ಬೆಲ್‍ಬಾಟಂ, ಈ ವರ್ಷದ ಮೊದಲ ಶತದಿನೋತ್ಸವ ಕಂಡ ಚಿತ್ರವಾಗಿ ಹೊರಹೊಮ್ಮಿದೆ. 2019ರಲ್ಲಿ ಹಲವು ಚಿತ್ರಗಳು ರಿಲೀಸ್ ಆಗಿವೆ. ಯಶಸ್ಸನ್ನೂ ಕಂಡಿವೆ. ಆದರೆ, ಚಿತ್ರಮಂದಿರಗಳಲ್ಲಿ 100 ದಿನ ದಾಟಿದ ಮೊದಲ ಚಿತ್ರವಾಗಿರುವುದು ಬೆಲ್‍ಬಾಟಂ.
ರಿಷಬ್ ಶೆಟ್ಟಿ ಅಭಿನಯದ ಮೊದಲ ಚಿತ್ರ ಬೆಲ್‍ಬಾಟಂ. ಸಹಜವಾಗಿಯೇ ರಿಷಬ್, ಸಂಭ್ರಮವನ್ನೆಲ್ಲ ಬೊಗಸೆಯಲ್ಲೇ ಹಿಡಿದಿಟ್ಟುಕೊಂಡು ಖುಷಿಪಟ್ಟಿದ್ದಾರೆ. ಚಿತ್ರದ ಗೆಲುವಿನ ಕ್ರೆಡಿಟ್‍ನ್ನು ನಿರ್ದೇಶಕ, ನಿರ್ಮಾಪಕ, ಸಹಕಲಾವಿದರು ಹಾಗೂ ಕಥೆಗಾರರಿಗೆ ಕೊಟ್ಟಿದ್ದಾರೆ.
ರಿಷಬ್, ಜಯತೀರ್ಥ, ಹರಿಪ್ರಿಯಾ ಸೇರಿದಂತೆ ಇಡೀ ಚಿತ್ರತಂಡದ ಒಟ್ಟು ಶ್ರಮವೇ ಇವತ್ತಿನ ಗೆಲುವಿನ ಗುಟ್ಟು ಎನ್ನುವುದು ನಿರ್ಮಾಪಕ ಸಂತೋಷ್ ಕುಮಾರ್ ವಾದ.
ಡಿಟೆಕ್ಟಿವ್ ದಿವಾಕರನಾಗಿ ರಿಷಬ್, ಕುಸುಮ ಪಾತ್ರದಲ್ಲಿ ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದರೆ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಜನೀಶ್ ಲೋಕನಾಥ್ ನಿರ್ದೇಶನದ ಹಾಡುಗಳು ಮೋಡಿ ಮಾಡಿದ್ದವು.