent roles in the film.

  • Will Arjun Create Hatrick From Raate?

    raate image

    'Raate' being directed by A P Arjun is all set to release today and everybody is curious whether Arjun would be successful enough to create hatrick this time. Arjun's previous two films were good gits at box-office and it has to be seen whether Arjun manages to continue the magic once more or not.

    Meanwhile, 'Raate' is all set to release in more than 150 theaters across Karnataka. The film is being produced by music composer V Harikrishna under the banner of D Pictures. He himself has composed the songs for the film, while Satya Hegade is the cinematographer.

    Dhananjay and Shruthi Hariharan plays the hero-heroine in this musical love story.

  • ತಂದೆಗೆ ತಕ್ಕ ಮಗನಾದ ಆದಿ ಹರಿಕೃಷ್ಣ..!

    like father.. like son

    ಸಾಮಾನ್ಯವಾಗಿ ಮಕ್ಕಳು ತಂದೆ ಅಥವಾ ತಾಯಿಯ ಹಾದಿಯಲ್ಲೇ ಸಾಗುವುದು ವಾಡಿಕೆ. ಹರಿಕೃಷ್ಣ ಪುತ್ರನೂ ಇದಕ್ಕೆ ಹೊರತಾಗಿಲ್ಲ.  ಅಪ್ಪ ಮ್ಯೂಸಿಕ್ ಡೈರೆಕ್ಟರ್ ಆಗಿರೋ ಕಾರಣಕ್ಕೆ ಮಗನೂ ಮ್ಯೂಸಿಕ್ ಡೈರೆಕ್ಟರ್. ಅಫ್‍ಕೋರ್ಸ್.. ಮನೆಯಲ್ಲಿ ಅಪ್ಪ ಮ್ಯೂಸಿಕ್ ಡೈರೆಕ್ಟರು. ಅಮ್ಮ ಸಿಂಗರು. ಹೀಗಿರೋವಾಗ ಸಹಜವಾಗಿಯೇ ಸಂಗೀತದ ಮೇಲೆ ಪ್ರೇಮ, ಕುತೂಹಲ ಮೂಡುವುದು ಸಹಜ. ಆದಿಯೂ ಇದಕ್ಕೆ ಹೊರತಾಗಿಲ್ಲ.

    ಆದಿ ಹರಿಕೃಷ್ಣ ಈಗ ಸಂಗೀತ ನಿರ್ದೇಶಕನಾಗಿದ್ದು, ಅವರೇ ಕಂಪೋಸ್ ಮಾಡಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದಲ್ಲಿ ನೀನೇ ಮೊದಲು.. ನೀನೇ ಕೊನೆ.. ಬೇರೆ ಯಾರೂ ಬೇಡ ನನಗೆ ಹಾಡಿಗೆ ಸಂಗೀತ ಕಟ್ಟಿಕೊಟ್ಟಿದ್ದಾರೆ ಆದಿ. ಅಂದಹಾಗೆ, ಚಿತ್ರದ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೇ. ತಂದೆಯ ಗರಡಿಯಲ್ಲೇ ಹಾಡು ಸೃಷ್ಟಿಸಿದ್ದಾರೆ ಆದಿ.

    ಎ.ಪಿ.ಅರ್ಜುನ್ ಬರೆದಿರುವ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ವಿರಾಟ್ ಮತ್ತು ಶ್ರೀಲೀಲಾ ನಟಿಸಿರುವ ಚಿತ್ರಕ್ಕೆ ರಾಷ್ಟ್ರಕೂಟ ಪಿಕ್ಚರ್ಸ್‍ನ ರವಿಕುಮಾರ್ ನಿರ್ಮಾಪಕರು.

  • ದರ್ಶನ್ ಯಜಮಾನನ ನಿರ್ದೇಶಕ ಯಾರು..?

    composer v harikrishna turns director for yajamana

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ನಿರ್ದೇಶಕ ಯಾರು..? ಅರೇ.. ಇದೇನಿದು.. ಪಿ.ಕುಮಾರ್ ಅಲ್ವಾ.. ಅಂತೀರೇನೋ.. ಹೌದು. ಪಿ.ಕುಮಾರ್ ನಿರ್ದೇಶನದ ಚಿತ್ರಕ್ಕೆ ಈಗ ಇನ್ನೊಬ್ಬರು ಸೇರಿಕೊಂಡಿದ್ದಾರೆ. ಅದು ವಿ.ಹರಿಕೃಷ್ಣ. ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ವಿ.ಹರಿಕೃಷ್ಣ ಹಾಗೂ ಪೊನ್ನು ಕುಮಾರ್ ಇಬ್ಬರ ಹೆಸರನ್ನೂ ನಿರ್ದೇಶಕರೆಂದು ತೋರಿಸಲಾಗಿದೆಯಂತೆ.

    ಯಜಮಾನ ಚಿತ್ರ ಶುರುವಾದಾಗಿನಿಂದ ಚಿತ್ರದ ಪ್ರತಿ ಹಂತದಲ್ಲೂ ವಿ.ಹರಿಕೃಷ್ಣ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರಂತೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ.. ಹೀಗೆ ಪ್ರತಿಯೊಂದರಲ್ಲೂ ತೊಡಗಿಸಿಕೊಂಡಿದ್ದ ಹರಿಕೃಷ್ಣ ಅವರಿಗೆ ನಿರ್ದೇಶಕನ ಕ್ರೆಡಿಟ್ ನೀಡಿದ್ದೇವೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

    ಅಂದಹಾಗೆ ಹರಿಕೃಷ್ಣ ಮತ್ತು ದರ್ಶನ್ ಕಾಂಬಿನೇಷನ್‍ನ 25ನೇ ಚಿತ್ರ ಯಜಮಾನ. ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲಿ ನಿರ್ದೇಶಕನ ಜವಾಬ್ದಾರಿಯನ್ನೂ ಹೊತ್ತಿರುವ ಹರಿಕೃಷ್ಣ, ನಿರ್ದೇಶಕರಾಗಬೇಕು ಎಂಬ ತಮ್ಮ ಕನಸನ್ನು ಯಜಮಾನ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ.

  • ಪತ್ನಿ ಹಾಡಿದ್ದ ಹಾಡನ್ನೇ ತೆಗೆದರೇಕೆ ಹರಿಕೃಷ್ಣ..? ಏನಿದು ಮುನಿಸು..?

    v harikrishna clarifies on vani harikrishna's statement

    ವಾಣಿ ಹರಿಕೃಷ್ಣ ಪತಿ ಹರಿಕೃಷ್ಣ ಅವರ ಮೇಲೇ ಮುನಿಸಿಕೊಂಡಿದ್ದಾರೆ. ಕಾರಣ ಇಷ್ಟೆ.. ಅವರು ಕುರುಕ್ಷೇತ್ರ ಚಿತ್ರದಲ್ಲಿ ಒಂದು ಭಕ್ತಿಪ್ರಧಾನ ಗೀತೆಯನ್ನು ಹಾಡಿದ್ದರು. ಆದರೆ, ಫೈನಲ್ ಕಾಪಿ ನೋಡಿದರೆ, ಅವರು ಹಾಡಿದ್ದ ಹಾಡಿಗೆ ಇನ್ಯಾರದ್ದೋ ಹೆಸರಿತ್ತು. ಇದಕ್ಕೆ ಬೇಸರಗೊಂಡಿರುವ ವಾಣಿ ಹರಿಕೃಷ್ಣ ನಮ್ಮ ಬಳಿ ಹಾಡಿಸೋದು ಯಾಕೆ..? ಆಮೇಲೆ ಅದನ್ನು ಬೇರೆಯವರಿಂದ ಹಾಡಿಸಿ ನಮಗೆ ಅವಮಾನಿಸೋದು ಏಕೆ..? ಬೇರೆಯವರೇ ಬೇಕು ಎನ್ನುವಾಗ ನಮ್ಮಿಂದ ಹಾಡಿಸಲೇಬಾರದು ಎಂದು ಹೇಳಿಕೊಂಡಿದ್ದಾರೆ.

    ವಾಣಿ ಹರಿಕೃಷ್ಣ ಅವರ ಈ ಫೇಸ್‍ಬುಕ್ ಬರಹ ಹಲವು ಸುದ್ದಿಗಳಿಗೆ ಕಾರಣವಾಗಿದ್ದು ಸುಳ್ಳಲ್ಲ. ಏಕೆಂದರೆ ವಾಣಿ ಅವರ ಪತಿ ಹರಿಕೃಷ್ಣ ಅವರೇ ಕುರುಕ್ಷೇತ್ರ ಚಿತ್ರದ ಸಂಗೀತ ನಿರ್ದೇಶಕ. ಇನ್ನು ವಾಣಿ ಅವರಿಗೆ ರಾಂಧವ ಚಿತ್ರ ತಂಡದ ಮೇಲೂ ದೂರಿದೆ. ಅಲ್ಲಿಯೂ ಕೂಡಾ ಹರಿಕೃಷ್ಣ ಅವರ ಶಿಷ್ಯ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶಕ.

    ಹಾಗಾದರೆ, ಮನೆಯೊಳಗೆ ಚರ್ಚೆಯಾಗಿ ಮುಗಿಯಬೇಕಿದ್ದ ವಿಷಯ ಬಹಿರಂಗಗೊಂಡಿದ್ದೇಕೆ..? ಉತ್ತರ ಸಿಕ್ಕಿಲ್ಲ. 

    ಹೀಗಾಗಿಯೇ.. ವಾಣಿಯವರ ಈ ಫೇಸ್‍ಬುಕ್ ಬರಹ ಹಲವು ಅನುಮಾನಗಳಿಗೆ, ಕಲ್ಪನೆಗಳಿಗೆ ಗ್ರಾಸವಾಗುತ್ತಿದೆ. ಇವುಗಳಿಗೆಲ್ಲ ಹರಿಕೃಷ್ಣ ಒನ್ ಲೈನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಡಿನಿಂದ ಅವಳನ್ನು ಕೈಬಿಟ್ಟಿದ್ದಕ್ಕೆ ಬೇಜಾರಿನಲ್ಲಿ ಹಾಗೆ ಬರೆದುಕೊಂಡಿದ್ದಾಳಷ್ಟೆ, ನಾವು ಚೆನ್ನಾಗಿಯೇ ಇದ್ದೇವೆ ಎಂದಿದ್ದಾರೆ ಹರಿಕೃಷ್ಣ.

  • ಪೈಲ್ವಾನ್‍ಗೆ ಶಾರೂಕ್ ಟಚ್, 1 ನಿಮಿಷಕ್ಕೆ 20 ಲಕ್ಷ..!!!

    pailwan's vfx at sharukhkhan;s red chillies studioes

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಎಲ್ಲವೂ ಬಿಡುವಿಲ್ಲದೆ ನಡೆಯುತ್ತಿವೆ. ಇದರ ಜೊತೆ ಪೈಲ್ವಾನ್ ಚಿತ್ರಕ್ಕೆ ಶಾರೂಕ್ ಖಾನ್ ಟಚ್ ಸಿಕ್ಕಿದೆ. ಶಾರೂಕ್ ಒಡೆತನದ ರೆಡ್ ಚಿಲ್ಲೀಸ್‍ನಲ್ಲಿ ಪೈಲ್ವಾನ್ ಚಿತ್ರಕ್ಕೆ ಸ್ಪೆಷಲ್ ಎಫೆಕ್ಟ್ ಮಾಡಿಸಲಾಗುತ್ತಿದೆ.

    ಬಾಲಿವುಡ್‍ನಲ್ಲಿ ಶಾರೂಕ್ ಖಾನ್‍ರ ರೆಡ್ ಚಿಲ್ಲೀಸ್‍ಗೆ ಒಳ್ಳೆಯ ಹೆಸರಿದೆ. ದುಬಾರಿ ಎನ್ನುವುದು ನಿಜವಾದರೂ, ಕ್ವಾಲಿಟಿ ಹಾಗೆಯೇ ಇರುತ್ತೆ. ಹೀಗಾಗಿ, ಸ್ಪೆಷಲ್ ಎಫೆಕ್ಟ್‍ಗಳನ್ನು ರೆಡ್ ಚಿಲ್ಲೀಸ್‍ನಲ್ಲಿಯೇ ಮಾಡಿಸಲಾಗುತ್ತಿದೆ. ದುಬಾರಿ ಎಂದರೆ ಎಷ್ಟು ಗೊತ್ತೇ.. 1 ನಿಮಿಷದ ಸ್ಪೆಷಲ್ ಎಫೆಕ್ಟ್‍ಗೆ 20 ಲಕ್ಷ ರೂ.

    ಚಿತ್ರದ ಬಜೆಟ್ ದುಬಾರಿಯಾಯಿತು ಎನ್ನುವುದೇನೋ ನಿಜ. ಆದರೆ, ಕ್ವಾಲಿಟಿ ಮುಖ್ಯ. ಹೀಗಾಗಿ ಅಲ್ಲಿಯೇ ರೆಡಿ ಮಾಡಿಸುತ್ತಿದ್ದೇವೆ. ಎಲ್ಲ ಭಾಷೆಗಳ ಡಬ್ಬಿಂಗ್ ಕೂಡಾ ನಡೆಯುತ್ತಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡುವುದು ನಮ್ಮ ಪ್ಲಾನ್ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  • ಯಜಮಾನ ದರ್ಶನ್ ಚಿತ್ರದಲ್ಲಿರೋ ನಿರ್ದೇಶಕರೆಷ್ಟು ಜನ..?

    army of director's in darshan's yajamana

    ಯಜಮಾನ. ಬಹುನಿರೀಕ್ಷಿತ ದರ್ಶನ್ ಸಿನಿಮಾ. ಎರಡು ವರ್ಷಗಳಿಂದ ದರ್ಶನ್ ಚಿತ್ರಗಳಿಲ್ಲದೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದರ್ಶನ್ ಫ್ಯಾನ್ಸ್ ಸಿನಿಮಾ ಥಿಯೇಟರಿಗೆ ಬರುವುದನ್ನೇ ಎದುರು ನೋಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಪಕರು. ಆದರೆ, ಕುತೂಹಲದ ಸಂಗತಿ ಇದ್ಯಾವುದೂ ಅಲ್ಲ. ಟೋಟಲ್ ಟೀಂನಲ್ಲೇ ನಿರ್ದೇಶಕರ ಸಂಗಮವಿದೆ.

    ಸುಮ್ಮನೆ ನೋಡಿ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಬಿ.ಸುರೇಶ್ ಸ್ವತಃ ಒಬ್ಬ ನಿರ್ದೇಶಕರು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು. ಪಿ.ಕುಮಾರ್ ಮತ್ತು ಹರಿಕೃಷ್ಣ ಚಿತ್ರದ ನಿರ್ದೇಶಕರು. ಹರಿಕೃಷ್ಣ ಈ ಸಿನಿಮಾದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.

    ಇನ್ನು ಚಿತ್ರಕ್ಕೆ ಹಾಡು ಬರೆದಿರುವ ಚೇತನ್ ಕುಮಾರ್, ಯೋಗರಾಜ್ ಭಟ್, ಕವಿರಾಜ್, ಎಲ್ಲರೂ ನಿರ್ದೇಶಕರೇ. ಅಂದಹಾಗೆ ಸಂತೋಷ್ ಆನಂದ್‍ರಾಮ್ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಒಟ್ಟಿನಲ್ಲಿ ಯಜಮಾನನ ಮನೆಯಲ್ಲಿ ನಿರ್ದೇಶಕರದ್ದೇ ದರ್ಬಾರು.

  • ಯಜಮಾನ ನಿರ್ದೇಶಕ ಹರಿಕೃಷ್ಣಗೆ ಸ್ಫೂರ್ತಿ ತುಂಬಿದವರೇ ಇವರು..!

    harikrishna's major support in film industry

    ಹರಿಕೃಷ್ಣ ಮತ್ತು ದರ್ಶನ್ ಅವರ ಕಾಂಬಿನೇಷನ್ ಚಿತ್ರರಂಗದಲ್ಲಿ ಹಲವರಿಗೆ ಹಂಸಲೇಖ-ರವಿಚಂದ್ರನ್ ಜೋಡಿ ನೆನಪಿಸುತ್ತೆ. ಹರಿಕೃಷ್ಣ-ದರ್ಶನ್ ಕಾಂಬಿನೇಷನ್ 25 ಸಿನಿಮಾ ಪೂರೈಸಿದೆ.

    ಇದಕ್ಕೆಲ್ಲ ಏನು ಕಾರಣ ಎಂದು ನೋಡಿದ್ರೆ ಸ್ಫೂರ್ತಿ ತುಂಬಿದವರ ದೊಡ್ಡ ಪಟ್ಟಿಯನ್ನೇ ಹೇಳ್ತಾರೆ ಹರಿಕೃಷ್ಣ.ಹರಿಕೃಷ್ಣ ಅವರಿಗೆ ಎಡಿಟಿಂಗ್ ಗೊತ್ತು. ಅದನ್ನು ಅವರು ಕಲಿತಿದ್ದು ಟೈಗರ್ ಪ್ರಭಾಕರ್ ಅವರ ಬಳಿ. 

    ಹರಿಕೃಷ್ಣ ಅವರು ನಂತರ ಕೆಲ ಕಾಲ ಕೆಲಸ ಮಾಡಿದ್ದು ಸಾಧುಕೋಕಿಲ ಅವರ ಬಳಿ. ಅವರೋ ಸಕಲಕಲಾವಲ್ಲಭ. ಅದಾದ ಮೇಲೆ ಹರಿಕೃಷ್ಣ ಹಂಸಲೇಖ ಅವರ ಶಿಷ್ಯರಾದರು. ಹಂಸಲೇಖ ನಾದಬ್ರಹ್ಮ ಅಷ್ಟೇ ಅಲ್ಲ, ಚಿತ್ರಬ್ರಹ್ಮರೂ ಹೌದು.

    ಹಂಸಲೇಖ ಶಿಷ್ಯವೃತ್ತಿ ಮುಗಿದ ಮೇಲೆ ಹರಿಕೃಷ್ಣ ಸುದೀರ್ಘ ಅವಧಿಯವರೆಗೆ ಕೆಲಸ ಮಾಡಿದ್ದು ವಿ.ರವಿಚಂದ್ರನ್ ಅವರ ಬಳಿ. ಅವರೋ.. ಚಿತ್ರರಂಗದ ಯುನಿವರ್ಸಿಟಿಯಿದ್ದಂತೆ.

    ಹೀಗೆ ಎಲ್ಲರೊಳಗೊಂದು ನುಡಿ ಕಲಿತು ಸರ್ವಜ್ಞನಾದಂತೆ, ಹರಿಕೃಷ್ಣ ಸಂಗೀತ ನಿರ್ದೇಶಕ, ಗಾಯಕ, ನಿರ್ಮಾಪಕರಾಗಿ ಈಗ ನಿರ್ದೇಶಕರೂ ಆಗಿದ್ದಾರೆ. ಹರಿಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರ ಯಜಮಾನ ರಿಲೀಸ್ ಆಗೋಕೆ ರೆಡಿಯಾಗಿದೆ. ಅದು ಒನ್ಸ್ ಎಗೇಯ್ನ್ ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಸಿನಿಮಾ. ಶೈಲಜಾ ನಾಗ್ ಮತ್ತು ಸ್ವತಃ ನಿರ್ದೇಶಕರಾದ ಬಿ.ಸುರೇಶ ಚಿತ್ರದ ನಿರ್ಮಾಪಕರು.

  • ಹರಿಕೃಷ್ಣ+ದರ್ಶನ್ @25

    drahsn and harikrishna at 25

    ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ಚಿತ್ರಗಳ ಹೊಸಿಲು ದಾಟಿದ್ದಾರೆ. ಮ್ಯೂಸಿಕ್ ಸ್ಟಾರ್ ಹರಿಕೃಷ್ಣ 100 ಚಿತ್ರಗಳ ಗಡಿ ಮುಟ್ಟಿದ್ದಾರೆ. ಈಗೇನೂ ಇವರಿಬ್ಬರೂ 25 ಅಂತ ಹಾಕಿದ್ದೀರಿ ಅನ್ನೋ ಪ್ರಶ್ನೆ ಬಂತಾ. ಉತ್ತರ ಇಷ್ಟೆ. ಇದು ದರ್ಶನ್ ಮತ್ತು ಹರಿಕೃಷ್ಣ ಕಾಂಬಿನೇಷನ್ನಿನ 25ನೇ ಸಿನಿಮಾ.

    ದರ್ಶನ್ ಚಿತ್ರಗಳಿಗೆ ಸಂಗೀತ ನಿರ್ದೇಶಕ ಯಾರು ಎಂದರೆ, ಅದು ಹರಿಕೃಷ್ಣ ಎನ್ನುವಷ್ಟು ಫೇಮಸ್ ಆಗಿದೆ ಜೋಡಿ. ಯಜಮಾನ ಈ ಇಬ್ಬರ ಕಾಂಬಿನೇಷನ್ನಿನ 25ನೇ ಸಿನಿಮಾ. ಇದೇ ಚಿತ್ರದ ಮೂಲಕ ಹರಿಕೃಷ್ಣ ನಿರ್ದೇಶಕರಾಗುತ್ತಿರುವುದು ಕೂಡಾ ವಿಶೇಷ.

    ದರ್ಶನ್ ಸರ್ ಅವರ ಬೆಂಬಲ, ಮಾರ್ಗದರ್ಶನ, ನಾನಿದ್ದೇನೆ.. ಮಾಡು ಮಾಡು ಎಂದು ಹುರಿದುಂಬಿಸಿದ್ದು ಇದಕ್ಕೆಲ್ಲ ಕಾರಣ ಎನ್ನುವ ಹರಿಕೃಷ್ಣ, ಯಜಮಾನ ಚಿತ್ರದಲ್ಲಿ ದರ್ಶನ್ ಕುಸ್ತಿ ಪಟುವೂ ಅಲ್ಲ, ರೈತನೂ ಅಲ್ಲ. ಇದು ಬೇರೆಯದ್ದೇ ಕಥೆ ಎನ್ನುತ್ತಾರೆ. ಚಿತ್ರದ ಥೀಮ್ ಇಷ್ಟೆ.. ಪ್ರೀತಿ ಹಂಚುವ.. ಮಾತು ತಪ್ಪದ ಯಜಮಾನನ ಕಥೆ. ಸಿದ್ಧರಾಗಿ.

  • ಹರಿಕೃಷ್ಣ-ಅರ್ಜುನ್ ಜನ್ಯ ಇಬ್ಬರನ್ನೂ ಒಂದುಗೂಡಿಸಿದ ದರ್ಶನ್

    v harikrishna and arjun janya combination once again

    ಹರಿಕೃಷ್ಣ, ದರ್ಶನ್ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕರೆಂದೇ ಹೆಸರಾದವರು. ಏಕೆಂದರೆ ದರ್ಶನ್ ಅವರ ಬಹುತೇಕ ಚಿತ್ರಗಳಲ್ಲಿ ಹರಿಕೃಷ್ಣ ಅವರದ್ದೇ ಮ್ಯೂಸಿಕ್. ಇನ್ನು ಅರ್ಜುನ್ ಜನ್ಯ ಕನ್ನಡದ ಮತ್ತೊಬ್ಬ ಟ್ರೆಂಡ್ ಸೆಟ್ಟರ್ ಮ್ಯೂಸಿಕ್ ಡೈರೆಕ್ಟರ್. ಈಗ ಅವರಿಬ್ಬರೂ ಒಟ್ಟಿಗೇ ಕೆಲಸ ಮಾಡ್ತಿದ್ದಾರೆ. ಆ ಎರಡೂ ಚಿತ್ರಗಳಿಗೆ ದರ್ಶನ್ ಅವರೇ ಹೀರೋ.

    ಹರಿಕೃಷ್ಣ ಮೊದಲು ಸಂಗೀತ ನಿರ್ದೇಶಕರಾಗಿದ್ದು ದರ್ಶನ್ ಬ್ಯಾನರ್ ಚಿತ್ರದ ಮೂಲಕ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ನಿರ್ದೇಶಕರನ್ನಾಗಿಸಿದ್ದು ದರ್ಶನ್. ಇನ್ನು ಅರ್ಜುನ್ ಜನ್ಯ ಈ ಹಿಂದೆ ದರ್ಶನ್ ಜೊತೆ ತಾರಕ್, ಚಕ್ರವರ್ತಿ ಚಿತ್ರಗಳಿಗೆ ಹಿಟ್ ಹಾಡು ಕೊಟ್ಟಿದ್ದವರು.

    ದರ್ಶನ್ ಅವರು ಸದ್ಯಕ್ಕೆ ಅಭಿನಯಿಸುತ್ತಿರುವ ಎರಡು ಚಿತ್ರಗಳು ರಾಬರ್ಟ್ ಮತ್ತು ಒಡೆಯ, ಎರಡೂ ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಆ ಎರಡು ಚಿತ್ರಗಳ ಹಿನ್ನೆಲೆ ಸಂಗೀತ ಹರಿಕೃಷ್ಣ ಅವರದ್ದು. ಇದನ್ನು ಸ್ವತಃ ದರ್ಶನ್ ಅವರೇ ಅನೌನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹರಿಕೃಷ್ಣ ಅವರಿಗೆ ರಿ-ರೆಕಾರ್ಡಿಂಗ್ ಕಿಂಗ್ ಅನ್ನೋ ಬಿರುದನ್ನೂ ಕೊಟ್ಟಿದ್ದಾರೆ.

Ayushmanbhava Movie Gallery

Ellidhe Illitanaka Movie Gallery