` sandalwood, - chitraloka.com | Kannada Movie News, Reviews | Image

sandalwood,

 • Sandalwood Supports Janata Curfew

  sandalwood supports janata curfew

  Following more positive cases of Coronavirus being detected in the country, the State and Central Governments have been taking several preventive measures including lockdown of public places and events on a temporary basis as a fight against the deadly COVID-19 viruses.

  On Friday, the Prime Minister Narendra Modi in his address to the nation, has requested all fellow citizens to observe 'Janata Curfew' on Sunday between 7 am and 9 pm' by remaining inside the house and not to go out in the public unless extreme emergencies to stop the spread of Coronavirus disease.

  The Prime Minister's call to observe 'Janata Curfew' which is a social distancing act to stop the spread of Coronavirus, has been well received by the majority across various strata of society.

  Even, Kannada film industry has welcomed the call while most of the artists and technicians supporting Janata Curfew. Actors such as Jaggesh, Kichcha Sudeepa have shared it across various social media the importance of the call given. Power Star Puneeth Rajkumar has shared thanking the brave doctors for their services in these difficult times. 

  Duniya Vijay, Dhananjay, Pranita, Shanvi Srivastava, Nenapirali Prem, Rishab Shetty, Tara, Bharathi Vishnavardhan and others have appealed to all to observe Janata Curfew on Sunday.

 • ಕನ್ನಡ ಚಿತ್ರರಂಗಕ್ಕೆ ಶಿವ ರಾಜ್ ಕುಮಾರ್ ನೇತೃತ್ವ

  sa ra govindu, shivarajkumar, rajendra singh babu image

  ಕನ್ನಡ ಚಿತ್ರರಂಗಕ್ಕೆ ಕೊನೆಗೂ ಒಬ್ಬ ಲೀಡರ್ ಸಿಕ್ಕಿದ್ದಾರೆ. ಶಿವರಾಜ್ ಕುಮಾರ್ ರೂಪದಲ್ಲಿ. ಶಿವಣ್ಣ ಮನೆಯಲ್ಲಿ ಸಭೆ ಸೇರಿದ್ದ ಚಿತ್ರರಂಗದ ಪ್ರಮುಖ ಸದಸ್ಯರೆಲ್ಲ ಶಿವಣ್ಣ ಅವರಿಗೆ ಲೀಡರ್ ಪಟ್ಟ ಕಟ್ಟಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ಎಲ್ಲ ಸಂಘಟನೆಗಳ ಸದಸ್ಯರೂ ಫಿಲಂ ಚೇಂಬರ್ ನೇತೃತ್ವದಲ್ಲಿ ಶಿವಣ್ಣ ಮನೆಯಲ್ಲಿ ಸಭೆ ಸೇರಿದ್ದರು.

  ಸಭೆಯ ನಂತರ ಮಾತನಾಡಿದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗಕ್ಕೆ ಒಬ್ಬ ನಾಯಕನ ಅಗತ್ಯ ಇದೆ. ಶಿವರಾಜ್ ಕುಮಾರ್ ಅವರೇ ನೇತೃತ್ವ ವಹಿಸಿಕೊಳ್ಳಲಿ ಎಂದು ನಿರ್ಧರಿಸಿದ್ದೇವೆ ಎಂದರು.

  ಈ ಹಿಂದೆಲ್ಲ ಚಿತ್ರರಂಗದ ಯಾವುದೇ ಸಮಸ್ಯೆ ಇರಲಿ, ಅಣ್ಣಾವ್ರ ಮನೆಯಲ್ಲಿ ಸಭೆಯಾಗಿ ತೀರ್ಮಾನವಾಗುತ್ತಿತ್ತು. ಇನ್ನು ಮುಂದೆ ಶಿವಣ್ಣ ನೇತೃತ್ವದಲ್ಲಿ ಚಿತ್ರರಂಗ ಮುನ್ನಡೆಯಲಿದೆ ಎಂದು ಸಾ.ರಾ.ಗೋವಿಂದು ತಿಳಿಸಿದರು.

  you_tube_chitraloka1.gif

  ನಂತರ ಮಾತನಾಡಿದ ಶಿವಣ್ಣ ಎಲ್ಲ ಸ್ಟಾರ್ ನಟರ ಜೊತೆ ಕುಳಿತು ಮಾತನಾಡುತ್ತೇನೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡು ಹೋಗುವುದು ನಾಯಕತ್ವ ಅಲ್ಲ, ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದು ನಾಯಕತ್ವ. ನನಗೆ ಹಾಗೆ ಎಲ್ಲರೊಂದಿಗೆ ಹೋಗುವ ನಾಯಕತ್ವದಲ್ಲಿ ನಂಬಿಕೆ ಇದೆ ಎಂದರು.

  ಇತ್ತೀಚೆಗೆ ಚಿತ್ರೀಕರಣ ಶುರು ಮಾಡಿರುವ ಫ್ಯಾಂಟಮ್ ಚಿತ್ರತಂಡವನ್ನು ಹೊಗಳಿದ ಶಿವಣ್ಣ, ನಾವೂ ಹಾಗೆ ಮಾಡಬೇಕು. ಮೊದಲು ನಾವೇನು ಮಾಡಬೇಕು, ಮಾಡಬಹುದು ಅನ್ನೋದನ್ನ ತೀರ್ಮಾನ ಮಾಡಿ ಮುಂದೆ ಹೆಜ್ಜೆ ಇಡೋಣ. ಯಾರೂ ಎದೆಗುಂದುವ ಅಗತ್ಯ ಇಲ್ಲ ಎಂದಿದ್ದಾರೆ.

  ಸಭೆಯಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಾ.ರಾ.ಗೋವಿಂದು, ಕೆ.ಪಿ.ಶ್ರೀಕಾಂತ್, ಅಶೋಕ್, ಎಸ್.ಎ.ಚಿನ್ನೇಗೌಡ, ಜಯಣ್ಣ, ಭೋಗೇಂದ್ರ, ಆರ್.ಎಸ್.ಗೌಡ್ರು, ಕಾರ್ತಿಕ್ ಗೌಡ, ಕೋಟಿ ರಾಮು, ಕೆ.ಮಂಜು, ಗುರುಕಿರಣ್, ಪ್ರವೀಣ್ ಕುಮಾರ್, ಸಾಧು ಕೋಕಿಲ, ಉಮೇಶ್ ಬಣಕಾರ್, ಎನ್.ಎಂ.ಸುರೇಶ್, ಎ.ಗಣೇಶ್, ಡಿ.ಕೆ.ರಾಮಕೃಷ್ಣ, ಭಾ.ಮಾ.ಹರೀಶ್, ಜೆ.ಕೃಷ್ಣ ಸೇರಿದಂತೆ ಹಲವು ಗಣ್ಯರು, ವಿವಿಧ ಸಂಘಟನೆಗಳ ಸದಸ್ಯರು, ಪ್ರಮುಖರು ಭಾಗವಹಿಸಿದ್ದರು. 

 • ಸ್ಯಾಂಡಲ್'ವುಡ್'ಗೆ ಸಂಕ್ರಾಂತಿ ಜೋಷ್..

  ಸ್ಯಾಂಡಲ್'ವುಡ್'ಗೆ ಸಂಕ್ರಾಂತಿ ಜೋಷ್..

  ಕೊರೊನಾ.. ಲಾಕ್‍ಡೌನ್.. ಥಿಯೇಟರ್ ಪ್ರಾಬ್ಲಂ.. ಈ ಎಲ್ಲ ಸಮಸ್ಯೆ, ಸಂಕಟಗಳ ಮಧ್ಯೆಯೂ ಚಿತ್ರರಂಗ ಹೊಸ ಉತ್ಸಾಹದಿಂದ ಎದ್ದು ನಿಂತಿದೆ. ಅದರಲ್ಲೂ ಸಂಕ್ರಾಂತಿ ನಂತರ ಇದ್ದಕ್ಕಿದ್ದಂತೆ ಹೊಸ ಜೋಷ್ ಬಂದಂತೆ ಕಾಣುತ್ತಿದೆ. ಸಂಕ್ರಾಂತಿ ನಂತರ ಸಾಲು ಸಾಲು ಸಿನಿಮಾಗಳು ಸೆಟ್ಟೇರಿವೆ.

  ಸಲಾರ್ : ಇದು ಪ್ಯಾನ್ ಇಂಡಿಯಾ ಸಿನಿಮಾ. ನಿರ್ಮಾಪಕ ಮತ್ತು ನಿರ್ದೇಶಕರು ಕನ್ನಡದವರು. ಹೊಂಬಾಳೆ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಜೊತೆಯಾಗಿರೋ ಸಿನಿಮಾ.

  ಬ್ಯಾಡ್ ಮ್ಯಾನರ್ಸ್ : ಇದು ಅಭಿಷೇಕ್ ಅಂಬರೀಷ್ ಮತ್ತು ದುನಿಯಾ ಸೂರಿ ಕಾಂಬಿನೇಷನ್ ಸಿನಿಮಾ.

  ಲಂಕಾಸುರ : ವಿನೋದ್ ಪ್ರಭಾಕರ್ ಹೀರೋ ಆಗಿರುವ ಸಿನಿಮಾ. ಪ್ರಮೋದ್ ಕುಮಾರ್ ನಿರ್ದೇಶನದ ಚಿತ್ರವಿದು.

  ಓ ಮೈ ಲವ್ : ಸ್ಮೈಲ್ ಸೀನು ನಿರ್ದೇಶನದ ಹೊಸ ಚಿತ್ರವಿದು. ಶಶಿಕುಮಾರ್ ಪುತ್ರ ಅಕ್ಷಿತ್ ನಾಯಕರಾಗಿರುವ ಈ ಚಿತ್ರಕ್ಕೆ ಕೀರ್ತಿ ಎಂಬ ಹುಡುಗಿ ನಾಯಕಿ.

  ಗಾಜನೂರು : ಸೋನಲ್ ಮಂಥೆರೋ ನಾಯಕಿಯಾಗಿರೋ ಚಿತ್ರಕ್ಕೆ ಹೊಸ ಹುಡುಗ ಅವತಾರ್ ಹೀರೋ. ಮೋಹನ್, ನಂದಕಿಶೋರ್ ಬಳಿ ಅಸಿಸ್ಟೆಂಟ್ ಆಗಿದ್ದ ವಿಜಯ್ ಈ ಚಿತ್ರಕ್ಕೆ ನಿರ್ದೇಶಕ.

  ವೇಷ : ರಘು ಎಂಬ ಹೊಸ ಹುಡುಗ ಹೀರೋ ಆಗುತ್ತಿರುವ ಚಿತ್ರವಿದು. ಪವನ್ ಕೃಷ್ಣ ಎಂಬ ಇನ್ನೊಬ್ಬ ನವ ಪ್ರತಿಭೆ ಈ ಚಿತ್ರದ ನಿರ್ದೇಶಕರು.

  ಅವಸ್ಥಾಂತರ : ಸಂಚಾರಿ ವಿಜಯ್ ನಟಿಸುತ್ತಿರುವ ಚಿತ್ರ ಹೆಸರಿಗೆ ತಕ್ಕಂತೆ ಪ್ರಯೋಗಾತ್ಮಕ ಚಿತ್ರ. ರಂಜನಿ ರಾಘವನ್, ದಿಶಾ ಕೃಷ್ಣಯ್ಯ ನಾಯಕಿಯಾಗಿರೋ ಚಿತ್ರಕ್ಕೆ ದೀಪಕ್ ಕುಮಾರ್ ನಿರ್ದೇಶಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery