` burj khalifa, - chitraloka.com | Kannada Movie News, Reviews | Image

burj khalifa,

  • ಆರಡಿ ಕಟೌಟು 2000 ಅಡಿಯಾಗ್ತಾರೆ.. ಬುರ್ಜ್ ಖಲೀಫಾದಲ್ಲಿ..!

    ಆರಡಿ ಕಟೌಟು 2000 ಅಡಿಯಾಗ್ತಾರೆ.. ಬುರ್ಜ್ ಖಲೀಫಾದಲ್ಲಿ..!

    ಕಿಚ್ಚ ಸುದೀಪ್ ಆರಡಿ ಕಟೌಟ್. ಈ ಆರಡಿ ಕಟೌಟ್ 2000 ಅಡಿ ಎತ್ತರದಲ್ಲಿ ನಿಂತರೆ.. ನಿಂತರೆ ಏನು.. ಬುರ್ಜ್ ಖಲೀಫಾದಲ್ಲಿ ಸುದೀಪ್ ಅವರ 2 ಸಾವಿರ ಅಡಿ ಎತ್ತರದ ವರ್ಚುವಲ್ ಕಟೌಟ್ ನಿಲ್ಲಿಸಲಾಗುತ್ತಿದೆ. ಬುರ್ಜ್ ಖಲೀಫಾದಲ್ಲಿ 180ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ವಿಕ್ರಾಂತ್ ರೋಣ ಚಿತ್ರದ ಲೈವ್ ಇರುತ್ತೆ.

    ಈ ವಿಕ್ರಾಂತ್ ರೋಣ, ಫ್ಯಾಂಟಮ್ ಚಿತ್ರದ ಟೈಟಲ್. ಫ್ಯಾಂಟಮ್ ಅನ್ನೋ ಹೆಸರನ್ನು ತೆಗೆದು, ವಿಕ್ರಾಂತ್ ರೋಣ ಅನ್ನೋ ಟೈಟಲ್ ಫೈನಲ್ ಮಾಡಲಾಗಿದೆ. ಅನೂಪ್ ಭಂಡಾರಿ ಈ ಚಿತ್ರದ ಲೋಗೋ ರಿಲೀಸ್ ಮಾಡುತ್ತಿದ್ದು, ಎಲ್ಲವನ್ನೂ ಜನವರಿ 31ರಂದು ಬುರ್ಜ್ ಖಲೀಫಾದಲ್ಲಿಯೇ ಅದ್ಧೂರಿಯಾಗಿ ಮಾಡೋ ಪ್ಲಾನ್ ಇಟ್ಟುಕೊಳ್ಳಲಾಗಿದೆ.

    ಸಿನಿಮಾವೊಂದಕ್ಕೆ ಲೋಗೋ, ಬುರ್ಜ್ ಖಲೀಫಾದಲ್ಲಿ ಪ್ರೋಗ್ರಾಂ..ಇವೆಲ್ಲವೂ ಕನ್ನಡಕ್ಕೆ ಪ್ರಥಮ ಸಾಧನೆಗಳೇ. ಹಲವು ``ಫಸ್ಟ್'' ಸೃಷ್ಟಿಸಿರೋ ಸುದೀಪ್.. ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ.

  • ಕಿಚ್ಚನ ಹಬ್ಬ

    ಕಿಚ್ಚನ ಹಬ್ಬ

    ಇದು ಅಕ್ಷರಶಃ ಕಿಚ್ಚನ ಹಬ್ಬ. ಸುದೀಪ್ ಸಂಜೀವ್ ಎಂಬ ಹುಡುಗ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು 25 ವರ್ಷ ಪೂರೈಸಿದೆ. ಆರಂಭದಲ್ಲಿ ಐರನ್ ಲೆಗ್ ಎನಿಸಿಕೊಂಡಿದ್ದ ಅದೇ ಹುಡುಗ ಈಗ ಬಂಗಾರದ ಕಣಜ. ಗೋಲ್ಡನ್ ಲೆಗ್.

    ಕಿಚ್ಚನ 25ನೇ ಸಿನಿ ವರ್ಷದ ಹಬ್ಬಕ್ಕೆ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ಗಣೇಶ್, ಜೋಗಿ ಪ್ರೇಮ್, ಶಶಾಂಕ್, ಆರ್.ಚಂದ್ರು, ರಮ್ಯಕೃಷ್ಣ, ಪ್ರಿಯಾಮಣಿ, ಸುನಿಲ್ ಶೆಟ್ಟಿ, ಮೋಹನ್ ಲಾಲ್, ಅನಿಲ್ ಕುಂಬ್ಳೆ.. ಹೀಗೆ ಬೇರೆ ಬೇರೆ ಚಿತ್ರರಂಗದ ದಿಗ್ಗಜರೂ ಹಾರೈಸಿದ್ದು ವಿಶೇಷ.

    ಹೀಗಾಗಿಯೇ ಜನವರಿ 31 ಕಿಚ್ಚನ ಹಬ್ಬವಾಗಿದೆ. ಕಿಚ್ಚ ಈಗ ಕೇವಲ ಕನ್ನಡದ ಕಂದನಾಗಿ ಉಳಿದಿಲ್ಲ. ಆತ ಬಹುಭಾಷಾ ತಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ.. ಎಲ್ಲ ಚಿತ್ರರಂಗಗಳಲ್ಲೂ ಸುದೀಪ್ ಗೊತ್ತು. ಅಲ್ಲೆಲ್ಲವೂ ಅಭಿಮಾನಿಗಳು.. ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಸುದೀಪ್`ಗೆ ಮಾರ್ಕೆಟ್ ಇದೆ. ಹೀಗಾಗಿಯೇ ಸುದೀಪ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ 25ನೇ ವರ್ಷದ ಹಬ್ಬವನ್ನು ಜಗತ್ತಿನ ಮುಗಿಲೆತ್ತರದ ಕಟ್ಟಡ ಭುರ್ಜ್ ಖಲೀಫಾದಲ್ಲಿ ನೆರವೇರಿಸಿದ್ದು.

    ಬುರ್ಜ ಖಲೀಫಾದಲ್ಲಿ 3 ನಿಮಿಷಗಳ ಕಾಲ ಲೇಸರ್ ಕಟೌಟ್ ಪ್ರದರ್ಶನ ನಡೆಯಿತು. ಕಿಲೋಮೀಟುರುಗಳಷ್ಟು ದೂರದಿಂದಲೂ ಕಟೌಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಒಂದು ಕಡೆ ಕನ್ನಡದ ಬಾವುಟ, ಇನ್ನೊಂದೆಡೆ ಕಿಚ್ಚನ ಕಟೌಟ್.. ಆ ವರ್ಣ ರಂಜಿತ ವೈಭವ ಕಣ್ತುಂಬಿಕೊಳ್ಳಲು ದುಬೈನಲ್ಲಿ ಸಾವಿರಾರು ಕನ್ನಡಿಗರು ಒಟ್ಟಿಗೇ ಸೇರಿದ್ದರು.

    ಆ ವೇದಿಕೆಯಲ್ಲಿ ಸುದೀಪ್ ಹಾಡಿದ್ದು ತುತ್ತು ಅನ್ನೋಕೆ ಅನ್ನೋ ವಿಷ್ಣು ಹಾಡಿದ್ದ ಹಾಡು. ಜೊತೆಯಲ್ಲಿ ಅಭಿಮಾನಿಗಳಿಗಾಗಿ 1 ಸಾವಿರ ಬೆಳ್ಳಿ ನಾಣ್ಯಗಳ ಬಿಡುಗಡೆಯೂ ಇದೆ.

    ಆ ಬಳಿಕ ನಡೆದದ್ದೇ ವಿಕ್ರಾಂತ್ ರೋಣ ಚಿತ್ರದ ಲೋಗೋ ಮತ್ತು ಟೀಸರ್ ಅನಾವರಣ. ಟೀಸರ್ ಬೊಂಬಾಟ್ ಆಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery