` lucia pawan, - chitraloka.com | Kannada Movie News, Reviews | Image

lucia pawan,

 • `ವಾಸ್ನೆ ಬಾಬು' ಪ್ರೀತಿಯಿಂದ ಗಾಳಿಪಟ `ಭೂಷಿ'ವರೆಗೆ..

  `ವಾಸ್ನೆ ಬಾಬು' ಪ್ರೀತಿಯಿಂದ ಗಾಳಿಪಟ `ಭೂಷಿ'ವರೆಗೆ..

  ಪವನ್ ಕುಮಾರ್. ಲೂಸಿಯಾ ಪವನ್ ಎಂದೇ ಗುರುತಿಸಿಕೊಂಡ ಡೈರೆಕ್ಟರ್. ಪಕ್ಕದ ರಾಜ್ಯಗಳಿಗೆ ಕಾಲಿಟ್ಟರೆ ಯುಟರ್ನ್ ಪವನ್ ಎಂದೇ ಗುರುತಿಸ್ತಾರೆ. ಲೈಫು ಇಷ್ಟೇನೇ ಚಿತ್ರದಿಂದ ನಿರ್ದೇಶಕರಾದ ಪವನ್ ಈಗ ಹೀರೋ ಆಗಿದ್ದಾರೆ. ಹಾಗಂತ ಪವನ್ ಸಿನಿಮಾವನ್ನೇ ಓದಿದ್ದು ಎಂದು ಕೊಳ್ಳಬೇಡಿ. ಓದಿದ್ದು ಎಂಜಿನಿಯರಿಂಗ್. ಬಂದಿದ್ದು ಸಿನಿಮಾಗೆ.

  20 ವರ್ಷಗಳ ಹಿಂದೆ ಎಂಜಿನಿಯರಿಂಗ್`ಗೆ ಗುಡ್ ಬೈ ಹೇಳಿ ರಂಗಭೂಮಿಗೆ ಬಂದೆ. ಹೊಸ ರಂಗಪ್ರಯೋಗಗಳಿಗೆ ಎಂಟ್ರಿ ಕೊಟ್ಟೆ. ಟಿಪಿಕಲ್ ಭಾರತೀಯ ಸಿನಿಮಾಗಳಿಗಿಂತ ಆಚೆಗಿನ ವಿಶ್ವ ಸಿನಿಮಾ ಸೆಳೆಯುತ್ತಾ ಹೋಯ್ತು.. ಹೀಗೆ ಹೇಳುತ್ತಾ ಹೋಗುವ ಪವನ್ ಅವರು ನಿರ್ದೇಶಿಸಿದ ಲೈಫು ಇಷ್ಟೇನೆ, ಲೂಸಿಯಾ, ಯು ಟರ್ನ್ ಚಿತ್ರಗಳು ರೆಗ್ಯುಲರ್ ಸಿನಿಮಾಗಳಂತೂ ಆಗಿರಲಿಲ್ಲ. ಟಿಪಿಕಲ್ ಶೈಲಿಯನ್ನು ಬ್ರೇಕ್ ಮಾಡಿದ್ದ ಚಿತ್ರಗಳೇ. ಹಾಗೆ ಬ್ರೇಕ್ ಮಾಡಿಯ ಗೆದ್ದ ಚಿತ್ರಗಳು.

  ಅಂದಹಾಗೆ ಪವನ್ ಅವರು ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದು ವಾಸ್ನೆ ಬಾಬು ಪಾತ್ರದಲ್ಲಿ. ಅದು ಸೂರಿಯವರ ಇಂತಿ ನಿನ್ನ ಪ್ರೀತಿಯ ಸಿನಿಮಾ. ಇಷ್ಟವಿಲ್ಲದಿದ್ದರೂ ಆ ಪಾತ್ರ ಮಾಡಿದ್ದರಂತೆ. ಸೂರಿಯವರ ಜೊತೆಗಿದ್ದಾಗ ಸಹಜವಾಗಿಯೇ ಯೋಗರಾಜ್ ಭಟ್ಟರ ಪರಿಚಯವಾಯ್ತು. ಅವರ ಜೊತೆ ಪಂಚರಂಗಿ, ಮನಸಾರೆ ಚಿತ್ರಗಳಿಗೆ ಬರಹಗಾರನಾಗಿ ಕೆಲಸ ಮಾಡಿದ ಪವನ್.. ಈಗ ಅವರದ್ದೇ ಚಿತ್ರ ಗಾಳಿಪಟ 2 ಮೂಲಕ ಹೀರೋ ಕೂಡಾ ಆಗಿದ್ದಾರೆ.

  ಇದು ಶುರುವಾಗಿದ್ದು 2018ರಲ್ಲಿ. ಆಗ ಯೋಗರಾಜ್ ಭಟ್ರು ಫೋನ್ ಮಾಡಿ ನನ್ನದೊಂದು ಫೋಟೋ ಕೇಳಿದ್ರು. ಹೆಂಗೆಂಗೋ ಇದ್ದ. ಅವರಿಗೆ ಅಂತದ್ದೇ ವ್ಯಕ್ತಿ ಬೇಕಿತ್ತು. ನಂತರ ನಾನು ಥಾಯ್ಲೆಂಡ್`ಗೆ ಹೋಗಿ ಮಯ್‍ಥಾಯ್ ಕಲಿತು 6 ವಾರಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡೆ. 20 ವರ್ಷಗಳ ಹಿಂದೆ ಹೇಗಿದ್ದೆನೋ.. ಅಷ್ಟು ಚಿಕ್ಕವನಾದೆ ಎನ್ನುತ್ತಾರೆ ಪವನ್.

  ಚಿತ್ರದಲ್ಲಿ ಗಣೇಶ್ ಮತ್ತು ದಿಗಂತ್ ಇದ್ದರೂ ಪವನ್-ಶರ್ಮಿಳಾ ಜೋಡಿಯ ರೊಮ್ಯಾನ್ಸ್ ಸದ್ದು ಮಾಡುತ್ತಿದೆ. ರೋಮಾಂಚನ ಹುಟ್ಟಿಸುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗಲಿದೆ.

 • ದಿಗಂತ್ ಚಡ್ಡಿ ಬಿಚ್ಚಿಸಿದ್ರಾ ಭಟ್ಟರು..?

  ದಿಗಂತ್ ಚಡ್ಡಿ ಬಿಚ್ಚಿಸಿದ್ರಾ ಭಟ್ಟರು..?

  ದೂದ್ ಪೇಡ ದಿಗಂತ್ ಕ್ಯೂಟ್ ಕ್ಯೂಟ್. ಅಂತಹವರನ್ನ ಆಂಗ್ರಿ ಯಂಗ್ ಮ್ಯಾನ್ ಆಗಿ ತೋರಿಸಿದ್ರೆ.. ಹೆಸರು ನೋಡಿದ್ರೆ ದೂಧ್ ಪೇಡ. ಆದರೆ ಪೇಡದ ಬಾಯಲ್ಲಿ ಸದಾ ಉರಿಯುವ ಬೆಂಕಿ.. ಹೊಗೆ... ಭಗ್ನಪ್ರೇಮಿ.. ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂದು ಹಿಮಾಲಯಕ್ಕೇ ಹೋಗಿ ಬೆತ್ತಲಾಗುವ.. ಹಾಗೆ ಬೆತ್ತಲಾದಾಗ ಕತ್ತಲಲ್ಲಿ ಸಕಲವನ್ನೂ ಕಿತ್ತು ಹಾಕುವ.. ಆಹಾ.. ಒಂದು ಪಾತ್ರದಲ್ಲಿ ಇಡೀ ಲೈಫನ್ನೇ ಉಲ್ಟಾಪಲ್ಟಾ ತೋರಿಸೋದ್ರಲ್ಲಿ ಭಟ್ಟರು ಎತ್ತಿದ ಕೈ.

  ಗಾಳಿಪಟ 2 ಚಿತ್ರದ ದಿಗಂತ್ ಪಾತ್ರದ ಪರಿಚಯ ಇದು. ಮೊನ್ನೆ ಮೊನ್ನೆಯಷ್ಟೇ ಗಣೇಶ್ ಪಾತ್ರದ ಪರಿಚಯ ಮಾಡಿಸಿದ್ದ ಭಟ್ಟರು ಈ ಬಾರಿ ದಿಗಂತ್ ಪಾತ್ರ ತಂದು ನಿಲ್ಲಿಸಿದ್ದಾರೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಜೋಡಿಗಳಾಗಿರೋ ಚಿತ್ರದಲ್ಲಿ ಅನಂತನಾಗ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಪದ್ಮಜಾ ರಾವ್.. ಹೀಗೆ ಘಟಾನುಘಟಿಗಳೇ ನಟಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಆಗಸ್ಟ್ 12ಕ್ಕೆ ಥಿಯೇಟರಿಗೆ ಬರಲಿದೆ.

 • ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

  ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.

  ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ  ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.

 • ಪುನೀತ್ + ಹೊಂಬಾಳೆ + ಲೂಸಿಯಾ ಪವನ್ = ?

  ಪುನೀತ್ + ಹೊಂಬಾಳೆ + ಲೂಸಿಯಾ ಪವನ್ = ?

  ಯುವರತ್ನ ಚಿತ್ರಕ್ಕೆ ಸಿಕ್ಕಿರುವ ಮೆಚ್ಚುಗೆಯಿಂದ ಖುಷಿಯಲ್ಲಿರೋ ಪುನೀತ್ ರಾಜ್‍ಕುಮಾರ್ ಮತ್ತು ಹೊಂಬಾಳೆ ಫಿಲಂಸ್ ಹೊಸದೊಂದು ಸಿನಿಮಾ ಘೋಷಿಸಿದೆ. ಈ ಹೊಸ ಚಿತ್ರದಲ್ಲಿ ಪುನೀತ್ ಅವರೇ ಹೀರೋ. ಹೊಂಬಾಳೆಯವರದ್ದೇ ಪ್ರೊಡಕ್ಷನ್. ಡೈರೆಕ್ಷನ್ ಹೊಣೆ ಲೂಸಿಯಾ ಪವನ್ ಅವರದ್ದು.

  ಲೂಸಿಯಾ, ಯು-ಟರ್ನ್ ನಂತಾ ವಿಭಿನ್ನ ಕಥಾಹಂದರದ ಚಿತ್ರಗಳನ್ನು ನೀಡಿದ ಪವನ್, ಹೊಸ ಬಗೆಯ ಚಿತ್ರಗಳ ಹುಡುಕಾಟದಲ್ಲಿ ಎತ್ತಿದ ಕೈ. ಸದ್ಯಕ್ಕೆ ಪುನೀತ್ ಭರ್ಜರಿ ಚೇತನ್ ಅವರ ಜೇಮ್ಸ್‍ನಲ್ಲಿ ಬ್ಯುಸಿ. ಅದು ಮುಗಿದ ಕೂಡಲೇ ದಿನಕರ್ ತೂಗುದೀಪ್ ಅವರ ಸಿನಿಮಾ ಇದೆ. ಆ ಎರಡೂ ಪ್ರಾಜೆಕ್ಟ್ ಮುಗಿದ ಮೇಲೆ ವಿಜಯ್ ಕಿರಗಂದೂರು ಜೊತೆಯಾಗ್ತಾರಾ..? ಅಥವಾ ಎರಡೆರಡು ಪ್ರಾಜೆಕ್ಟ್‍ಗಳನ್ನು ಒಟ್ಟಿಗೇ ಶುರು ಮಾಡಿಕೊಳ್ತಾರಾ..? ಸದ್ಯಕ್ಕೆ ಉತ್ತರವಿಲ್ಲ.

  ಅತ್ತ ಪವನ್ ಕೂಡಾ ತೆಲುಗಿನ ಕುಡಿ ಎಡಮೈತೆ ವೆಬ್ ಸಿರೀಸ್‍ನಲ್ಲಿ ಬ್ಯುಸಿಯಿದ್ದಾರೆ. ಇತ್ತ ವಿಜಯ್ ಕಿರಗಂದೂರು ಕೂಡಾ ಯುವರತ್ನದ ಕೆಲಸ ಮುಗಿಸಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

 • ಫಹಾದ್ ಫಾಸಿಲ್`ಗೆ ಲೂಸಿಯಾ ಪವನ್ ಡೈರೆಕ್ಷನ್

  ಫಹಾದ್ ಫಾಸಿಲ್`ಗೆ ಲೂಸಿಯಾ ಪವನ್ ಡೈರೆಕ್ಷನ್

  ಫಹಾದ್ ಫಾಸಿಲ್. ಬಹುತೇಕ ಕನ್ನಡಿಗರು ಈ ನಟನ ಪ್ರತಿಭೆ ನೋಡಿದ್ದು ಒಟಿಟಿ ಸಿನಿಮಾಗಳಲ್ಲಿ. ಮಲಯಾಳಂನ ಈ ನಟ ಪಾತ್ರ ಇಷ್ಟವಾದರೆ ಅದು ಹೀರೋ ಪಾತ್ರನಾ? ವಿಲನ್ನಾ? ಪೋಷಕ ನಟನಾ? ಯಾವುದನ್ನೂ ನೋಡಲ್ಲ. ಪುಷ್ಪ ಚಿತ್ರದಲ್ಲೂ ನಟಿಸಿದ್ದ ಫಹಾದ್ ಫಾಸಿಲ್ ಈಗ ಕನ್ನಡಕ್ಕೆ ಎಂಟ್ರಿ ಕೊಡೋ ಸಮಯ ಬರುತ್ತಿದೆ. ಮೂಲಗಳ ಪ್ರಕಾರ ಲೂಸಿಯಾ ಪವನ್ ಕುಮಾರ್ ಹೊಸ ಚಿತ್ರದಲ್ಲಿ ಫಹಾದ್ ಫಾಸಿಲ್ ನಟಿಸಲಿದ್ದಾರೆ.

  ಗಾಳಿಪಟ 2 ಚಿತ್ರದ ಹೀರೋಗಳಲ್ಲಿ ಒಬ್ಬರಾಗಿ ನಟಿಸಿರೋ ಪವನ್ ಇಷ್ಟು ಹೊತ್ತಿಗೆ ಪುನೀತ್ ಅವರ ಜೊತೆ ದ್ವಿತ್ವ ಚಿತ್ರ ಶುರು ಮಾಡಿರಬೇಕಿತ್ತು. ದುರದೃಷ್ಟವಶಾತ್ ಆಗಲಿಲ್ಲ. ಈಗ ಫಹಾದ್ ಫಾಸಿಲ್ ಅವರಿಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಫಹಾದ್ ಒಪ್ಪಿದರೆ ಪವನ್ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗುತ್ತದೆ. ಅದರ ಜೊತೆಗೆ ಫಹಾದ್ ಕನ್ನಡಕ್ಕೆ ಬಂದಂತಾಗುತ್ತದೆ.

  ಅದು ದ್ವಿತ್ವ ಸಿನಿಮಾನಾ? ಅಪ್ಪು ಮಾಡಬೇಕಿದ್ದ ಕಥೆಗೆ ಫಹಾದ್ ಆಯ್ಕೆಯಾಗುತ್ತಿದ್ದಾರಾ? ಪವನ್ ಅವರೇ ಕನ್‍ಫರ್ಮ್ ಮಾಡಬೇಕು.