` megha shetty, - chitraloka.com | Kannada Movie News, Reviews | Image

megha shetty,

 • Megha Shetty Roped In For Ganesh's 'Triple Riding'

  Megha Shetty Roped In For Ganesh's 'Triple Riding'

  Megha Shetty, who is a popular in Kannada small screen has been roped in as Ganesh's heroine in his forthcoming film 'Triple Riding' to be directed by Mahesh Gowda.

  Megha Shetty carved a niche for herself, through the very popular tv serial 'Jothejotheyali' being aired in Zee Kannada. Earlier, there were efforts to rope her to the big screen. After much persuals, the actress has given her nod to be a part of the Ganesh starrer.

  Though Megha is starring in a film opposite Ganesh, the actress says she will continue to act in the serial also. 'There is no question of walking out of the serial, I have an emotional bondage with the team and there is no chance of leaving the serial. I will somehow manage to adjust dates for both serial and film.

  'Triple Riding' is being written and directed by Mahesh Gowda who had earlier directed Vinod Prabhakar's 'Rugged'. Apart from Ganesh, Ravishankar Gowda, Sadhu Kokila, Kuri Prathap and others play prominent roles in the film.  

 • ಚಂದನ್ ಶೆಟ್ಟಿ.. ಮೇಘಾ ಶೆಟ್ಟಿ ಜೊತೆ ಜೊತೆಯಲಿ

  ಚಂದನ್ ಶೆಟ್ಟಿ.. ಮೇಘಾ ಶೆಟ್ಟಿ ಜೊತೆ ಜೊತೆಯಲಿ

  ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ, ಈಗಾಗಲೇ ಸಿಂಪಲ್ ಸುನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗಣೇಶ್ ನಟಿಸುತ್ತಿರುವ ತ್ರಿಬಲ್ ರೈಡಿಂಗ್‍ನಲ್ಲಿ, ಮೇಘಾ ಶೆಟ್ಟಿ ಹೀರೋಯಿನ್. ಕಿರುತೆರೆ ಮತ್ತು ಹಿರಿತೆರೆ ಎರಡರ ನಡುವೆ ಆಲ್ಬಂ ಸಾಂಗ್`ಗೂ ಎಂಟ್ರಿ ಕೊಟ್ಟಿದ್ದಾರೆ ಮೇಘಾ ಶೆಟ್ಟಿ.

  ಮೂರೇ ಮೂರು ಪೆಗ್ಗಿನಿಂದ ಶುರು ಮಾಡಿ ಈಗ ಖರಾಬು ಸಾಂಗ್ ಮೂಲಕ ಯಶಸ್ಸಿನ ಉತ್ತುಂಗದಲ್ಲಿರೋ ಚಂದನ್ ಶೆಟ್ಟಿ ಜೊತೆ ಆಲ್ಬಂ ಸಾಂಗ್‍ಗೆ ಹೆಜ್ಜೆ ಹಾಕುತ್ತಿದ್ದಾರೆ ಮೇಘಾ. ಚಂದನ್ ಶೆಟ್ಟಿ ಸ್ವತಃ ರಚಿಸಿ, ಮ್ಯೂಸಿಕ್ ಕಂಪೋಸ್ ಮಾಡಿರುವ ನೋಡು ಶಿವ.. ಹಾಡಿನಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.

 • ಜೊತೆ ಜೊತೆಯಲಿ ಅನುಗೆ ಗೋಲ್ಡನ್ ಚಾನ್ಸ್..!

  Jothe Jotheyali Fame Anushree Paired Opposite Ganesh In 'Triple Riding'

  ಜೊತೆ ಜೊತೆಯಲಿ, ಝೀ ಕನ್ನಡದಲ್ಲಿ ಪ್ರಸಾರಾವಾಗುತ್ತಿರೋ ಅತ್ಯಂತ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಅನಿರುದ್ಧರಷ್ಟೇ ಜನಪ್ರಿಯರಾಗಿರೋದು ನಾಯಕಿ ಅನು ಅಲಿಯಾಸ್ ಮೇಘಾ ಶೆಟ್ಟಿ. ಅವರಿಗೀಗ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಮೇಘಾ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರಕ್ಕೆ ನಾಯಕಿಯಾಗಿ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ನನ್ನದು ಹೋಮ್ಲಿ ಕ್ಯಾರೆಕ್ಟರ್. ಚಿತ್ರದ ಕಥೆಯನ್ನು ನಾನಿನ್ನೂ ಪೂರ್ತಿ ಕೇಳಿಲ್ಲ. ನನ್ನ ತಂಗಿ ಕಥೆ ಕೇಳಿ ಓಕೆ ಮಾಡಿದ್ಲು. ಅಕ್ಟೋಬರ್ 2ನೇ ವಾರದಿಂದ ಶೂಟಿಂಗ್ ಶುರು ಎಂದಿದ್ದಾರೆ ಮೇಘಾ ಶೆಟ್ಟಿ.

  ಮಹೇಶ್ ಗೌಡ ಚಿತ್ರದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದರೂ, ಜೊತೆ ಜೊತೆಯಲಿ ಧಾರಾವಾಹಿ ಬಿಡಲ್ಲ ಎಂದಿದ್ದಾರೆ ಮೇಘಾ.

 • ನೋಡಿದವರೆನ್ನಲ್ಲ ಬೆಚ್ಚಗಾಗಿಸೋ ದಿಲ್ ಪಸಂದ್ ಫಸ್ಟ್ ಲುಕ್

  ನೋಡಿದವರೆನ್ನಲ್ಲ ಬೆಚ್ಚಗಾಗಿಸೋ ದಿಲ್ ಪಸಂದ್ ಫಸ್ಟ್ ಲುಕ್

  ದಿಲ್ ಪಸಂದ್. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯದ ಹೊಸ ಸಿನಿಮಾ. ಶಿವತೇಜಸ್ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಇದೆ. ಚಿತ್ರದ ಫಸ್ಟ್ ಲುಕ್ ಈಗ ಹೊರಬಿದ್ದಿದೆ. ಫಸ್ಟ್ ಲುಕ್ ನೋಡಿದವರ ಮೈಮನಗಳನ್ನೆಲ್ಲ ಬೆಚ್ಚಗಾಗಿಸುವಂತೆ ಒಂದೇ ಒಂದು ಫೋಟೋ ಹೊರಬಿಟ್ಟಿದ್ದಾರೆ ಶಿವತೇಜಸ್.

  ಲವ್ ಮಾಕ್‍ಟೇಲ್ ನಂತರ ರೊಮ್ಯಾಂಟಿಕ್ ಚಿತ್ರಗಳಲ್ಲೇ ನಟಿಸುತ್ತಿರೋ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಇಬ್ಬರು ಚೆಲುವೆಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಬಲಾ ನಾಣಿ, ಅರುಣ್ ಬಾಲರಾಜ್ ಮೊದಲಾದವರು ನಟಿಸುತ್ತಿರೋ ಚಿತ್ರದಲ್ಲಿ ಕಾಮಿಡಿಯೂ ಭರಪೂರ ಇರುವ ಸೂಚನೆ ಇದೆ.

 • ಪ್ಯಾನ್ ಇಂಡಿಯಾ ಚಿತ್ರಕ್ಕೆ ಜೊತೆ ಜೊತೆಯಲಿ ಮೇಘಾ ಶೆಟ್ಟಿ

  ಪ್ಯಾನ್ ಇಂಡಿಯಾ ಚಿತ್ರಕ್ಕೆ ಜೊತೆ ಜೊತೆಯಲಿ ಮೇಘಾ ಶೆಟ್ಟಿ

  ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ಹುಡುಗಿ ಮೇಘಾ ಶೆಟ್ಟಿ. ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವ ಮೇಘಾ ಶೆಟ್ಟಿ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಓಕೆ ಎಂದಿದ್ದಾರೆ.

  ಜಿಲ್ಕಾ ಚಿತ್ರದ ಮೂಲಕ ಗಮನ ಸೆಳೆದ ನಟ ಕವೀಶ್ ಶೆಟ್ಟಿ ಚಿತ್ರಕ್ಕೆ ಈಗ ಮೇಘಾ ಶೆಟ್ಟಿ ಹೀರೋಯಿನ್. ಸಡಗರ ರಾಘವೇಂದ್ರ ಎಂಬುವವರು ನಿರ್ದೇಶಿಸುತ್ತಿರೋ ಚಿತ್ರಕ್ಕೆ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಮರಾಠಿಯಲ್ಲೂ ಬರುತ್ತಿದೆ. ಕ್ಲಾಸಿಕ್ ಸ್ಟುಡಿಯೋ ಮತ್ತು ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮೂಲಕ ಉಡುಪಿಯವರೇ ಆದ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಶೀಘ್ರದಲ್ಲೇ ಚಿತ್ರದ ಉಳಿದ ವಿವರಗಳು ಹೊರಬೀಳಲಿವೆ

 • ಶಶಾಂಕ್ ಲವ್ ಸ್ಟೋರಿಗೆ ಜೊತೆ ಜೊತೆಯಲಿ ಮೇಘಾ

  ಶಶಾಂಕ್ ಲವ್ ಸ್ಟೋರಿಗೆ ಜೊತೆ ಜೊತೆಯಲಿ ಮೇಘಾ

  ಜೊತೆ ಜೊತೆಯಲಿ ಸೀರಿಯಲ್ ಮೂಲಕ ಖ್ಯಾತರಾಗಿರೋ ನಟಿ ಮೇಘಾ ಶೆಟ್ಟಿ, ನಿರ್ದೇಶಕ ಶಶಾಂಕ್ ಅವರ 360 ಡಿಗ್ರಿ ಲವ್ ಕಣ್ಣಿಗೆ ಬಿದ್ದಿದ್ದಾರೆ. ಮೇಘಾ ಶೆಟ್ಟಿಗೆ ಇದು ಮೊದಲ ಸಿನಿಮಾ ಏನಲ್ಲ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆಯೇ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಶಶಾಂಕ್ ಚಿತ್ರದಲ್ಲಿ..

  ಶಶಾಂಕ್ ಲವ್ 360 ಸಿನಿಮಾ ಮಾಡುತ್ತಿದ್ದು, ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರವೀಣ್ ಎಂಬ ಹುಡುಗ ಲವ್ 360 ಹೀರೋ. ಮೇಘಾ ಶೆಟ್ಟಿ ಹೀರೋಯಿನ್. ಚಿತ್ರವಿನ್ನೂ ಪ್ರಿ-ಪ್ರೊಡಕ್ಷನ್ ಸ್ಟೇಜ್‍ನಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery