ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯ ಒಟ್ಟಿಗೇ ಸೇರಿದರೆ ಅಲ್ಲೊಂದು ಹಿಟ್ ಸೃಷ್ಟಿಯಾಗುತ್ತೆ. ಈ ಹಿಂದೆ ಹಲವು ಬಾರಿ ಇಂಥ ಹಿಟ್ ನೀಡಿರುವ ಜೋಡಿ, ಈಗ ಮತ್ತೊಮ್ಮೆ ಒಂದಾಗಿದೆ. ಆದರೆ, ಈ ಬಾರಿಯ ಕಾಂಬಿನೇಷನ್ ಹಳೆಯ ಕಾಂಬಿನೇಷನ್‍ಗಿಂತ ಸ್ವಲ್ಪ ಡಿಫರೆಂಟ್.
ಪುನೀತ್ ಹಾಡುಗಳಲ್ಲಿ ಹೊಸ ಗಾನಭಜಾನಾ, ತೊಂದರೆ ಇಲ್ಲ ಪಂಕಜಾ, ಅಣ್ಣಾಬಾಂಡ್, ಜಾಕಿ, ಹುಡುಗರು.. ಹೀಗೆ ಇವರಿಬ್ಬರೂ ಒಟ್ಟಿಗೇ ಸೇರಿದಾಗಲೆಲ್ಲ
ಒಂದು ಹಿಟ್, ಟ್ರೆಂಡ್ ಸೃಷ್ಟಿಯಾಗಿದೆ. ಈ ಇಬ್ಬರ ಕಾಂಬಿನೇಷನ್ ಉಪ್ಪು ಹುಳಿ ಖಾರದಲ್ಲೂ ಕಂಟಿನ್ಯೂ ಆಗಿದೆ. ಆದರೆ, ಇಲ್ಲಿ ಪುನೀತ್ ನಟಿಸಿಲ್ಲ, ಡ್ಯಾನ್ಸ್ ಮಾಡಿಲ್ಲ. ಹಾಡು ಹಾಡಿದ್ದಾರೆ.
ಪುನೀತ್ ಹಾಡಿರುವ ರೋಮಿಯೋ.. ಹಾಡಿಗೆ ಹೆಜ್ಜೆ ಹಾಕಿರುವುದು ಕಿರುತೆರೆಯ ಚಿನಕುರುಳಿ ಅನುಶ್ರೀ ಹಾಗೂ ಶರತ್. ಶರತ್‍ಗೆ ಇದು ಮೊದಲ ಚಿತ್ರ. ಅಂದಹಾಗೆ ಈ ಚಿತ್ರಕ್ಕೆ ಇಮ್ರಾನ್ ಕೇವಲ ಕೊರಿಯೋಗ್ರಾಫರ್ ಅಲ್ಲ, ನಿರ್ದೇಶಕರೂ ಅವರೇ. ಹಾಡನ್ನು ಅಮೆರಿಕದಲ್ಲಿ ಚಿತ್ರೀಕರಿಸಲಾಗಿದ್ದು, ಈ ಬಾರಿಯೂ ನಮ್ಮ ಜೋಡಿ ಹಿಟ್ ಆಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ ಇಮ್ರಾನ್ ಸರ್ದಾರಿಯಾ.