` bad manners, - chitraloka.com | Kannada Movie News, Reviews | Image

bad manners,

  • ಅಂಬಿ ಹುಟ್ಟುಹಬ್ಬಕ್ಕೆ ಬ್ಯಾಡ್ ಮ್ಯಾನರ್ಸ್ ಗಿಫ್ಟ್

    bad manners movie poster launched for ambi's birthday

    ಅಂಬರೀಷ್ ಹುಟ್ಟುಹಬ್ಬಕ್ಕೆ ವಿಶೇಷ ಕಾಣಿಕೆ ಸಿಕ್ಕಿದೆ. ಅಂಬಿಯ ಪುತ್ರ ಅಭಿಷೇಕ್ ಹೊಸ ಸಿನಿಮಾ ಬ್ಯಾಡ್ ಮ್ಯಾನರ್ಸ್, ಅಂಬಿ ಸಮಾಧಿಯೆದುರೇ ಶುರುವಾಗಿದೆ. ಚಿತ್ರದ ಪೋಸ್ಟರ್ನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ ಸುಮಲತಾ ಅಂಬರೀಷ್.  ಸುಮಲತಾ, ಅಭಿಷೇಕ್, ರಾಕ್ಲೈನ್ ವೆಂಕಟೇಶ್ ಜೊತೆಯಾಗಿ ನಿಂತು ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷ.

    ಬ್ಯಾಡ್ ಮ್ಯಾನರ್ಸ್ ಮೇಲೆ ಭಾರಿ ನಿರೀಕ್ಷೆ ಇದೆ. ಮೊದಲ ಸಿನಿಮಾ ಲವ್ ಸ್ಟೋರಿ ಆಗಿತ್ತು. ಇದು ಮಾಸ್ ಸಿನಿಮಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ ಸುಮಲತಾ, ಮಗನ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

    ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ನಿರ್ಮಾಪಕ ಕೆ.ಎಂ.ಸುಧೀರ್ ನಿರ್ಮಾಪಕ. ಚಿತ್ರದಲ್ಲಿ ಜಾಕಿ ಮಾದರಿಯ ಕಥೆ ಇರಲಿದೆ. ಅಂದರೆ ಜಾಕಿ ಚಿತ್ರದ ಕಥೆಯಷ್ಟೇ ವೇಗ, ಫೋರ್ಸ್ ಚಿತ್ರದಲ್ಲಿರಲಿದೆ ಎಂದಿದ್ದಾರೆ ಸೂರಿ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶಕ.

  • Abhishek's Second Film 'Bad Manners' Launched

    Abhishek's Second Film 'Bad Manners' Launched

    After one and a half years of his debut film 'Amar', Abhishek Ambarish son of actor-politician Ambarish is back with a new film called 'Bad Manners. The film directed by Soori was launched in Mysore on Friday.

    After 'Amar', there was news of Abhishek collaborating with other directors for his second project. However, the collaboration did not happen due to various reasons. Last year, during Ambarish's birthday celebrations, Soori announced that he will be making a film for Abhishek and the First Look poster of the film was released. But the film was delayed because of lockdown and Abhishek's preparations for the film.

    Now that Abhishek is thorough with the preparations, the film has been finally launched at the Chamundeshwari Temple in Mysore. The regular shooting of the film started immediately and the team is busy shooting for the film in a specially erected set in Mandya.f the shooting before lockdown and had planned to release the film earlier this year. However, the film got delayed due to lockdown and  the team intends to complete the shoot by the first half of this year.

  • ಅಭಿಷೇಕ್ ಅಂಬರೀಷ್ ದುನಿಯಾ ಸೂರಿ ಕಾಂಬಿನೇಷನ್ ಫಿಕ್ಸ್

    abishek ambareesh's next film titled bad manners

    ಅಮರ್ ಚಿತ್ರದ ನಂತರ ಅಭಿಷೇಕ್ ಅಂಬರೀಷ್ ಹೊಸ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ಹೊಸ ಸುದ್ದಿಯೇನಲ್ಲ. ಆದರೆ ಈಗ ಇದು ಪಕ್ಕಾ ಸುದ್ದಿ. ಈ ಬಾರಿ ಅಭಿಷೇಕ್ ಅಂಬರೀಷ್ ಸೆನ್ಸೇಷನ್ ಸೃಷ್ಟಿಸೋಕೆ ಹೊರಟಿದ್ದಾರೆ. ಅಮರ್ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿದ್ದ ಅಭಿಯನ್ನು ರಗಡ್ ಲುಕ್‍ಗೆ ತರಲು ರೆಡಿಯಾಗಿರೋದು ದುನಿಯಾ ಸೂರಿ.

    ಬ್ಯಾಡ್ ಮ್ಯಾನರ್ಸ್ ಅನ್ನೋದು ಚಿತ್ರದ ಟೈಟಲ್. ಚಿತ್ರದ ನಿರ್ಮಾಪಕ ಕೆ.ಎಂ. ಸುಧೀರ್. ಸೂರಿ ಚಿತ್ರಗಳು ರಾ ಇರ್ತವೆ. ಹೀರೋಯಿಸಂನ್ನೂ ವಿಜೃಂಭಿಸುವ ಸೂರಿ, ಸದ್ಯಕ್ಕೆ ಕಾಗೆ ಬಂಗಾರ ಚಿತ್ರವನ್ನು ಪಕ್ಕಕ್ಕಿಟ್ಟು ಬ್ಯಾಡ್ ಮ್ಯಾನರ್ಸ್ ಕೈಗೆತ್ತಿಕೊಂಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜವಾಬ್ದಾರಿ ಹೊತ್ತಿದ್ದಾರೆ. ಅಂಬಿ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರೋದು ಪಕ್ಕಾ.

  • ಒಂದೇ ದಿನ ಎರಡು ಟೀಸರ್ : ಬರ್ತ್ ಡೇ ಮ್ಯಾನರ್ಸ್

    ಒಂದೇ ದಿನ ಎರಡು ಟೀಸರ್ : ಬರ್ತ್ ಡೇ ಮ್ಯಾನರ್ಸ್

    ಅಕ್ಟೋಬರ್ 3ರಂದು ಬ್ಯಾಡ್ ಮ್ಯಾನರ್ಸ್ ಚಿತ್ರದಿಂದ ಎರಡು ಟೀಸರ್ ಹೊರಬಿದ್ದವು. ಒಂದು ಜೂ.ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ. ಮತ್ತೊಂದು ಡಿಂಪಲ್ ಕ್ವೀನ್ ಹುಟ್ಟುಹಬ್ಬಕ್ಕೆ. ಅಕ್ಟೋಬರ್ 3 ಈ ಇಬ್ಬರೂ ತಾರೆಯರ ಹುಟ್ಟುಹಬ್ಬ. ಇಬ್ಬರೂ ಒಟ್ಟಿಗೇ ನಟಿಸುತ್ತಿರುವ ಚಿತ್ರ ಬ್ಯಾಡ್ ಮ್ಯಾನರ್ಸ್. ಹೀಗಾಗಿ ಎರಡು ಸ್ಪೆಷಲ್ ಟೀಸರ್ ಬಂದವು.

    ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಖಡಕ್ ಫೈಟ್, ಸೂರಿ ಸ್ಟೈಲ್ ಪಂಚ್ ಮತ್ತು ಅಭಿಷೇಕ್ ಅವರ ಕಂಚಿನ ಕಂಟದೊಂದಿಗೆ ಗಮನ ಸೆಳೆದರೆ, ರಚಿತಾ ರಾಮ್ ಟೀಸರ್‍ನಲ್ಲಿ ಅಭಿಷೇಕ್ ರಚಿತಾಗೆ ಬರ್ತ್ ಡೇ ಕೇಕ್ ತಿನ್ನಿಸುವ ದೃಶ್ಯದೊಂದಿಗೇ ಗಮನ ಸೆಳೆಯಿತು. ಮಧ್ಯರಾತ್ರಿ ಹೊತ್ತಿಗೆ ರಚಿತಾ ರಾಮ್ ಮುತ್ತಿಗೆ ಹಾಕಿ ಅಭಿಮಾನಿಗಳು ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.

    ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ರುದ್ರ ಎನ್ನುವ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದಾರೆ. ಸುಧೀರ್ ಕೆ.ಎಂ. ನಿರ್ದೇಶನದ ಚಿತ್ರ ಬ್ಯಾಡ್ ಮ್ಯಾನರ್ಸ್. ಬಹುತೇಕ ಚಿತ್ರೀಕರಣ ಮುಗಿಸಿದ್ದು ಮುಂದಿನ ವರ್ಷ ರಿಲೀಸ್ ಆಗುವ ಯೋಜನೆ ಹಾಕಿಕೊಂಡಿದೆ.

  • ಕಲ್ಲು ಕ್ವಾರಿಗಳಲ್ಲಿ ಬ್ಯಾಡ್ ಮ್ಯಾನರ್ಸ್

    ಕಲ್ಲು ಕ್ವಾರಿಗಳಲ್ಲಿ ಬ್ಯಾಡ್ ಮ್ಯಾನರ್ಸ್

    ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರೋ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಕನಕಪುರ ಸುತ್ತಮುತ್ತ ಬೀಡುಬಿಟ್ಟಿದೆ. ಇಲ್ಲಿನ ಕಲ್ಲು ಕ್ವಾರಿಗಳಲ್ಲಿ ಧೂಳು, ಹಳೇ ಕಾರು, ಟೀ ಅಂಗಡಿ, ಉರಿಯುತ್ತಿರುವ ಟೈರ್ಗಳ ಮಧ್ಯೆ ಶೂಟಿಂಗ್ ನಡೆಯುತ್ತಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕಾಗಿ ಈಗಾಗಲೇ 100ಕ್ಕೂ ಹೆಚ್ಚಿನ ದಿನಗಳ ಚಿತ್ರೀಕರಣ ಮಾಡಿರುವ ಸೂರಿ, ಕೊನೆಯ ಹಂತದ ಚಿತ್ರೀಕರಣಕ್ಕೆ ಕನಕಪುರಕ್ಕೆ ಶಿಫ್ಟ್ ಆಗಿದ್ದಾರೆ. ಬರೀ ಫೈಟ್ ಅಲ್ಲ, ಚಿತ್ರದ ಹಾಡಿಗೆ ಮಾಂಟೇಜ್ ಸೀನ್ಗಳ ಚಿತ್ರೀಕರಣವೂ ನಡೆಯುತ್ತಿದೆ.

    ಕನಕಪುರದ ಕಲ್ಲು ಕ್ವಾರಿಯಲ್ಲಿ ಸಣ್ಣ ಸೆಟ್ ಹಾಕಿಸಿದ್ದೇವೆ. ಇದಾದ ಮೇಲೆ ಬೆಂಗಳೂರಿನಲ್ಲಿ ಒಂದಿಷ್ಟು ಪ್ಯಾಚ್ವರ್ಕ್ ಇದೆ. ನಂತರ ನಾಯಕನ ಇಂಟ್ರೋ ಸಾಂಗ್ ಶೂಟಿಂಗ್ ನಡೆಯಲಿದೆ. ಅಭಿಷೇಕ್ ಮತ್ತು ಅಂಬರೀಶ್ ಫ್ಯಾನ್ಸ್ ಥ್ರಿಲ್ ಆಗುವಂತಹ ಹಲವು ಅಂಶಗಳಿವೆ. ಸಣ್ಣ ವಿಷಯದ ಮೂಲಕ ದೊಡ್ಡ ಕಥೆಯನ್ನು ಹೇಳುತ್ತಿದ್ದೇವೆ ಎನ್ನುತ್ತಾರೆ ಸೂರಿ.

    ನಿರ್ದೇಶಕರು ಕೇಳಿದ್ದನ್ನು ಕೊಡುವುದು ನನ್ನ ಕೆಲಸ. ನಾನೂ ಒಬ್ಬ ಫ್ಯಾನ್ ಆಗಿ ಸಿನಿಮಾಗಾಗಿ ಕಾಯುತ್ತಿದ್ದೇನೆ ಎನ್ನುವುದು ನಿರ್ಮಾಪಕ ಸುಧೀರ್ ಕೆ ಎಂ ಮಾತು.

    ನಿರ್ದೇಶಕರು ಹೇಳಿದಂತೆ ಮಾಡುತ್ತಿದ್ದೇನೆ. ಒಂದೊಂದು ಶಾಟ್ ಕೂಡಾ ಚೆನ್ನಾಗಿಯೇ ಬರಬೇಕು ಎಂದು ಅನ್ನೋ ಉದ್ದೇಶ ಸೂರಿಯವರದ್ದು. ಅವರು ಹೇಳಿದ್ದನ್ನು ಮಾಡುವುದು ನನ್ನ ಕೆಲಸ ಎಂದು ಎಲ್ಲ ಭಾರವನ್ನೂ ನಿರ್ದೇಶಕರ ಹೆಗಲಿಗೇ ವರ್ಗಾಯಿಸಿದ್ದಾರೆ ಅಭಿಷೇಕ್ ಅಂಬರೀಷ್.

  • ಬ್ಯಾಡ್ ಮ್ಯಾನರ್ಸ್ : ಹೀರೋ ಎಂಟ್ರಿ ಹಾಡಿಗೆ 1 ಕೋಟಿ..!

    ಬ್ಯಾಡ್ ಮ್ಯಾನರ್ಸ್ : ಹೀರೋ ಎಂಟ್ರಿ ಹಾಡಿಗೆ 1 ಕೋಟಿ..!

    ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಮಾಡಬಹುದಾದ ಒಂದು ಚಿತ್ರದ ಬಜೆಟ್‍ನ್ನು ಒಂದು ಹಾಡಿಗಾಗಿ ಖರ್ಚು ಮಾಡಿ ಸೆನ್ಸೇಷನ್ ಸೃಷ್ಟಿಸಿದೆ ಬ್ಯಾಡ್ ಮ್ಯಾನರ್ಸ್. ಅಭಿಷೇಕ್ ಅಂಬರೀಷ್, ರಚಿತಾ ರಾಮ್, ಪ್ರಿಯಾಂಕಾ ಕಮರ್ ನಟಿಸಿರುವ ಚಿತ್ರ ಬ್ಯಾಡ್ ಮ್ಯಾನರ್ಸ್. 2ನೇ ಚಿತ್ರದಲ್ಲಿಯೇ ಅಭಿಷೇಕ್, ಕಾಪ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರವಿದು. ಈ ಚಿತ್ರಕ್ಕಾಗಿ ಈಗಾಗಲೇ 150ಕ್ಕೂ ಹೆಚ್ಚು ದಿನಗಳ ಶೂಟಿಂಗ್ ಆಗಿದೆ. ಈಗ ಹಾಡಿನ ಸರದಿ.

    ಚಿತ್ರದಲ್ಲಿನ ಇಂಟ್ರೊಡಕ್ಷನ್ ಹಾಡಿಗೆ ಭರ್ಜರಿ ಸೆಟ್ ಹಾಕಲಾಗಿದ್ದು, ಈ ಹಾಡಿಗಾಗಿಯೇ 1 ಕೋಟಿಗೂ ಹೆಚ್ಚು ಬಜೆಟ್ ಮೀಸಲಿಟ್ಟು ಖರ್ಚು ಮಾಡಿದ್ದಾರಂತೆ.

    ಈ ಹಾಡಿಗಾಗಿ ಸುಮಾರು ಮೂರು ದುಬಾರಿ ಸೆಟ್ಗಳನ್ನು ಹಾಕಲಾಗಿತ್ತು. ಎರಡೆರಡು ಸ್ಟುಡಿಯೋಗಳಲ್ಲಿ ಸೆಟ್ ಹಾಕಿ ಇಂಟ್ರೊಡಕ್ಷನ್ ಹಾಡನ್ನು ಅನ್ನು ಶೂಟ್ ಮಾಡಲಾಗಿದ್ಯಂತೆ. ಸುಮಾರು ಆರು ದಿನಗಳ ಕಾಲ ಅಭಿಷೇಕ್ ಅಂಬರೀಷ್  ಇಂಟ್ರೊಡಕ್ಷನ್ ಹಾಡನ್ನು ಶೂಟ್ ಮಾಡಲಾಗಿದ್ಯಂತೆ. ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ರುದ್ರ ಅನ್ನೋ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ  ನೀಡಿದ್ದಾರೆ.

    ಈ ಹಾಡಿನ ಚಿತ್ರೀಕರಣದ ಹಿಂದೊಂದು ಕಥೆಯೂ ಇದೆ. ಸೂರಿಯವರ ನಿರ್ದೇಶನದ ಹಿಟ್ ಸಿನಿಮಾಗಳಲ್ಲೊಂದು ಜಾಕಿ. ಆ ಚಿತ್ರದ ಜಾಕಿ ಜಾಕಿ ಹಾಡು ಭರ್ಜರಿ ಹಿಟ್. ಇವತ್ತಿಗೂ ಹಾಡು ಕೇಳುತ್ತಿದ್ದರೆ ಹೆಜ್ಜೆ ಹಾಕುವ ಮನಸ್ಸಾಗುತ್ತದೆ. ಹಾಡಿನ ಮೇಕಿಂಗ್ ಕೂಡಾ ಸಖತ್ತಾಗಿತ್ತು. ಅದೇ ಮಾದರಿಯಲ್ಲಿ ಈ ಹಾಡೂ ಹಿಟ್ ಆಗಬೇಕು ಎಂದು ಪ್ಲಾನ್ ಮಾಡಿಯೇ ಚಿತ್ರೀಕರಣ ಮಾಡಿದ್ದಾರಂತೆ ಸೂರಿ. ಈ ಹಾಡಿನಲ್ಲಿ ಅಭಿಷೇಕ್ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ ಅನ್ನೋದು ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ. ಹೇಗಿರುತ್ತೆ ಅಭಿಷೇಕ್ ಡ್ಯಾನ್ಸ್..? ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ರೆಡಿಯಾಗಲಿದೆ.

  • ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಲುಕ್ ಹೊರಬಿತ್ತು

    ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಲುಕ್ ಹೊರಬಿತ್ತು

    ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅವರ ಲುಕ್ ಹೊರಬಿದ್ದಿದೆ. ಪಾತ್ರದ ಸೀಕ್ರೆಟ್ ಕೂಡಾ ಹೊರಗಿಟ್ಟಿದ್ದಾರೆ ಡೈರೆಕ್ಟರ್ ಸೂರಿ. ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಅಭಿಷೇಕ್ ಅವರನ್ನು ಖೈದಿಯ ಲುಕ್‍ನಲ್ಲಿ ತೋರಿಸಲಾಗಿತ್ತು. ಈಗ ಹೊರಬಿಟ್ಟಿರೋ ಸ್ನೀಕ್‍ಪೀಕ್‍ನಲ್ಲಿ ಅಭಿಷೇಕ್ ಪೊಲೀಸ್ ಯುನಿಫಾರ್ಮಲ್ಲಿ ಕಾಣಿಸಿಕೊಂಡಿದ್ದಾರೆ.

    ಅಭಿಷೇಕ್ ಅಂಬರೀಷ್ ಹುಟ್ಟುಹಬ್ಬಕ್ಕಾಗಿ ಚಿತ್ರ ತಂಡ ನೀಡಿರುವ ಸ್ಪೆಷಲ್ ಕಾಣಿಕೆ ಇದು. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಇಲ್ಲಿ ಫುಲ್ ಆ್ಯಕ್ಷನ್ ಮೋಡ್‍ನಲ್ಲಿದ್ದಾರೆ. ಸೂರಿ ನಿರ್ದೇಶನದ ಚಿತ್ರಕ್ಕೆ ಸುಧೀರ್ ಕೆ.ಎಂ. ನಿರ್ಮಾಪಕರು.

  • ಬ್ಯಾಡ್ ಮ್ಯಾನರ್ಸ್ ಆಡಿಯೋ ರೈಟ್ಸ್ 1 ಕೋಟಿಗೆ ಸೇಲ್

    ಬ್ಯಾಡ್ ಮ್ಯಾನರ್ಸ್ ಆಡಿಯೋ ರೈಟ್ಸ್ 1 ಕೋಟಿಗೆ ಸೇಲ್

    ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಷ್ ನಟಿಸುತ್ತಿರೋ ಸಿನಿಮಾ ಬ್ಯಾಡ್ ಮ್ಯಾನರ್ಸ್. ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್ ಲುಕ್ ಮತ್ತು ಸ್ಟೈಲ್ ಕಂಪ್ಲೀಟ್ ಚೇಂಜ್ ಆಗಿರುವ ಚಿತ್ರ ಬ್ಯಾಡ್ ಮ್ಯಾನರ್ಸ್.

    ಅಭಿಷೇಕ್ ಎದುರು ರಚಿತಾ ರಾಮ್ ಹಾಗೂ ಪ್ರಿಯಾಂಕಾ ಮನೋಹರ್ ನಾಯಕಿಯರಾಗಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಡೈರೆಕ್ಟರ್. ಸುಧೀರ್ ಕೆ.ಎಂ. ನಿರ್ಮಾಣದ ಚಿತ್ರದ ಆಡಿಯೋ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿವೆ.

    ಆನಂದ್ ಆಡಿಯೋ ಚಿತ್ರದ ಆಡಿಯೋ ಹಕ್ಕುಗಳನ್ನು ಬರೋಬ್ಬರಿ 1 ಕೋಟಿಗೆ ಖರೀದಿಸಿದೆ. ಚರಣ್ ರಾಜ್ ಖುಷ್ ಹುವಾ. ಸೂರಿ ಖುಷ್ ಹುವಾ. ಅಭಿಷೇಕ್ ಖುಷ್ ಹುವಾ. ಸುಧೀರ್ ಕೆ.ಎಂ. ಖುಷ್ ಹುವಾ.

  • ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ   ರಿಲೀಸ್ಗೆ ರೆಡಿ ಆಗ್ತಿದೆ. ಸದ್ಯ ಸಿನಿಮಾ ಸೆನ್ಸಾರ್ ಕಂಪ್ಲೀಟ್ ಆಗಿದ್ದು ಸಿಕ್ಕಾಪಟ್ಟೆ ವೈಲೆಂಟ್ ಆಗಿರುವ ಒಂದಷ್ಟು ಸನ್ನಿವೇಶಗಳಿಗೆ ಸೆನ್ಸಾರ್ ಕಟ್ ಹೇಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇದು ಅಭಿಷೇಕ್ ಅಂಬರೀಷ್ ಅಭಿನಯದ 2ನೇ ಸಿನಿಮಾ. ಅಭಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. 'ಪಾಪ್ಕಾರ್ನ್ ಮಂಕಿ ಟೈಗರ್' ಬಳಿಕ ದುನಿಯಾ ಸೂರಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್ ಅಬ್ಬರಿಸಿದ್ದಾರೆ.

    ಸೆನ್ಸಾರ್ ವೇಳೆ ಚಿತ್ರದ ಕೆಲವು ಸನ್ನಿವೇಶ, ಸಂಭಾಷಣೆಗಳಿಗೆ ಕತ್ತರಿ ಹಾಕುವುದಕ್ಕೆ ಹಾಗೂ ಮ್ಯೂಟ್ ಮಾಡುವುದಕ್ಕೆ ಸೂಚಿಸಲಾಗಿದೆ.

    ಒಂದು ಸನ್ನಿವೇಶದಲ್ಲಿ 'ಮೆಂಟಲ್' ಎನ್ನುವ ಡೈಲಾಗ್ ಮ್ಯೂಟ್ ಮಾಡುವಂತೆ ಸೂಚಿಸಿದೆ. ಬಿಯರ್ ಬಾಟಲಿ ಮೇಲಿನ ಬ್ರ್ಯಾಂಡ್ ಹೆಸರು ಬ್ಲರ್ ಮಾಡುವಂತೆಯೂ ಹೇಳಲಾಗಿದೆ. ಮತ್ತೊಂದು ಸನ್ನಿವೇಶದಲ್ಲಿ ಡ್ರಗ್ಸ್ ತೋರಿಸುವಾಗ  ಡ್ರಗ್ಸ್ ಸೇವಿಸುವುದು ಜೀವಕ್ಕೆ ಹಾನಿಕರ ಹಾಗೂ ಅಪರಾಧ ಎಂದು ಡಿಸ್‍ಕ್ಲೇಮರ್ ಹಾಕುವಂತೆ ಸೂಚಿಸಿದಿಎ.

    ತಲೆಯಿಂದ ರಕ್ತ ಸೋರುವುದು, ತ್ರಿಶೂಲವನ್ನು ಕುತ್ತಿಗೆಗೆ ಚುಚ್ಚುವುದು, ಬಾಯಿಯೊಳಗೆ ಗನ್ ಇಟ್ಟು ಶೂಟ್ ಮಾಡುವುದು ಹೀಗೆ ಒಂದಷ್ಟು ಸನ್ನಿವೇಶಗಳನ್ನು ಕಟ್ ಅಥವಾ ಬದಲಾಯಿಸಲು ಸೆನ್ಸಾರ್ ಮಂಡಳಿ ಹೇಳಿದೆ.

    ಅಭಿಷೇಕ್ ಅಂಬರೀಷ್ ಅವರಿಗೆ ಬ್ಯಾಡ್ ಮ್ಯಾನರ್ಸ್ ಮೇಲೆ ಭಾರಿ ನಿರೀಕ್ಷೆ ಇದೆ. ರಿ ಎಂದಿನಂತೆ ವಿಭಿನ್ನ ಪಾತ್ರಗಳನ್ನು ಸೃಷ್ಟಿಸಿ, ಅದಕ್ಕೆ ವಿಚಿತ್ರ ಹೆಸರುಗಳನ್ನಿಟ್ಟು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಅಭಿ- ರಚಿತಾ ಕಾಂಬಿನೇಷನ್ ಕೂಡ ನಿರೀಕ್ಷೆ ಮೂಡಿಸಿರೋದು ಸುಳ್ಳಲ್ಲ. ಪ್ರಿಯಾಂಕಾ ಕುಮಾರ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದು ರಗಡ್ ಕತೆಗೆ ಸೂರಿ ಸುಕ್ಕಾ ಟ್ರೀಟ್ಮೆಂಟ್ ನೋಡೋಕೆ ಅಭಿಮಾನಿಗಳಂತೂ ಕಾಯುತ್ತಿದ್ದಾರೆ. ಜೊತೆಗೆ ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ. ಇವೆಲ್ಲವೂ ಚಿತ್ರಕ್ಕೆ ಪ್ಲಸ್ ಆಗುವ ನಿರೀಕ್ಷೆ ಇದೆ.

  • ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಕಂಪ್ಲೀಟ್

    ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಕಂಪ್ಲೀಟ್

    ಅಭಿಷೇಕ್ ಅಂಬರೀಷ್ ನಟಿಸುತ್ತಿರ ದುನಿಯಾ ಸೂರಿ ನಿರ್ದೇಶನದ ಸಿನಿಮಾ ಬ್ಯಾಡ್ ಮ್ಯಾನರ್ಸ್. ಇದೇ ಮಒದಲ ಬಾರಿಗೆ ಸೂರಿ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಸೂರಿ ಚಿತ್ರದಲ್ಲಿ ರಫ್ & ಟಫ್ ಕಾಪ್ ಆಗಿದ್ದಾರೆ. ಹೆಸರು ರುದ್ರ. ಪ್ರಿಯಾಂಕಾ ಕುಮಾರ್ ಚಿತ್ರದ ಇನ್ನೊಬ್ಬ ನಾಯಕಿ. ಅಭಿಷೇಕ್ ಈ ಚಿತ್ರದೊಂದಿಗೆ ಭರ್ಜರಿ ಗೆಲುವಿನ ಕನಸು ಕಾಣುತ್ತಿದ್ದು, ಚಿತ್ರದ ಚಿತ್ರೀಕರಣ ಈಗ ಮುಕ್ತಾಯವಾಗಿದೆ.

    ಸುಧೀರ್ ಕೆ.ಎಂ. ನಿರ್ಮಾಣದ ಚಿತ್ರ ಫೆಬ್ರವರಿ 16ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೂರಿ ಚಿತ್ರಕ್ಕೆ ಮಾಸ್ತಿ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು ಟಗರು ಮ್ಯಾಜಿಕ್ ರಿಪೀಟ್ ಆಗುವ ನಿರೀಕ್ಷೆ ಚಿತ್ರತಂಡದಲ್ಲಿದೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಮೊದಲಾದ ಅನುಭವಿ ಕಲಾವಿದರೂ ಚಿತ್ರದಲ್ಲಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜೊತೆಗೆ ಸೂರಿಯ ರಾ ಸ್ಟೈಲ್ ಮೇಕಿಂಗ್, ಕತ್ತಲು ಬೆಳಕಿನ ಆಟ, ಚಿತ್ರ ವಿಚಿತ್ರ ಪಾತ್ರಗಳು, ಕ್ರೌರ್ಯದ ಜೊತೆ ಜೊತೆಯಲ್ಲೇ ಪ್ರೀತಿಯ ಸೆಳಕು ನೀಡುವ ಸೂರಿ ಸ್ಟೈಲ್ ವಿಜೃಂಭಿಸಲಿದೆ.

  • ಬ್ಯಾಡ್`ಮ್ಯಾನರ್ಸ್ ಚಿತ್ರಕ್ಕಾಗಿ ಬದಲಾದ ಜಯಂತ್ ಕಾಯ್ಕಿಣಿ ಮಾಸ್ ಸಾಂಗ್ ಬರೆದಾಗ..

    ಬ್ಯಾಡ್`ಮ್ಯಾನರ್ಸ್ ಚಿತ್ರಕ್ಕಾಗಿ ಬದಲಾದ ಜಯಂತ್ ಕಾಯ್ಕಿಣಿ ಮಾಸ್ ಸಾಂಗ್ ಬರೆದಾಗ..

    ಜಯಂತ್ ಕಾಯ್ಕಿಣಿ. ಆ ಹೆಸರು ಕೇಳಿದರೆ ಚಿತ್ರ ಪ್ರೇಮಿಗಳ ಹೃದಯದಲ್ಲೊಂದು ಮಧುರ ಭಾವ ಮೂಡಿದರೆ ಆಶ್ಚರ್ಯವಿಲ್ಲ. ಸದಾ ಪ್ರೀತಿ, ಪ್ರೇಮ, ಮಾಧುರ್ಯ, ಪದಗಳ ಲಾಲಿತ್ಯದಲ್ಲೇ ಹೊಸ ಕಾವ್ಯ ಕಟ್ಟುವ ಜಯಂತ್ ಕಾಯ್ಕಿಣಿ, ಪ್ರೇಮಿಗಳ ಡಾರ್ಲಿಂಗ್ ಕೂಡಾ ಹೌದು. ಅಂತಹ ಕಾಯ್ಕಿಣಿ ಮಾಸ್ ಸಾಂಗ್ ಬರೆದರೆ.. ಹೇಗಿರುತ್ತೆ..? ಒಂದ್ಸಲ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೈಟಲ್ ಸಾಂಗ್ ಕೇಳಿ ನೋಡಿ.

    ಓಗಾ ಓಗಾ ಎಲೆ

    ಟೀ ಅಮೋ

    ಒ ಮಿಗೋ ಮೀಗೋ

    ಎಲೆ ಟೀ ಅಮೋ..

    ಆ ಆಯೋನ ಟೀ ಅಮೋ..

    ಟೀ ಅಮೋ..

    ಏ ಓಗಾ ಓಗಾ ಓಗಾ

    ಎಯ ಟೀ ಅಮೋ..

    ನಂಬಿ.. ಇದನ್ನು ಬರೆದಿರುವುದು ಜಯಂತ ಕಾಯ್ಕಿಣಿ. ದುನಿಯಾ ಸೂರಿ, ಕಾಯ್ಕಿಣಿಯವರ ಪೆನ್ನಿಗೆ ಅದೇನೋ ತುಂಬಿದ್ದಾರೆ. ಕಾಯ್ಕಿಣಿಯವರ ಈ ಸಾಹಿತ್ಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಪದಗಳೂ ತುಂಬಿವೆ. ನಡುವೆ ನಮ್ಮೂರ ನೆಂಟ, ಅಲೆಮಾರಿ ಸಂತ, ಮಂದಹಾಸ, ಪ್ರೀತಿ ನಿಷ್ಕಾರಣ, ಒಗಟು, ಹಬ್ಬಿದ ಒಂದೇ ಬಳ್ಳಿ, ಹನಿಯ ತವರು ಮೋಡ.. ದನಿಯ ತವರು ಹಾಡು.. ಎಂಬ ಸಾಲುಗಳೂ, ಪದಗಳೂ ಇವೆ. ಆದರೆ ಮ್ಯೂಸಿಕ್ ಮಾತ್ರ ಧಡ್ಡಂತ ಹೊಡೆಯೋ ಹಾಗಿದೆ.

    ಕಪಿಲ್ ಕಾಪಿಲನ್, ನಾರಾಯಣ ಶರ್ಮ ಹಾಡಿದ್ದು, ಚರಣ್ ರಾಜ್ ಅವರ ಸಂಗೀತ ಬೇರೆಯದ್ದೇ ಲೆವೆಲ್ಲಿನಲ್ಲಿದೆ. ಅಭಿಷೇಕ್ ಅಂಬರೀಷ್ ಎದುರು ರಚಿತಾ ರಾಮ್ ನಾಯಕಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಕೆ.ಎಂ.ಸುಧೀರ್ ನಿರ್ಮಾಪಕ.

  • ಮಾನ್ವಿತಾ ಕಾಮತ್ ಬ್ಯಾಡ್ ಅವತಾರ

    ಮಾನ್ವಿತಾ ಕಾಮತ್ ಬ್ಯಾಡ್ ಅವತಾರ

    ಕೆಂಡಸಂಪಿಗೆಯ ಮುದ್ದು ಹುಡುಗಿ.. ಟಗರು ಚಿತ್ರದ ಬೋಲ್ಡ್ ಹುಡುಗಿ.. ಶಿವ ಚಿತ್ರದ ಮೋಸದ ಹುಡುಗಿ.. ಹೀಗೆ ವಿಭಿನ್ನ ಪಾತ್ರಗಳಲ್ಲಿಯೇ ಮಿಂಚಿದ್ದ ಮಾನ್ವಿತಾ ಕಾಮತ್, ಇದೀಗ ಬ್ಯಾಡ್ ಅವತಾರ ಎತ್ತಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಹೊಸ ಚಿತ್ರದಲ್ಲಿ ದಿಟ್ಟ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದಾರೆ.

    ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಅವರ ಪಾತ್ರದ ಹೆಸರು ಪವಿತ್ರ (ಪವಿ). ತುಂಬಾ ಬೋಲ್ಡ್ ಕ್ಯಾರೆಕ್ಟರ್ ಅವರದ್ದು.ಇಡೀ ಕಥೆ ಹಳ್ಳಿ ಹಿನ್ನೆಲೆಯಲ್ಲಿಯೇ ನಡೆಯುತ್ತದೆ.  ನಮ್ಮ ಚಿತ್ರದಲ್ಲಿ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು  ಪಾತ್ರಗಳಿವೆ. ಅವುಗಳೆಲ್ಲದರ ಜೊತೆ ಇರುವ ಇನ್ನೊಂದು ಪವರ್ ಫುಲ್ ಪಾತ್ರವೇ ಮಾನ್ವಿತಾ ಅವರದ್ದು ಎಂದು ಶೇಖರ್ ಮಾಹಿತಿ ನೀಡಿದ್ದಾರೆ.

    ಮಾನ್ವಿತಾ ಅವರಿಗೆ ಶೇಖರ್ ಅವರ ವರ್ಕಿಂಗ್ ಸ್ಟೈಲ್ ಇಷ್ಟವಾಗಿದೆ. ಸೂರಿಯವರಂತೆಯೇ ಕಾಸ್ಟ್ಯೂಮ್ ಸೇರಿದಂತೆ ಪ್ರತಿಯೊಂದಕ್ಕೂ ಶೇಖರ್ ಇಂಟ್ರೆಸ್ಟ್ ಕೊಡ್ತಾರೆ. ಇಂತಹ ಪಾತ್ರವನ್ನು ನಾನು ಈವರೆಗೆ ಮಾಡಿಲ್ಲ ಎಂದಿದ್ದಾರೆ ಮಾನ್ವಿತಾ ಕಾಮತ್.

    ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ 'ಃಂಆ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇದೆ. ಪ್ರೀತಿಯ ರಾಯಭಾರಿ ಖ್ಯಾತಿಯ ನಕುಲ್ ಹೀರೋ. ಇವರ ಜೊತೆಗೆ ಸಾಯಿ ಕೃಷ್ಣ, ನಟಿ ಅಪೂರ್ವ ಭಾರದ್ವಾಜ್, ನಟ ಮಂಜುನಾಥ್ , ನಟಿ ಅಶ್ವಿನಿ ಮುಂತಾದವರು  ನಟಿಸುತ್ತಿದ್ದಾರೆ.

  • ಹೇಗಿದೆ ಬ್ಯಾಡ್ ಮ್ಯಾನರ್ಸ್ ಮೊದಲ ಹಾಡು..?

    ಹೇಗಿದೆ ಬ್ಯಾಡ್ ಮ್ಯಾನರ್ಸ್ ಮೊದಲ ಹಾಡು..?

    ರುದ್ರಾಭಿಷೇಕ-ಬ್ಯಾಡ್ ಮ್ಯಾನರ್ಸ್ ಪಾತ್ರದ ಹೆಸರು ರುದ್ರ. ಅಭಿಯ ವೊರಿಜಿನಲ್ ಹೆಸರು ಅಭಿಷೇಕ. ಎರಡೂ ಸೇರಿದರೆ ರುದ್ರಾಭಿಷೇಕ. ಶಿವಲಿಂಗ ಪೂಜೆಯ ವೇಳೆ ರುದ್ರಾಭಿಷೇಕವನ್ನು ಮಾಡುತ್ತಾರೆ. ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿ. ಇದು ಸೂರಿ ಸ್ಟೈಲ್.

    ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. ಏಕ್ ದೋ ತೀನ್ ಚಾರ್ ಹೀ ಈಸ್ ದಿ ನ್ಯೂ ರೆಬಲ್ ಸ್ಟಾರ್, `ಚೂರು ಬ್ಯಾಡ್ ಚೂರು ಮ್ಯಾಡ್’ ಅನ್ನುವ ಸಾಲುಗಳು ಇಂಟ್ರೆಸ್ಟಿಂಗ್ ಆಗಿದೆ. ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್, ಚರಣ್ ರಾಜ್ ಟ್ಯೂನ್ ಮತ್ತು  ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್ ಕಿಕ್ಕೇರಿಸುವಂತಿದೆ. ಸೂರಿ & ಟೀಂ ಅದ್ಭುತವಾಗಿ ಹಾಡನ್ನು ಚಿತ್ರೀಕರಿಸಿರುತ್ತಾರೆ ಅನ್ನೋದ್ರಲ್ಲೇನೂ ಅನುಮಾನವಿಲ್ಲ.

    ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ಅಭಿಷೇಕ್, ಇಲ್ಲಿ ರಗಡ್ ಲುಕ್‍ನಲ್ಲಿ ಕಂಗೊಳಿಸುತ್ತಿದ್ದಾರೆ.

    ಜಾಕಿ ಚಿತ್ರದ ಟೈಟಲ್ ಸಾಂಗ್‍ನಂತೆಯೇ ಅದ್ಧೂರಿಯಾಗಿ ಮಾಡಲಾಗಿದೆ ಎನ್ನಲಾಗಿದ್ದ ಸಾಂಗ್ ಇದೇ. ಕೇವಲ ಇದೊಂದು ಹಾಡಿಗೇ ಒಂದು ಕೋಟಿ ಖರ್ಚು ಮಾಡಲಾಗಿದೆ. ಅಭಿಷೇಕ್ ಎದುರು ನಾಯಕಿಯಾಗಿ ರಚಿತಾ ರಾಮ್, ಪ್ರಿಯಾಂಕಾ ನಟಿಸಿದ್ದಾರೆ. ಬಹುತೇಕ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗೋ ಚಾನ್ಸ್ ಇದೆ. ಸಿನಿಮಾ ಹಾಡು ಭರ್ಜರಿಯಾಗಿದ್ದು, ಸೂಪರ್ ಸೂಪರ್ ವೀಕ್ಷಣೆ ಗಳಿಸಿದೆ.