` saptha sagarache ello, - chitraloka.com | Kannada Movie News, Reviews | Image

saptha sagarache ello,

  • Sapta Sagaradaache Ello' Launched

    Sapta Sagaradaache Ello' Launched

    Rakshit Shetty's new film 'Sapta Sagaradaache Ello' being written and directed by Hemanth Rao was launched at the Dharmagiri Manjunatha Swamy Temple in Bangalore.

    'Sapta Sagaradaache Ello' is an intense love story, 'My films usually deal with relationships and this film also deals with the relationship of a boy and girl. The film shows a 10 year journey of a couple. The film travels in two timelines, while the first one is in 2010, the second one is in 2020. The shooting of the film will start from this month end. Before that, we are planning a workshop between the lead actors Rakshit Shetty and Rukmini Vasanth' says Hemanth.

    This is Rakshit's second film with Hemanth after 'Godhi Banna Sadhara Maikattu'. 'Hemanth told me the idea of the film in just 10 minutes, which I liked a lot. I wanted to be a part of the project and that's how it started' says Rakshit.

    Rakshit himself is producing the film under his Parmavah Pictures. The shooting for the film start from this month end and will complete by mid-july. Rakshith plans to release in the last week of December this year.

    Charan Raj is the music director, while Advaitha is the cinematographer.

  • Saptha Sagaraache Ello Movie Review, Chitraloka Rating 4/5

    Saptha Sagaraache Ello Movie Review, Chitraloka Rating 4/5

    Journey Across Seven Shades of Love Film: Sapta Sagaradache Ello Side A

    Director: Hemanth Rao

    Cast: Rakshit Shetty, Rukmini Vasanth, Achyuth Kumar, Pavithra Lokesh, Sharath Lohitashva, Ramesh Indira

    Duration: 2 hours 22 minutes Rating: ★★★★☆ (4/5 stars) 

     A couple hopelessly in love ends up separated by an ambition to fulfill their dreams quickly. Can love heal their despair and bring them back together? In Sapta Sagaradache Ello Side A Director Hemanth Rao masterfully navigates this intricate terrain of profound affection and emotional crossroads. He artfully unravels the emotions entwined as Manu (Rakshit Shetty) and Priya (Rukmini Vasanth) weave their aspirations amidst their financially challenged lives. Yet, before the foundation beneath their dreams can solidify, the ground of their existence trembles. A deal to make quick money sets Manu on an unforgiving path. Their love is tested to the brink. Part A does not end on a happy note, but there is hope as there is Side B to look forward to. Anticipation lingers for the next installment to unveil the outcome of this bifurcated tale. An array of vividly depicted characters, each bearing distinct personas, orbits the realm of Manu and Priya.

    The subtle nuance in the character delineation is truly astounding. The narrative adheres to a minimalist realness, yet fervently tugs at heartstrings. Every scene exudes an enchanting charm and flawless aesthetics. Even the somber turns acquire endearment, thanks to the director's skill in enveloping viewers within a pragmatic reverie. The narrative's taut structure mirrors the strength of the fabric of time itself. The meticulous rendering of courtrooms and prisons prompts admiration for the depth of research and meticulousness invested in the film. The dialogue delivery is succinct and brims with wit, infusing humor seamlessly. Philosophical musings arise, eliciting contemplation and nods of agreement. SSE transcends being merely a gratifying spectacle;

    it stands as a cinematic treasure that pulls you into the intricate lives of its protagonists. One is left entranced, caught in the director's narrative grasp, pondering the motivations and rationale behind the beloved characters. The cast's performances are exemplary. Rakshit Shetty transitions seamlessly from a romantic to a heart-wrenched individual ensnared by circumstances. Rukmini Vasanth portrays a destitute dreamer finding refuge in her aspirations.

    The chilling aura projected by Ramesh Indira and the meticulously calculated malevolence of Achyuth Kumar leave viewers in awe. As the mellifluous tunes blend with impeccable background scores, the film's editing and cinematography craft a mesmerizing tapestry. Each frame is a visual feast, every note resonating with the narrative's ebb and flow. SSE Side A emerges as an unparalleled romantic triumph, beckoning audiences to lose themselves in its captivating world. End/-

  • ಗಡಿ ದಾಟಿಯೂ ಗೆದ್ದ ಸಪ್ತ ಸಾಗರದಾಚೆ ಎಲ್ಲೋ..

    ಗಡಿ ದಾಟಿಯೂ ಗೆದ್ದ ಸಪ್ತ ಸಾಗರದಾಚೆ ಎಲ್ಲೋ..

    ರಕ್ಷಿತ್ ಶೆಟ್ಟಿ ಅವರ ಸಪ್ತ ಸಾಗರದಾಚೆ ಎಲ್ಲೋ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಜಯಭೇರಿ ಬಾರಿಸಿದೆ. ಕನ್ನಡದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಪ್ತಸಾಗರಾಲು ದಾಟಿ ಅನ್ನೋ ಹೆಸರಲ್ಲಿ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದೆ. ಹೇಮಂತ್ ರಾವ್ ನಿರ್ದೇಶನದ ಈ ಪ್ರೇಮಕಥೆಗೆ ತೆಲುಗರೂ ಶರಣಾಗಿ ಹೋಗಿದ್ದಾರೆ.

    ಮನು- ಪ್ರಿಯಾ ಪ್ರೇಮಕತೆಗೆ ಫಿದಾ ಆಗೋಗಿದ್ದಾರೆ. ಮೊದಲ ದಿನ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ 2ನೇ ದಿನ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಿರ್ದೇಶಕ ಹೇಮಂತ್ ರಾವ್ 'ಸಪ್ತ ಸಾಗರಾಲು ದಾಟಿ' ಮೊದಲ ದಿನ ಬ್ರೇಕ್ ಈವನ್ ಆಗಿದೆ. 2ನೇ ದಿನ ಆಂಧ್ರದಲ್ಲಿ 10, ತೆಲಂಗಾಣದಲ್ಲಿ 16 ಶೋಗಳು ಸೇರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

     ಸೆಪ್ಟೆಂಬರ್ 1ಕ್ಕೆ ಕರ್ನಾಟಕದಲ್ಲಿ ರಿಲೀಸ್ ಆಗಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗಾಗಲೇ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿದೆ. ಇದೀಗ ತೆಲುಗಿನಲ್ಲೂ ಸದ್ದು ಮಾಡ್ತಿದೆ. ಮುಂದೆ ತಮಿಳು, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ. ಅಕ್ಟೋಬರ್ 19ಕ್ಕೆ ಚಿತ್ರದ 2ನೇ ಭಾಗ ರಿಲೀಸ್ ಆಗಲಿದೆ.

  • ಚೈತ್ರಾ ಪ್ಯಾಂಟ್`ಲೆಸ್ ಫೋಟೋ : ಸಪ್ತಸಾಗರದಾಚೆಗೂ ವೈರಲ್..!

    ಚೈತ್ರಾ ಪ್ಯಾಂಟ್`ಲೆಸ್ ಫೋಟೋ : ಸಪ್ತಸಾಗರದಾಚೆಗೂ ವೈರಲ್..!

    ನಟಿ ಚೈತ್ರಾ ಆಚಾರ್ ಸಪ್ತ ಸಾಗರದಾಚೆಯೆಲ್ಲೋ ಚಿತ್ರದ ಹೀರೋಯಿನ್. ಮಹಿರಾ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದರೂ, ಚೈತ್ರಾ ಸೆನ್ಸೇಷನ್ ಶುರುವಾಗಿದ್ದು ಸಪ್ತಸಾಗರದಾಚೆಯೆಲ್ಲೋ ಚಿತ್ರ ಶುರುವಾದ ನಂತರ. ರಕ್ಷಿತ್ ಶೆಟ್ಟಿ ಹೀರೋ, ಹೇಮಂತ್ ಡೈರೆಕ್ಷನ್ ಎಂಬ ಕಾರಣಕ್ಕೆ ಶುರವಾದ ಸೆನ್ಸೇಷನ್ ಅದು. ಆದರೆ ಈಗ ಚೈತ್ರಾ ಅವರು ಒಂದು ಫೋಟೋ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

    ಚೈತ್ರಾ ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಪ್ಯಾಂಟ್`ಲೆಸ್ ಪೋಸ್ ಕೊಡುವ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ. ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿರುವ ನಟಿ ಚೈತ್ರಾ ಇದೀಗ ಪ್ಯಾಂಟ್ ಲೆಸ್ ಆಗಿ ಪೋಸ್ ನೀಡಿದ್ದಾರೆ. ಪ್ಯಾಂಟ್ ಧರಿಸದೇ ಟಿ ಶರ್ಟ್ನಲ್ಲೇ ಕ್ಯಾಮರಾಗೆ ಪೋಸ್ ನೀಡಿರುವ ಚೈತ್ರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದಾ ಹಾಟ್ ಫೋಟೋಗಳನ್ನು ಹರಿಬಿಡುವ ಚೈತ್ರಾ ಈ ಬಾರಿ ಪ್ಯಾಂಟ್ ಇಲ್ಲದೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ.

    ಸದ್ಯ ಚೈತ್ರಾ ಆಚಾರ್ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್ಗೆ ರೆಡಿ ಆಗ್ತಿದೆ. 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್ಡೇ ಟು ಮಿ', 'ಯಾರಿಗೂ ಹೇಳ್ಬೇಡಿ', 'ಅಕಟಕಟ' ಹೀಗೆ ಈಕೆ ನಟಿಸುತ್ತಿರುವ ನಾಲ್ಕೈದು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.

  • ಥಿಯೇಟರ್ ವಿಸಿಟ್ ಜೊತೆಗೆ ಹಿಂದಿಗೂ ಹೊರಟ ಕತ್ತೆ..ಪುಟ್ಟಿ..!

    ಥಿಯೇಟರ್ ವಿಸಿಟ್ ಜೊತೆಗೆ ಹಿಂದಿಗೂ ಹೊರಟ ಕತ್ತೆ..ಪುಟ್ಟಿ..!

    ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಸೂಪರ್ ಹಿಟ್ ಆಗಿದೆ. ರಕ್ಷಿತ್ ಶೆಟ್ಟಿ-ಹೇಮಂತ್ ರಾವ್ ಜೋಡಿ ಮತ್ತೊಂದು ಬಂಪರ್ ಹೊಡೆದಿದ್ದಾರೆ. ರೂಲ್ಸ್..ಟ್ರೆಂಡ್ ಮಾಡೋದ್ರಲ್ಲೇ ಫೇಮಸ್ ಆಗಿರೋ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ, ಈ ಬಾರಿಯೂ ಗುರಿ ಮುಟ್ಟಿದ್ದಾರೆ. ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಆಗಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಥಿಯೇಟರ್ ವಿಸಿಟ್ ಶುರು ಮಾಡಿದೆ.

    ಸೆ.5ರಂದು ಮಂಡ್ಯ ಮತ್ತು ಮೈಸೂರಿನಲ್ಲಿ ಥಿಯೇಟರ್ ವಿಸಿಟ್ ಮಾಡಿದ ಸಪ್ತಸಾಗರದಾಚೆ ಎಲ್ಲೋ ತಂಡ, 6ನೇ ತಾರೀಕು ಹಾಸನ ಮತ್ತು ಉಡುಪಿ ಯಾತ್ರೆ ಮುಗಿಸಿದೆ. ಇಂದು ಉಡುಪಿ ಮತ್ತು ಮಣಿಪಾಲ್`ಗೆ ಭೇಟಿ ನೀಡಲಿದೆ. ಅದಾದ ನಂತರ ಸೆ.8ಕ್ಕೆ ಮಂಗಳೂರು ಹಾಗೂ ಸೆಪ್ಟೆಂಬರ್ 9ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದೆ.

    ಸೆ.10ಕ್ಕೆ ಹುಬ್ಬಳ್ಳಿ-ಧಾರವಾಡ, ಸೆ.11ಕ್ಕೆ ಬೆಳಗಾವಿ ಹಾಗೂ ಸೆ.12ಕ್ಕೆ ದಾವಣಗೆರೆ ಮತ್ತು ತುಮಕೂರು ತಲುಪಲಿದೆ. ಇದೀಗ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಹಿಂದಿಗೆ ಡಬ್ ಆಗುತ್ತಿದ್ದು, ತಮ್ಮ ಪಾತ್ರಕ್ಕೆ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರೇ ಹಿಂದಿಯಲ್ಲಿಯೂ ಡಬ್ ಮಾಡಿದ್ದಾರೆ.

  • ನೋಡ್ ನೋಡ್ತಾನೇ ಮುಗಿದೋಯ್ತು ಮೊದಲ ಹಂತ

    ನೋಡ್ ನೋಡ್ತಾನೇ ಮುಗಿದೋಯ್ತು ಮೊದಲ ಹಂತ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಮತ್ತೆ ಜೋಡಿಯಾಗಿರುವ ಸಪ್ತ ಸಾಗರದಾಚೆಯೆಲ್ಲೋ ಚಿತ್ರದ ಮೊದಲ ಹಂತದ ಚಿತ್ರೀಕರಣ ನೋಡ ನೋಡುತ್ತಲೇ ಮುಗಿದು ಹೋಗಿದೆ. ಮೊನ್ನೆ ಮೊನ್ನೆ ಶುರುವಾಯ್ತು ಎಂದುಕೊಳ್ಳುತ್ತಿರುವಾಗಲೇ 21 ದಿನಗಳ ಮೊದಲ ಶೆಡ್ಯೂಲ್ ಮುಗಿಸಿದೆ ಚಿತ್ರತಂಡ.

    ರಕ್ಷಿತ್ ಶೆಟ್ಟಿ ಎದುರು ರುಕ್ಮಿಣಿ ನಾಯಕಿಯಾಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಶೂಟಿಂಗ್‍ನ್ನು ತರಾತುರಿಯಲ್ಲೇ ಮುಗಿಸಿದ್ದಾರೆ. ಚಿತ್ರತಂಡದ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ಹಾಕಿಸಿದ ನಂತರ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. 2ನೇ ಹಂತಕ್ಕಾಗಿ ರಕ್ಷಿತ್ ಶೆಟ್ಟಿ 10ರಿಂದ 15 ಕೆಜಿ ದಪ್ಪಗಾಗಬೇಕಿದ್ದು, ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ.

  • ಮತ್ತೆ ಟ್ರೆಂಡಿಂಗ್ ಜಾನರ್ ಬ್ರೇಕ್ ಮಾಡಿದ ಸಪ್ತ ಸಾಗರದಾಚೆ ಎಲ್ಲೋ..

    ಮತ್ತೆ ಟ್ರೆಂಡಿಂಗ್ ಜಾನರ್ ಬ್ರೇಕ್ ಮಾಡಿದ ಸಪ್ತ ಸಾಗರದಾಚೆ ಎಲ್ಲೋ..

    ಈಗ ಆಕ್ಷನ್ ಸಿನಿಮಾಗಳ ಕಾಲ. ಕೆಜಿಎಫ್, ಪುಷ್ಪ, ಕಾಂತಾರ, ಪಠಾಣ್, ಜವಾನ್, ಜೈಲರ್, ವೇದ, ಸಲಾರ್.. ಹೀಗೆ ಎಲ್ಲರೂ ಒಂದರ ಹಿಂದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾಗಳ ಬೆನ್ನು ಹಿಡಿದು ಸಾಗುತ್ತಿರುವಾಗ.. ಅಂತಹ ಚಿತ್ರಗಳೇ ಹಿಟ್ ಆಗುತ್ತಿರುವಾಗ ಮತ್ತೊಮ್ಮೆ ರೂಲ್ಸ್ ಬ್ರೇಕ್ ಮಾಡಿದ್ದಾರೆ ರಕ್ಷಿತ್ ಶೆಟ್ಟಿ & ಹೇಮಂತ್ ರಾವ್ ಜೋಡಿ.

    ಸಪ್ತಸಾಗರದಾಚೆ ಎಲ್ಲೋ.. ಸಿನಿಮಾ.. ಒಂದು ಕವಿತೆಯಂತ ಪ್ರೇಮ ಕಥೆ. ಕವಿತೆ ಎಂದುಕೊಂಡರೆ ಕವಿತೆ. ಕಥೆ ಎಂದುಕೊಂಡರೆ ಕಥೆ. ಭಾವನೆಗಳದ್ದೇ ಆಕ್ಷನ್ ಸೀಕ್ವೆನ್ಸ್. ಅಬ್ಬರವಿಲ್ಲದ ಡೈಲಾಗ್ಸ್. ಮಾತಿನಲ್ಲೇ ರೋಮಾಂಚನಗೊಳಿಸುವ ಮನು ಮತ್ತು ಪ್ರಿಯಾ. ಆ ಮಾತುಗಳಲ್ಲಿ ಒಂದು ತುಂಟತನ.. ಹೃದಯವನ್ನೇ ತುಂಬಿಕೊಳ್ಳುವ ಪ್ರೇಮ.. ಕಣ್ಣುಗಳಲ್ಲೇ ನಡೆಯೋ ಸಂಭಾಷಣೆ.. ಹೇಮಂತ್ ರಾವ್ ರೆಗ್ಯುಲರ್ ಜಾನರ್ ಬ್ರೇಕ್ ಮಾಡಿದ್ದಾರೆ. ಅವರ ಪ್ರೇಮಕಥೆಗೆ ಜೀವ ತುಂಬಿರೋದು ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್.

    ಪ್ರೇಮಕಥೆಯನ್ನೂ ಇಂಟ್ರೆಸ್ಟಿಂಗ್ ಆಗಿ..ಇಂಟೆನ್ಸಿವ್ ಆಗಿ ಹೇಳಿರುವ ಹೇಮಂತ್ ರಾವ್ ಎರಡನೇ ಭಾಗಕ್ಕೆ ಕಾಯುವಂತೆ ಮಾಡಿದ್ದಾರೆ. ಇವತ್ತು ಥಿಯೇಟರಿಗೆ ಬರುತ್ತಿರೋ ಸಪ್ತಸಾಗರದಾಚೆ ಎಲ್ಲೋ.. ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿದೆ. ಹೃದಯವನ್ನು ಬಲವಾಗಿ ತಟ್ಟಿದೆ.

    ಕತ್ತೆ ಮತ್ತು ಪುಟ್ಟಿ ಇಬ್ಬರ ಕೆಮಿಸ್ಟ್ರಿಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವಿನಾಶ್, ಪವಿತ್ರಾ ಲೋಕೇಶ್, ಯಮುನಾ ಶ್ರೀನಿಧಿ, ಹರ್ಷಿಲ್ ಕೌಶಿಕ್, ಅಶ್ವಿನ್ ಹಾಸನ್, ಅಶೋಕ್ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ ಹೈಲೈಟ್ ಆಗುತ್ತಾರೆ. ಇನ್ನು, ಈ ಸಿನಿಮಾವನ್ನು ಎರಡು ಭಾಗಗಳಾಗಿ ಮಾಡಿರುವುದರ ಬಗ್ಗೆ ಹೇಳುವುದಾದರೆ, ಖಂಡಿತ ಪಾರ್ಟ್ 2ಕ್ಕೆ ಒಂದಷ್ಟು ಇಂಟರೆಸ್ಟಿಂಗ್ ಆಗಿರುವ ವಿಷಯಗಳನ್ನು ಹೇಮಂತ್ ಇಟ್ಟುಕೊಂಡಿದ್ದಾರೆ. ಮುಂದೇನಾಗಬಹುದು ಎಂಬ ಕುತೂಹಲವನ್ನು ಉಳಿಸಿಕೊಂಡು, ಪಾರ್ಟ್ 1 ಅನ್ನು ಮುಗಿಸಿದ್ದಾರೆ.

  • ರಕ್ಷಿತ್ ಶೆಟ್ಟಿ ಲವ್ ರಿಹರ್ಸಲ್

    ರಕ್ಷಿತ್ ಶೆಟ್ಟಿ ಲವ್ ರಿಹರ್ಸಲ್

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲವ್ವಲ್ಲಿ ಬಿದ್ದಿದ್ದಾರೆ. ಅವಳ ನೆನಪಲ್ಲೇ ಮ್ಯೂಸಿಕ್ಕು ಕೇಳುತ್ತಿದ್ದಾರೆ. ಅವಳಿಗಾಗಿ ಅಡುಗೆ ಮನೆಗೂ ಹೆಜ್ಜೆಯಿಟ್ಟಿದ್ದಾರೆ. ಅವಳು ಮಾತನಾಡುತ್ತಿದ್ದರೆ.. ಜಗತ್ತನ್ನೇ ಮರೆತು ಅವಳ ಮುಖವನ್ನೇ ನೋಡುತ್ತಾ ಕೂರುತ್ತಿದ್ದಾರೆ. ಯಾರವಳು..?

    ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ರಿಹರ್ಸಲ್ ದೃಶ್ಯಗಳಿವು. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ಅವರನ್ನು ಈ ರಿಹರ್ಸಲ್‍ಗೆ ಕೂರಿಸಿರುವುದು ನಿರ್ದೇಶಕ ಹೇಮಂತ್ ರಾವ್. 777 ಚಾರ್ಲಿ ಶೂಟಿಂಗ್ ಮುಗಿಸಿರುವ ರಕ್ಷಿತ್ ಶೆಟ್ಟಿ, ಅಷ್ಟೇ ಫಾಸ್ಟಾಗಿ ಲವ್ ಮೂಡ್‍ಗೆ ಬಂದಿದ್ದಾರೆ. ಲವ್ ಮೂಡ್‍ಗೆ ಯಾವತ್ತಿದ್ರೂ ಫಾಸ್ಟಾಗೇ ಬರಬೇಕಲ್ವಾ..

  • ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್, ಗೆಟಪ್ ಕಂಪ್ಲೀಟ್ ಚೇಂಜ್..!

    ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್, ಗೆಟಪ್ ಕಂಪ್ಲೀಟ್ ಚೇಂಜ್..!

    ರಕ್ಷಿತ್ ಶೆಟ್ಟಿ ತಾವು ನಟಿಸುವ ಪಾತ್ರಗಳಿಗೆ ತಕ್ಕಂತೆ ಗೆಟಪ್ ಬದಲಿಸುತ್ತಾರೆ. ಅವರು ಮಾಡಿಕೊಳ್ಳೋ ಸಣ್ಣ ಸಣ್ಣ ಬದಲಾವಣೆಗಳು ಸ್ಕ್ರೀನ್ನಲ್ಲಿ ಬೇರೆಯದ್ದೇ ರೀತಿಯ ಫೀಲ್ ಕೊಡುತ್ತವೆ. ಈ ಬಾರಿಯೂ ಅಷ್ಟೆ, ರಕ್ಷಿತ್ ಶೆಟ್ಟಿ ಅವರ ಹೇರ್ ಸ್ಟೈಲ್, ಗೆಟಪ್ ಚೇಂಜ್ ಆಗಿದೆ.

    ರಕ್ಷಿತ್ ಶೆಟ್ಟಿ ಅವರನ್ನು ಈ ಮಟ್ಟಿಗೆ ಬದಲಿಸಿರೋದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕವಲು ದಾರಿ ಖ್ಯಾತಿಯ ಹೇಮಂತ್ ರಾವ್. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಪ್ತಸಾಗರದಾಚೆ ಎಲ್ಲೋ.. ಚಿತ್ರದ ರಕ್ಷಿತ್ ಶೆಟ್ಟಿ ಲುಕ್ ಕಂಪ್ಲೀಟ್ ಡಿಫರೆಂಟ್ ಆಗಿದೆ. ರಕ್ಷಿತ್ ಶೆಟ್ಟಿ ಅವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ರುಕ್ಮಿಣಿ ವಸಂತ್. ಮತ್ತೊಮ್ಮೆ ರಕ್ಷಿತ್-ಪುಷ್ಕರ್-ಹೇಮಂತ್ ಜೋಡಿ ಒಂದಾಗಿರುವುದರಿಂದ ಒಂದೊಳ್ಳೆಯ ಸಿನಿಮಾ ಗ್ಯಾರಂಟಿ ಅನ್ನೋ ಕಾನ್ಫಿಡೆನ್ಸ್ ಇಟ್ಟುಕೊಳ್ಳಬಹುದು.

  • ರಕ್ಷಿತ್ ಹುಟ್ಟುಹಬ್ಬಕ್ಕೆ ಸಪ್ತ ಸಾಗರದಾಚೆ ಸಡಗರ.. : ಗಿಫ್ಟ್ ರೆಡಿನಾ?

    ರಕ್ಷಿತ್ ಹುಟ್ಟುಹಬ್ಬಕ್ಕೆ ಸಪ್ತ ಸಾಗರದಾಚೆ ಸಡಗರ.. : ಗಿಫ್ಟ್ ರೆಡಿನಾ?

    ಒಂದು ಚೆಂದದ ಪ್ರೇಮಕಥೆ ಎನ್ನುವ ಆಸೆ ಹುಟ್ಟಿಸಿಯೇ ಕುತೂಹಲ ಹುಟ್ಟಿಸಿದ್ದಾರೆ ಹೇಮಂತ್ ಎಂ. ರಾವ್. ಒಂದೆಡೆ 777 ಚಾರ್ಲಿ ಚಿತ್ರವನ್ನು ಪ್ರೀತಿಯಿಂದ ಪ್ರಚಾರ ಮಾಡುತ್ತಿರೋ ರಕ್ಷಿತ್ ಶೆಟ್ಟಿ, ಇನ್ನೊಂದೆಡೆ ತಮ್ಮ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ. ಅಂದಹಾಗೆ ಈ ಟೀಸರ್ ಹೊರಬರೋಕೆ ಕಾರಣ ಜೂನ್ 6. ಅದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ.

    ಟೀಸರ್‍ನಲ್ಲಿ ಪ್ರೀತಿಯ ಮನುವಿಗೆ ಮನದಾಳದ ಪ್ರೀತಿಯನ್ನೆಲ್ಲ ಹೇಳಿಕೊಳ್ಳೋ ನಾಯಕಿ.. ಕೇಳಿಸಿಕೊಳ್ಳುವ ನಾಯಕ.. ಇದ್ದಕ್ಕಿದ್ದಂತೆ ರಕ್ತ.. ಏನೋ ತಲ್ಲಣ.. ಎಲ್ಲವನ್ನೂ 1.26 ನಿಮಿಷದ ಟೀಸರ್‍ನಲ್ಲೇ ತೋರಿಸಿ ಬೆರಗು ಹುಟ್ಟಿಸುತ್ತಾರೆ ಹೇಮಂತ್.

    ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ ಕೃಷ್ಣ ದೇಶಪಾಂಡೆ.. ಹೀಗೆ ಬೃಹತ್ ತಾರಾಗಣವೇ ಚಿತ್ರಕ್ಕಿದೆ.

    ಅಂದಹಾಗೆ ರಕ್ಷಿತ್ ಶೆಟ್ಟಿಗೆ ಗಿಫ್ಟ್ ಕೊಡುವ ಆಸೆಯಿದ್ದವರೆಲ್ಲ ಜೂನ್ 10ಕ್ಕೆ ಕೊಡಬಹುದು. ಆವತ್ತೇ ಅಲ್ವಾ 777 ಚಾರ್ಲಿ ರಿಲೀಸ್..?

  • ಸಪ್ತ ಸಾಗರದಾಚೆ ಎಲ್ಲೋ.. : ಪುಟ್ಟಿ ಮತ್ತು ಕತ್ತೆಯ ಲವ್ ಸ್ಟೋರಿ

    ಸಪ್ತ ಸಾಗರದಾಚೆ ಎಲ್ಲೋ.. : ಪುಟ್ಟಿ ಮತ್ತು ಕತ್ತೆಯ ಲವ್ ಸ್ಟೋರಿ

    ಸಪ್ತಸಾಗರದಾಚೆ ಎಲ್ಲೋ.. ರೆಗ್ಯುಲರ್ ಕಥೆಗಳಿಗಿಂತ ವಿಭಿನ್ನವಾಗಿರುವ ಸಿನಿಮಾ. ಹೇಮಂತ್ ಕುಮಾರ್ ಅವರನ್ನೇ ಕೇಳಿದ್ರೆ, ಟ್ರೆಂಡಿಗೆ ತಕ್ಕಂತೆ ಸಿನಿಮಾ ಮಾಡೋಕೆ ಆಗಲ್ಲ. ಅಂತಹ ಜಾಯಮಾನ ನನ್ನದಲ್ಲ ಅಂತಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ,  ಹಿಂದಿಯ ಅಂಧಾದುನ್ (ಕಥೆಗಾರ) ಮೂಲಕ ನಾನು ಸಪರೇಟು ಎಂದು ತೋರಿಸಿದವರು ಹೇಮಂತ್ ರಾವ್. ಹೀಗಾಗಿಯೇ ನಿರೀಕ್ಷೆಯೂ ಹೆಚ್ಚು. ಅದು ಈಗಾಗಲೇ ಪ್ರೇಕ್ಷಕರ ಉತ್ಸಾಹದಲ್ಲಿಯೇ ಗೊತ್ತಾಗುತ್ತಿದೆ.

     ಇಂದು ಸಂಜೆಯಿಂದ (ಆಗಸ್ಟ್ 31) ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆರಂಭವಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ 30ಕ್ಕೂ ಅಧಿಕ ಶೋಗಳನ್ನು ಮಲ್ಟಿಪ್ಲೆಕ್ಸ್ಗಳಲ್ಲಿ ನಿಗದಿ ಮಾಡಲಾಗಿದೆ. ಬೆಂಗಳೂರು ಮಾತ್ರವಲ್ಲದೆ, ಶಿವಮೊಗ್ಗ, ಮೈಸೂರು, ಮಂಗಳೂರು ಮುಂತಾದ ಕಡೆಗಳಲ್ಲೂ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಮಾಡಲಾಗುತ್ತಿದೆ. ಚಿತ್ರವನ್ನು ಒಂದು ದಿನ ಮುಂಚಿತವಾಗಿಯೇ ನೋಡುವುದಕ್ಕೂ ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಪೇಯ್ಡ್ ಪ್ರೀಮಿಯರ್ ಶೋಗೆ ಎಲ್ಲೆಲ್ಲಿ ಬುಕಿಂಗ್ ಓಪನ್ ಮಾಡಲಾಗಿದೆಯೋ, ಅಲ್ಲೆಲ್ಲ ಈಗಾಗಲೇ ಬಹುತೇಕ ಟಿಕೆಟ್ಸ್ ಸೇಲ್ ಆಗಿವೆ. ಜನರು ಮುಗಿಬಿದ್ದು ಟಿಕೆಟ್ಸ್ ಬುಕ್ ಮಾಡುತ್ತಿದ್ದಾರೆ. ಟಿಕೆಟ್ ದರ ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ 350 ರೂಪಾಯಿಗಳಿಂದ 900 ರೂಪಾಯಿವರೆಗೂ ಇದೆ.

    ರಕ್ಷಿತ್ ಶೆಟ್ಟಿ ಮನುವಾಗಿ ಕಾಣಿಸಿಕೊಂಡಿದ್ದು, ಮನುವಿನ ಪುಟ್ಟಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಪುಟ್ಟಿಯ ಪಾತ್ರದ ಹೆಸರು ಪ್ರಿಯಾ. ಪ್ರಿಯಾಳ ಮುದ್ದು ಹುಡುಗ ಮನು, ಆಕೆಯ ಪಾಲಿಗೆ ಕತ್ತೆ. ಹಿಂಗ್ಯಾಕೆ ಅಂದ್ರೆ, ಪ್ರೇಮಿಗಳ ಮಧ್ಯೆ ಗುಟ್ಟುಗಳಿರುತ್ತವೆ. ಹಿತವಾದ ರೊಮ್ಯಾನ್ಸ್ ಇರುತ್ತದೆ. ಕ್ಯೂಟ್ ಎಕ್ಸ್‍ಪ್ರೆಷನ್ ಅಲ್ವಾ ಎನ್ನುತ್ತಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಾಳೆಯಿಂದ ರಿಲೀಸ್. ಚೆಂದದ ಪ್ರೇಮಕಥೆಯನ್ನ ಕಣ್ತುಂಬಿಕೊಳ್ಳೋಎಕೆ ಪ್ರೇಕ್ಷಕರಂತೂ ರೆಡಿ. ರಕ್ಷಿತ್ ಹಾಗೂ ರುಕ್ಮಿಣಿ ಜೊತೆಗೆ  ಅವಿನಾಶ್, ಪವಿತ್ರಾ ಲೋಕೇಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಗೋಪಾಲ್ ದೇಶಪಾಂಡೆ, ಅಶ್ವಿನ್ ಹಾಸನ್ ಮುಂತಾದವರು ನಟಿಸಿದ್ದಾರೆ. ನಟಿ ಚೈತ್ರಾ ಜೆ ಆಚಾರ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದು, ಅವರ ಪಾತ್ರವು ಎರಡನೇ ಭಾಗದಲ್ಲಿ ಹೆಚ್ಚು ಇರಲಿದೆ.

  • ಸಪ್ತ ಸಾಗರದಾಚೆಗೆ ಬಂದಳು ಇನ್ನೊಬ್ಬ ಸುಪ್ತ ಸುಂದರಿ

    ಸಪ್ತ ಸಾಗರದಾಚೆಗೆ ಬಂದಳು ಇನ್ನೊಬ್ಬ ಸುಪ್ತ ಸುಂದರಿ

    ಸಪ್ತಸಾಗರದಾಚೆಯೆಲ್ಲೋ.. ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಕಾಂಬಿನೇಷನ್‍ನಲ್ಲಿ ಬರುತ್ತಿರೋ ಹೊಸ ಸಿನಿಮಾ. ಅರ್ಧ ಚಿತ್ರೀಕರಣ ಮುಗಿದಿದೆ. ಇನ್ನರ್ಧ ಬಾಕಿಯಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ನಂತರ ರಕ್ಷಿತ್-ರಾವ್ ಜೋಡಿ ಮತ್ತೊಮ್ಮೆ ಒಂದಾಗಿರುವುದೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರಕ್ಕೀಗ ಇನ್ನೊಬ್ಬ ಸುಪ್ತ ಸುಂದರಿಯ ಪ್ರವೇಶವಾಗಿದೆ. ರುಕ್ಮಿಣಿ ವಸಂತ್ ಅವರ ಜೊತೆಗೆ ಚೈತ್ರಾ ಜೆ.ಆಚಾರ್ ನಾಯಕಿಯಾಗಿ ಸುರಭಿ ಪಾತ್ರಧಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ನನ್ನದ ಸುರಭಿ ಅನ್ನೋ ಹೆಸರಿನ ಪಾತ್ರ. ಹೇಮಂತ್ ರಾವ್ ಕರೆ ಮಾಡಿದಾಗ ಬೇರಾವುದೋ ಚಿತ್ರಕ್ಕೆ ಕಾಲ್ ಮಾಡಿದ್ದಾರೆ ಎಂದುಕೊಂಡೆ. ಸಪ್ತಸಾಗರದಾಚೆಯೆಲ್ಲೋ.. ಚಿತ್ರಕ್ಕೆ ನೀವೂ ಒಬ್ಬರು ಹೀರೋಯಿನ್ ಎಂದಾಗ ಆದ ಖುಷಿ ಅಷ್ಟಿಷ್ಟಲ್ಲ. ಏಕೆಂದರೆ ಹೇಮಂತ್ ರಾವ್ ನನ್ನ ಫೇವರಿಟ್ ಡೈರೆಕ್ಟರ್. ಥಿಯೇಟರಿನಲ್ಲಿ ಆ ಚಿತ್ರವನ್ನು 6 ಸಲ ನೋಡಿದ್ದೇನೆ. ಆಗ ನಾನು ಎಂಜಿನಿಯರಿಂಗ್ ಫೈನಲ್ ಸೆಮಿಸ್ಟರ್‍ನಲ್ಲಿದ್ದೆ. ಈಗ ನನ್ನ ಕನಸಿನ ಡೈರೆಕ್ಟರ್ ಜೊತೆ ಕೆಲಸ ಮಾಡೋದು, ರಕ್ಷಿತ್ ಶೆಟ್ಟಿಯವರ ಜೊತೆ ನಟಿಸೋದು ಅಂದ್ರೆ ಎಕ್ಸೈಟ್‍ಮೆಂಟ್ ಇದ್ದೇ ಇರುತ್ತಲ್ವಾ ಎನ್ನುತ್ತಾರೆ ಚೈತ್ರಾ.

    ಸುರಭಿಯದ್ದು ಸಾದಾಸೀದಾ ಪಾತ್ರ. ಆದರೆ ಜೀವನ ಅವಳ ಜೊತೆ ಸಾದಾಸೀದಾ ಇರಲ್ಲ. ಸುರಭಿ & ಮನು (ರಕ್ಷಿತ್ ಶೆಟ್ಟಿ) ಮಧ್ಯೆ ಒಂದು ವಿಶೇಷ ಸಂಬಂಧ ಏರ್ಪಡುತ್ತೆ. ಅದು ಪ್ರೇಕ್ಷಕರ ಹೃದಯ ತಟ್ಟುತ್ತೆ ಎನ್ನುತ್ತಾರೆ ಹೇಮಂತ್ ರಾವ್.

    ರುಕ್ಮಿಣಿ ಪಾತ್ರ 2010ರಲ್ಲಿ ಮನು ಜೀವನಕ್ಕೆ ಎಂಟ್ರಿ ಕೊಟ್ಟರೆ,ಸುರಭಿಯ ಪಾತ್ರ 10 ವರ್ಷಗಳ ನಂತರ ಬರುತ್ತಂತೆ. ಕೊರೊನಾ ಕಾಲವೂ ಚಿತ್ರದಲ್ಲಿದೆಯಂತೆ. ಹೇಮಂತ್ ರಾವ್ ಚಿತ್ರ ಎಂದ ಮೇಲೆ ನಿರೀಕ್ಷೆ ಸಹಜವೇ ಬಿಡಿ.

  • ಸಪ್ತ ಸಾಗರಾಲು ದಾಟಿ ಸೆಪ್ಟೆಂಬರ್ 22ಕ್ಕೆ ರಿಲೀಸ್

    ಸಪ್ತ ಸಾಗರಾಲು ದಾಟಿ ಸೆಪ್ಟೆಂಬರ್ 22ಕ್ಕೆ ರಿಲೀಸ್

    ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಗೆಲುವಿನ ಯಾತ್ರೆ, ಈಗ ಕನ್ನಡದ ಗಟಿ ದಾಟಿ ಹೋಗುತ್ತಿದೆ. ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿಗೆ ಡಬ್ ಆಗಿದ್ದು ಸೆಪ್ಟೆಂಬರ್ 22ರಂದು ಆಂಧ್ರ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗಲಿದೆ. ತೆಲುಗು ಸಿನಿಮಾಕ್ಕೆ ‘ಸಪ್ತ ಸಾಗರಾಲು ದಾಟಿ’ ಎಂದು ಹೆಸರಿಡಲಾಗಿದೆ.  ಸೆಪ್ಟೆಂಬರ್ 22 ರಂದು ತೆಲುಗಿನಲ್ಲಿ ‘ಸಪ್ತ ಸಾಗರಾಲು ದಾಟಿ’ ಬಿಡುಗಡೆಯಾಗುತ್ತಿದೆ.

    ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಸಹ ತೆಲುಗಿನಲ್ಲಿ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ರಕ್ಷಿತ್ ಶೆಟ್ಟಿಯ ಸಿನಿಮಾಗಳಿಗೆ ತೆಲುಗಿನಲ್ಲಿ ಉತ್ತಮ ಬೇಡಿಕೆಯೇ ಇದೆ. ಹಾಗಾಗಿ ಅಲ್ಲಿ ‘ಸಪ್ತ ಸಾಗರಾಲು ದಾಟಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣಬಹುದೆಂಬ ನಿರೀಕ್ಷೆ ರಕ್ಷಿತ್ ಶೆಟ್ಟಿ ಹಾಗೂ ತಂಡದ್ದು.

    ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ಅಥವಾ ಸೈಡ್-ಬಿ ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ. ಈಗ ತೆಲುಗಿನಲ್ಲಿ ಬಿಡುಗಡೆ ಆಗಿರುವ ‘ಸಪ್ತ ಸಾಗರಾಲು ದಾಟಿ’ ಸಿನಿಮಾ ಹಿಟ್ ಆದರೆ ಎರಡನೇ ಭಾಗವೂ ಬಿಡುಗಡೆ ಆಗಲಿದೆ.

    ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಚೈತ್ರಾ ಆಚಾರ್ ನಾಯಕಿಯಾಗಿರಲಿದ್ದಾರೆ.

     ಸಿನಿಮಾ ನೋಡಿದ ಹಲವರು ನವಿರು ಪ್ರೇಮಕತೆಗೆ ಮನಸೋತಿದ್ದಾರೆ. ಸಿನಿಮಾದ ಹಾಡುಗಳು, ರಕ್ಷಿತ್-ರುಕ್ಮಿಣಿಯ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಬಹಳ ದಿನಗಳ ಬಳಿಕ ಒಂದೊಳ್ಳೆ ಪ್ರೇಮಕತೆ ಕನ್ನಡದಲ್ಲಿ ಬಂದಿದೆ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿವೆ.

  • ಸಪ್ತಸಾಗರದಾಚೆ ಎಲ್ಲೋ.. 2 ಭಾಗಗಳಲ್ಲಿ ಬರುತ್ತಾ?

    ಸಪ್ತಸಾಗರದಾಚೆ ಎಲ್ಲೋ.. 2 ಭಾಗಗಳಲ್ಲಿ ಬರುತ್ತಾ?

    ಕನ್ನಡದಲ್ಲೀಗ 2 ಭಾಗಗಳ ಟ್ರೆಂಡ್ ಶುರುವಾಗಿದೆ. ಇದೀಗ ಅದೇ ಟ್ರೆಂಡ್`ಗೆ ರಕ್ಷಿತ್ ಶೆಟ್ಟಿ ಕೂಡಾ ಸೇರಿಕೊಂಡಿದ್ದಾರೆ. ಅವರೀಗ ಸಪ್ತಸಾಗರದಾಚೆ ಎಲ್ಲೋ ಚಿತ್ರವನ್ನು ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. . 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ಎಂ ರಾವ್ ದೊಡ್ಡ ಸಕ್ಸಸ್ ನೀಡಿದ್ದರು.  ಇದೇ ಜೋಡಿಯ ಎರಡನೇ ಸಿನಿಮಾ ಸಪ್ತಸಾಗರದಾಚೆ ಎಲ್ಲೋ..

    ಅಂದಹಾಗೆ ಇತ್ತೀಚೆಗೆ ಎರಡು ಭಾಗಗಳ ಟ್ರೆಂಡ್ ಶುರುವಾಗಿದೆ. ಬಾಹುಬಲಿ-ಬಾಹುಬಲಿ 2, ಕೆಜಿಎಫ್ ಚಾಪ್ಟರ್ 2 ಮತ್ತು ಚಾಪ್ಟರ್ 2 ಸದ್ಯಕ್ಕೆ ರಿಲೀಸ್ ಆಗಿರುವ ಎರಡು ಭಾಗಗಳಲ್ಲಿ ಬಂದಿರೋ ಸಿನಿಮಾಗಳು. ಅದಾದ ಮೇಲೆ ಶರಣ್-ಸಿಂಪಲ್ ಸುನಿ-ಅಶಿಕಾ ರಂಗನಾಥ್ ಕಾಂಬಿನೇಷನ್ನಿನ ಅವತಾರ್ ಪುರುಷ, ಉಪೇಂದ್ರ-ಆರ್.ಚಂದ್ರು-ಶಿವಣ್ಣ ಕಾಂಬಿನೇಷನ್ನಿನ ಕಬ್ಜ, ಜಗ್ಗೇಶ್-ವಿಜಯ್ ಪ್ರಸಾದ್-ಆದಿತಿ ಪ್ರಭುದೇವ ಜೋಡಿಯ ತೋತಾಪುರಿ ಚಿತ್ರಗಳು ಘೋಷಣೆ ಮಾಡಿಕೊಂಡಿವೆಯಾದರೂ ಎರಡನೇ ಭಾಗ ರಿಲೀಸ್ ಆಗಿಲ್ಲ. ಅವತಾರ್ ಪುರುಷ ಮತ್ತು ತೋತಾಪುರಿ ಶೂಟಿಂಗ್ ಹಾಗೂ ಇತರೆಲ್ಲ ಕೆಲಸಗಳೂ ಮುಗಿದಿವೆ. ಕಬ್ಜ ಚಿತ್ರದ್ದು ಮಾತ್ರ ಘೋಷಣೆಯಾಗಿದೆ ಬಿಟ್ಟರೆ, ಬೇರೆ ಬೆಳವಣಿಗೆಗಳಾಗಿಲ್ಲ. ಈಗ ಸಪ್ತ ಸಾಗರದಾಚೆ ಎಲ್ಲೋ ಬರುತ್ತಿದೆ.

    ಈ ಚಿತ್ರದ ಎರಡು ಪಾರ್ಟ್‍ನ್ನು ಚಿತ್ರತಂಡವು ಪಾರ್ಟ್ 1, ಪಾರ್ಟ್ 2 ಎಂದು ಕರೆದಿಲ್ಲ. ಬದಲಾಗಿ, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ Siಜe ಂ ಮತ್ತು Siಜe ಃ ಎಂದು ಕರೆದಿದೆ. ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬದ ದಿನ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಹೇಮಂತ್ ಎಂ ರಾವ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ.

    ಇದೇ ಜೂನ್ 15ರಂದು ರಿಲೀಸ್ ಡೇಟ್ ಅನ್ನು ಚಿತ್ರತಂಡ ಘೋಷಣೆ ಮಾಡಲಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ Siಜe ಂ ಮತ್ತು Siಜe ಃ ವರ್ಷನ್ಗಳ ರಿಲೀಸ್ ದಿನಾಂಕವನ್ನು ಒಟ್ಟಿಗೆ ಘೋಷಣೆ ಮಾಡಲಾಗುತ್ತಿದೆ. ಒಂದೇ ಸಲಕ್ಕೆ ಪಾರ್ಟ್ 1 ಮತ್ತು ಪಾರ್ಟ್ 2ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತಿರುವುದು ಬಹುಶಃ ಇದೇ ಮೊದಲು ಇರಬೇಕು. ಇಂತಹ ಪ್ರಯೋಗವನ್ನು ರಕ್ತಚರಿತ್ರ ಚಿತ್ರದಲ್ಲಿ ರಾಮ್ ಗೋಪಾಲ್ ವರ್ಮಾ ಮಾಡಿದ್ದರು, ರಿಲೀಸ್ ಮಾಡಿದ್ದರೂ ಕೂಡಾ. ಆ ಹಾದಿಗೆ ಸೇರುತ್ತಿದೆ ಸಪ್ತಸಾಗರದಾಚೆ ಎಲ್ಲೋ..

    ಇನ್ನು, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ಕಾಣಿಸಿಕೊಂಡಿದ್ದಾರೆ.

  • ಸಪ್ತಸಾಗರದಾಚೆ ಎಲ್ಲೋ.. ಚಿತ್ರವನ್ನು ಹೊಗಳಿದ ಉದಯನಿಧಿ ಸ್ಟಾಲಿನ್

    ಸಪ್ತಸಾಗರದಾಚೆ ಎಲ್ಲೋ.. ಚಿತ್ರವನ್ನು ಹೊಗಳಿದ ಉದಯನಿಧಿ ಸ್ಟಾಲಿನ್

    ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್ನ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಸೂಪರ್ ಆಗಿದೆ. ಪ್ರೀತಿ ಹೇಗೆ ನಿಧಾನವಾಗಿ ಆವರಿಸಿಕೊಳ್ಳುತ್ತದೆಯೋ.. ಹಾಗೆಯೇ ಈ ಸಿನಿಮಾ ಎಂದಿದ್ದರು ರಕ್ಷಿತ್ ಶೆಟ್ಟಿ. ಹಾಗೆಯೇ ರನ್ ಆಗುತ್ತಿದೆ ಸಪ್ತಸಾಗರದಾಚೆ ಎಲ್ಲೋ..

    ಕನ್ನಡದ ಚಿತ್ರರಂಗದ ಗಣ್ಯರು ಕೂಡ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ತಮಿಳು ನಟ, ಸಚಿವ ಉದಯನಿಧಿ ಸ್ಟಾಲಿನ್ ಅವರು ಕೂಡ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿ, ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಬ್ರದರ್, ನಿಮ್ಮ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತುಂಬ ಇಷ್ಟ ಆಯ್ತು. ಅದ್ಭುತವಾದ ಫಿಲ್ಮ್ ಮೇಕಿಂಗ್ ಹೊಂದಿದೆ. ನಿಮ್ಮ ಇಡೀ ತಂಡಕ್ಕೆ ನನ್ನ ಕಡೆಯಿಂದ ಶುಭಾಶಯಗಳು. ನಾನು ಸೈಡ್ ಬಿ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಮನಸಾರೆ ಹೊಗಳಿದ್ದಾರೆ.

    ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಹೊರರಾಜ್ಯಗಳಲ್ಲೂ ಕೂಡ ಕನ್ನಡ ವರ್ಷನ್ ಅನ್ನೇ ರಿಲೀಸ್ ಮಾಡಲಾಗಿದೆ. ತಮಿಳಿಗೆ ಡಬ್ಬಿಂಗ್ ಮಾಡಿಲ್ಲ. ಉದಯನಿಧಿ ಸ್ಟಾಲಿನ್ ಕೂಡಾ ಸಿನಿಮಾzವನ್ನು ಕನ್ನಡದಲ್ಲಿಯೇ ನೋಡಿರಬೇಕು.

    ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಜೋಡಿ ಹಿಟ್ ಆಗಿದ್ದು,  ರಮೇಶ್ ಇಂದಿರಾ, ಅವಿನಾಶ್, ಯಮುನಾ ಶ್ರೀನಿಧಿ, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.

    ಉದಯನಿಧಿ ಸ್ಟಾಲಿನ್ ಯಾರು ಎಂದರೆ, ಸನಾತನ ಧರ್ಮ ಅರ್ಥಾತ್ ಹಿಂದೂ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾಗೆ ಹೋಲಿಸಿ ವಿವಾದ ಸೃಷ್ಟಿಸಿರುವ ರಾಜಕಾರಣಿ. ಹೀಗಾಗಿಯೇ ಉದಯನಿಧಿ ಸ್ಟಾಲಿನ್ ಹೊಗಳಿಕೆಯೂ ಸುದ್ದಿಯಾಗಿದೆ. ರಕ್ಷಿತ್ ಶೆಟ್ಟಿ ಉದಯನಿಧಿ ಸ್ಟಾಲಿನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  • ಸಪ್ತಸಾಗರದಾಚೆ ಎಲ್ಲೋ.. ಹೊಸ ಸಾಹಸ..ಹೊಸ ಪ್ರಯೋಗ.. ಹೊಸ ಆತ್ಮವಿಶ್ವಾಸ

    ಸಪ್ತಸಾಗರದಾಚೆ ಎಲ್ಲೋ.. ಹೊಸ ಸಾಹಸ..ಹೊಸ ಪ್ರಯೋಗ.. ಹೊಸ ಆತ್ಮವಿಶ್ವಾಸ

    ಸಪ್ತಸಾಗರದಾಚೆ ಎಲ್ಲೋ.. ಚಿತ್ರ ಎರಡು ಭಾಗಗಳಾಗಿ ತೆರೆಗೆ ಬರುತ್ತಿದೆ. ರಕ್ಷಿತ್ ಶೆಟ್ಟಿ-ಹೇಮಂತ್ ರಾವ್ ಕಾಂಬಿನೇಷನ್ನಿನ ಸಿನಿಮಾ ಎಂಬ ಕಾರಣಕ್ಕೇ ಬಹಳಷ್ಟು ಕುತೂಹಲ ಹುಟ್ಟಿಸಿದ್ದ ಸಿನಿಮಾ ಇದು. ಈ ಚಿತ್ರದ ಬಿಡುಗಡೆ ದಿನಾಂಕ ಸ್ಪೆಷಲ್ ಏಕೆಂದರೆ, ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ.

    ಮೊದಲ ಭಾಗ ಸೈಡ್ ಎ ಎಂದು ರಿಲೀಸ್ ಆಗುತ್ತಿದೆ.. ಸೆಪ್ಟೆಂಬರ್ 01ಕ್ಕೆ.

    ಎರಡನೆ ಭಾಗ ಸೈಡ್ ಬಿ ಎಂದು ರಿಲೀಸ್ ಆಗುತ್ತಿದೆ..  ಅಕ್ಟೋಬರ್ 20ಕ್ಕೆ..

    ಇದನ್ನೇ ಹೇಳಿದ್ದು, ಹೊಸ ಸಾಹಸ..ಹೊಸ ಪ್ರಯೋಗ.. ಹೊಸ ಆತ್ಮವಿಶ್ವಾಸ ಎಂದು.

    ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿದ್ದರೆ, ಚೈತ್ರಾ ಆಚಾರ್ ಕೂಡಾ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ಶರತ್ ಲೋಹಿತಾಶ್ವ.. ಹೀಗೆ ಘಟಾನುಘಟಿಗಳೆಲ್ಲ ನಟಿಸಿದ್ದಾರೆ.

    ಇದು ಸುಮಾರು  12 ವರ್ಷಗಳ ಹಿಂದೆ ಸಿದ್ಧ ಮಾಡಿಟ್ಟುಕೊಂಡಿದ್ದ ಕಥೆ. ಈಗ ಸಮಯ ಕೂಡಿ ಬಂದಿದೆ. ಮನುವಿನ ಬದುಕಿನ ಮೊಲದ ಭಾಗ ಹಾಗೂ ಎರಡನೆಯ ಭಾಗವನ್ನು ತೆರೆಯ ಮೇಲೆ ತೋರಿಸುತ್ತಿದ್ದೇವೆ ಎಂದು ಕಾನ್ಫಿಡೆಂಟ್ ಆಗಿ ಮಾತನಾಡ್ತಾರೆ ಹೇಮಂತ್ ರಾವ್. ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.

    ಸಿನಿಮಾಗಳನ್ನು ಎರಡು ಭಾಗಗಳಾಗಿ ತರುವುದು ಇತ್ತೀಚೆಗೆ ಹೊಸದಲ್ಲ. ಬಾಹುಬಲಿ ಮತ್ತು ಕೆಜಿಎಫ್ ಚಿತ್ರಗಳ  ಸಕ್ಸಸ್`ನಿಂದ ಶುರುವಾದ ಟ್ರೆಂಡ್ ಇದು. ಇದಾದ ಮೇಲೆ ಪುಷ್ಪ, ಕಬ್ಜ, ಹೆಡ್`ಬುಷ್, ತೋತಾಪುರಿ, ಅವತಾರ ಪುರುಷ.. ಹೀಗೆ. ಇದೀಗ ತೆರೆಗೆ ಬರುತ್ತಿರುವ ಕಾಂತಾರ ಇದಕ್ಕೆ ಹೊಸ ಸೇರ್ಪಡೆ. ಆದರೆ, ಎರಡೂ ಚಿತ್ರಗಳನ್ನು ಎರಡೂ ಭಾಗಗಳನ್ನೂ ಒಟ್ಟಿಗೇ 50 ದಿನಗಳ ಗ್ಯಾಪಿನಲ್ಲಿ ರಿಲೀಸ್ ಮಾಡುವುದು ಚಿತ್ರತಂಡದ ಆತ್ಮವಿಶ್ವಾಸವನ್ನು ತೋರಿಸುತ್ತಿದೆ.

    ಈ ರೀತಿಯ ಪ್ರಯೋಗವನ್ನು ಈ ಮೊದಲು ರಾಮ್ ಗೋಪಾಲ್ ವರ್ಮ ಮಾಡಿದ್ದರು. ರಕ್ತಚರಿತ್ರ ಸಿನಿಮಾವನ್ನು ಸೀಕ್ವೆಲ್ಲುಗಳಾಗಿ ಕೆಲವೇ ತಿಂಗಳುಗಳ ಅಂತರದಲ್ಲಿ ರಿಲೀಸ್ ಮಾಡಿದ್ದರು. ಆದರೆ, ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಸೀಕ್ವೆಲ್`ನ್ನು ಕೂಡಾ ಕೇವಲ 50 ದಿನಗಳ ಅಂತರದಲ್ಲಿ ರಿಲೀಸ್ ಮಾಡುತ್ತಿರುವುದು ಹೊಸ ಪ್ರಯೋಗವೇ ಸರಿ.

  • ಸಪ್ತಸಾಗರದಾಚೆ ಸೈಡ್ ಬಿ ಎಲ್ಲೋ ರಿಲೀಸ್ ಒಂದು ವಾರ ಮುಂದಕ್ಕೆ..!

    ಸಪ್ತಸಾಗರದಾಚೆ ಸೈಡ್ ಬಿ ಎಲ್ಲೋ ರಿಲೀಸ್ ಒಂದು ವಾರ ಮುಂದಕ್ಕೆ..!

    ಹೇಮಂತ್ ರಾವ್  ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಚಿತ್ರ ಇದೀಗ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭರ್ಜರಿ ಸಕ್ಸಸ್ ಕಂಡಿದೆ. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟನೆ, ಕೆಮಿಸ್ಟ್ರಿ ಎಲ್ಲವೂ ಕ್ಲಿಕ್ ಆಗಿದೆ. ಇದೇ ಚಿತ್ರದ ಸೈಡ್ ಬಿ ಚಿತ್ರವನ್ನೂ ಸೈಡ್ ಎ ಘೋಷಣೆ ದಿನವೇ ಅನೌನ್ಸ್ ಮಾಡಲಾಗಿತ್ತು.

    ಇತ್ತ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರ ಅಕ್ಟೋಬರ್ 20ಕ್ಕೆ ತೆರೆಗೆ ಬರಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ರಕ್ಷಿತ್ ಶೆಟ್ಟಿ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದಾರೆ.

    ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಗೊಂದಲ ಇತ್ತು. 2ನೇ ಭಾಗ ಥಿಯೇಟರ್ಗೆ ಬಂದಮೇಲೆ ಮೊದಲ ಎರಡು ಭಾಗ ಓಟಿಟಿಗೆ ಬರುತ್ತಾ ಎನ್ನುವ ನಿರೀಕ್ಷೆ ಇತ್ತು. ಆದರೆ ದಿಢೀರನೆ ಮೊದಲ ಭಾಗ ಸ್ಟ್ರೀಮಿಂಗ್ ಆರಂಭವಾಗಿದೆ. ಸೈಡ್- ಃ ರಿಲೀಸ್ ಒಂದು ವಾರ ತಡವಾಗುವುದಕ್ಕೂ ಒಂದು ಕಾರಣ ಇದೆ. ತೆಲುಗಿನಲ್ಲಿ ಇತ್ತೀಚೆಗೆ ಸಿನಿಮಾ ಸಪ್ತಸಾಗರಾಲು ದಾಟಿ ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಅದರ 2ನೇ ಭಾಗ ಅಕ್ಟೋಬರ್ 27ಕ್ಕೆ ತೆರೆಗೆ ತರಲು ಪ್ಲ್ಯಾನ್ ಆಗಿತ್ತು. ಹಾಗಾಗಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ರಿಲೀಸ್ ಮಾಡುವ ನಿರ್ಧಾರಕ್ಕೆ ರಕ್ಷಿತ್ ಶೆಟ್ಟಿ ಬಂದಿದ್ದಾರೆ.

  • ಸಪ್ತಸಾಗರದಾಚೆಯೆಲ್ಲೋ.. ಚಿತ್ರೀಕರಣ ಮುಗೀತ್..

    ಸಪ್ತಸಾಗರದಾಚೆಯೆಲ್ಲೋ.. ಚಿತ್ರೀಕರಣ ಮುಗೀತ್..

    ಬರೋಬ್ಬರಿ 137 ದಿನ. ಎರಡು ಲುಕ್. ಒಂದರಲ್ಲಿ ಸ್ಲಿಮ್ಮು.. ಮತ್ತೊಂದರಲ್ಲಿ ಡುಮ್ಮು.. ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರೋ ರಕ್ಷಿತ್ ಶೆಟ್ಟಿ. ಡೈರೆಕ್ಟರ್ ಹೇಮಂತ್ ರಾವ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಜೋಡಿ ಸಪ್ತಸಾಗರದಾಚೆಯೆಲ್ಲೋ ಚಿತ್ರದಲ್ಲಿ  ಮತ್ತೊಮ್ಮೆ ಜೊತೆಯಾಗಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಇದ್ದಾರೆ. ಇದೀಗ ಚಿತ್ರ ಚಿತ್ರೀಕರಣ ಪೂರೈಸಿದೆ.

    ಕವಲು ದಾರಿ ಚಿತ್ರದ ನಂತರ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕೈಗೆತ್ತಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ಗೆ ಒಂದಷ್ಟು ದಿನ ವರ್ಕ್ಶಾಪ್ ನಡೆಸಿ ನಂತರ ಚಿತ್ರೀಕರಣ ಆರಂಭಿಸಿದ್ದರು. ಚಿತ್ರದಲ್ಲಿ 2 ಭಿನ್ನ ಶೇಡ್ಗಳಿರೋ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದಾರೆ.  137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿ, ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತನ್ನ ಪಾತ್ರಕ್ಕಾಗಿ ರಕ್ಷಿತ್, 15 ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಕಸರತ್ತು ಮಾಡಿದ್ದಾರೆ. ಚಿತ್ರದಲ್ಲಿ ನಾಯಕನ 25 ಹಾಗೂ 45ರ ವಯೋಮಾನದ ಕುರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಅರ್ಧ ಸಿನಿಮಾ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಮಿಂಚಿದ್ದಾರೆ. ಹಾಗೆಯೇ ಗಡ್ಡ ಬಿಟ್ಟು ರಗಡ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.

    777 ಚಾರ್ಲಿ ಸಿನಿಮಾದ ಸೂಪರ್ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ಗೆ ಎದುರು ನೋಡ್ತಿದ್ದಾರೆ.

  • ಸಂಭ್ರಮದಲ್ಲಿಯೇ ಮತ್ತೊಂದು ಸಂಭ್ರಮಕ್ಕೆ ತಯಾರಾಗಿದ್ದಾರೆ ರಕ್ಷಿತ್ ಶೆಟ್ಟಿ

    ಸಂಭ್ರಮದಲ್ಲಿಯೇ ಮತ್ತೊಂದು ಸಂಭ್ರಮಕ್ಕೆ ತಯಾರಾಗಿದ್ದಾರೆ ರಕ್ಷಿತ್ ಶೆಟ್ಟಿ

    ರಕ್ಷಿತ್ ಶೆಟ್ಟಿ ಸಖತ್ ಖುಷಿಯಾಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ರಿಲೀಸ್`ಗೆ ಕೌಂಟ್ ಡೌನ್ ಶುರುವಾಗಿದೆ. ಸೆಪ್ಟೆಂಬರ್ 1ರಂದು ಸಪ್ತಸಾಗರದಾಚೆ ಎಲ್ಲೋ ರಿಲೀಸ್. ಸಖತ್ ಖುಷಿಯಾಗುವುದಕ್ಕೆ ಕಾರಣ ಇತ್ತೀಚೆಗೆ ತಾನೇ ನ್ಯಾಷನಲ್ ಅವಾರ್ಡ್ ಸಿಕ್ಕ ಖುಷಿ. ಒಂದು ಖುಷಿಯ ನಡುವೆಯೇ ಇನ್ನೊಂದು ಹೆರಿಗೆ ಸಂಭ್ರಮ. ಅದೂ ಡಬಲ್ ಹೆರಿಗೆ. ಏಕೆಂದರೆ ಸಪ್ತಸಾಗರದಾಚೆ ಎಲ್ಲೋ ಎರಡು ಭಾಗಗಳಲ್ಲಿ ಬರುತ್ತಿದ್ದು, ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಸೆಪ್ಟೆಂಬರ್ 1ರಂದು ರಿಲೀಸ್ ಆಗ್ತಾ ಇದೆ. ಸೈಡ್ ಬಿ ಚಿತ್ರಕ್ಕೂ ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್ 20ಕ್ಕೆ ಬರುತ್ತಿದೆ. ಎಕ್ಸಾಟ್ಲೀ 50 ದಿನದ ಗ್ಯಾಪ್.

    ಇದರಲ್ಲಿ  ಇನ್ನೊಂದು ಥ್ರಿಲ್ ಕೊಡೋ ಮ್ಯಾಟರ್ ಕೂಡಾ ಇದೆ. ಚಿತ್ರದಲ್ಲಿ 12 ಹಾಡುಗಳಿವೆಯಂತೆ. ಪ್ರೇಮಲೋಕದಂತೆ. 'ಸಪ್ತಸಾಗರದಾಚೆ ಎಲ್ಲೋ' ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರೋದ್ರಿಂದ ಹಾಡುಗಳು ಮೇಜರ್ ಹೈಲೈಟ್ ಆಗಬೇಕಿದೆ. ಹೀಗಾಗಿಯೇ ಪಾರ್ಟ್ 1 - ಪಾರ್ಟ್ 2 ಎರಡನ್ನೂ ಸೇರಿಸಿ 12 ಹಾಡುಗಳನ್ನು ಪ್ಲಾನ್ ಮಾಡಲಾಗಿದೆ. ಪಾರ್ಟ್ 1 ರಿಲೀಸ್ಗೆ ಮೊದಲು ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಒಟ್ಟಿನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಒಂದು ಮ್ಯೂಸಿಕಲ್ ಜರ್ನಿಯಾಗಿ ಜನರನ್ನು ಸೆಳೆಯಲಿದೆ  ಅನೋದು ಚಿತ್ರತಂಡದವರ ಕಾನ್ಫಿಡೆನ್ಸ್.

    ರಕ್ಷಿತ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್ ಹೀರೋಯಿನ್ ಆಗಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿಯನ್ನು ಕತ್ತೆ ಎಂದು ಕರೆಯುವ ಸುಂದರಿ ಅವರೇ. ಅಲ್ಲದೆ ಚಿತ್ರದ ಡೈರೆಕ್ಟರ್ ಹೇಮಂತ್ ರಾವ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಜೊತೆಯಾಗಿರುವ ಸಿನಿಮಾ ಇದು. ನಿರೀಕ್ಷೆ ಡಬಲ್ ಆಗಿಯೇ ಇರಲಿದೆ.

  • ಹಾಲಿ ಮಾಜಿ ಪ್ರೇಮಿಗಳಿಗೆ ಇಷ್ಟವಾದ ಸಪ್ತಸಾಗರದಾಚೆ ಎಲ್ಲೋ : ಕಲೆಕ್ಷನ್ ಎಷ್ಟಾಯ್ತು..?

    ಹಾಲಿ ಮಾಜಿ ಪ್ರೇಮಿಗಳಿಗೆ ಇಷ್ಟವಾದ ಸಪ್ತಸಾಗರದಾಚೆ ಎಲ್ಲೋ : ಕಲೆಕ್ಷನ್ ಎಷ್ಟಾಯ್ತು..?

    ಸಪ್ತಸಾಗರದಾಚೆ ಎಲ್ಲೋ.. ಅಪ್ಪಟ ಲವ್ ಸ್ಟೋರಿ. ಕತ್ತೆ ಹಾಗೂ ಪುಟ್ಟಿಯ ಪ್ರೇಮಕಥೆ. ಈ ಪ್ರೇಮಕಥೆಗೆ ಪ್ರೇಕ್ಷಕರು ಹಾರೈಸಿದ್ದಾರೆ. ಹೃದಯವನ್ನು ಚೂರು ಚೂರು ಮಾಡುವ ಲವ್ ಸ್ಟೋರಿ ನೋಡಿ ಪ್ರೇಕ್ಷಕರು ಕಣ್ಣೀರಿಟಿದ್ದಾರೆ. ಭಾವುಕರಾಗಿದ್ದಾರೆ. ಪ್ರೇಕ್ಷಕರ ಕಣ್ಣೀರಿನ ಫಲ ಬಾಕ್ಸಾಫೀಸ್`ನಲ್ಲಿ ಆಗಿದೆ. ಹೃದಯಗಳು ಹೆಚ್ಚು ಹೆಚ್ಚು ಕಣ್ಣೀರಿಟ್ಟಂತೆ ಬಾಕ್ಸಾಫೀಸ್ ಕಲೆಕ್ಷನ್ ಹೆಚ್ಚುತ್ತಿರುವುದು ಸಪ್ತಸಾಗರದಾಚೆ ಎಲ್ಲೋ ಚಿತ್ರದ ವಿಶೇಷ.

    ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೋಡಿಯ ಪ್ರೇಮಕಾವ್ಯವನ್ನು ಸೃಷ್ಟಿಸಿದ್ದ ಹೇಮಂತ್ ರಾವ್ ಹೇಳಿದಂತೆಯೇ ಆಗಿದೆ. ಚಿತ್ರದ ಬಿಡುಗಡೆಗೂ ಮೊದಲೇ ಇದು ಸ್ಲೋ ಆಗಿ ಹೃದಯ ತಟ್ಟುವ ಕಥೆ ಎಂದಿದ್ದರು ಹೇಮಂತ್ ರಾವ್. ಅವರು ಹೇಳಿದ್ದಂತೆಯೇ ಆಗಿದೆ.

    'ಸಪ್ತ ಸಾಗರದಾಚೆ ಎಲ್ಲೋ' ಪಕ್ಕಾ ಲವ್ ಸ್ಟೋರಿಯಾಗಿದ್ದರೂ, ಇದೊಂದು ಭಾವನಾತ್ಮಕ ಜರ್ನಿ ಎಂದು ಸಿನಿಮಾ ನೋಡಿದ ಪ್ರೇಕ್ಷಕರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಕ್ಲಾಸ್ ಸಿನಿಮಾ. ಹೀಗಾಗಿ ಬಾಕ್ಸಾಫೀಸ್ ಕಲೆಕ್ಷನ್ ನಿಧಾನವಾಗಿದ್ದರೂ ಲಾಂಗ್ ರನ್ ಇರುತ್ತೆ.

    ಚಿತ್ರಕ್ಕೆ ಮೊದಲ ದಿನ ಆಗಿದ್ದ ಕಲೆಕ್ಷನ್ ಸುಮಾರು 3 ಕೋಟಿ ರೂ. ಎರಡನೇ ದಿನ ಹೆಚ್ಚಾಯ್ತು. 4ರಿಂದ ನಾಲ್ಕೂವರೆ ಕೋಟಿಗೆ ಏರಿತು. 3ನೇ ದಿನ ಅಂದ್ರೆ ಭಾನುವಾರದ ಕಲೆಕ್ಷನ್ 2ನೇ ದಿನದ ಕಲೆಕ್ಷನ್‍ನ್ನೂ ಮೀರಿಸಿ ಐದೂವರೆಯಿಂದ 6 ಕೋಟಿಯಷ್ಟು ಗಳಿಕೆ ಕಂಡಿದೆ. ಅದರಲ್ಲೂ ಕ್ಲಾಸ್ ವರ್ಗದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿರುವುದು ವಿಶೇಷ. ಒಟ್ಟಿನಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೊದಲ ಮೂರು ದಿನದ ಕಲೆಕ್ಷನ್ ಸುಮಾರು 12-14 ಕೋಟಿಯ ಬಾರ್ಡರ್ ದಾಟಿದೆ.

    ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಯೂ ಇದೆ. ಆದರೆ ಲವ್ ಮಾಡಿದವರು, ಬ್ರೇಕಪ್ ಆದವರು, ಹುಡುಗಿ ಅಥವಾ ಹುಡುಗಿ ಮೋಸ ಮಾಡಿ ಹೃದಯದಿಂದ ಕಣ್ಣೀರಿಟ್ಟವರು, ಎಲ್ಲ ಸವಾಲುಗಳ ಮಧ್ಯೆ ಪ್ರೀತಿಯನ್ನು ಗೆಲ್ಲಿಸಿಕೊಂಡಿರುವವರು ಹಾಗೂ ನೂರಾರು ಸಮಸ್ಯೆಗಳ ಮಧ್ಯೆ ಪ್ರೀತಿಯನ್ನು ಉಳಿಸಿಕೊಳ್ಳೋಕೆ ಸರ್ಕಸ್ ಮಾಡುತ್ತಿರುವ ಹಾಲಿ ಹಾಗೂ ಮಾಜಿ ಪ್ರೇಮಿಗಳಿಗೆ ಚಿತ್ರ ಇಷ್ಟವಾಗುತ್ತಿದೆ.