` cm bs yediyurappa, - chitraloka.com | Kannada Movie News, Reviews | Image

cm bs yediyurappa,

 • ದರ್ಶನ್ ರಾಬರ್ಟ್ ಚಿತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವೇಯ್ಟಿಂಗ್

   ದರ್ಶನ್ ರಾಬರ್ಟ್ ಚಿತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವೇಯ್ಟಿಂಗ್

  ವಿಧಾನಸೌಧದಲ್ಲಿ ದರ್ಶನ್ ರೈತ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರ ಎದುರು ಇದ್ದದ್ದು ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಯಾವುದೇ ಸಂಭಾವನೆಯಿಲ್ಲದೆ ಕೃಷಿ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರನ್ನು ಹೊಗಳಿದ ಯಡಿಯೂರಪ್ಪ ದರ್ಶನ್ ಅವರ ರಾಬರ್ಟ್ ಚಿತ್ರದ ಬಗ್ಗೆ ಹಲವರು ಹೇಳುತ್ತಿದ್ದಾರೆ. ನಾನೂ ಕೂಡಾ ತಪ್ಪದೇ ಆ ಸಿನಿಮಾ ನೋಡುತ್ತೇನೆ ಎಂದು ಹೇಳಿದರು.

  ಇದೊಂದು ವಿಶೇಷ ಕಾರ್ಯಕ್ರಮ. ದರ್ಶನ್ ಬಗ್ಗೆ ಬಿಸಿ ಪಾಟೀಲ್ ಸಾಕಷ್ಟು ಮಾತನಾಡಿದ್ದಾರೆ‌. ಅವರು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಅವರ ತೋಟದಲ್ಲಿ ಕೃಷಿ ಕೆಲಸ ಮಾಡ್ತಿದ್ದಾರೆ. ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದೇ ಸಂತಸ ಎಂದು ಹೇಳಿ ರಾಬರ್ಟ್ ಚಿತ್ರಕ್ಕೆ ಶುಭ ಹಾರೈಸಿದ್ರು.

  ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್ ಇದೇ ಮಾರ್ಚ್ 11ರಂದು ಶಿವರಾತ್ರಿ ಹಬ್ಬದ ಸ್ಪೆಷಲ್ ಆಗಿ ರಿಲೀಸ್ ಆಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರಕ್ಕೆ ಉಮಾಪತಿ ನಿರ್ಮಾಪಕ. ದರ್ಶನ್ ಎದುರು ನಾಯಕಿಯಾಗಿ ಆಶಾ ಭಟ್, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ದೇವರಾಜ್, ರವಿಶಂಕರ್, ಚಿಕ್ಕಣ್ಣ,ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ.

 • ``ದಯವಿಟ್ಟು ನಿರ್ಧಾರ ವಾಪಸ್ ತೆಗೆದುಕೊಳ್ಳಿ''

  ``ದಯವಿಟ್ಟು ನಿರ್ಧಾರ ವಾಪಸ್ ತೆಗೆದುಕೊಳ್ಳಿ''

  ಯುವರತ್ನ ರಿಲೀಸ್ ಆಗಿ ಎರಡು ದಿನವೂ ಮುಗಿದಿರಲಿಲ್ಲ. ಏಪ್ರಿಲ್ 1ಕ್ಕೆ ಸಿನಿಮಾ ರಿಲೀಸ್ ಆಗಿತ್ತು. ಪ್ರೇಕ್ಷಕರ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದವರೇ ಇದು ಪ್ರತಿಯೊಬ್ಬರೂ ತಮ್ಮ ಕುಟುಂಬ, ಮಕ್ಕಳೊಂದಿಗೆ ನೋಡಲೇಬೇಕಾದ ಸಿನಿಮಾ ಎಂದು ಪ್ರಚಾರಕ್ಕಿಳಿದುಬಿಟ್ಟಿದ್ದರು. ಮೌತ್‍ಪೀಸ್ ಕ್ಯಾಂಪೇನ್ ಶುರುವಾಗಿತ್ತು. ಇದನ್ನೆಲ್ಲ ನೋಡಿ ಖುಷಿಯಾದ ಪುನೀತ್ ಮತ್ತು ಸಂತೋಷ್ ಆನಂದರಾಜ್ ಒಟ್ಟಿಗೇ ಫೇಸ್‍ಬುಕ್ ಲೈವ್‍ನಲ್ಲಿ ಕುಳಿತಿದ್ದಾಗಲೇ ದಿಢೀರನೆ ಬರಸಿಡಿಲಿನಂತೆ ಎರಗಿದ ಸುದ್ದಿ ಥಿಯೇಟರುಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಎನ್ನುವುದು.

  ಕಟ್ಟಕಡೆಯ ಕ್ಷಣದವರೆಗೂ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದವರಿಗೆ ಲಾಕ್ ಡೌನ್ ಇಲ್ಲ. ಸೆಮಿ ಲಾಕ್ ಡೌನ್ ಇಲ್ಲ. ನೈಟ್ ಕಫ್ರ್ಯೂ ಇಲ್ಲ. ಯಾವುದೇ ನಿರ್ಬಂಧದ ಆದೇಶಗಳೂ ಇಲ್ಲ. ಡೋಂಟ್ ವರಿ ಎಂದೇ ಹೇಳಿಕೊಂಡು ಬಂದಿತ್ತು ಸರ್ಕಾರ. ಸಿಎಂ ಅಧಿಕೃತ ಟ್ವಿಟರ್ ಖಾತೆಯಲ್ಲೂ ಇದೇ ಸಂದೇಶವಿತ್ತು. ಇದೇ ಧೈರ್ಯದ ಮೇಲೆ ರಿಲೀಸ್ ಮಾಡಿದ ಚಿತ್ರಕ್ಕೆ ಸರ್ಕಾರ ಅನಿರೀಕ್ಷಿತ ಪೆಟ್ಟು ಕೊಟ್ಟಿದೆ. ಇದರಿಂದ ಶಾಕ್‍ಗೆ ಒಳಗಾಗಿರುವ ಚಿತ್ರತಂಡ ಸರ್ಕಾರ ತನ್ನ ನಿರ್ಧಾರವನ್ನು ಪುನರ್‍ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.

  ಮಾರ್ಚ್ 31ರ ರಾತ್ರಿ ಗೊತ್ತಾಗಿದ್ದರೂ ಸಿನಿಮಾ ರಿಲೀಸ್ ಮಾಡ್ತಾ ಇರಲಿಲ್ಲ. ದಯವಿಟ್ಟು ಈ ನಿರ್ಧಾರ ವಾಪಸ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ ಪುನೀತ್.

  ಜನ ಎಲ್ಲ ಮುಂಜಾಗ್ರತೆ ವಹಿಸುತ್ತಿದ್ದಾರೆ. ನಿಯಮ ಪಾಲನೆ ಮಾಡುತ್ತಿದ್ದಾರೆ. ಥಿಯೇಟರುಗಳಲ್ಲಿ ಮಾಸ್ಕ್, ಸ್ಯಾನಿಟೈಸೇಷನ್, ಅಂತರ ಎಲ್ಲವನ್ನೂ ಕಾಪಾಡಿಕೊಳ್ಳುತ್ತಿದ್ದೇವೆ. ಸರ್ಕಾರ ದಯವಿಟ್ಟು ಈ 50% ನಿರ್ಬಂಧವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ ಪುನೀತ್ ರಾಜ್‍ಕುಮಾರ್.

  ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಗಂದೂರು.. ಅಷ್ಟೇ ಏಕೆ ಚಿತ್ರ ನೋಡಿದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ಇದು ಸರಿಯಾದ ನಿರ್ಧಾರ ಅಲ್ಲ. ದಯವಿಟ್ಟು ಈ ನಿರ್ಬಂಧ ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 • 100 percent Occupancy In Theaters: KFCC To Meet Yediyurappa Soon

  100 percent Occupancy In Theaters: KFCC To Meet Yediyurappa Soon

  The Karnataka Film Chamber of Commerce present Jairaj and the Executive Committee members will be soon meeting Chief Minister B S Yediyurappa to request for giving permission to allow 100 percent occupancy in theaters.

  On Monday, the Tamil Nadu Government granted permission to increase the seating capacity in single screens and multiplexes from the existing 50 percent to 100 percent with immediate effect. The Government in its notification has said that as the Covid 19 cases are declining day by day, the seating capacity of the theaters is being increased from 50 to 100 percent. 

  With the Tamil Nadu Government permission for 100 percent occupancy in theaters, many other film industries are requesting their respective Governments to do the same. The Karnataka Film Chamber of Commerce is also planning to meet the Chief Minister and request him to grant permission at the earliest.

 • 16,095 ಕಲಾವಿದರಿಗೆ 3 ಸಾವಿರ ಪರಿಹಾರ

  16,095 ಕಲಾವಿದರಿಗೆ 3 ಸಾವಿರ ಪರಿಹಾರ

  ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 16,095 ಕಲಾವಿದರಿಗೆ ರಾಜ್ಯ ಸರ್ಕಾರ 3 ಸಾವಿರ ರೂ. ನೀಡಲು ನಿರ್ಧರಿಸಿದೆ. ಆದೇಶವೂ ಹೊರಬಿದ್ದಿದೆ. ಇದಕ್ಕಾಗಿ ರಾಜ್ಯ ಸರ್ಕಾರ 4.82 ಕೋಟಿ ರೂ. ಹಣವನ್ನೂ ಮಂಜೂರು ಮಾಡಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಆರ್ಥಿಕ ಸಹಾಯ ನೀಡುವ ಯೋಜನೆಗೆ ಹಣಕಾಸು ಇಲಾಖೆ ಅನುಮೋದನೆಯನ್ನೂ ನೀಡಿದೆ.

  ಈ ಪರಿಹಾರ ಪಡೆಯಲು ಷರತ್ತುಗಳೂ ಇವೆ. ಈ ಕಲಾವಿದರು ಸರ್ಕಾರದಿಂದ ಮಾಸಾಶನ ಪಡೆಯುತ್ತಿದ್ದರೆ ಇದರ ಲಾಭ ಸಿಗುವುದಿಲ್ಲ. ನೇರವಾಗಿ ಕಲಾವಿದರ ಖಾತೆಗೇ ಹಣ ವರ್ಗವಾಗಲಿದೆ.

  ಸಿಎಂ ಯಡಿಯೂರಪ್ಪ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ನಂತರ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಬಿಜೆಪಿ ಶಾಸಕಿಯೂ ಆಗಿರುವ ನಟಿ ತಾರಾ ಅನುರಾಧಾ, ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಚಿತ್ರರಂಗದ ಕಾರ್ಮಿಕರು, ಕಲಾವಿದರ ಬಗ್ಗೆ ಯಡಿಯೂರಪ್ಪನವರಿಗೆ ಇರುವ ಕಾಳಜಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಾ.ರಾ.ಗೋವಿಂದು ಹೇಳಿದ್ದಾರೆ. ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.

 • 50% ತುಘಲಕ್ ದರ್ಬಾರ್ : ಚಿತ್ರರಂಗ ಕೆರಳಿದ್ದೇಕೆ..?

  50% ತುಘಲಕ್ ದರ್ಬಾರ್ : ಚಿತ್ರರಂಗ ಕೆರಳಿದ್ದೇಕೆ..?

  ಏಪ್ರಿಲ್ 1ನೇ ತಾರೀಕು ಯುವರತ್ನ ರಿಲೀಸ್ ಆಗಿತ್ತು. ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಚಿತ್ರದ ಬಗ್ಗೆ ಪ್ರೇಕ್ಷಕರೇ ಮತ್ತೊಬ್ಬರಿಗೆ ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ಪ್ರಮೋಟ್ ಮಾಡುತ್ತಿದ್ದರು. ಇಷ್ಟು ಬೇಗ ಮೌತ್ ಪಬ್ಲಿಸಿಟಿ ಪಡೆದ ಚಿತ್ರ ಯುವರತ್ನ. ಆದರೆ, 2ನೇ ದಿನ ಸಂಜೆ ಫೇಸ್ಬುಕ್ ಲೈವ್ನಲ್ಲಿ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಕುಳಿತಿದ್ದ ಪುನೀತ್ ಮತ್ತು ಸಂತೋಷ್ ಆನಂದರಾಮ್ ಅವರಿಗೆ ಶಾಕ್ ಕೊಟ್ಟಿತ್ತು ರಾಜ್ಯ ಸರ್ಕಾರ. ದಿಢೀರನೇ ಆದೇಶ ಹೊರ ಬಂದಿತ್ತು. ವೀಕೆಂಡ್ ಬಾಕ್ಸಾಫೀಸ್ ನೋಡುವ ಅವಕಾಶವನ್ನೂ ಕೊಡಲಿಲ್ಲ ರಾಜ್ಯ ಸರ್ಕಾರ. ಎಲ್ಲವೂ ಸಡನ್ ಶಾಕ್. ಇಷ್ಟಕ್ಕೂ ಸರ್ಕಾರದ ಈ ನಿರ್ಧಾರದ ವಿರುದ್ಧ ಚಿತ್ರರಂಗ ಕೆರಳಿ ನಿಲ್ಲಲು ಕಾರಣವೂ ಇತ್ತು.

  ಇಂಥಾದ್ದೊಂದು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಫಿಲಂ ಚೇಂಬರ್ ಹಾಗೂ ಯುವರತ್ನ ಚಿತ್ರತಂಡದವರು ಹಲವು ಬಾರಿ ಸರ್ಕಾರವನ್ನು ಸಂಪರ್ಕಿಸಿದ್ದರು. ನಿರ್ಧಾರ ಹೊರಬಿದ್ದ ದಿನ ಮಧ್ಯಾಹ್ನ ಕೂಡಾ ಸರ್ಕಾರ ಅಂತಾದ್ದೊಂದು ಆಲೋಚನೆ ಕೂಡಾ ನಮ್ಮಲ್ಲಿ ಇಲ್ಲ ಎಂದೇ ಸ್ಪಷ್ಟಪಡಿಸಿತ್ತು.

  ಅಂತಾದ್ದೊಂದು ನಿರ್ಣಯ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರ ಸೌಜನ್ಯಕ್ಕೂ ಸಿನಿಮಾ ಕ್ಷೇತ್ರದವರಿಗೆ ತಿಳಿಸಿರಲಿಲ್ಲ. ಅಭಿಪ್ರಾಯವನ್ನೂ ಕೇಳಿರಲಿಲ್ಲ.

  ಫಿಲಂ ಚೇಂಬರ್ ಸೇರಿದಂತೆ ಚಿತ್ರರಂಗದ ಪ್ರತಿ ಸಂಘಟನೆಗೂ ವಿಷಯ ಗೊತ್ತಾಗಿದ್ದೇ ಟಿವಿ ಚಾನೆಲ್ಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಹೊರಬಿದ್ದ ಮೇಲೆ. ಯುವರತ್ನ ಚಿತ್ರತಂಡಕ್ಕೂ ಇದರ ಬಗ್ಗೆ ಸಣ್ಣ ಮಾಹಿತಿ ಇರಲಿಲ್ಲ.

  ಹಾಗಾದರೆ ಸರ್ಕಾರದಲ್ಲಿದ್ದ ಪ್ರಭಾವಿ ನಾಯಕರು ಯಾರಾದರೂ ಬೇಕೆಂದೇ ಚಿತ್ರತಂಡದ ವಿರುದ್ಧ ಪಿತೂರಿ ಮಾಡಿದರಾ..? ಯುವರತ್ನ ಚಿತ್ರವನ್ನು ಸೋಲಿಸಲೆಂದೇ ಬಿಡುಗಡೆಯಾಗುವವರೆಗೂ ಕಾದು ಒಂದು ದಿನ ಕಳೆದ ಕೂಡಲೇ 50% ನಿರ್ಬಂಧ ಹೇರಿದರಾ..? ಇಂಥಾದ್ದೊಂದು ಪ್ರಶ್ನೆಯನ್ನು ಅಭಿಮಾನಿಗಳಷ್ಟೇ

  ಅಲ್ಲ, ಚೇಂಬರ್ನ ಸದಸ್ಯರೂ ಎತ್ತಿದರು. ಆದರೆ, ಇದು ಫಿಲಂ ಚೇಂಬರ್ ಅಧಿಕೃತ ಅಭಿಪ್ರಾಯ ಅಲ್ಲ. ಸರ್ಕಾರ ಈ ಕುರಿತು ಸ್ಪಷ್ಟೀಕರಣ ನೀಡಬೇಕು. ದಯವಿಟ್ಟು ಇಂತಾ ಕೆಲಸ ಮಾಡಬೇಡಿ ಎಂದು ಮನವಿಯನ್ನೂ ಮಾಡಿದರು. ಆದರೆ.. ಅನುಮಾನಗಳಿಗೆ ಉತ್ತರ ಕೊಡಬೇಕಾದ ಸರ್ಕಾರ ಈ ಕ್ಷಣದವರೆಗೂ ಉತ್ತರ ಕೊಟ್ಟಿಲ್ಲ. ಚೇಂಬರ್ನವರು ಕೊಟ್ಟ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆಯೇನೋ ಸಿಕ್ಕಿದೆ. ಆದರೆ.. ಯುವರತ್ನ ಚಿತ್ರ ರಿಲೀಸ್ ಆದ ನಂತರ ಸಿಕ್ಕಿದ್ದ ಒಂದು ಗೋಲ್ಡನ್ ವೀಕ್ ಕಳೆದುಹೋಗಿದೆ. ಇದೆಲ್ಲದರ ನಡುವೆಯೂ ಇರುವ ಕಾನ್ಫಿಡೆನ್ಸ್ ಒಂದೇ. ಚಿತ್ರಕ್ಕೆ ಸಿಕ್ಕಿರುವ ಪಾಸಿಟಿವ್ ರೆಸ್ಪಾನ್ಸ್. ಏಕೆಂದರೆ.. ಈಗ ಈ ಚಿತ್ರವನ್ನು ಗೆಲ್ಲಿಸೋಕೆ ಚಿತ್ರರಸಿಕರೇ ನಿಂತಿದ್ದಾರೆ.ಏಕೆಂದರೆ ಈಗ 100% ಪ್ರೇಕ್ಷಕರ ಭರ್ತಿಗೆ ಸರ್ಕಾರ ಓಕೆ ಎಂದಿದೆ.ಚಿತ್ರ ರಸಿಕರ ಹೋರಾಟ ಗೆಲ್ಲಲಿ.

 • 50% ನಿರ್ಬಂಧ : ಸರ್ಕಾರದ ತುಘಲಕ್ ದರ್ಬಾರ್

  50% ನಿರ್ಬಂಧ : ಸರ್ಕಾರದ ತುಘಲಕ್ ದರ್ಬಾರ್

  ಇದನ್ನು ತುಘಲಕ್ ದರ್ಬಾರ್ ಎನ್ನದೇ ವಿಧಿಯಿಲ್ಲ. ಕೊರೊನಾ ಏರಿಕೆ ಕಾಣುತ್ತಿರುವುದು ಈಗಲ್ಲ. ಆದರೆ, ರಾಜ್ಯ ಸರ್ಕಾರ ಏಪ್ರಿಲ್ 1ರ ರಾತ್ರಿಯವರೆಗೂ ಹೇಳಿದ್ದೇ ಬೇರೆ. ಏಪ್ರಿಲ್ 2ರ ಬೆಳಗ್ಗೆಯೂ ಹೇಳಿದ್ದು ಬೇರೆ. ಸಂಜೆಯ ಹೊತ್ತಿಗೆ ಮಾಡಿದ್ದೇ ಬೇರೆ. ಇದ್ದಕ್ಕಿದ್ದಂತೆ ಥಿಯೇಟರುಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎಂದು ಘೋಷಿಸಿಬಿಟ್ಟಿತು ಸರ್ಕಾರ. ಇದನ್ನು ಮೊದಲೇ ಹೇಳಿದ್ದರೆ ಯುವರತ್ನ ಚಿತ್ರ ರಿಲೀಸ್‍ನ್ನೇ ಮುಂದಕ್ಕೆ ಹಾಕಬಹುದಿತ್ತು. ಚಿತ್ರದ ನಿರ್ಮಾಪಕರು, ವಿತರಕರು, ಥಿಯೇಟರಿನವರು.. ಹೀಗೆ ಎಲ್ಲರೂ ಬಚಾವ್ ಆಗುತ್ತಿದ್ದರು. ಆದರೆ ಕಟ್ಟಕಡೆಯ ಕ್ಷಣದವರೆಗೂ ನೋ ಪ್ರಾಬ್ಲಂ.. ಬನ್ನಿ ಬನ್ನಿ.. ಎಂದು ಹೇಳಿ ಸಡನ್ ರೂಲ್ಸ್ ಚೇಂಜ್ ಮಾಡಿದ ಸರ್ಕಾರದ ಕ್ರಮ ಬಲಿಪೀಠಕ್ಕೆ ಹಾರ, ತುರಾಯಿ ಕರೆದುಕೊಂಡು ಬಂದು ಬಲಿ ಕೊಡುವವರಂತೆಯೇ ಇದೆ. ತುಘಲಕ್ ದರ್ಬಾರ್ ಅನ್ನೋಕೆ ಇದೊಂದೇ ಕಾರಣ ಅಲ್ಲ.

  ತುಘಲಕ್ ದರ್ಬಾರ್ : 01

  ಥಿಯೇಟರಿನಲ್ಲಿ ಸರ್ಕಾರ 50% ನಿರ್ಬಂಧ ಹೇರಿದೆ. ಅರ್ಥಾತ್, ಥಿಯೇಟರಿಗೆ ಬಂದವರು ಪ್ರತಿ ಸೀಟಿನ ಮಧ್ಯೆ ಗ್ಯಾಪ್ ಇಟ್ಟುಕೊಂಡು ಸಿನಿಮಾ ನೋಡಬೇಕು. ಅಂದರೆ, ಸಿನಿಮಾ ನೋಡೋಕೆ ಬರುವವರು ಒಟ್ಟಿಗೇ ಆಟೋ, ಬೈಕ್ ಅಥವಾ ಕಾರ್‍ನಲ್ಲಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಬರಬಹುದು. ಥಿಯೇಟರಿನಲ್ಲಿ ಅಕ್ಕಪಕ್ಕ ಕೂತರೆ ಮಾತ್ರ ಕೊರೊನಾ ಬಂದುಬಿಡುತ್ತಾ..?

  ತುಘಲಕ್ ದರ್ಬಾರ್ : 02

  ಇನ್ನು ಎಲೆಕ್ಷನ್ ನಡೆಯುತ್ತಿರುವ ಬೆಳಗಾವಿ, ರಾಯಚೂರುಗಳಲ್ಲಿ ಇಂತಹ ಯಾವುದೇ ನಿರ್ಬಂಧ ಇಲ್ಲ. ಎಲೆಕ್ಷನ್ ನಡೆಯುವ ಜಾಗದಲ್ಲಿ ಕೊರೊನಾ ಇರೋದೇ ಇಲ್ವಾ..? ರಾಜಕೀಯ ಪಕ್ಷಗಳಿಗೆ ಲಾಭ ಆಗುತ್ತೆ ಅನ್ನೋವಾಗ ಕೊರೊನಾ ಅಡ್ಡಿ ಆಗುವುದಿಲ್ಲವಾ..?

  ತುಘಲಕ್ ದರ್ಬಾರ್ : 03

  ಹೀಗೆ 50% ನಿರ್ಬಂಧ ಹೇರಿರುವ ಸರ್ಕಾರ, ಇದುವರೆಗೆ ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ವಿಭಾಗಕ್ಕಾದರೂ ಕನಿಷ್ಠ ಮಟ್ಟದ ನೆರವನ್ನಾದರೂ ನೀಡಿದೆಯಾ..? ಬದಲಿಗೆ ಇನ್ನಷ್ಟು ಮತ್ತಷ್ಟು ಹೊರೆಗಳನ್ನೇ ಹೇರಿದೆ. ಇದೆಲ್ಲದರ ಮಧ್ಯೆ ಕೊರೊನಾ ಜಾಗೃತಿ ನಿಯಮಗಳನ್ನು ಈಗಲೂ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಥಿಯೇಟರಿನಲ್ಲಿ. ಇದೊಂದು ರೀತಿ ಕಷ್ಟಪಟ್ಟು ದುಡಿದು ಊಟಕ್ಕೆ ಕುಳಿತವರ ಅನ್ನದ ತಟ್ಟೆಯನ್ನೇ ಕಿತ್ತುಕೊಂಡಂತಲ್ಲವೇ..? ಈಗಾಗಲೇ ಬಿಕರಿಯಾಗಿರುವ ಟಿಕೆಟ್‍ಗಳನ್ನು ಏನು ಮಾಡಬೇಕು..?

  ತುಘಲಕ್ ದರ್ಬಾರ್ : 04

  ಬೆಳಗ್ಗೆ ಒಂದು ಮಾತು.. ಮಧ್ಯಾಹ್ನ ಇನ್ನೊಂದು ಹೇಳಿಕೆ.. ಸಂಜೆ ಅವುಗಳಿಗೆ ಸಂಬಂಧವೇ ಇಲ್ಲದಂತೆ ಹೊಸ ರೂಲ್ಸು.. ಇದು ಸರ್ಕಾರ ನಡೆಸುವವರು ಇರೋ ರೀತಿನಾ..? ಕಾಮನ್‍ಸೆನ್ಸ್ ಕೊರತೆ ಕಾಡುತ್ತಿದೆ ಎನಿಸುವುದಿಲ್ಲವಾ..?

  ತುಘಲಕ್ ದರ್ಬಾರ್ : 05

  ರಾಜಕೀಯ ರ್ಯಾಲಿಗಳಲ್ಲಿ ಈಗಲೂ ಜನ ಸಾವಿರಾರು ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಅಲ್ಲಿ ಇದೇ ಸಚಿವರು, ಶಾಸಕರು ಹೋಗ್ತಾರೆ. ನಯಾಪೈಸೆಯ ಕೊರೊನಾ ರೂಲ್ಸ್‍ನ್ನೂ ಅಲ್ಲಿ ಫಾಲೋ ಮಾಡಲ್ಲ. ಅಲ್ಲಿಗೆ ಬಾರದ ಕೊರೊನಾ, ಥಿಯೇಟರಿಗೆ ಮಾತ್ರ ಬರುತ್ತೆ ಎಂದರೆ ಇದರ ಹಿಂದಿರೋದು ತುಘಲಕ್ ವಂಶಸ್ಥರು ಎನ್ನಿಸುವುದಿಲ್ಲವೇ..?

  ತುಘಲಕ್ ದರ್ಬಾರ್ : 06

  ಜನ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕೊರೊನಾ ಓಡಿಸಬೇಕು ಎನ್ನುತ್ತಿದೆ ಸರ್ಕಾರ. ಆದರೆ ಸಿನಿಮಾಗಳನ್ನು ಬಿಟ್ಟು ನೋಡುವುದಾದರೆ ಜಿಮ್, ಸ್ವಿಮ್ಮಿಂಗ್‍ಪೂಲ್‍ಗಳನ್ನೂ ಬಾಗಿಲು ಮುಚ್ಚಿಸಿದೆ. ಜಿಮ್‍ನಲ್ಲಿ ಸಾಮಾಜಿಕ ಅಂತರ ಮತ್ತು ಕೊರೊನಾ ನಿಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬೇರೆಲ್ಲೂ ಹರಡದ ಕೊರೊನಾ, ಜಿಮ್‍ಗಳಲ್ಲಿ ಹರಡುತ್ತೆ ಎಂದು ಹೇಳಿದ ತಜ್ಞರು ಯಾರು..?

  ತುಘಲಕ್ ದರ್ಬಾರ್ : 07

  ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮಾತ್ರ ಈ ರೂಲ್ಸ್ ಜಾರಿಯಾಗಿದೆ. ಎಲೆಕ್ಷನ್ ನಡೆಯುತ್ತಿರುವ ಬೆಳಗಾವಿ, ರಾಯಚೂರುಗಳಲ್ಲಿ ಇಲ್ಲ. ಇನ್ನು ಬೆಳಗಾವಿ, ಈಗ ಕೊರೊನಾದ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆ. ತುಘಲಕ್ ದರ್ಬಾರ್ ಅನ್ನೋದು ಇದಕ್ಕೇ ಅಲ್ಲವಾ..?

  ತುಘಲಕ್ ದರ್ಬಾರ್ : 08

  ಸರ್ಕಾರ 50% ಪ್ರೇಕ್ಷಕರಿಗೆ ಏನು ಸಮಸ್ಯೆ ಎನ್ನುವವರಿಗೆ ಒಂದು ಕ್ಲಾರಿಫಿಕೇಷನ್. ಥಿಯೇಟರ್ ಹೌಸ್‍ಫುಲ್ ಆಗಲೀ.. 50% ಆಗಲೀ.. ಹತ್ತು ಜನರಷ್ಟೇ ಬರಲಿ.. ಥಿಯೇಟರ್ ನಿರ್ವಹಣಾ ವೆಚ್ಚ ನಯಾಪೈಸೆಯೂ ಕಡಿಮೆಯಾಗುವುದಿಲ್ಲ. ಆದರೆ ಕಟ್ಟಬೇಕಾದ ಟ್ಯಾಕ್ಸು, ಕರೆಂಟ್ ಬಿಲ್ ಸೇರಿದಂತೆ ಮತ್ತಿತರ ಖರ್ಚುಗಳಲ್ಲಿ ಸರ್ಕಾರ ಒಂದು ಪೈಸೆಯನ್ನೂ ಬಿಡುವುದಿಲ್ಲ.

  ತುಘಲಕ್ ದರ್ಬಾರ್ : 09

  ಸರ್ಕಾರ ಥಿಯೇಟರುಗಳನ್ನು ತೆರೆಯುವ ಮೊದಲೇ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಿತ್ತು. ಆದರೆ, ಆ ಮಾಲ್‍ಗಳಲ್ಲಿ ಬಿಸಿನೆಸ್ ಶುರುವಾಗಿದ್ದು ಥಿಯೇಟರ್ಸ್ ಓಪನ್ ಆದ ನಂತರವೇ. ಅದರ ಅರ್ಥ ಇಷ್ಟೆ, ಥಿಯೇಟರುಗಳಿಗೆ ಬ್ರೇಕ್ ಹಾಕೋಕೆ ಹೋದರೆ.. ಬಿಸಿನೆಸ್ ಚೈನ್‍ನಲ್ಲಿರೋ ಇತರೆ ಬಿಸಿನೆಸ್‍ಗಳೂ ಹೊಡೆತ ತಿನ್ನುತ್ತವೆ. ಏಕೆಂದರೆ ಪ್ರತಿಯೊಂದು ವ್ಯವಹಾರವೂ ಇನ್ನೊಂದು ಉದ್ಯಮ, ವ್ಯವಹಾರದೊಂದಿಗೆ ಜೊತೆಗೂಡಿಯೇ ಸಾಗಬೇಕು. ಇದು ಕಾಮನ್ ಎಕನಾಮಿಕ್ಸು. ಸರ್ಕಾರ ನಡೆಸುವವರಿಗೆ ಇದು ಅರ್ಥವಾಗುತ್ತಿಲ್ಲ ಎನ್ನುವುದೇ ದುರ್ದೈವ.

  ಪ್ರಾಬ್ಲಂ ಏನು ಎಂದರೆ ನಮ್ಮ ಚಿತ್ರರಂಗದವರೂ ಅಷ್ಟೆ. ಗೊಳೋ ಎನ್ನುತ್ತಿದ್ದಾರೆಯೇ ಹೊರತು, ತಿರುಗಿಸಿ ಕೇಳುವ ಧೈರ್ಯವನ್ನು ತೋರುತ್ತಿಲ್ಲ. ಗಂಟಲು ಏರಿಸಿದರೆ ಪ್ರಾಬ್ಲಂ ಆಗಬಹುದು ಎಂಬ ಆತಂಕ ಇದ್ದಹಾಗಿದೆ. ಅದರೆ ಪ್ರೀತಿಯ ಮನವಿಗೆ ಸಿಕ್ಕಿರುವ ಪುರಸ್ಕಾರವಾದರೂ ಅದೇ ಅಲ್ಲವೇ..? ಒಂದಂತೂ ಸತ್ಯ. ಚೇತರಿಸಿಕೊಳ್ಳುತ್ತಿದ್ದ ಉದ್ಯಮಕ್ಕೆ ಅರ್ಧ ಬೀಗ ಜಡಿದ ಸರ್ಕಾರ, ಈಗಾಗಲೇ ನರಳುತ್ತಿದ್ದ ಒಂದು ದೊಡ್ಡ ಉದ್ಯಮ ಸಮೂಹವನ್ನು ಇನ್ನಷ್ಟು ಮತ್ತಷ್ಟು ಪೆಟ್ಟು ಕೊಟ್ಟು ತೆಪ್ಪಗಿರಿಸುವ ಹಠ ತೊಟ್ಟಿದೆ. ಎದ್ದು ಕಾಣುತ್ತಿರುವುದು ಕಾಮನ್‍ಸೆನ್ಸ್ ಕೊರತೆ.

  ಕೆ.ಎಂ.ವೀರೇಶ್

  ಸಂಪಾದಕರು

  ಚಿತ್ರಲೋಕ

 • CM Lays Foundation Stone For KFPA's New Building

  CM Lays Foundation Stone For KFPA's New Building

  Chief Minister B S Yediyurappa on Thursday laid the foundation stone for Kannada Film Producers Association's new building near Shivananda Circle in Bangalore.

  It was the dream of KFPA's to have its own building and office and during Muniratna's tenure as a president, the Association had bought the land worth Rs 10 crore near Gandhi Bhavan near Shivananda Circle. However, the building could not be started due to various reasons.

  Now with Chief Minister Yedyurappa laying the foundation stone for the office building, the construction for the building has been kickstarted and is likely to complete and get inaugurated in the next one year.

  The foundation laying ceremony was attended by actor Ravichandran,  Agriculture Minister B C Patil, Tara, KFPA president Praveen Kumar, producers Sa Ra Govindu, N M Suresh, K Manju and others. 

 • Relax ರಿಲ್ಯಾಕ್ಸ್.. Relax

  Relax ರಿಲ್ಯಾಕ್ಸ್.. Relax

  ಈಷ್ಟೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಅಪ್ಪಳಿಸಬಹುದಾಗಿದ್ದ ಅಪಾಯವೊಂದು ದೂರವಾಗುವ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ನಂತರ ಮಾತನಾಡಿರುವ ಸಿಎಂ ಯಡಿಯೂರಪ್ಪ, ನೋ ಲಾಕ್ ಡೌನ್, ನೋ ಸೀಲ್ ಡೌನ್ ಎಂದಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರಗಳಿಗೆ 50% ಪ್ರೇಕ್ಷಕರ ನಿರ್ಬಂಧ ಜಾರಿಯಾಗಬಹುದು ಎನ್ನುವ ಆತಂಕದಲ್ಲಿದ್ದವರಿಗೂ ರಿಲೀಫ್ ಕೊಟ್ಟಿದ್ಧಾರೆ.

  ಈಗಿರುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಅನುಸರಿಸಿ. ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್ ಕಡ್ಡಾಯವಾಗಿ ಪಾಲಿಸಿ. ಸಿನಿಮಾ ಹಾಲ್ಗಳನ್ನು ಮುಚ್ಚುವ ಅಥವಾ ಪ್ರೇಕ್ಷಕರನ್ನು ನಿರ್ಬಂಧಿಸುವ ಆಲೋಚನೆಗಳು ಸದ್ಯಕ್ಕಿಲ್ಲ ಎಂದಿದ್ದಾರೆ ಯಡಿಯೂರಪ್ಪ.

  ಹಾಗಂತ, ಕಂಪ್ಲೀಟ್ ರಿಲ್ಯಾಕ್ಸ್ ಆಗುವಂತೆಯೂ ಇಲ್ಲ. ಬೆಂಗಳೂರಿನಲ್ಲಂತೂ ದಿನೇ ದಿನೇ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚುತ್ತಿವೆ. ಹೀಗಾಗಿ.. ಪರಿಸ್ಥಿತಿ ಇನ್ನಷ್ಟು ಗಂಭೀರವಾದರೆ ಸರ್ಕಾರ ಮತ್ತೊಮ್ಮೆ ಚಿತ್ರಮಂದಿರಗಳ ಮೇಲೆ ಕೆಂಗಣ್ಣು ಬೀರಿದರೂ ಆಶ್ಚರ್ಯವಿಲ್ಲ.

 • Sandalwood Pleads CM B S Yediyurappa To Allow Film Shooting in Lockdown 5.0

  sandalwood pleads cm bs yediyurappa to allow film shooting

  After the State Government gave its green signal allowing shooting of television serials with certain conditions along with easing restrictions to other sectors in lockdown 4.0, a delegation led by Karnataka Film Academy chairman Suneel Puranik including president of Karnataka Film Chamber Of Commerce Jairaj, KFCC former president Sa Ra Govindu met Chief Minister B S Yediyurappa, pleading with representation to allow film shooting in the lockdown 5.0.

  The delegation also included noted producer K Manju, M N Suresh, A Ganesh, Umesh Banakar, President of the Producers Association Praveen Kumar and others.

  "We have given a representation to the Chief Minister B S Yediyurappa to allow filming with limited crew once the lockdown 4.0 ends. We are hopeful after Yediyurappa has assured that he will look into it," says Mr. Suneel Puranik.

  He goes onto add that Kannada film industry has suffered a loss of around Rs 500 crore due to lockdown. "More than fifty films have stopped with many of them left with just the shooting of songs and climax scenes to wrap up the shooting process. We have also assured that safety norms such as wearing of masks, and limiting crew during shooting will be followed," he said.

  Also, the delegation urged the chief minister to allow operation of single screen theatres with certain conditions while the centre government decides on the fate of multiplexes.

  The delegation also thanked the State Government for providing food item coupons worth over Rs 2 crore to various sectors of the Kannada film industry. The team also said that it has been requested to increase the ticket fare by Rs 5 so as to utilise the same for the producers welfare tr

 • ಕಲಾವಿದರು, ತಂತ್ರಜ್ಞರು ಸರ್ಕಾರದ ನೆರವು ಪಡೆಯುವುದು ಹೇಗೆ..?

  ಕೋವಿಡ್ 2ನೇ ಅಲೆಯಲ್ಲಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರಿಗೆ ನೆರವು ಘೋಷಿಸಿತ್ತು

  ಕೋವಿಡ್ 2ನೇ ಅಲೆಯಲ್ಲಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರಿಗೆ ನೆರವು ಘೋಷಿಸಿತ್ತು. ಸಿಎಂ ಬಿಎಸ್‍ವೈ ಘೋಷಿಸಿದ್ದ 3 ಸಾವಿರ ರೂ. ಸಹಾಯಧನದ ಪ್ಯಾಕೇಜ್‍ನ ಜಾರಿ ಪ್ರಕ್ರಿಯೆಯೂ ಶುರುವಾಗಿದೆ. ಚಿತ್ರರಂಗದ 22 ಸಾವಿರಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಇದರ ನೆರವು ಪಡೆಯಬಹುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಬಿ.ಹರ್ಷ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲ ಸರಿ, ಇದನ್ನು ಪಡೆಯುವುದು ಹೇಗೆ? ಇಲ್ಲಿದೆ ಡೀಟೈಲ್ಸ್.

  ಸರ್ಕಾರದ ಸಹಾಯಧನ ಪಡೆಯಲು ಇಚ್ಚಿಸುವವರು ಅರ್ಜಿ ನಮೂನೆಗಾಗಿ ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್‍ಗೆ ಹೋಗಬೇಕು. ತಿತಿತಿ.sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಸೈಟ್‍ನಲ್ಲಿ ಅರ್ಜಿ ನಮೂನೆ ಸಿಗುತ್ತದೆ. ನಿಯಮ ಹಾಗೂ ಷರತ್ತುಗಳೂ ಅಲ್ಲಿಯೇ ಇವೆ.

  ಒಬ್ಬರು ಒಂದು ಅರ್ಜಿಯನ್ನಷ್ಟೇ ಸಲ್ಲಿಸಬಹುದು. ಆಧಾರ್ ಕಾರ್ಡ್ ನೋಂದಣಿ ಕಡ್ಡಾಯ.

  ಅರ್ಜಿ ಸಲ್ಲಿಸುವವರು ತಮ್ಮ ಸಂಬಂಧಿತ ಸಂಘಗಳಲ್ಲಿ ಸದಸ್ಯತ್ವ ಹೊಂದಿರಬೇಕು. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ತಂತ್ರಜ್ಞರ ನಿರ್ದಿಷ್ಟ ಸಂಘಗಳಲ್ಲಿ ಸದಸ್ಯತ್ವ ಹೊಂದಿರಬೇಕು. ಆ ಸಂಘಗಳವರು ಸದಸ್ಯರಿಗೆ ಶಿಫಾರಸು ಪತ್ರ ನೀಡುತ್ತಾರೆ.

  ಸಂಘದವರು ಕೊಟ್ಟ ಶಿಫಾರಸು ಪತ್ರವನ್ನು ಅರ್ಜಿಯ ಜೊತೆ ಅಪ್‍ಲೋಡ್ ಮಾಡಬೇಕು.

  ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪಿಎಫ್ ಖಾತೆಯ ನಂಬರ್ ಜೊತೆ ಮಾಲೀಕರ ಪತ್ರವನ್ನು ಅಪ್‍ಲೋಡ್ ಮಾಡಬೇಕು.

  ಜುಲೈ 9ರೊಳಗೆ ಅರ್ಜಿ ಸಲ್ಲಿಸಿದವರಿಗೆ 3 ಸಾವಿರ ರೂ. ಸಹಾಯಧನ ಲಭ್ಯವಾಗಲಿದೆ.

 • ಚಿತ್ರಮಂದಿರ ರೀ-ಓಪನ್`ಗೆ ಫಿಲ್ಮ್ ಚೇಂಬರ್ ಮನವಿ

  ಚಿತ್ರಮಂದಿರ ರೀ-ಓಪನ್`ಗೆ ಫಿಲ್ಮ್ ಚೇಂಬರ್ ಮನವಿ

  ಕೇರಳ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈಗಾಗಲೇ ಚಿತ್ರಮಂದಿರಗಳ ರೀ-ಓಪನ್‍ಗೆ ಅವಕಾಶ ಸಿಕ್ಕಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲ. ಅನ್‍ಲಾಕ್ 3.0ನಲ್ಲೂ ಅನುಮತಿ ಸಿಗಲಿಲ್ಲ. ಈಗ ಕೊರೊನಾದಿಂದಾಗಿ ಬಾಗಿಲು ಮುಚ್ಚಿರುವುದು ಥಿಯೇಟರ್`ಗಳು ಮಾತ್ರ.

  ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿ ಎಂದು ಕರ್ನಾಟಕ ಫಿಲ್ಮ್ ಚೇಂಬರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಜುಲೈ ತಿಂಗಳ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಚೇಂಬರ್ ನಿರ್ಣಯ ತೆಗೆದುಕೊಂಡಿದೆ.

  ರಾಜ್ಯ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡಬೇಕು. ಚಿತ್ರಮಂದಿರಗಳ ಕರೆಂಟ್ ಬಿಲ್ ಮತ್ತು ಟ್ಯಾಕ್ಸ್ ಮನ್ನಾ ಮಾಡಬೇಕು ಎನ್ನುವ ಬೇಡಿಕೆಯನ್ನು ಪ್ರದರ್ಶಕರ ವಲಯ ಮುಂದಿಟ್ಟಿದೆ. ಪ್ರದರ್ಶಕರ ಬೇಡಿಕೆ ನ್ಯಾಯಯುತವಾಗಿದ್ದರೂ, ನ್ಯಾಯಯುತ ಬೇಡಿಕೆಗಳನ್ನು ತಿರುಗಿಯೂ ನೋಡದ ಸರ್ಕಾರ ಇದರತ್ತಲೂ ಗಮನ ಹರಿಸುವ ಸಾಧ್ಯತೆ ಇಲ್ಲ. ಹೀಗಾಗಿಯೇ ಕೊರೊನಾ ಮೊದಲನೇ ಅಲೆ ಮುಗಿದಾಗ  150ಕ್ಕೂ ಹೆಚ್ಚು ಚಿತ್ರಮಂದಿರಗಳು ಓಪನ್ ಆಗಲೇ ಇಲ್ಲ. 2ನೇ ಅಲೆ ಮುಗಿದಾಗ ಅದೆಷ್ಟು ಟಾಕೀಸ್ ಬಾಗಿಲು ಮುಚ್ಚುತ್ತವೋ ದೇವರೇ ಬಲ್ಲ.

  50% ಅವಕಾಶ ಕೊಟ್ಟರೂ ನಾವು ಚಿತ್ರಮಂದಿರ ತೆರೆಯಲು ಸಿದ್ಧರಿದ್ದೇವೆ. ಆದರೆ ಸಿನಿಮಾದವರೇ ಮನಸು ಮಾಡೋದು ಕಷ್ಟ. 100% ಅವಕಾಶ ಸಿಗುವವರೆಗೂ ಅವರೂ ಧೈರ್ಯ ಮಾಡಲ್ಲ. ಸ್ಟಾರ್ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಮಾಡಬೇಕಿದೆ ಎಂದಿದ್ದಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.

 • ಲಾಕ್ ಡೌನ್ ಸಿನೆಮಾ 6.0 - ಜೂನ್ 15ರವರೆಗೆ ಸಿನಿಮಾ ಇಲ್ಲ..

  no fils till june 5th

  ಚಿತ್ರರಂಗದ ಸಿದ್ಧತೆ, ನಿರೀಕ್ಷೆ ಎರಡೂ ಹುಸಿ ಯಾಗುತ್ತಿದೆ. ಜೂನ್ 1ರಿಂದ ಚಿತ್ರ ಪ್ರದರ್ಶನ ಮತ್ತು ಸಿನೆಮಾ ಚಿತ್ರೀಕರಣ ಮಾಡಲು ಅನುಮತಿ ಸಿಗುವ ಸಾಧ್ಯತೆ ಇಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ‌ ಪದಾಧಿಕಾರಿಗಳ ಜತೆ ಸಿಎಂ ಸಭೆಯಲ್ಲಿ ಈ ಮಾತು ವ್ಯಕ್ತವಾಗಿದೆ ಎಂದು ಚಿತ್ರಲೋಕದ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. 

  ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಡಿ ಮತ್ತು

  ಚಿತ್ರಮಂದಿರಗಳನ್ನ ತೆರೆಯಲು ಅವಕಾಶ ಕೊಡಿ ಹಾಗೂ ಚಿತ್ರರಂಗಕ್ಕೆ ಸಹಾಯಧನ ಘೋಷಣೆ ಮಾಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ನಿಯೋಗ ಮನವಿ ಸಲ್ಲಿಸಿತು. ಈ ವೇಳೆ ಯಡಿಯೂರಪ್ಪ ಥಿಯೇಟರ್ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಾಧ್ಯತೆ ನಿರಾಕರಿಸಿದ್ದಾರೆ.

  ಆದರೆ ಚಿತ್ರೀಕರಣಕ್ಕೆ ಅನುಮತಿ ನೀಡುವ ಕುರಿತು ಪ್ರಧಾನಿ ಮೋದಿ ಆದೇಶ ಎದುರು ನೋಡುತ್ತಿದ್ದಾರೆ. ಅಲ್ಲಿಗೆ ಇದು ಚಿತ್ರರಂಗದ ಪಾಲಿಗೆ ಲಾಕ್ ಡೌನ್ 6.0. ಏಕೆಂದರೆ ಮೊದಲ ಲಾಕ್ ಡೌನ್ ಮುನ್ನವೇ ಚಿತ್ರಪ್ರದರ್ಶನ ರದ್ದಾಗಿತ್ತು

 • ಶೂಟಿಂಗ್`ಗೆ ಇದ್ದ ನಿರ್ಬಂಧ ತೆರವು

  government permits shooting of stalled movie and tv serials only

  ಸಿನಿಮಾಗಳ ಚಿತ್ರೀಕರಣಕ್ಕೆ ಇದ್ದ ಕೊರೊನಾ ಬಂಧನವನ್ನು ರಾಜ್ಯ ಸರ್ಕಾರ ಮುಕ್ತಗೊಳಿಸಿದೆ. ಆದರೆ, ಈಗಲೂ ಸಂಪೂರ್ಣ ಮುಕ್ತವಾಗಿಲ್ಲ. ಈಗಾಗಲೇ ಚಿತ್ರೀಕರಣ ಆರಂಭಿಸಿದ್ದ, ಅರ್ಧಕ್ಕೇ ನಿಂತ ಚಿತ್ರಗಳಿಗಷ್ಟೇ ಶೂಟಿಂಗ್, ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ. ಹೊಸ ಚಿತ್ರಗಳಿಗೆ ಕೊರೊನಾ ಬ್ರೇಕ್ ಮುಂದುವರಿದಿದೆ. ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಓಪನ್ ಮಾಡೋಕೂ ಇನ್ನೂ ಅನುಮತಿ ಸಿಕ್ಕಿಲ್ಲ.

  ಕೊರೊನಾಗೂ ಮುನ್ನ ಚಾಲ್ತಯಲ್ಲಿದ್ದ ಚಿತ್ರಗಳಿಗಷ್ಟೇ ಈ ಅವಕಾಶ ಸಿಕ್ಕಿದೆ. ಅದನ್ನು ಗುರುತಿಸಲು ಸರ್ಕಾರ ಬಳಿ ಇರೋ ಮಾನದಂಡ ಏನು ಅನ್ನೊದು ಗೊತ್ತಿಲ್ಲ. ಇನ್ನು ಟಿವಿ ಚಿತ್ರೀಕರಣಗಳಿಗೂ ಇದ್ದ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ. ಆದರೆ ರಿಯಾಲಿಟಿ ಶೋಗೆ ಅನುಮತಿ ಸಿಕ್ಕಿದೆಯಾ ಇಲ್ಲವಾ ಅನ್ನೋದರ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.