` amrutha, - chitraloka.com | Kannada Movie News, Reviews | Image

amrutha,

 • ಬಡವ ರಾಸ್ಕಲ್ ಕಲೆಕ್ಷನ್ ಎಷ್ಟು?

  ಬಡವ ರಾಸ್ಕಲ್ ಕಲೆಕ್ಷನ್ ಎಷ್ಟು?

  ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿನಿಮಾ ಬಡವ ರಾಸ್ಕಲ್. ಧನಂಜಯ್ ನಿರ್ಮಾಣದ ಮೊದಲ ಸಿನಿಮಾ ಥಿಯೇಟರುಗಳಲ್ಲಿ ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಾಗಾದರೆ ಚಿತ್ರದ ಕಲೆಕ್ಷನ್ ಎಷ್ಟು? 15 ಕೋಟಿ ದಾಟಿದೆಯಾ?

  ಸಿನಿಮಾ ಗೆದ್ದಿದೆ. ಲಾಭವೂ ಬಂದಿದೆ. ಸೇಫ್ ಆಗಿದ್ದೇವೆ. ಆದರೆ 15 ಕೋಟಿ ಲಾಭ ಅನ್ನೋದೆಲ್ಲ ಸುಳ್ಳು. ಅಷ್ಟೆಲ್ಲ ಲಾಭ ಬಂದಿದ್ದರೆ ಹೆಲಿಕಾಪ್ಟರಿನಲ್ಲಿ ಬಂದು ಥ್ಯಾಂಕ್ಸ್ ಹೇಳುತ್ತಿದೆ. ವಿತರಕರ ಜೊತೆ ಮಾತನಾಡಿ ಎಲ್ಲ ವಿವರ ಪಡೆದುಕೊಂಡು ಮಾಹಿತಿ ನೀಡುತ್ತೇನೆ ಎಂದಿದ್ದಾರೆ ಧನಂಜಯ್.

  ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ನಾಗಭೂಷಣ್ ಮೊದಲಾದವರು ನಟಿಸಿದ್ದಾರೆ. ಚಿತ್ರ ಯಶಸ್ವಿಯಾಗಿರುವ ಬೆನ್ನಲ್ಲೆ ವೀಕೆಂಡ್ ಕಫ್ರ್ಯೂ ಬಗ್ಗೆ ಮರುಪರಿಶೀಲಿಸಿ ಎಂದು ಧನಂಜಯ್ ಮನವಿ ಮಾಡಿದ್ದಾರೆ.

 • ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಪುತ್ರಿ ಸಿನಿಮಾ ರಂಗಕ್ಕೆ..

  Nenapirali Prem's Daughter Amrutha's Photo shoot

  ಅಪ್ಪ ಲವ್ಲಿ ಸ್ಟಾರ್. ಮಗಳೂ ಅಷ್ಟೆ.. ಫೇರ್ & ಲವ್ಲಿ ಹುಡುಗಿ. ಹೆಸರು ಅಮೃತಾ. ನೆನಪಿರಲಿ ಪ್ರೇಮ್ ಪಾಲಿನ ಈ ಅದೃಷ್ಟ ದೇವತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.

  ಈಗಿನ್ನೂ ಸೆಕೆಂಡ್ ಇಯರ್ ಎಂಜಿನಿಯರಿಂಗ್ ಓದುತ್ತಿರೋ ಅಮೃತಾ, ಪ್ರೇಮ್-ಜ್ಯೋತಿ ದಂಪತಿಯ ಮುದ್ದಿನ ಮಹಾರಾಣಿ.

  ಡ್ಯಾನ್ಸ್, ಸಂಗೀತದಲ್ಲೂ ಆಸಕ್ತಿ ಇರುವ ಅಮೃತಾಗೆ ಸಿನಿಮಾಗೆ ಬರೋ ಆಸೆಯಂತೂ ಇದೆ. ಅಪ್ಪ, ಅಮ್ಮ ಓಕೆ ಎಂದಿದ್ದಾರೆ. ಜೊತೆಯಲ್ಲಿ ಕಂಡೀಷನ್ನೂ ಇದೆ. ಮೊದಲು ಓದು.. ನಂತರವೇ ಸಿನಿಮಾ ಅನ್ನೋ ಕಂಡಿಷನ್ ಅದು.

  ಇದರ ಜೊತೆ ಜೊತೆಯಲ್ಲೇ ಮೊದಲ ಬಾರಿಗೆ ಮಗಳ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ ಪ್ರೇಮ್.