` pooja gandhi, - chitraloka.com | Kannada Movie News, Reviews | Image

pooja gandhi,

 • ಪೂಜಾ ಗಾಂಧಿ COME BACK SOON

  pooja gandhi to make a come back with action film

  ಮಳೆ ಹುಡುಗಿ ಪೂಜಾ ಗಾಂಧಿ ಸುದೀರ್ಘ ವಿರಾಮದ ನಂತರ ಮತ್ತೆ ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ. ದಂಡುಪಾಳ್ಯ3 ನಂತರ ಬೇರಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದೆ ಸುಮಾರು ಒಂದು ವರ್ಷ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಪೂಜಾ ಗಾಂಧಿ, ಪ್ರತಿ ಹಂಸರಾಗಿ ಬರುತ್ತಿದ್ದಾರೆ. ಹ್ಞಾಂ.. ಪ್ರತಿ ಹಂಸ ಅನ್ನೋದು ಪೂಜಾ ಗಾಂಧಿ ಅವರ ಹೊಸ ಸಿನಿಮಾದ ಹೆಸರು.

  ಕೆ.ಜನಾರ್ದನ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಕೆ.ವಿ.ಶಬರೀಶ್ ನಿರ್ಮಾಪಕರು. ಸಚಿನ್, ರಾಹುಲ್ ದೇವ್, ರವಿಕಾಳೆ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಮೂವಿಯಾಗಿದ್ದು, ಪೂಜಾ ಗಾಂಧಿ ಸಿಕ್ಕಾಪಟ್ಟೆ ಫೈಟ್ ಮಾಡಲಿದ್ದಾರಂತೆ.

 • ಪೂಜಾ ಗಾಂಧಿ ತಂದೆ ವಿರುದ್ಧ ಅರೆಸ್ಟ್ ವಾರೆಂಟ್

  pooja gandhi's father gets arrest warrant

  ಚಿತ್ರನಟಿ ಪೂಜಾಗಾಂಧಿ ಅವರ ತಂದೆ ಪವನ್ ಗಾಂಧಿ ಅವರಿಗೆ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿದೆ. ಪೂಜಾ ಅವರ ತಂದೆ ಪವನ್, ಕೆಲವು ತಿಂಗಳ ಹಿಂದೆ ಆದೀಶ್ವರ್ ಎಲೆಕ್ಟ್ರಾನಿಕ್ ಶೋರೂಂನಲ್ಲಿ ಸುಮಾರು 8 ಲಕ್ಷ ಮೌಲ್ಯದ ಉಡುಗೊರೆ ವಸ್ತುಗಳನ್ನು ಖರೀದಿ ಮಾಡಿದ್ದರು. ಅಷ್ಟೂ ಹಣಕ್ಕೆ ಚೆಕ್ ಕೊಟ್ಟಿದ್ದರು.

  ಆದರೆ, ಬ್ಯಾಂಕ್‍ಗೆ ಹಾಕಿದಾಗ, ಚೆಕ್ ಬೌನ್ಸ್ ಆಗಿತ್ತು. ಫೋನ್ ಮಾಡಿದಾಗ, ಪವನ್ ಫೋನ್ ತೆಗೆಯಲೇ ಇಲ್ಲ. ಅಪಾರ್ಟ್‍ಮೆಂಟ್‍ಗೆ ಹೋಗಿ ವಿಚಾರಿಸಿದರೆ, ಅವರು ಮನೆ ಖಾಲಿ ಮಾಡಿ ಆಗಲೇ 3 ತಿಂಗಳಾಗಿತ್ತಂತೆ. ಪೊಲೀಸರಿಗೆ ದೂರು ನೀಡಿ, ಪೊಲೀಸರು ಹೋದಾಗಲೂ ಪವನ್ ಸಿಕ್ಕಿಲ್ಲ. 

  ಹೀಗಾಗಿ ಈಗ ಪವನ್ ಅವರ ವಿರುದ್ಧ ನ್ಯಾಯಾಲಯವೇ ಬಂಧನ ವಾರೆಂಟ್ ಜಾರಿ ಮಾಡಿದೆ.

 • ಪೂಜಾ ಗಾಂಧಿ ಮತ್ತೆ ರಾಜಕೀಯಕ್ಕೆ

  pooja gandhi back to politics

  ಮಳೆ ಹುಡುಗಿ ಪೂಜಾ ಗಾಂಧಿ, ಮತ್ತೊಮ್ಮೆ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2013ರಲ್ಲಿ ರಾಜಕೀಯ ರಂಗಪ್ರವೇಶ ಮಾಡಿದ್ದ ಪೂಜಾಗಾಂಧಿ, ತಮ್ಮ ರಾಜಕೀಯ ಜೀವನ ಆರಂಭಿಸಿದ್ದೇ ಜೆಡಿಎಸ್‍ನಿಂದ. ಆದರೆ, ಅದಾದ ಕೆಲದಿನಗಳ ನಂತರ ಕೆಜೆಪಿ (ಯಡಿಯೂರಪ್ಪ ಪಕ್ಷ) ಸೇರಿದರು.ಅದಾದ ಸ್ವಲ್ಪವೇ ಸ್ವಲ್ಪ ದಿನಗಳಲ್ಲಿ ಬಿಎಸ್‍ಆರ್  (ಶ್ರೀರಾಮುಲು ಪಕ್ಷ) ಸೇರಿದರು. ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಿ 4ನೇ ಸ್ಥಾನ ಪಡೆದಿದ್ದರು ಪೂಜಾ ಗಾಂಧಿ.

  ಈಗ ಮತ್ತೆ ಜೆಡಿಎಸ್ ಸೇರುತ್ತಿದ್ದಾರೆ. 

 • ಪೂಜಾ ಗಾಂಧಿಯ ತಂಗಿ, ದೇಶಕ್ಕೇ ಹೆಮ್ಮೆ..!

  poja gandhi's sister suhani

  ಪೂಜಾ ಗಾಂಧಿ. ಕನ್ನಡಿಗರಿಗೆ ಮಳೆ ಹುಡುಗಿ. ನಟಿ, ನಿರ್ಮಾಪಕಿ. ಅವರ ತಂಗಿ ರಾಧಿಕಾ ಕೂಡಾ ಚಿತ್ರನಟಿ. ಆದರೆ, ಇವರಿಬ್ಬರನ್ನೂ ಮೀರಿಸಿರುವುದು ಇನ್ನೊಬ್ಬ ತಂಗಿ ಸುಹಾನಿ ಗಾಂಧಿ. ಅವರು ಇಡೀ ದೇಶಕ್ಕೇ ಹೆಮ್ಮೆ ತಂದಿದ್ದಾರೆ. ಪೂಜಾ ಗಾಂಧಿಯವರ ತಂಗಿ ಸುಹಾನಿ, ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್‍ಲಿಫ್ಟಿಂಗ್‍ನಲ್ಲಿ ಸ್ಟ್ರಾಂಗೆಸ್ಟ್ ವುಮೆನ್ ಇನ್ ಇಂಡಿಯಾ ಅಭಿದಾನ ಪಡೆದಿದ್ದಾರೆ. 3 ಚಿನ್ನದ ಪದಕ ಗೆದ್ದಿದ್ದಾರೆ.

  ನನ್ನ ತಂಗಿ ನನ್ನ ಹೆಮ್ಮೆ. ನಾವು ಸಿನಿಮಾ ಎನ್ನುತ್ತಿದ್ದರೆ, ಅವಳು ಆಟ, ಪವರ್‍ಲಿಫ್ಟಿಂಗ್ ಎನ್ನುತ್ತಿದ್ದಳು. ಅವಳ ಸಾಧನೆ ಖುಷಿ ಕೊಟ್ಟಿದೆ ಎಂದಿದ್ದಾರೆ ಪೂಜಾ ಗಾಂಧಿ.

 • ಮಳೆ ಹುಡುಗಿ ಮುಖದಲ್ಲೀಗ ಅದೃಷ್ಟ ಲಕ್ಷ್ಮಿಯ ಕಳೆ..!

  pooja gandhi gets her lucky mole

  ಮುಂಗಾರು ಮಳೆ, ಪೂಜಾ ಗಾಂಧಿ ಎಂಬ ಪಂಜಾಬಿ ಸುಂದರಿಯನ್ನು ಕನ್ನಡಿಗರ ಮನೆ ಹುಡುಗಿಯಾಗಿಸಿದ ಚಿತ್ರ. ಆದರೆ, ನೀವು ಸರಿಯಾಗಿ ಗಮನವಿಟ್ಟು ನೋಡಿದರೆ, ಒಂದು ವ್ಯತ್ಯಾಸ ಖಂಡಿತಾ ಗೊತ್ತಾಗುತ್ತೆ. ಮಳೆ ಸಿನಿಮಾದಲ್ಲಿ ಪೂಜಾ ಅವರ ಕೆನ್ನೆಯ ಮೇಲೊಂದು ಮಚ್ಚೆಯಿತ್ತು. ಅದಾದ ಮೇಲೆ ಅಂದರೆ ಮುಂಗಾರು ಮಳೆ ಚಿತ್ರದ ನಂತರ ಅದು ನಾಪತ್ತೆಯಾಗಿತ್ತು.

  ಈಗ ನೋಡಿದರೆ, ಪೂಜಾ ಮುಖದ ಮೇಲೆ ಮತ್ತೊಮ್ಮೆ ಅದೃಷ್ಟ ಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಪೂಜಾ ಅವರ ಮುಖದ ಇನ್ನೊಂದು ಭಾಗದಲ್ಲಿ ಮಚ್ಚೆ ಪ್ರತ್ಯಕ್ಷವಾಗಿದೆ. ಸ್ಸೋ.. ಪೂಜಾಗೆ ಮತ್ತೆ ಲಕ್ಕು ತಿರುಗಿತು ಎನ್ನುತ್ತಿದೆ ಗಾಂಧಿನಗರ.

  ಹಾಗೆ ಲಕ್ಕು ತಿರುಗಿರುವ ಹೊತ್ತಿನಲ್ಲೇ ಅವರ ಅಭಿನಯದ 3 ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

  Related Articles :-

  Pooja Gandhi Getting Back Her Lucky Mole - Exclusive

 • ಸಂಹಾರಿಣಿ ಪೂಜಾ ಗಾಂಧಿ

  pooja gandhi back in action mode

  ಮಳೆ ಹುಡುಗಿ ಪೂಜಾ ಗಾಂಧಿ, ರಗಡ್ ಪಾತ್ರಗಳಲ್ಲಿಯೂ ಮಿಂಚಿದ ಹೀರೋಯಿನ್. ಅವರೀಗ ಮಹಿಳಾ ಸಾಹಸ ಪ್ರಧಾನ ಚಿತ್ರ ಮಾಡಿದ್ದಾರೆ. ಹೌದು, ಶೂಟಿಂಗ್‍ನ್ನೇ ಮುಗಿಸಿದ್ದಾರೆ. ಕೈಯ್ಯಲ್ಲಿ ಪಿಸ್ತೂಲು, ಬಾಕು ಹಿಡಿದ ಪೂಜಾ ಗಾಂಧಿ ಲುಕ್ಕು ರೋಮಾಂಚನ ಹುಟ್ಟಿಸುವಂತಿದೆ. ಚಿತ್ರದ ಹೆಸರು ಸಂಹಾರಿಣಿ.

  ಕೆ.ಜವಾಹರ್ ನಿರ್ದೇಶನದ ಸಂಹಾರಿಣಿ ಸಿನಿಮಾಗೆ ಕೆ.ಶಬರೀಶ್ ನಿರ್ಮಾಪಕರು. ಥ್ರಿಲ್ಲರ್ ಕಥಾ ಹಂದರ ಇರುವ ಚಿತ್ರದಲ್ಲಿ ಬಾಲಿವುಡ್‍ನ ರಾಹುಲ್ ದೇವ್, ರವಿಕಾಳೆ, ಹ್ಯಾರಿ ಜೋಶ್ ಮೊದಲಾದವರೂ ನಟಿಸಿದ್ದಾರೆ. ಕಿಶೋರ್ ಪ್ರಧಾನ ಪಾತ್ರದಲ್ಲಿದ್ದಾರೆ. ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾಳೆ ಎನ್ನುವ ಥೀಮ್‍ನಲ್ಲಿಯೇ ಇಡೀ ಸಿನಿಮಾ ಮಾಡಲಾಗಿದೆಯಂತೆ.

 • ‘ಶೋ ಆಫ್’ ಸ್ಟೇಟ್ಮೆಂಟ್, ರಶ್ಮಿಕಾ ನಂತರ, ಈಗ ಪೂಜಾ ಗಾಂಧಿ ಸರದಿ

  show off statement now by pooja gandhi

  ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ, ಯಶ್ ಅವರನ್ನು ಶೋ ಆಫ್ ಎಂದು ಹೇಳಿ ವಿವಾದವಾಗಿ, ಅವರು ಕ್ಷಮೆ ಕೇಳಿ, ಆಮೇಲೆ ವಿವಾದ ತಣ್ಣಗಾಗಿತ್ತು. ಈಗ ಅಂಥದ್ದೇ ಸ್ಟೇಟ್ಮೆಂಟ್ ಕೊಟ್ಟಿರೋದು ನಟಿ ಪೂಜಾಗಾಂಧಿ.

  ಕಲೡೞ ಕನ್ನಡ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ ಪೂಜಾ ಗಾಂಧಿಗೆ ಇದೇ ಪ್ರಶ್ನೆ ಎದುರಾಗಿದೆ. ಪೂಜಾ ಗಾಂಧಿ ಹಿಂದು ಮುಂದು ನೋಡದೆ ಥಟ್ಟನೆ ಸಂಜನಾ ಅಂತಾ ಉತ್ತರಿಸಿಬಿಟ್ಟಿದ್ದಾರೆ. ಮೋಸ್ಟ್ ಲೀ ಪೂಜಾಗೆ ದಂಡುಪಾಳ್ಯ ಗಲಾಟೆ ನೆನಪಾಗಿರಬಹುದು. ಶೋನಲ್ಲಿ ಅದಷ್ಟೇ ಅಲ್ಲ, ಆಟಿಟ್ಯೂಡ್ ಯಾರಿಗಿದೆ ಅನ್ನೋ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟು ಎಸ್ಕೇಪ್ ಆಗಿದ್ದಾರೆ.

  ಚಿತ್ರರಂಗದಲ್ಲಿ ಆಟಿಟ್ಯೂಡ್ ಯಾರಿಗಿದೆ ಎಂಬ ಪ್ರಶ್ನೆಗೆ, ಉತ್ತರ ಕೊಡುವಾಗ ಗುಡ್ ಆಟಿಟ್ಯೂಡ್ ಎಂದು ಹೇಳಿ ಸುದೀಪ್ ಹೆಸರು ಹೇಳಿದ್ದಾರೆ. ಬೆಸ್ಟ್ ರೊಮ್ಯಾಂಟಿಕ್ ಕೂಡಾ ಸುದೀಪ್ ಅಂತೆ. ಪೂಜಾ ಪ್ರಕಾರ ಡೌನ್ ಟು ಅರ್ಥ್ ನಟ, ಶಿವರಾಜ್ ಕುಮಾರ್.

  Related Articles :-

  ಮಿ. ಶೋ ಆಫ್ ಎಂದಿದ್ದ ಕಿರಿಕ್ ರಶ್ಮಿಕಾಗೆ ಯಶ್ ಕೊಟ್ಟ ಉತ್ತರ

  ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ

Adi Lakshmi Purana Movie Gallery

Rightbanner02_butterfly_inside

Yaana Movie Gallery