ಹಾರರ್ ಇಷ್ಟಪಡೋವ್ರಿಗೆ : ಓಪನಿಂಗ್ನಲ್ಲಿಯೇ ಸಿಗರೇಟು ಹಚ್ಚಲು ಯತ್ನಿಸೋ ಪೊಲೀಸ್. ಆರಿ ಹೋದ ಬೆಂಕಿಕಡ್ಡಿ ಮತ್ತೆ ಹತ್ತಿಕೊಳ್ಳೋದು, ಹಿನ್ನೆಲೆಯಲ್ಲಿ ಕೇಳಿ ಬರೋ ಪ್ರಕಾಶ.. ಪ್ರಕಾಶ ಅನ್ನೋ ವಾಯ್ಸು..
ತುಂಟತನ ಇಷ್ಟಪಡೋವ್ರಿಗೆ : ಎಲ್ಲ ಹುಡುಗೀರು ಸುಮಾರಾಗೇ ಇರ್ತಾರೆ. ಆದರೆ, ಅವರೆಷ್ಟು ಅಂದವಾಗಿದ್ದಾರೆ ಅನ್ನೋದು ನಾವೆಷ್ಟು ಬರಗೆಟ್ಟಿದ್ದೀವಿ ಅನ್ನೋದ್ರ ಮೇಲೆ ಡಿಪೆಂಡ್ ಆಗಿರುತ್ತೆ.
ಫೈಟ್ ಇಷ್ಟಪಡೋವ್ರಿಗೆ : ಮೈನವರಿವೇಳಿಸುವ ಸಾಹಸ ಸಂಯೋಜನೆಯ ಝಲಕ್ ಕಾಣಿಸ್ತಿದೆ.
ರೊಮ್ಯಾನ್ಸ್ ಇಷ್ಟಪಡೋವ್ರಿಗೆ ಚೆಂದದ ಹಾಡು, ಪಡ್ಡೆಗಳ ಪರದಾಟಕ್ಕೊಂದು ಐಟಮ್ ಸಾಂಗು, ಸಸ್ಪೆನ್ಸ್, ಥ್ರಿಲ್ ಎಲ್ಲವೂ ಇರುವ ಟ್ರೇಲರ್ ಕೃಷ್ಣ ಟಾಕೀಸ್. ನೈಂಟಿ ಮಾತ್ರ ಹಾಕೊಬೇಡ ಮೇನಕಾ.. ನಮ್ಗೆ 90 ಹೊಡ್ದ್ಂಗ್ ಆಯ್ತದೆ ಜೀವಕಾ.. ಅನ್ನೋ ಹಾಡು ಹೊಸ ಹವಾ ಕ್ರಿಯೇಟ್ ಮಾಡೋ ಹಾಗಿದೆ.
ಅಜೇಯ್ ರಾವ್ ವೃತ್ತಿ ಜೀವನದಲ್ಲಿ ಇದು ಬೇರೆಯೇ ಜಾನರ್ನ ಸಿನಿಮಾ. ಅಪೂರ್ವ, ಸಿಂಧು ಲೋಕನಾಥ್ ನಟಿಸಿರೋ ಚಿತ್ರಕ್ಕೆ ವಿಜಯ್ ಆನಂದ್ ನಿರ್ದೇಶನವಿದೆ. ಚಿಕ್ಕಣ್ಣ, ಶೋಭರಾಜ್, ಪ್ರಮೋದ್ ಶೆಟ್ಟಿ, ಮಂಡ್ಯ ರಮೇಶ್..ಹೀಗೆ ಹಿರಿಯ ಕಲಾವಿದರ ತಂಡವೇ ಚಿತ್ರದಲ್ಲಿದೆ. ಗೋವಿಂದ ರಾಜು ಮತ್ತು ಎ.ಹೆಚ್. ಅಲ್ಲೂರು ನಿರ್ಮಾಣದ ಸಿನಿಮಾ ಮೇಕಿಂಗ್ನಲ್ಲಿ ಗಮನ ಸೆಳೆಯುತ್ತಿದೆ.