` gaalipata 2, - chitraloka.com | Kannada Movie News, Reviews | Image

gaalipata 2,

 • 2ನೇ ಗಾಳಿಪಟಕ್ಕೆ ಸಂಯುಕ್ತಾ, ವೈಭವಿ..?

  2ನೇ ಗಾಳಿಪಟಕ್ಕೆ ಸಂಯುಕ್ತಾ, ವೈಭವಿ..?

  ಗಾಳಿಪಟ 2, ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ. ಇದು ಗಾಳಿಪಟ ಚಿತ್ರದ ಸೀಕ್ವೆಲ್ಲಾ..? ಭಟ್ಟರು ಹೇಳಿಲ್ಲ. ಗಾಳಿಪಟದಲ್ಲಿ ಇದ್ದ ಗಣೇಶ್ ಮತ್ತು ದಿಗಂತ್ ಇಲ್ಲೂ ಇದ್ದಾರೆ. ರಾಜೇಶ್ ಕೃಷ್ಣ ಬದಲಿಗೆ ಪವನ್ ಕುಮಾರ್ ಬಂದಿದ್ದಾರೆ. ಒಬ್ಬ ಹೀರೋಯಿನ್ ಶರ್ಮಿಳಾ ಮಾಂಡ್ರೆ ಅನ್ನೋದು ಕನ್‍ಫರ್ಮ್. ಆದರೆ.. ಉಳಿದ ಇಬ್ಬರಿಗೆ ಯಾರು..?

  ಯಾರಿರಬಹುದು ಅನ್ನೋ ಕುತೂಹಲಕ್ಕೆ ರೆಕ್ಕೆ ಪುಕ್ಕ ಬಂದಿದೆ. ಶರಣ್ ಜೊತೆ ರಾಜ್‍ವಿಷ್ಣು ಚಿತ್ರದಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ಹಾಗೂ ಸಂಯುಕ್ತಾ ಮೆನನ್ ನಟಿಸೋದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. ಸದ್ಯಕ್ಕೆ ಗಾಳಿಪಟ ಟೀಂ, ಕಝಕಿಸ್ತಾನದಲ್ಲಿದೆ.

 • 2ನೇ ವಾರಕ್ಕೆ ಲವ್ 360. 3ನೇ ವಾರಕ್ಕೆ ಗಾಳಿಪಟ 2 : ಮಧ್ಯೆ ಇನ್ನೊಂದು ಗುಡ್ ನ್ಯೂಸ್

  2ನೇ ವಾರಕ್ಕೆ ಲವ್ 360. 3ನೇ ವಾರಕ್ಕೆ ಗಾಳಿಪಟ 2 : ಮಧ್ಯೆ ಇನ್ನೊಂದು ಗುಡ್ ನ್ಯೂಸ್

  ಯೋಗರಾಜ್ ಭಟ್-ಗಣೇಶ್-ವೈಭವಿ-ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ-ದಿಗಂತ್-ನಿಶ್ವಿಕಾ ನಾಯ್ಡು-ಸಂಯುಕ್ತಾ ಮೆನನ್-ಅನಂತನಾಗ್-ರಮೇಶ್ ರೆಡ್ಡಿ-ಜಯಂತ ಕಾಯ್ಕಿಣಿ-ಅರ್ಜುನ್ ಜನ್ಯಾ ಜೋಡಿಯ ಚಿತ್ರ ಗಾಳಿಪಟ 2. ಈ ವರ್ಷದ ಇನ್ನೊಂದು ಹಿಟ್ ಸಿನಿಮಾ. ಈಗಾಗಲೇ ನಿರ್ಮಾಪಕರನ್ನು ಪಾಸ್ ಮಾಡಿರುವ ಚಿತ್ರ ಇಂದು 3ನೇ ವಾರಕ್ಕೆ ಕಾಲಿಟ್ಟಿದೆ.

  ರಿಲೀಸ್ ಆದ ಮಾರನೇ ದಿನದಿಂದಲೇ ಥಿಯೇಟರ್ ಮತ್ತು ಸ್ಕ್ರೀನ್ ಹೆಚ್ಚಿಸಿಕೊಂಡಿದ್ದ ಚಿತ್ರ ಗಾಳಿಪಟ 2. ವಿದೇಶಗಳಲ್ಲಿಯೂ ವ್ಹಾವ್ ಎನ್ನುವ ಶೋ ಕಂಡಿದ್ದ ಗಾಳಿಪಟ 2 ರಾಜ್ಯಾದ್ಯಂತ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಯಶಸ್ಸಿನ ಗಾಳಿಪಟ ಹಾರಿಸುತ್ತಿದೆ.

  ಕಳೆದ ವಾರ ರಿಲೀಸ್ ಆಗಿದ್ದ ಲವ್ 360 ಗೆಲುವಿನ ಹಾದಿಗೆ ಬಂದಿದೆ. ಮೊದಲ 2 ದಿನ ಚಿತ್ರಕ್ಕೆ ಭರ್ಜರಿ ಎನ್ನುವಂತ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರೇ ಚಿತ್ರದ ಪ್ರಚಾರದ ರಾಯಭಾರಿಗಳಾಗಿದ್ದು ವಿಶೇಷ. ಶಶಾಂಕ್ ಮತ್ತೊಮ್ಮೆ ಹೊಸಬರೊಂದಿಗೆ ಗೆದ್ದಿದ್ದಾರೆ. ಪ್ರವೀಣ್-ರಚನಾ ಇಂದರ್ ಎಂಬ ಹೊಸ ಪ್ರತಿಭೆಗಳ ಪ್ರೀತಿಗೆ.. ಜಗವೇ ನೀನು ಗೆಳತಿಯೇ ಹಾಡಿಗೆ ಕನ್ನಡಿಗರು ಶರಣಾಗಿದ್ದಾರೆ.

  ಅತ್ತ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ವಿಕ್ರಾಂತ್ ರೋಣ ಒಟಿಟಿಗೆ ಬರುತ್ತಿದ್ದು ಸೆಪ್ಟೆಂಬರ್ 2ಕ್ಕೆ ಮನೆ ಮನೆಯಲ್ಲೂ ಸಿಗಲಿದೆ. ಇದರ ಮಧ್ಯೆ ಇನ್ನೂ ಒಂದು ಗುಡ್ ನ್ಯೂಸ್ ಇದೆ.

  ಗುರುವಾರ ರಿಲೀಸ್ ಆಗಿರುವ ಪುರಿ ಜಗನ್ನಾಥ್-ವಿಜಯ್ ದೇವರಕೊಂಡ ಜೋಡಿಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರಕ್ಕೆ ಪ್ರೇಕ್ಷಕರ ಅಡ್ಡಡ್ಡ ತಲೆ ಆಡಿಸಿಬಿಟ್ಟಿದ್ದಾನೆ. ಹೀಗಾಗಿ ಸಕ್ಸಸ್ ಗ್ಯಾರಂಟಿ ಎನ್ನುವಂತಿದ್ದ ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಲೈಗರ್ ಚಿತ್ರಕ್ಕೆ ಸಿಕ್ಕ ಮಿಕ್ಸೆಡ್ ರೆಸ್ಪಾನ್ಸ್ ಈಗ ಸಖತ್ತಾಗಿವೆ ಅನ್ನಿಸಿಕೊಂಡಿರೋ ಲವ್ 360, ಗಾಳಿಪಟ 2 ಚಿತ್ರಕ್ಕೆ ವರವಾಗಲಿದೆ. ಜೊತೆಗೆ ಧೀರನ್ ರಾಮಕುಮಾರ್ ಆರಂಗೇಟಂ ಸಿನಿಮಾ ಶಿವ 143 ಚಿತ್ರಕ್ಕೆ ಕೂಡಾ ಇದು ಗುಡ್ ನ್ಯೂಸ್.

 • ಕೆಜಿಎಫ್ 2 ಆದ ಮೇಲೆ ಗಾಳಿಪಟ 2 ರಿಲೀಸ್..?

  ಕೆಜಿಎಫ್ 2 ಆದ ಮೇಲೆ ಗಾಳಿಪಟ 2 ರಿಲೀಸ್..?

  ಗಾಳಿಪಟದ ನಂತರ ಯೋಗರಾಜ್ ಭಟ್, ಗಣೇಶ್, ದಿಗಂತ್ ಪುನರ್ ಮಿಲನವಾಗಿರೋ ಸಿನಿಮಾ ಗಾಳಿಪಟ 2. ಈ ಗಾಳಿಪಟದಲ್ಲಿ ಇವರ ಜೊತೆ ಲೂಸಿಯಾ ಪವನ್ ಕುಮಾರ್ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ನಾಯಕಿಯರಾಗಿರೋ ಚಿತ್ರ ಕೊರೊನಾದಿಂದಾಗಿ ತಡವಾಗುತ್ತಿದೆ. ಈಗ ಅಲ್ಲಿಂದ ಗುಡ್ ನ್ಯೂಸ್ ಹೊರಬಂದಿದ್ದು, ಏಪ್ರಿಲ್ ಕೊನೆಯಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದ್ದು, ಅದು ಮುಗಿದ ಮೇಲೆಯೇ ಚಿತ್ರದ ಬಿಡುಗಡೆಗೆ ಯೋಜಿಸಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಭಟ್ಟರ ಈ ಚಿತ್ರದಲ್ಲಿ ಅನಂತನಾಗ್ ಕನ್ನಡ ಮೇಷ್ಟರು. ಅರ್ಜುನ್ ಜನ್ಯಾ ಸಂಗೀತವಿದೆ.

 • ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರ ಉಡುಗೊರೆ : 'ನಾನಾಡದ ಮಾತೆಲ್ಲವ ಕದ್ದಾಲಿಸು..

  ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರ ಉಡುಗೊರೆ : 'ನಾನಾಡದ ಮಾತೆಲ್ಲವ ಕದ್ದಾಲಿಸು..

  ಮಿಂಚಾಗಿ ನೀನು ಬರಲು.. ಹಾಡು ನೆನಪಿದೆ ತಾನೇ. ಮರೆಯೋಕಾದರೂ ಹೇಗೆ ಸಾಧ್ಯ ಅಲ್ವಾ? ಆ ಹಾಡಿನ ಜೋಡಿ ಯೋಗರಾಜ್ ಭಟ್-ಜಯಂತ್ ಕಾಯ್ಕಿಣಿ-ಗೋಲ್ಡನ್ ಸ್ಟಾರ್ ಗಣೇಶ್-ಸೋನು ನಿಗಮ್. ಅವರೀಗ ಮತ್ತೆ ಒಂದಾಗಿದ್ದಾರೆ. ಹೊಸ ಹಾಡು ಬಿಟ್ಟಿದ್ದಾರೆ. 'ನಾನಾಡದ ಮಾತೆಲ್ಲವ ಕದ್ದಾಲಿಸು… ಅನ್ನೋ ಹಾಡು ಗಾಳಿಪಟ 2ನಲ್ಲಿದೆ. ಆ ಹಾಡು ಗಣೇಶ್ ಹುಟ್ಟುಹಬ್ಬಕ್ಕಾಗಿ ಗಾಳಿಪಟ 2 ತಂಡ ನೀಡುತ್ತಿರುವ ಕಾಣಿಕೆ.

  ನಮ್ಮ ಗಣಿ ಜುಲೈ 2ಕ್ಕೆ ಊರಿನಲ್ಲಿರೋದಿಲ್ಲ. ಇದು ಗಣೇಶ್ ಹುಟ್ಟುಹಬ್ಬಕ್ಕೆ ನಮ್ಮ ತಂಡದ ಉಡುಗೊರೆ ಎಂದ ಯೋಗರಾಜ್ ಭಟ್, ಹಾಡಿನ ಪದಪದದ ಅರ್ಥವನ್ನೂ ವಿವರಿಸಿ ಬರೆದಿರುವ ಜಯಂತ್ ಕಾಯ್ಕಿಣಿಯವರಿಗೆ ಧನ್ಯವಾದ ಅರ್ಪಿಸಿದರು. ಮಿಂಚಾಗಿ ಹಾಡಿನಂತೆಯೇ ಈ ಹಾಡು ಕೂಡಾ ಹಿಟ್ ಆಗಲಿದೆ ಎಂದರು ಭಟ್. ಈ ಹಾಡು ಕೇಳಿ ನಾನು ಮತ್ತೆ 15 ವರ್ಷ ಹಿಂದಕ್ಕೆ ಹೋದೆ. ಕುದುರೆಮುಖದಲ್ಲಿ ಸುಮಾರು 200 ಜನ ನೃತ್ಯಗಾರರೊಂದಿಗೆ ಹಾಡಿನ ಚಿತ್ರೀಕರಣವಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅದ್ಧೂರಿ ಸೆಟ್ ಹಾಕಿಸಿದ್ದರು ಎಂದು ನಿರ್ಮಾಪಕರನ್ನು ಮನಸಾರೆ ಹೊಗಳಿದರು ಯೋಗರಾಜ್ ಭಟ್. ಕಲಾ ನಿರ್ದೇಶಕ ಪಂಡಿತ್, ಡಾನ್ಸ್ ಮಾಸ್ಟರ್ ಧನು ಅವರನ್ನೂ ಮೆಚ್ಚಿಕೊಂಡರು.

  ಹಾಡು ತುಂಬಾ ಚೆನ್ನಾಗಿದೆ. ನನ್ನ ಮಗಳು ಸದಾ ಕೇಳುವ ಹಾಡಿದು. ಹಾಡಿಗೆ ಬಳಸಿದ ಪ್ರತಿ ವಸ್ತುಗಳನ್ನೂ ಮನೆಗೆ ತರಿಸಿ ಇಟ್ಟುಕೊಂಡಿದ್ದೇನೆ ಎಂದವರು ರಮೇಶ್ ರೆಡ್ಡಿ.

 • ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 

  ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 

  ಗಾಳಿಪಟ 2 ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ. ಎಲ್ಲೆಡೆ ಚಿತ್ರಮಂದಿರಗಳು ಹೌಸ್‍ಫುಲ್ ಆಗಿವೆ. ಕೆಲವು ಥಿಯೇಟರುಗಳಲ್ಲಂತೂ ಪ್ರೇಕ್ಷಕರು ಗೊಂದಲದಿಂದಾಗಿ ಗಲಾಟೆಯೂ ಆಗಿವೆ. ಮೊದಲ ದಿನವೇ ಭರ್ಜರಿ ಯಶಸ್ಸಿನ ಸುಳಿವು ಕೊಟ್ಟಿದ್ದಾರೆ ಭಟ್-ಗಣಿ ಜೋಡಿ. ಗಾಳಿಪಟ 2 ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡಿರುವ 4ನೇ ಸಿನಿಮಾ. ಈ ಹಿಂದಿನ ಎಲ್ಲ ಚಿತ್ರಗಳೂ ಸಕ್ಸಸ್ ಆಗಿರುವ ಹಿನ್ನೆಲೆಯಲ್ಲಿ ಗಾಳಿಪಟ 2 ಮೇಲೆ ಭರ್ಜರಿ ನಿರೀಕ್ಷೆಯೂ ಇತ್ತು.

  ಏಕೆಂದರೆ ಗಾಳಿಪಟ ಹೆಸರಿಗೇ ಅಂತದ್ದೊಂದು ಚರಿತ್ರೆ ಇದೆ. ಭಟ್-ಗಣೇಶ್ ಜೋಡಿಯ ಗಾಳಿಪಟ ಚಿತ್ರದ ಟೈಟಲ್ ಇಟ್ಟುಕೊಂಡ ಮೇಲೆ ಚಿತ್ರ ಯಾವುದೇ ಕಾರಣಕ್ಕೂ ಕಡಿಮೆ ಎನ್ನಿಸಬಾರದು ಅನ್ನೋದು ನನ್ನ ಆಸೆಯಾಗಿತ್ತು. ಅದರಂತೆಯೇ ಚಿತ್ರ ಚೆನ್ನಾಗಿ ಬಂದಿದೆ ಎಂದು ಖುಷಿ ಹಂಚಿಕೊಂಡಿರೋದು ರಮೇಶ್ ರೆಡ್ಡಿ. ಗಾಳಿಪಟ ಟೈಟಲ್`ಗೆ ಒಂದು ಘನತೆ ಇದೆ. ಅದಕ್ಕೆ ಅಪವಾದವಾಗದಂತೆ ಸಿನಿಮಾ ಮಾಡಿದ್ದೇವೆ ಎಂದಿರೋ ರಮೇಶ್ ರೆಡ್ಡಿ ಚಿತ್ರಕ್ಕೆ ದೇಶವಿದೇಸಗಳಲ್ಲಿ 800+ ಮತ್ತು ಕರ್ನಾಟಕವೊಂದರಲ್ಲೇ 225ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡಿದ್ದಾರೆ. ಗಾಳಿಪಟ ಅನ್ನೋದು ನನ್ನ ಪಾಲಿಗೆ ಸಿನಿಮಾ ಅಲ್ಲ. ಅದೊಂದು ಎಮೋಷನ್ ಎಂದಿದ್ದಾರೆ ಗಣೇಶ್.

 • ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ..

  ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ..

  ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆಯನ್ನೂ ಲೇವಡಿ ಮಾಡಿ ಹಾಡಿದ್ದ ಸಿನಿಮಾ ಗಾಳಿಪಟ 2. ಅಂತಾದ್ದೊಂದು ಚಿತ್ರದ ನಿರ್ಮಾಪಕ ಪಾಸ್ ಆಗಿದ್ದಾರೆ. ಗಾಳಿಪಟ 2 ಚಿತ್ರತಂಡ ಬುಧವಾರ ಸಕ್ಸಸ್ ಮೀಟ್ ಕರೆದಿತ್ತು. ಆದರೆ ನಿರ್ಮಾಪಕರಾದ ರಮೇಶ್ ರೆಡ್ಡಿ ಇದು ಸಕ್ಸಸ್ ಮೀಟ್ ಅಲ್ಲ, ಥ್ಯಾಂಕ್ಸ್ ಮೀಟ್. ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದರು ರಮೇಶ್ ರೆಡ್ಡಿ.

  ನಾನು ಚಿತ್ರದ ಕಥೆ ಕೇಳಿಲ್ಲ. ಅನಂತ್ ಸರ್ ಓಕೆ ಅಂದ್ರು. ಅಷ್ಟೆ. ಭಟ್ಟರ ಮೇಲೆ ನಂಬಿಕೆಯಿತ್ತು ಎಂದ ರಮೇಶ್ ರೆಡ್ಡಿ ವೀರೇಶ್ ಥಿಯೇಟರಲ್ಲಿ ರಿಲೀಸ್ ದಿನ ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ.. ಎಂದು ಕೂಗಿದ್ದರಂತೆ. ಗಾಳಿಪಟದಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟ ಕ್ಷಣ ನಮ್ಮ ನಿರ್ಮಾಪಕರು ವೀರೇಶ್ ಥಿಯೇಟರಲ್ಲಿ ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ.. ಎಂದು ಕೂಗಿದ್ದು ಎಂದರು.

  ಅನಂತನಾಗ್, ಯೋಗರಾಜ್ ಭಟ್, ಗಣೇಶ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ದಿಗಂತ್, ಜಯಂತ ಕಾಯ್ಕಿಣಿ, ರಂಗಾಯಣ ರಘು, ಪದ್ಮಜಾ ರಾವ್ ಎಲ್ಲರೂ ವೇದಿಕೆಯಲ್ಲಿ ಸೇರಿಕೊಂಡು ಗೆಲುವನ್ನು ಸಂಭ್ರಮಿಸಿದರು.

   

 • ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

  ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.

  ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ  ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.

 • ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಒಂದೊಂದು ಪದದ ಅರ್ಥವನ್ನೂ ಜಯಂತ್ ಕಾಯ್ಕಿಣಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದಿದ್ದರು ಯೋಗರಾಜ್ ಭಟ್. ಭಟ್ಟರು ಹಾಗೇಕೆ ಹೇಳಿದರು ಎಂದು ತಲೆ ತುರಿಸಿಕೊಂಡವರಿಗೆ ಗಾಳಿಪಟ 2 ಚಿತ್ರದ ಈ ಹಾಡು ಉತ್ತರ ನೀಡಿದೆ. ಜಯಂತ್ ಕಾಯ್ಕಿಣಿ ಪ್ರೇಮಸುಧೆಯನ್ನೇ ಹರಿಸಿದ್ದಾರೆ.

  ಆಡದ ಮಾತನ್ನೆಲ್ಲ ಕದ್ದು ಕೇಳು..

  ಅದನ್ನು ನನಗೆ ಹೇಳದೆ ಒದ್ದಾಡುವಂತೆ ಮಾಡು

  ಮುಂಗೋಪದಿಂದ ಒದ್ದಾಡುವಂತೆ ಮಾಡು..

  ನಾನು ಓದದ ಪುಸ್ತಕ.. ಎದೆಗೊತ್ತಿಕೊಳ್ಳುವೆಯಾ..

  ಈ ಪುಸ್ತಕದ ಪ್ರತಿ ಸಾಲಿಗೂ ಬಿಸಿಯುಸಿರು ನೀಡಿ ಕಥೆಯಾಗಿಸು..

  ಈ ಅರ್ಥದ ಸಾಲುಗಳನ್ನು ಅರೆದು..ಅರೆದು..ಸೋಸಿ ಬರೆದಿದ್ದಾರೆ ಪ್ರೇಮಿಗಳಿಗಾಗಿ.. ಪ್ರೇಮಿಗಳ ಹೃದಯಕ್ಕಾಗಿ. ಕಾಯ್ಕಿಣಿಯವರ ಪದಗಳನ್ನು ಅಷ್ಟೇ ಸಮರ್ಥವಾಗಿ ಎದೆಗೆ ದಾಟಿಸಿರೋದು ಸೋನು ನಿಗಮ್ ಅವರ ಕಂಠ ಮತ್ತು ಅರ್ಜುನ್ ಜನ್ಯಾ ಅವರ ಸಂಗೀತ.

  ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಅನಂತ್ ನಾಗ್, ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ.

 • ಭಟ್ಟರ ಅದೊಂದು ಕರೆಗಾಗಿ ಕಾಯುತ್ತಿದ್ದರಂತೆ ಪ್ರಣಯರಾಜ

  ಭಟ್ಟರ ಅದೊಂದು ಕರೆಗಾಗಿ ಕಾಯುತ್ತಿದ್ದರಂತೆ ಪ್ರಣಯರಾಜ

  ಪ್ರಣಯರಾಜ ಶ್ರೀನಾಥ್ ಚಿತ್ರರಂಗದ ಸೀನಿಯರ್ ಕಲಾವಿದ. ನಾಯಕರಾಗಿ, ಪೋಷಕ ನಟರಾಗಿ.. ತಮ್ಮದೇ ಛಾಪು ಮೂಡಿಸಿರುವ ಕಲಾವಿದ. ಪುಟ್ಟಣ್ಣ ಕಣಗಾಲರ ಶಿಷ್ಯ. ವೃತ್ತಿ ಜೀವನದಲ್ಲಿ ಹಲವು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಈ ನಟ ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದರಂತೆ.

  ನಾನು ಮುಂಗಾರು ಮಳೆ ನೋಡಿದ ದಿನದಿಂದ ಕಾಯುತ್ತಿದ್ದೆ. ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯೊಂದು ಒಳಗೊಳಗೇ ಮೂಡಿತ್ತು. ಗಾಳಿಪಟ 2 ಚಿತ್ರದಲ್ಲಿ ನನ್ನದು ಅತಿಥಿ ನಟನ ಪಾತ್ರ. ಕಾಲೇಜ್ ಪ್ರಿನ್ಸಿಪಾಲ್ ಕ್ಯಾರೆಕ್ಟರ್. ಆದರೇನಂತೆ.. ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದವನಿಗೆ ಪಾತ್ರ ಯಾವುದಾದರೇನು? ಎರಡು ದಿನದ ಶೆಡ್ಯೂಲ್ ಇತ್ತು. ಯೋಗರಾಜ್ ಭಟ್ ಅವರಿಂದ ಹಲವು ಹೊಸತು ಕಲಿತೆ ಎಂದಿದ್ದಾರೆ ಶ್ರೀನಾಥ್.

  ಗಾಳಿಪಟ 2, ಒಂದು ರೀತಿಯಲ್ಲಿ ಶ್ರೀನಾಥ್ ಅವರಿಗೆ ಕಮ್ ಬ್ಯಾಕ್ ಸಿನಿಮಾ. ಇತ್ತೀಚೆಗೆ ಅವರು ನಟನೆಯಿಂದ ದೂರವೇ ಉಳಿದಿದ್ದರು. ನನಗೇನೂ ವಯಸ್ಸಾಗಿಲ್ಲ. ನಟಿಸುವ ಶಕ್ತಿಯೂ ಇದೆ. ಮೆಮೊರಿ ಪವರ್ ಕೂಡಾ ಚೆನ್ನಾಗಿದೆ. ಗಾಳಿಪಟ 2 ನಂತರ ಹೊಸ ಹೊಸ ಅವಕಾಶಗಳು ಬರಬಹುದು ಎನ್ನುತ್ತಾರೆ ಶ್ರೀನಾಥ್.

  ಅಷ್ಟು ಹಿರಿಯ ಕಲಾವಿದನಾಗಿ ನಿರ್ದೇಶಕರನ್ನು ಹೊಗಳುವುದು ಅವರ ದೊಡ್ಡತನ. ಅಷ್ಟು ಹಿರಿಯ ಕಲಾವಿದರೊಬ್ಬರು ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವುದಕ್ಕಾಗಿ ಕಾದಿದ್ದರು ಎನ್ನುವುದು ಯೋಗರಾಜ್ ಭಟ್ ಅವರ ಕಿರೀಟಕ್ಕೆ ಸಿಕ್ಕ ಗರಿ. ಸದ್ಯಕ್ಕೆ ಎಲ್ಲರೂ ಗಾಳಿಪಟ 2 ಎದುರು ನೋಡುತ್ತಿದ್ದಾರೆ.

  ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್ ಮತ್ತು ಭಟ್ಟರು 4ನೇ ಬಾರಿಗೆ ಒಂದುಗೂಡಿರುವ ಚಿತ್ರ ಗಾಳಿಪಟ 2. ಗಾಳಿಪಟದಲ್ಲಿದ್ದ ದಿಗಂತ್, ಅನಂತ್ ನಾಗ್, ಪದ್ಮಜಾ  ರಾವ್, ರಂಗಾಯಣ ರಘು, ಜಯಂತ ಕಾಯ್ಕಿಣಿ, ಸೋನು ನಿಗಮ್ ಎಲ್ಲರೂ ಈ ಗಾಳಿಪಟ 2ನಲ್ಲೂ ಇದ್ದಾರೆ.

 • ಭಟ್ಟರ ಗಾಳಿಪಟಕ್ಕೆ ದಾರವಾಯ್ತು ಕೆವಿಎನ್ ಪ್ರೊಡಕ್ಷನ್ಸ್

  ಭಟ್ಟರ ಗಾಳಿಪಟಕ್ಕೆ ದಾರವಾಯ್ತು ಕೆವಿಎನ್ ಪ್ರೊಡಕ್ಷನ್ಸ್

  ಯೋಗರಾಜ್ ಭಟ್ ಮತ್ತು ಗಣೇಶ್ ಮತ್ತೊಮ್ಮೆ ಒಂದಾಗಿರುವ ಸಿನಿಮಾ ಗಾಳಿಪಟ 2. ಭಟ್ಟರ ವೃತ್ತಿಜೀವನದ 3ನೇ ಸಿನಿಮಾ ಆಗಿದ್ದ ಗಾಳಿಪಟ ಆಗಿನ ಕಾಲಕ್ಕೆ ದಾಖಲೆ ಬರೆದಿದ್ದ ಸಿನಿಮಾ. ಈಗ ಗಾಳಿಪಟ 2 ರೆಡಿಯಾಗಿದೆ. ಟ್ರೇಲರ್ ಹೊರಬಂದಿದೆ. ಗಾಳಿಪಟದಲ್ಲಿ ಯೋಗರಾಜ್ ಭಟ್, ಗಣೇಶ್, ದಿಗಂತ್, ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು ಇಲ್ಲಿ ಕೂಡಾ ಕಂಟಿನ್ಯೂ ಆಗಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್ ಇಲ್ಲಿ ಹೊಸದಾಗಿ ಸೇರಿದ್ದಾರೆ. ನಿರ್ಮಾಪಕರಾಗಿ ರಮೇಶ್ ರೆಡ್ಡಿ ಇದ್ದರೆ, ಸಂಗೀತ ನಿರ್ದೇಶಕನ ಸ್ಥಾನ ಅಲಂಕರಿಸಿರುವುದು ಅರ್ಜುನ್ ಜನ್ಯಾ.

  ಈಗ ಚಿತ್ರದ ವಿತರಣೆಗೆ ಮುಂದಾಗಿರೋದು ಕೆವಿಎನ್ ಪ್ರೊಡಕ್ಷನ್ಸ್. ಆರ್.ಆರ್.ಆರ್. ನಂತರ ಕೆವಿಎನ್ ವಿತರಣೆ ಮಾಡುತ್ತಿರೋ ದೊಡ್ಡ ಚಿತ್ರ ಗಾಳಿಪಟ 2. ಒಂದೆಡೆ ಸಿನಿಮಾ ನಿರ್ಮಾಣದಲ್ಲಿ ಬ್ಯಸಿಯಾಗಿರೋ ಕೆವಿಎನ್, ಮತ್ತೊಂದೆಡೆ ಚಿತ್ರದ ವಿತರಣೆಯಲ್ಲೂ ದೊಡ್ಡ ಹೆಜ್ಜೆ ಇಡುತ್ತಿದೆ.

 • ಭಟ್ಟರು ಗಾಳಿಪಟ ಹಾರಿಸೋಕೆ ಮುಹೂರ್ತ ಫಿಕ್ಸ್

  ಭಟ್ಟರು ಗಾಳಿಪಟ ಹಾರಿಸೋಕೆ ಮುಹೂರ್ತ ಫಿಕ್ಸ್

  ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ರಿಲೀಸ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 12ಕ್ಕೆ ಗಾಳಿಪಟ 2 ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಾಳಿಪಟದಲ್ಲಿದ್ದ ಗಣೇಶ್, ದಿಗಂತ್ ಮತ್ತು ಅನಂತ್ ನಾಗ್ ಮುಂದವರೆದಿದ್ದರೆ, ಪವನ್ ಕುಮಾರ್ ಹೊಸದಾಗಿ ಸೇರಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರು.

  2008ರ ಜನವರಿಯಲ್ಲಿ ಗಾಳಿಪಟ ರಿಲೀಸ್ ಆಗಿತ್ತು.

  ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣ ಹೀರೋ ಆಗಿದ್ದರೆ, ಡೈಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ನಾಯಕಿಯಾಗಿದ್ದರು. ಜೊತೆಗೆ ಅನಂತ್ ನಾಗ್, ಪದ್ಮಜಾ ರಾವ್ ಇದ್ದರು. ಮುಂಗಾರು ಮಳೆ ಭರ್ಜರಿ ಹಿಟ್ ಆದ ಮೇಲೆ ರಿಲೀಸ್ ಆಗಿದ್ದ ಸಿನಿಮಾ ಗಾಳಿಪಟ. ಆಗಿನ ಕಾಲಕ್ಕೆ 12 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರವದು.

  ಗಾಳಿಪಟಕ್ಕೆ ಹರಿಕೃಷ್ಣ ಸಂಗೀತವಿತ್ತು. ಗಾಳಿಪಟ 2ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಡಿಸೆಂಬರ್ 2, 2019ರಲ್ಲಿ ಸೆಟ್ಟೇರಿದ ಗಾಳಿಪಟ 2 ಕೋವಿಡ್ 19ನಿಂದಾಗಿ ವಿಳಂಬವಾಗಿತ್ತು. ಈಗ ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ನಿರೀಕ್ಷೆಗಳು ದೊಡ್ಡದಾಗಿವೆ.

 • ಹೃದಯಕ್ಕೆ ನಶೆ ಏರಿಸುವ.. ನೀನು ಬಗೆಹರಿಯದ ಹಾಡು..

  ಹೃದಯಕ್ಕೆ ನಶೆ ಏರಿಸುವ.. ನೀನು ಬಗೆಹರಿಯದ ಹಾಡು..

  ಬರೆದವರು ಜಯಂತ ಕಾಯ್ಕಿಣಿ.

  ಹಾಡಿದವರು ನಿಹಾರ್ ತೌರೋ.

  ಸಂಗೀತ ಅರ್ಜುನ್ ಜನ್ಯಾ.

  ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಹಾಡು ಮೆಲೋಡಿ ಹಾಡುಗಳ ಲೋಕಕ್ಕೆ ಹೊಸ ಸಮರ್ಪಣೆ.

  ಗಾಳಿಪಟ 2  ಚಿತ್ರದ ಹೊಸ ಹಾಡು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುವಂತಿದೆ. ಕಾಯ್ಕಿಣಿ ಮತ್ತೊಮ್ಮೆ ಪದಪದಗಳನ್ನೂ ಹೃದಯದಿಂದ ಹೆಕ್ಕಿ ತೆಗೆದು ಬರೆದಿರುವ ಹಾಡಿದು. ಪವನ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಮೇಲೆ ಚಿತ್ರೀಕರಣಗೊಂಡಿರುವ ಹಾಡು ಲೆಕ್ಚರರ್ ಜೊತೆ ಪ್ರೀತಿಗೆ ಬೀಳುವ ಬಡಪಾಯಿ ವಿದ್ಯಾರ್ಥಿಯ ಪ್ರೇಮಗೀತೆಯಂತಿದೆ.

  ಭಾವನೆಗಳಿಗೆ ಬಣ್ಣ ಹಚ್ಚಿದಂತಿರುವ ಹಾಡಿಗೆ ಧ್ವನಿ ನೀಡಿರುವ ನಿಹಾಲ್ ತೌರೋ ಹೊಸ ಸೆನ್ಸೇಷನ್ ಆದರೆ ಅಚ್ಚರಿಯಿಲ್ಲ. ಕಿಡಿಗೇಡಿ ಹೃದಯಕ್ಕೆ ನಶೆ ಏರಿಸುವ ಸಾಹಿತ್ಯವನ್ನು ಮೈಕೊರೆಯುವ ಚಳಿಯಲ್ಲಿ ಮತ್ತೆ ಮತ್ತೆ ಕೇಳುವಂತೆ ಹಾಡಿರುವುದು ನಿಹಾಲ್ ತೌರೋ. ಗಣೇಶ್, ವೈಭವಿ ಶಾಂಡಿಲ್ಯ, ಪವನ್, ಶರ್ಮಿಳಾ ಮಾಂಡ್ರೆ, ದಿಗಂತ್, ಅನಂತನಾಗ್, ಬುಲೆಟ್ ಪ್ರಕಾಶ್.. ಹೀಗೆ ದೊಡ್ಡ ತಾರಾಗಣದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಸದಭಿರುಚಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಶ್ರೀಮತಿ ಉಮಾ ರಮೇಶ್ ರೆಡ್ಡಿ.