` veda, - chitraloka.com | Kannada Movie News, Reviews | Image

veda,

 • ಗಿಲಕ್ಕು ಶಿವ ಗಿಲಕ್ಕೂ.. ಹಾಡಿನಲ್ಲಿ ಅದೇನೋ ಕಿಕ್ಕು..

  ಗಿಲಕ್ಕು ಶಿವ ಗಿಲಕ್ಕೂ.. ಹಾಡಿನಲ್ಲಿ ಅದೇನೋ ಕಿಕ್ಕು..

  ಯಾವನೋ ಇವ್ನು ಗಿಲಕ್ಕೂ..

  ಎಲ್ಲಿಂದ ಬಂದ ಗಿಲಕ್ಕೂ..

  ಏಳೇಳು ಬೆಟ್ಟ ದಾಟ್ಕೊಂಡು ಬಂದ

  ಗಿಲಕ್ಕೂ ಶಿವ ಗಿಲಕ್ಕೂ..

  ಹಾಡು ಕುಣಿಯುವಂತಿದೆ. ಅರ್ಜುನ್ ಜನ್ಯ ಮ್ಯೂಸಿಕ್ಕು, ನಾಗೇಂದ್ರ ಪ್ರಸಾದ್ ಲಿರಿಕ್ಸು, ಮಂಗ್ಲಿ ವಾಯ್ಸ್ ಮ್ಯಾಜಿಕ್ಕುಕ.. ಎಲ್ಲವೂ ಒಟ್ಟೊಟ್ಟಿಗೇ ಮ್ಯಾಚ್ ಆಗಿ ಕುಣಿಯುವಂತೆ ಮಾಡಿದೆ. ಶಿವಣ್ಣ ಅವರ 125ನೇ ಸಿನಿಮಾ ವೇದ ಚಿತ್ರದ ಮೊದಲ ಹಾಡಿದು. ಇತ್ತೀಚೆಗಷ್ಟೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಚಿತ್ರದ ವೆಪನ್ಸ್ ಟೀಸರ್ ಬಿಟ್ಟಿದ್ದ ವೇದ, ಈಗ ಮೊದಲ ಹಾಡಿನಲ್ಲೇ ಮೋಡಿ ಮಾಡಿದೆ. ವಿಲನ್‍ಗಳನ್ನು ಶಿವಣ್ಣ ಚೆಂಡಾಡುವ ಹಾಡಿನ ಬ್ಯಾಕ್‍ಗ್ರೌಂಡ್‍ನಲ್ಲಿ ಬರುತ್ತದೆ. ಶಿವಣ್ಣನ ಒಂದೊಂದು ಹೊಡೆತಕ್ಕೂ ವಿಲನ್‍ಗಳು ಹಾರಿ ಬೀಳುತ್ತಿದ್ದರೆ, ಬ್ಯಾಕ್‍ಗ್ರೌಂಡ್‍ನಲ್ಲಿ.. ಗಿಲಕ್ಕೂ ಶಿವ ಗಿಲಕ್ಕೂ..

  ಗೀತಾ ಶಿವರಾಜ್‍ಕುಮಾರ್ ನಿರ್ಮಾಪಕಿಯಾಗಿರುವ ಮೊದಲ ಸಿನಿಮಾ ವೇದ. ಶಿವಣ್ಣ ಎದುರು ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ವಿನಯ್ ಬಿದ್ದಪ್ಪ, ಭರತ್ ಸಾಗರ್, ಪ್ರಸನ್ನ, ಸಂಜೀವ್, ಕುರಿ ಪ್ರತಾಪ್, ಲಾಸ್ಯ ನಾಗರಾಜ್.. ಹೀಗೆ ಕಲಾವಿದರ ದಂಡೇ ಇದೆ.

 • ಗೀತಾ ಶಿವ ರಾಜಕುಮಾರ್ ಹುಟ್ಟುಹಬ್ಬಕ್ಕೊಂದು ಶುಭ ವೇದ ಸುದ್ದಿ

  ಗೀತಾ ಶಿವ ರಾಜಕುಮಾರ್ ಹುಟ್ಟುಹಬ್ಬಕ್ಕೊಂದು ಶುಭ ವೇದ ಸುದ್ದಿ

  ಝೀ ಸ್ಟುಡಿಯೋದವರು ಒಂದು ಟ್ವೀಟ್ ಮಾಡಿದ್ರು. ಡೋಂಟ್ ಫಿಯರ್.. ಡೋಂಟ್ ಫರ್ಗಿವ್. ಹೆದರಬೇಡ.. ಕ್ಷಮಿಸಬೇಡ.. ಅನ್ನೋದಷ್ಟೇ ಅದರ ಅರ್ಥ. ಗುರುವಾರ ರಾತ್ರಿ 8ಕ್ಕೆ ಬ್ರೇಕ್ ಮಾಡಲಿದ್ದೇವೆ ಎಂದಿದ್ದೇ ತಡ.. ಗಾಂಧಿನಗರ ಮತ್ತು ಪ್ರೇಕ್ಷಕರು ಚುರುಕಾಗಿ ಹೋದರು. ಕೆಲವೇ ಗಂಟೆಗಳಲ್ಲಿ ಸುದ್ದಿ ಬ್ರೇಕ್ ಆಗಿತ್ತು.

  ಗೀತಾ ಸ್ಟುಡಿಯೋಸ್ ಮೂಲಕ ಶಿವಣ್ಣ ಮೊದಲ ಬಾರಿಗೆ ನಿರ್ಮಾಪಕರಾಗಿರೋ ಸಿನಿಮಾ. ಶಿವಣ್ಣ ಅಭಿನಯದ 125ನೇ ಸಿನಿಮಾದ ಬ್ರೇಕಿಂಗ್ ನ್ಯೂಸ್ ಇದು. ವೇದ ಈಗ ಝೀ ಸ್ಟುಡಿಯೋಸ್ ಮಡಿಲಿಗೆ ಹೋಗಿದೆ.

  ಎ. ಹರ್ಷ ನಿರ್ದೇಶನದ ಚಿತ್ರವಿದು. ಶಿವಣ್ಣ ಜೊತೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ನಿರ್ದೇಶನ ಮಾಡಿ ಮೂರೂ ಚಿತ್ರಗಳಲ್ಲಿ ಗೆದ್ದಿರುವ ಹರ್ಷ ಈಗನ ಅವರ 4ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆಯೊಂದನ್ನು ಹೆಣೆದಿದ್ದಾರೆ ಹರ್ಷ. ಭರ್ಜರಿ ಸ್ಟುಡಿಯೋ ಸೆಟ್ ಹಾಕಿರುವ ಹರ್ಷ, ಚಿತ್ರದ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಎಲ್ಲವೂ ಸಸ್ಪೆನ್ಸ್. ಈಗಲೂ ಅಷ್ಟೆ, ಇಡೀ ಚಿತ್ರತಂಡ ಸೀಕ್ರೆಟ್ ಆಗಿಟ್ಟುಕೊಂಡಿದ್ದರೆ ಹೇಗೋ ಒಂದು ಸೀಕ್ರೆಟ್ ಹೊರಬಿದ್ದಿದೆ. ಅಧಿಕೃತವಾಗೋದು ರಾತ್ರಿ 8 ಗಂಟೆಗೆ. ಅಂದಹಾಗೆ ಇವತ್ತು ಗೀತಾ ಶಿವರಾಜಕುಮಾರ್ ಹುಟ್ಟುಹಬ್ಬ.

 • ಬ್ಲಾಕ್ ಬಸ್ಟರ್ ಲಿಸ್ಟಿಗೆ ವೇದ

  ಬ್ಲಾಕ್ ಬಸ್ಟರ್ ಲಿಸ್ಟಿಗೆ ವೇದ

  ವರ್ಷದ ಕೊನೆಯಲ್ಲಿ ಚಿತ್ರರಂಗಕ್ಕೆ ಒಂದಲ್ಲ ಒಂದು ಸಂಭ್ರಮ ಸಿಕ್ಕೇ ಸಿಗುತ್ತದೆ. ಈ ವರ್ಷದ ಕೊನೆಯಲ್ಲಿ ಸೆನ್ಸೇಷನಲ್ ಥ್ರಿಲ್ಲಿಂಗ್ ಸಂಭ್ರಮ ನೀಡಿರುವುದು ಶಿವರಾಜ ಕುಮಾರ್. 2022ರಲ್ಲಿ ಸ್ಯಾಂಡಲ್‍ವುಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಸುದ್ದಿ ಮಾಡಿತ್ತು. ವರ್ಷದ ಕೊನೆಯಲ್ಲಿ ಬಂದ ವೇದ ಚಿತ್ರ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ ವೇದ ಸತತ 2ನೇ ವಾರವೂ ಎಲ್ಲೆಡೆ ಹೌಸ್‍ಫುಲ್.

  ಗೀತಾ ಪಿಕ್ಚರ್ಸ್ ನ ಮೊದಲ ಸಿನಿಮಾಗೆ ಹರ್ಷ ಡೈರೆಕ್ಟರ್. ಶಿವಣ್ಣ ಈ ಚಿತ್ರದಲ್ಲಿ ಹೀರೋ ಆಗಿದ್ದರೂ ಆದಿತಿ ಸಾಗರ್ ಹಾಗೂ ಗಾನವಿ ಲಕ್ಷ್ಮಣ್ ಅವರಿಗೆ ನಟಿಸುವುದಕ್ಕೆ ಹೆಚ್ಚು ಅವಕಾಶವಿದೆ. ಹೆಣ್ಣು ಮಕ್ಕಳ ಮೂಲಕವೇ ಸೇಡು ತೀರಿಸಿಕೊಳ್ಳೋ ವೇದ ಚಿತ್ರದ ಮೂಲಕ ಒಂದು ಅದ್ಭುತ ಸಂದೇಶವನ್ನೂ ಜನರಿಗೆ ಕೊಟ್ಟಿದ್ದಾರೆ ಹರ್ಷ ಮತ್ತು ಶಿವಣ್ಣ. ಹೀಗಾಗಿಯೇ ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ.

  ಜೊತೆಗೆ ಗಿಲಕ್ಕೋ ಶಿವ ಗಿಲ್ಲಕ್ಕೋ, ಜುಂಜಪ್ಪನ ಹಾಡು, ಪುಷ್ಪ ಪುಷ್ಪ ಹಾಡುಗಳು ಸೃಷ್ಟಿಸಿರೋ ಕ್ರೇಜ್ ಬೇರೆಯದೇ ಲೆವೆಲ್ಲಿನಲ್ಲಿದೆ. ಈ ಎಲ್ಲವೂ ಒಟ್ಟಾಗಿ ಸೇರಿ ಚಿತ್ರವನ್ನು ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿಸಿವೆ.

 • ವೇದ : ಶಿವಣ್ಣ ನಂ.125

  ವೇದ : ಶಿವಣ್ಣ ನಂ.125

  ಸೆಂಚುರಿ ಸ್ಟಾರ್ ಶಿವಣ್ಣ 125ನೇ ಸಿನಿಮಾ ಅನೌನ್ಸ್ ಆಗಿದೆ. ಅದೂ ಶಿವರಾತ್ರಿ ದಿನದಂದು. ಹೊಸ ಚಿತ್ರದ ಹೆಸರು ವೇದ. ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ನಲ್ಲಿ ದಿ ಬ್ರೂಟಲ್ 1960's ಎಂದು ಬರೆಯಲಾಗಿದೆ. ಕಾರಣವಿಷ್ಟೆ, ಇದು 1960ರ ಬ್ಯಾಕ್ ಡ್ರಾಪ್ನಲ್ಲಿ ನಡೆಯೋ ರಿಯಲೆಸ್ಟಿಕ್ ಕಥೆಯಂತೆ.

  ಶಿವಣ್ಣ ಗೆಟಪ್ ಅಂತೂ ಈ ಹಿಂದಿನ ಯಾವ ಚಿತ್ರಗಳಲ್ಲೂ ಇರದೇ ಇರುವ ರೀತಿಯಲ್ಲಿದೆ. ನಿರ್ದೇಶಕರಾಗಿರೋದು ಎ.ಹರ್ಷ. ಶಿವರಾಜ್ ಕುಮಾರ್ ಅವರಿಗೆ ಭಜರಂಗಿ, ವಜ್ರಕಾಯದಂತಾ ಹಿಟ್ ಚಿತ್ರಗಳನ್ನು ಕೊಟ್ಟ ಹರ್ಷ, ಸದ್ಯಕ್ಕೆ ಭಜರಂಗಿ 2 ಮೂಲಕ ಸದ್ದು ಮಾಡುತ್ತಿದ್ದಾರೆ.

  ಇದು ಶಿವಣ್ಣ ಬ್ಯಾನರ್ನ 125ನೇ ಸಿನಿಮಾ ಎನ್ನುವುದಷ್ಟೇ ಅಲ್ಲ, ಈ ಚಿತ್ರ ಅವರ ಬ್ಯಾನರ್ನ ಮೊದಲ ಸಿನಿಮಾ. ಗೀತಾ ಆರ್ಟ್ಸ್ ಹೆಸರಿನಲ್ಲಿ ಶಿವಣ್ಣ ಹೋಂ ಬ್ಯಾನರ್ ಶುರುವಾಗಿದ್ದು, ನಿರ್ಮಾಪಕಿಯಾಗಿರುವುದು ಗೀತಾ ಶಿವರಾಜ್ ಕುಮಾರ್.

  ಐ ಆಮ್ ಬ್ಲೆಸ್ಡ್ ಎಂದು ಖುಷಿ ಹಂಚಿಕೊಂಡಿದ್ಧಾರೆ ಹರ್ಷ. ಶಿವಣ್ಣ ವೃತ್ತಿ ಜೀವನದ ಮೈಲಿಗಲ್ಲು  ಎನಿಸಿಕೊಳ್ಳೋ 125ನೇ ಸಿನಿಮಾ ಜೊತೆಗೆ ಅವರ ಬ್ಯಾನರ್ನ ಮೊದಲ ಸಿನಿಮಾಗೆ ನಾನು ಡೈರೆಕ್ಟರ್ ಎನ್ನುವುದೇ ನನ್ನ ಪುಣ್ಯ. ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಅಣ್ಣಾವ್ರ  ಫ್ಯಾಮಿಲಿ ಬ್ಯಾನರ್ನಲ್ಲಿ ಫಸ್ಟ್ ಸಿನಿಮಾ ಎಂದರೆ ಯಾರಿಗೆ ಖುಷಿಯಾಗಲ್ಲ ಹೇಳಿ ಎಂದಿದ್ದಾರೆ ಹರ್ಷ.

  ಅಂದಹಾಗೆ ಇದು ಫ್ಯಾಂಟಸಿ ಸಿನಿಮಾ ಅಲ್ಲ. ರಿಯಲೆಸ್ಟಿಕ್ ಕಥೆ ಇರುವ ಸಿನಿಮಾ. ವಯಸ್ಸಾಗಿರುವ ಉದ್ದನೆಯ ಗಡ್ಡದ ಲುಕ್ನಲ್ಲಿ ಶಿವಣ್ಣ ಬ್ಯೂಟಿಫುಲ್. ಸಿನಿಮಾದಲ್ಲಿ ಶಿವಣ್ಣ ಕ್ಯಾರೆಕ್ಟರ್ ಹೆಸರು ವೇದ. ರಿಯಲಿಸ್ಟಿಕ್ ಮಾದರಿಯಲ್ಲೇ ನಡೆಯುವ ಕಾಲ್ಪನಿಕ ಕಥೆ ಎಂದಿದ್ದಾರೆ ಹರ್ಷ. ಸದ್ಯಕ್ಕೆ ಚಿತ್ರದ ಅಪ್ಡೇಟ್ ಇಷ್ಟೆ, ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

 • ವೇದ ತಂಡಕ್ಕೆ ಅದ್ಧೂರಿ ಸ್ವಾಗತ.. ಅಭಿಮಾನದ ಮೆರವಣಿಗೆ

  ವೇದ ತಂಡಕ್ಕೆ ಅದ್ಧೂರಿ ಸ್ವಾಗತ.. ಅಭಿಮಾನದ ಮೆರವಣಿಗೆ

  ವೇದ ಚಿತ್ರ ವರ್ಷದ ಆರಂಭದಲ್ಲೇ ಚಿತ್ರರಂಗಕ್ಕೆ ಗುಡ್ ನ್ಯೂಸ್ ಕೊಟ್ಟಿದೆ. ಅದ್ಧೂರಿ..ಭರ್ಜರಿ ವಿಜಯ. ಗೀತಾ ಪಿಕ್ಚರ್ಸ್ ಮೊದಲ ಚಿತ್ರದಲ್ಲೇ ಗೆದ್ದು ತೋರಿಸಿದೆ. ಶಿವಣ್ಣ 125ನೇ ಸಿನಿಮಾ. ಹೀಗಾಗಿ ಮೈಲುಗಲ್ಲಿನ ಚಿತ್ರಕ್ಕೆ ಸಿಗುತ್ತಿರುವ ಸ್ವಾಗತವೂ ಅಂತಹುದೇ. ಹಳೆ ಮೈಸೂರು ಭಾಗದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನಗಳನ್ನೆಲ್ಲ ಒಂದು ಸುತ್ತು ಮುಗಿಸಿ ಉತ್ತರ ಕನಾಟಕಕ್ಕೆ ಹೊರಟಿರುವ ಚಿತ್ರತಂಡ ಈಗಾಗಲೇ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿಗಳಲ್ಲಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದೆ.

  ಹರಿಹರದಲ್ಲಿ ಶಿವಣ್ಣಗೆ ಆನೆಯೊಂದರ ಮೂಲಕ ಹಾರ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ರಾಣೇಬೆನ್ನೂರಿನಲ್ಲಿ ಯುವ ರಾಜಕುಮಾರ್ ಕಟೌಟ್ ಹಾಕಿಸಿ ಶಿವಣ್ಣನನ್ನು ಸ್ವಾಗತಿಸಿದ್ದು ನೋಡಿ ಶಿವಣ್ಣ ಭಾವುಕರಾದರು. ಹಾವೇರಿಯಲ್ಲಿ ಕೈಗೆ ಪೆಟ್ಟು ಮಾಡಿಕೊಂಡು ಶಿವಣ್ಣನನ್ನು ನೋಡುವುದಕ್ಕೆ ಕಾತರಿಸುತ್ತಿದ್ದ ಹುಡುಗನನ್ನು ನೋಡಿ, ಅಭಿಮಾನಿಗಳ ಮೂಲಕ ಆ ಹುಡುಗನನ್ನು ಕರೆಸಿಕೊಂಡು ಗಾಡಿ ಮೇಲೆ ಹತ್ತಿಸಿಕೊಂಡು ಸೆಲ್ಫಿ ಕೊಟ್ಟರು. ಯಾತ್ರೆಯುದ್ದಕ್ಕೂ ಅಭಿಮಾನಿಗಳಿಗೆ ಎಂದಿನಂತೆ ಇಷ್ಟವಾಗಿದ್ದು ಶಿವಣ್ಣ ಸರಳತೆ. ಅಭಿಮಾನಿಗಳು ಎಲ್ಲಿ ಕೇಳಿದರೆ ಅಲ್ಲಿ ಡ್ಯಾನ್ಸ್ ಮಾಡುವ ಶಿವಣ್ಣಗೆ ಅಭಿಮಾನಿಗಳು ಅಭಿಮಾನದ ಹುಚ್ಚು ಹೊಳೆ ಹರಿಸಿದರು.

  ಇಂದು ಹುಬ್ಬಳ್ಳಿ, ಬೆಳಗಾವಿಯಲ್ಲಿ ವೇದ ಯಾತ್ರೆ ನಡೆಯಲಿದೆ. ಶಿವಣ್ಣ ಜೊತೆ ಹರ್ಷ, ಗೀತಾ ಶಿವ ರಾಜ್ ಕುಮಾರ್, ಆದಿತಿ ಸಾಗರ್, ಗಾನವಿ ಸೇರಿದಂತೆ ಬಹುತೇಕ ಚಿತ್ರತಂಡ ಜೊತೆಯಲ್ಲಿದೆ.

 • ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

  ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

  ವೇದ. ಗೀತಾ ನಿರ್ಮಾಪಕರಾಗಿರುವ ಮೊದಲ ಹಾಗೂ ಶಿವಣ್ಣ ಅವರ 125ನೇ ಸಿನಿಮಾ. ಸಿನಿಮಾ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೆ ರಾಜ್ ಅವರ ಕುಟುಂಬವೇ ಬಂದಿತ್ತು. ಅನಂತನಾಗ್, ಅನಿಲ್ ಕುಂಬ್ಳೆ, ದುನಿಯಾ ವಿಜಯ್ ಕೂಡಾ ಇದ್ದರು. ಬ್ಯಾನರ್ ಲಾಂಚ್ ಮಾಡಿದವರೆಲ್ಲ ಗೀತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

  ಅನಂತ್ ನಾಗ್ : ರಾಜ್ ಯಾರಿಗೂ ಏನೂ ಹೇಳ್ತಾ ಇರಲಿಲ್ಲ. ತಮ್ಮ ನಡವಳಿಕೆ, ಅಭಿನಯದಲ್ಲೇ ಎಲ್ಲವನ್ನೂ ಕಲಿಸಿಕೊಟ್ಟರು. ಅವರೊಂದಿಗೆ ಒಂದು ಸೃಜನಶೀಲ ತಂಡವೇ ಇತ್ತು. ಸಮಾಜಕ್ಕೆ ಧೈರ್ಯ ಹೇಳೋ ಸಿನಿಮಾ ಮಾಡ್ತಿದ್ರು. ಶಿವರಾಜಕುಮಾರ್ ಕೂಡಾ ಆ ಹಾದಿಯಲ್ಲೆ ಸಾಗಲಿ.

  ಅನಿಲ್ ಕುಂಬ್ಳೆ : ಶಿವರಾಜಕುಮಾರ್ ಅವರನ್ನ ಒಳ್ಳೆ ಟೆಸ್ಟ್ ಪ್ಲೇಯರ್ ಅಂತಾ ಹೇಳಬಹುದು. ಶಿವಣ್ಣ, ಅಪ್ಪು ನಮ್ಮನ್ನೆಲ್ಲ ಮಾತನಾಡಿಸೋಕೆ ಸ್ಟೇಡಿಯಂಗೆ ಬರ್ತಾ ಇದ್ರು. ಒಂದ್ಸಲ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆಗಿದ್ದಾಗ, ನಾವು ಅಣ್ಣಾವ್ರ ಮನೆಗೆ ಹೋಗಿ ಎರಡು ಗಂಟೆ ಮಾತನಾಡಿಕೊಂಡು ಬಂದಿದ್ವಿ. ಈಗ ಗೀತಾ ಸಿನಿಮಾ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

  ಶಿವರಾಜಕುಮಾರ್ : ನನ್ನ ಸಕ್ಸಸ್‍ಗೆ ಕಾರಣ ನನ್ನ ಕುಟುಂಬ.

  ಗೀತಾ ಶಿವರಾಜಕುಮಾರ್ : ಅವರು.. ಅವರ ಹಿಂದಿನ ಸಕ್ಸಸ್ ಶಕ್ತಿ ನಾನು ಅಂತಾರೆ. ನಾನಲ್ಲ. ಅದು ಅಪ್ಪಾಜಿ. ಅಮ್ಮ, ರಾಘು, ಅಪ್ಪು, ಅವರ ತಂಗಿಯರು. ಅಭಿಮಾನಿ ದೇವರುಗಳು. ಈಗ ವೇದ ಸಿನಿಮಾ ಬರ್ತಿದೆ. ಅದು ನಿಮ್ಮದು.

  ಕಾರ್ಯಕ್ರಮದ ಕೊನೆಯಲ್ಲಿ ಇಡೀ ಕುಟುಂಬವನ್ನು ವೇದಿಕೆಗೆ ಕರೆದು ತಂದರು ಶಿವಣ್ಣ. ಅಶ್ವಿನಿ ಪುನೀತ್ ಮತ್ತು ಅವರ ಮಕ್ಕಳನ್ನು ತಮ್ಮ ಅಕ್ಕಪಕ್ಕ ಕೂರಿಸಿಕೊಂಡು ಫ್ಯಾಮಿಲಿ ಫೋಟೋ ತೆಗೆಸಿಕೊಂಡ ಕ್ಷಣ ಭಾವುಕರನ್ನಾಗಿಸಿದ್ದು ನಿಜ.

 • ವೇದ ರಿಲೀಸ್ಗೆ ಮುಹೂರ್ತ ಫಿಕ್ಸ್

  ವೇದ ರಿಲೀಸ್ಗೆ ಮುಹೂರ್ತ ಫಿಕ್ಸ್

  ಸೆಂಚುರಿ ಸ್ಟಾರ್ ಶಿವಣ್ಣ ನಟನೆಯ 125ನೇ ಸಿನಿಮಾ ವೇದ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಕೊನೆಗೆ ಕ್ರಿಸ್ ಮಸ್ ಹಬ್ಬದ ಸಂಭ್ರಮಕ್ಕೆ ವೇದ ತೆರೆ ಕಾಣುತ್ತಿದೆ. ಇದು ಹರ್ಷ-ಶಿವಣ್ಣ ಕಾಂಬಿನೇಷನ್ನಿನ 4ನೇ ಸಿನಿಮಾ.  ಭಜರಂಗಿ, ಭಜರಂಗಿ 2, ವಜ್ರಕಾಯ ನಂತರ ಜೋಡಿ ಮತ್ತೊಮ್ಮೆ ಒಂದಾಗಿದೆ.

  ಗೀತಾ ಶಿವರಾಜಕುಮಾರ್ ನಿರ್ಮಾಣದ ಮೊದಲ ಚಿತ್ರವೂ ವೇದ. ಗಾನವಿ ನಾಯಕಿಯಾಗಿದ್ದು ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಶಿವಣ್ಣನ ಮಗಳಾಗಿ ನಟಿಸಿದ್ದಾರೆ. 1960ರ ಕಾಲದ ಕಥಾ ಹಂದರ ಚಿತ್ರದಲ್ಲಿದ್ದು, ಉಮಾಶ್ರೀ, ಕುರಿ ಪ್ರತಾಪ್ ಮೊದಲಾದವರು ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತವಿದೆ.

 • ವೇದ ಸಕ್ಸಸ್ ಯಾತ್ರೆ

  ವೇದ ಸಕ್ಸಸ್ ಯಾತ್ರೆ

  ವೇದ.. ಚಿತ್ರ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದೆ.  ಗಿಲಕ್ಕೋ ಶಿವ ಗಿಲಕ್ಕೋ.. ಜುಂಜಪ್ಪನ ಹಾಡು.. ಪುಷ್ಪ ಪುಷ್ಪ.. ಹಾಡುಗಳು ಈಗ ಎಲ್ಲಿ ನೋಡಿದ್ರೂ ಟ್ರೆಂಡ್. ಹರ್ಷ ಕಮರ್ಷಿಯಲ್ ಮಸಾಲಾ ಚಿತ್ರದಲ್ಲಿ ಮತ್ತೊಮ್ಮೆ ಗೆದ್ದಿದ್ದರೆ, ಗೀತಾ ಶಿವರಾಜಕುಮಾರ್ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡಿದ್ದಾರೆ. ಶಿವಣ್ಣ ಅವರದ್ದೀಗ ಎಲ್ಲೆಲ್ಲೂ ಸಕ್ಸಸ್ ಯಾತ್ರೆ.

  ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಯಶಸ್ಸಿನ ಪಯಣ ಮುಂದುವರೆಸಿರೋ ಶಿವಣ್ಣ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಧೆಡೆ ಥಿಯೇಟರುಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ಹಾದಿಯಲ್ಲಿ ಶಿವಣ್ಣ ಜೊತೆಯಲ್ಲಿ ಗಾನವಿ ಲಕ್ಷ್ಮಣ್, ಮಗಳು ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ಡೈರೆಕ್ಟರ್ ಹರ್ಷ ಸೇರಿದಂತೆ ಚಿತ್ರತಂಡದವರೆಲ್ಲ ಒಟ್ಟಿಗೇ ಹೋಗುತ್ತಿದ್ದಾರೆ. ತಮಗಿಂತ ಮೊದಲು ಗಾನವಿ, ಆದಿತಿಯನ್ನು ಮಾತನಾಡಲು ಪ್ರೋತ್ಸಾಹಿಸುತ್ತಿರುವ ಶಿವಣ್ಣ, ಮತ್ತೊಮ್ಮೆ ತಮ್ಮ ಚಿತ್ರದ ಸಹನಟರಿಗೆ ಹೆಚ್ಚು ಸ್ಕೋಪ್ ಸಿಗುವಂತೆ ನೋಡಿಕೊಳ್ಳುತ್ತಿರುವುದು ವಿಶೇಷ.ಇತ್ತೀಚಿನ ಕೆಲವು ವಿವಾದಗಳಿಂದ ಬೇಸತ್ತಿರುವ ಅಭಿಮಾನಿಗಳಿಗೆ ವೇದದ ಸಕ್ಸಸ್ ಕೊಡುತ್ತಿರುವ ಖುಷಿಯೇ ಬೇರೆ.

  ವೇದ ಚಿತ್ರತಂಡ ಇಂದು ಚಾಮರಾಜನಗರ, ಟಿ.ನರಸೀಪುರ, ಗುಂಡ್ಲುಪೇಟೆ ಹಾಗೂ ಹುಣಸೂರುಗಳಲ್ಲಿ ಚಿತ್ರಮಂದಿರಗಳಿಗೆ ಭೇಟಿ ಕೊಡಲಿದೆ. ನಾಳೆ ಕೊಳ್ಳೆಗಾಲ, ಮಳವಳ್ಳಿ, ಮದ್ದೂರು, ಮಂಡ್ಯ, ರಾಮನಗರಗಳಲ್ಲಿ ಚಿತ್ರಮಂದಿರಗಳನ್ನು ಭೇಟಿ ಮಾಡಲಿದೆ.

  ತಮಿಳುನಾಡಿನಿಂದಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆಯಾದ ಎಲ್ಲ ಕಡೆ ಉತ್ತಮ ಕಲೆಕ್ಷನ್ಸ್ ಮಾಡುತ್ತಿದೆ.