ಸರ್ಕಾರ 100% ಓಪನ್ ಘೋಷಿಸುವ ಮೊದಲೇ ಚಿತ್ರರಂಗ ಮೇಲೆದ್ದು ನಿಂತಿದೆ. ಕಡಿಮೆಯಾಗುತ್ತಿರುವ ಕೊರೊನಾ ಕೇಸ್ ಕೊಟ್ಟಿರುವ ಧೈರ್ಯವದು. ಸರ್ಕಾರ ಖಂಡಿತವಾಗಿ 100% ಪ್ರೇಕ್ಷಕರ ಭರ್ತಿಗೆ ಅವಕಾಶ ಕೊಟ್ಟೇ ಕೊಡಲಿದೆ ಎಂಬ ನಿರೀಕ್ಷೆಯಲ್ಲಿ ಹಲವು ಚಿತ್ರಗಳು ರಿಲೀಸ್ ಡೇಟ್ ಘೋಷಿಸಿವೆ.
ಫೆಬ್ರವರಿ 11ಕ್ಕೆ : ಲವ್ ಮಾಕ್ಟೇಲ್ 2, ರೌಡಿ ಬೇಬಿ, ಫೋರ್ವಾಲ್ಸ್, ಒಪ್ಪಂದ, ಮಹಾರೌದ್ರಂ, ಪ್ರೀತಿಗಿಬ್ಬರು
ಫೆಬ್ರವರಿ 18ಕ್ಕೆ : ವರದ, ಗಿಲ್ಕಿ
ಫೆಬ್ರವರಿ 24ಕ್ಕೆ : ಏಕ್ ಲವ್ ಯಾ, ವಾಲಿಮೈ (ಡಬ್ಬಿಂಗ್)
ಫೆಬ್ರವರಿ 25 ಕ್ಕೆ : ಓಲ್ಡ್ ಮಾಂಕ್
ಮುಂದುವರೆಯುತ್ತದೆ..
ಆದರೆ ಇದೆಲ್ಲದರ ನಡುವೆ ಹಲವು ಸಿನಿಮಾಗಳು ಪ್ರಚಾರದಲ್ಲಿ ಹಿಂದೆ ಬಿದ್ದಿವೆ. ರಿಲೀಸ್ ಮಾಡುವ ಶಾಸ್ತ್ರ ಮುಗಿಸುವಂತೆ ಕಾಣುತ್ತಿವೆ. ಕಳೆದ ವರ್ಷ ಗೆದ್ದ ಚಿತ್ರಗಳ ಪ್ರಚಾರದ ವೈಖರಿಯೂ ವಿಭಿನ್ನವಾಗಿತ್ತು. ಎಲ್ಲ ಪ್ಲಾಟ್ಫಾರ್ಮ್ಗಳಲ್ಲೂ ಚಿತ್ರವನ್ನು ಚೆನ್ನಾಗಿ ಪ್ರಚಾರ ಮಾಡಿದವರು ಗೆದ್ದರು. ಒಂದು ಸಿನಿಮಾಗೆ ಕಂಟೆಂಟ್ ಎಷ್ಟು ಮುಖ್ಯವೋ ಪ್ರಚಾರವೂ ಅಷ್ಟೇ ಮುಖ್ಯ.