` raider - chitraloka.com | Kannada Movie News, Reviews | Image

raider

 • ರೈಡರ್ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್

  ರೈಡರ್ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್

  ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆಂದೇ ಸ್ಪೆಷಲ್ ಆಗಿ ರಿಲೀಸ್ ಆಗಿದ್ದು ರೈಡರ್ ಚಿತ್ರದ ಟೀಸರ್.  ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರೆಡಿಯಾಗುತ್ತಿರುವ  ಚಿತ್ರಕ್ಕೆ ಲಹರಿ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ತೆಲುಗು ಡೈರೆಕ್ಟರ್ ವಿಜಯ್ ಕುಮಾರ್ ಡೈರೆಕ್ಷನ್.

  ಈ ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸಿದ್ದು, ಟೀಸರ್‍ನಲ್ಲಿ ಕಂಪ್ಲೀಟ್ ಆ್ಯಕ್ಷನ್ ಇದೆ. ಸಾಹಸ ಪ್ರಿಯರಿಗೆ ಮೈನವಿರೇಳಿಸುವಂತ ಸಾಹಸಗಳಿವೆ. ನಿಖಿಲ್ ಸ್ಟೈಲ್ ಮತ್ತು ಆ್ಯಕ್ಷನ್ ಎರಡನ್ನೂ ಬ್ಯಾಲೆನ್ಸ್ ಮಾಡಿದ್ದಾರೆ. 

 • ರೈಡರ್ ನಿಖಿಲ್

  nikhil kumaraswamy raider image

  ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತಾದರೂ, ಕಥೆ, ಟೈಟಲ್ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಲಹರಿ ಪ್ರೊಡಕ್ಷನ್ಸ್ ನಿಖಿಲ್ ಚಿತ್ರದ ಅಪ್‍ಡೇಟ್ ಕೊಟ್ಟಿದೆ.

  ನಿಖಿಲ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ರೈಡರ್. ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಿಖಿಲ್ ಸ್ಪೋಟ್ರ್ಸ್‍ಮನ್ ಇರಬಹುದು ಎಂಬ ಕುತೂಹಲ ಹುಟ್ಟಿಸಿರುವುದು ಚಿತ್ರದ ಮೋಷನ್ ಪೋಸ್ಟರ್.

  ನಿಖಿಲ್ ಅಭಿನಯದ ಮೊದಲ ಚಿತ್ರ ಜಾಗ್ವಾರ್‍ನ್ನು ತೆಲುಗಿನಲ್ಲೂ ನಿರ್ಮಾಣ ಮಾಡಲಾಗಿತ್ತು. ನಂತರ ಕುರುಕ್ಷೇತ್ರ ಚಿತ್ರ ತೆಲುಗಿಗೆ ಡಬ್ ಆಗಿ ಹೋಗಿ ಸದ್ದು ಮಾಡಿತ್ತು. 3ನೇ ಚಿತ್ರ ಸೀತಾರಾಮ ಕಲ್ಯಾಣ, ತೆಲುಗು ಚಿತ್ರವೊಂದರ ರೀಮೇಕ್ ಆಗಿತ್ತು. ಈಗ 4ನೇ ಚಿತ್ರಕ್ಕೆ ತೆಲುಗಿನ ನಿರ್ದೇಶಕರೇ ಬಂದಿದ್ದು, ಈ ಚಿತ್ರವೂ ತೆಲುಗಿನಲ್ಲಿ ರೆಡಿಯಾಗಲಿದೆ.

  ನಿಖಿಲ್ ಎದುರು ಕಾಶ್ಮೀರಾ ಪರದೇಶಿ ನಾಯಕಿಯಾಗಿದ್ದು, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ರಾಜೇಶ್ ನಟರಂಗ, ಶೋಭರಾಜ್ ಮೊದಲಾದವರು ನಟಿಸಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery