` mantralaya mahatme, - chitraloka.com | Kannada Movie News, Reviews | Image

mantralaya mahatme,

  • ರಾಜಣ್ಣನ ಗುರುರಾಯರ ಚಿತ್ರ ಬಣ್ಣ ಬಣ್ಣದಲ್ಲಿ ಬರಲಿದೆ

    mantralaya mahatme to release in color

    ಹಳೆಯ ಬ್ಲಾಕ್ & ವೈಟ್ ಚಿತ್ರಗಳನ್ನು ಕಲರ್ ಮಾಡುವುದು ಈಗ ಹೊಸದೇನಲ್ಲ. ಚಿತ್ರಕ್ಕೆ ಕ್ಲಾಸಿಕ್ ಟಚ್ ಇದ್ದು, ಜನ ಈಗಲೂ ನೋಡುತ್ತಾರೆ ಎಂದು ಅನಿಸಿದರೆ ಮಾತ್ರವೇ ಅಂತಹ ಚಿತ್ರಗಳಿಗೆ ಬಣ್ಣ ಬರುತ್ತೆ. ಕನ್ನಡದಲ್ಲಿ ಅಂತಾದ್ದೊಂದು ಶಕ್ತಿ ಇರುವುದು ಡಾ.ರಾಜ್ ಚಿತ್ರಗಳಿಗೆ ಮಾತ್ರ. ಹೀಗಾಗಿಯೇ ಅವರ ಹಲವು ಚಿತ್ರಗಳು ಬಣ್ಣ ತುಂಬಿಕೊಂಡು ಬಂದಿವೆ. ಈಗ ಇನ್ನೊಂದು ಚಿತ್ರ ಮಂತ್ರಾಲಯ ಮಹಾತ್ಮೆಯ ಸರದಿ.

    ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಗುರು ರಾಘವೇಂದ್ರ ಸ್ವಾಮಿಯ ಪಾತ್ರದಲ್ಲಿ ನಟಿಸಿದ್ದಾರೆ. ಉದಯ್ ಕುಮಾರ್, ಜಯಂತಿ, ಕಲ್ಪನಾ ಮೊದಲಾದವರು ನಟಿಸಿರುವ ಚಿತ್ರವನ್ನು ನಿರ್ದೇಶಿಸಿದ್ದವರು ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು. 1966ರಲ್ಲಿ ರಿಲೀಸ್ ಆಗಿದ್ದ ಚಿತ್ರವನ್ನು ಈಗ ಮತ್ತೆ ರಿ-ರಿಲೀಸ್ ಮಾಡಲು ಮುಂದಾಗಿದೆ.

    ಕಸ್ತೂರಿ ನಿವಾಸ ಚಿತ್ರಕ್ಕೆ ಬಣ್ಣ ತುಂಬಿದ್ದ ತಂಡವೇ ಮಂತ್ರಾಲಯ ಮಹಾತ್ಮೆ ಚಿತ್ರವನ್ನು ಕಲರ್ ಫುಲ್ ಮಾಡಿದೆ. ಲಾಕ್ ಡೌನ್ ಮುಗಿದ ನಂತರ ಮಂತ್ರಾಲಯ ಮಹಾತ್ಮೆ ರಿಲೀಸ್ ಆಗಲಿದೆ.

  • Mantralaya Mahatme' To Release In Color

    mantralaya mahatme to release in color

    Dr Rajakumar starrer 'Mantralaya Mahatme' is all set to release in color by next year. The coloring process has already started and it is expected to complete this year end.

    'Mantralaya Mahatme' was released in black and white in 1966. The film directed by T V Singh Thakur is considered as a milestone in Dr Rajakumar's career.

    Earlier, Dr Rajakumar starrer 'Satya Harishchandra' and 'Kasturi Nivasa' was transformed from Black and White to color. Now 'Mantalaya Mahatme' will be the third film to be release in color.

  • ಟಗರು ಸರೋಜಾ, ಚಿಕ್ಕಣ್ಣ ಮದುವೆ : ನಿಜಾನಾ..?

    chikkanna tagaru fame saroja

    ಚಿಕ್ಕಣ್ಣ, ಈಗ ಚಿತ್ರರಂಗದ ಕಾಮಿಡಿ ಸ್ಟಾರ್. ಟಗರು ಸರೋಜಾ ಕೂಡಾ ಫುಲ್ ಡಿಮ್ಯಾಂಡ್‍ನಲ್ಲಿರುವ ನಟಿ. ಈಗ ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಅಭಿಮಾನಿಗಳಿಂದ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಆದರೆ.. ಇದು ನಿಜಾನಾ..?

    ಅಯ್ಯೋ.. ಅದು ಸುಳ್ಳು. ನಾನು ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಒಂದು ಫೋಟೋ ಹಾಕಿದ್ದೆ. ಅದು ಸಿನಿಮಾವೊಂದರಲ್ಲಿನ ಮದುವೆ ದೃಶ್ಯದ ಫೋಟೋ. ಅದನ್ನು ರಿಯಲ್ ಎಂದುಕೊಂಡು ನೂರಾರು ವಿಷ್ ಮಾಡುತ್ತಿದ್ದಾರೆ. ಅಂಥದ್ದೆಲ್ಲ ಏನೂ ಇಲ್ಲ ಎಂದಿದ್ದಾರೆ ಟಗರು ಸರೋಜ ಅಲಿಯಾಸ್ ತ್ರಿವೇಣಿ. ಚಿಕ್ಕಣ್ಣ ಎಂದಿನಂತೆ ನೋ ಕಮೆಂಟ್.. ಫುಲ್ ಸೈಲೆಂಟ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery