ಹೊಂಬಾಳೆ ಫಿಲಮ್ಸ್ ಸಂಸ್ಥೆ ಈಗ ದೇಶದ ನಂ.1 ಚಿತ್ರ ನಿರ್ಮಾಣ ಸಂಸ್ಥೆ. ಈ ವರ್ಷವೇ ಕೆಜಿಎಫ್ ಮತ್ತು ಕಾಂತಾರ ಎಂಬ ಎರಡು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಹೊಂಬಾಳೆಯ ಬೆನ್ನೆಲುಬು ವಿಜಯ್ ಕಿರಗಂದೂರು. ಅವರೀಗ ಮೂರು ಸಾವಿರ ಕೋಟಿ ಬಂಡವಾಳ ಹೂಡಿ ಎಲ್ಲರ ಹುಬ್ಬೇರಿಸಿದ್ದಾರೆ. ಇದು ಒಂದು ದಿನದ ಕಥೆ ಅಲ್ಲ, ಘೋಷಣೆಯ ವೈಭವವೂ ಅಲ್ಲ. ಇದು 5 ವರ್ಷಗಳ ಪ್ಲಾನ್. ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ಬಂಡವಾಳ ಹೂಡುತ್ತಿರುವುದಾಗಿ ವಿಜಯ್ ಕಿರಗಂದೂರು ಘೋಷಿಸಿದ್ದಾರೆ. ಹೊಂಬಾಳೆಯವರ ಕೈಲಿ ಸುಮಾರು ಚಿತ್ರಗಳಿವೆ.
1.ಸಲಾರ್ : ಇದು ಪ್ರಭಾಸ್, ಶೃತಿ ಹಾಸನ್, ಜಗಪತಿ ಬಾಬು ನಟಿಸುತ್ತಿರುವ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್.
2.ರಾಘವೇಂದ್ರ ಸ್ಟೋರ್ಸ್ : ಇದು ಜಗ್ಗೇಶ್, ಶ್ವೇತಾ ಶ್ರೀವಾತ್ಸವ್ ಸಿನಿಮಾ. ನಿರ್ದೇಶಕ ಸಂತೋಷ್ ಆನಂದರಾಮ್.
3. ರಿಚರ್ಡ್ ಆಂಟನಿ : ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ.
4. ಟೈಸನ್ : ಪೃಥ್ವಿರಾಜ್ ಸುಕುಮಾರನ್ ನಟನೆ, ನಿರ್ದೇಶನದ ಮಲಯಾಳಂ ಸಿನಿಮಾ
5. ಧೂಮಮ್ : ಪವನ್ ಕುಮಾರ್ ನಿರ್ದೇಶನದ ಚಿತ್ರ. ಫಾಹದ್ ಫಾಸಿಲ್, ಅಪರ್ಣಾ ಬಾಲಮುರಳಿ ನಟಿಸುತ್ತಿರುವ ಸಿನಿಮಾ.
6. ಬಘೀರಾ : ಶ್ರೀಮುರಳಿ ನಟನೆಯ ಸಿನಿಮಾ. ಡಾ.ಸೂರಿ ನಿರ್ದೇಶಕ
7. ರಘುತಾತ : ಕೀರ್ತಿ ಸುರೇಶ್ ಪ್ರಧಾನ ಪಾತ್ರದಲ್ಲಿರೋ ಚಿತ್ರ. ಸುಮನ್ ಕುಮಾರ್ ನಿರ್ದೇಶಕ
8. ಸೂರರೈಪೊಟ್ರು ನಿರ್ದೇಶಕಿ ಸುಧಾ ಕೊಂಗೆರಾ ಜೊತೆಗೊಂದು ಸಿನಿಮಾ.
ಅದ್ಧೂರಿ ಚಿತ್ರವೆಂದರೆ ದುಡ್ಡು ಸುರಿದೇ ಸಿನಿಮಾ ಮಾಡಬೇಕು ಎಂತಿಲ್ಲ. ಕಥೆಯನ್ನೇ ಮುಖ್ಯವಾಗಿಟ್ಟುಕೊಂಡು ಚಿತ್ರದ ಕಥೆಗೆ ಏನೇನು ಬೇಕೋ ಎಲ್ಲವನ್ನೂ ಕೊಡುವ ಕೆಲಸ ಮಾಡುತ್ತಿರುವ ಹೊಂಬಾಳೆಯವರು ದೊಡ್ಡ ಕನಸಿನ ಬೆನ್ನು ಹತ್ತಿದ್ದಾರೆ. ವಿಜಯ್ ಕಿರಗಂದೂರು ಅವರಿಗೆ ಎಲ್ಲರೂ ಶುಭ ಕೋರಿದ್ದಾರೆ.