` asuran, - chitraloka.com | Kannada Movie News, Reviews | Image

asuran,

  • ಕನ್ನಡದ ಅಸುರನ್ ಆಗ್ತಾರಾ ಶಿವಣ್ಣ..?

    will shivanna star in tamil remakeasuran

    ಅಸುರನ್, 2020ರ ತಮಿಳು ಬ್ಲಾಕ್ ಬಸ್ಟರ್ ಸಿನಿಮಾ. ಸಿನಿಮಾ ಪ್ರೇಕ್ಷಕರು, ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ ತಲ್ಲಣ ಹುಟ್ಟಿಸಿದ ಸಿನಿಮಾ. ಧನುಷ್ ಅಭಿನಯದ ಮಾಸ್ಟರ್ ಪೀಸ್. ಹಿಂದಿನ ಕಾಲದ ದಲಿತರ ಶೋಷಣೆ, ಅದರ ವಿರುದ್ಧ ತಿರುಗಿಬೀಳುವ ನಾಯಕ, ಆತ ಎದುರಿಸುವ ಏಳುಬೀಳು, ಮಕ್ಕಳನ್ನು ಉಳಿಸಿಕೊಳ್ಳಲು ಹೋರಾಡುವ ಆತನ ಛಲ, ತ್ಯಾಗ ಮತ್ತು ಕೊನೆಗೊಂದು ಅದ್ಭುತ ಸಂದೇಶವೂ ಇದ್ದ ಸಿನಿಮಾ ಅದು.

    ಅಸುರನ್ ಈಗಾಗಲೇ ತೆಲುಗಿಗೆ ರೀಮೇಕ್ ಆಗುತ್ತಿದೆ. ವೆಂಕಟೇಶ್ ನಟಿಸುತ್ತಿದ್ದಾರೆ. ಆ ಚಿತ್ರವನ್ನು ಕನ್ನಡದಲ್ಲಿ ಮಾಡಿದರೆ, ಶಿವರಾಜ್ ಕುಮಾರ್ ಮಾಡಬಹುದು ಎಂಬ ವಾದವಿತ್ತು. ಆ ನಿಟ್ಟಿನಲ್ಲಿ ತಮಿಳು ನಿರ್ಮಾಪಕರೇ ಒಂದು ಹೆಜ್ಜೆ ಮುಂದಿಟ್ಟು ಶಿವಣ್ಣ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ.

    ಅಸುರನ್ ವಿಷಯ ಸತ್ಯ ಎಂದಿರುವ ಶಿವಣ್ಣ, ಮಾತುಕತೆ ಆರಂಭವಾಗಿದೆ. ನಮ್ಮ ನೇಟಿವಿಟಿಗೆ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಕಥೆ ತುಂಬಾ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಹಾಗೆಯೇ ತಮಿಳಿನ ಖೈದಿ ಚಿತ್ರದ ರೀಮೇಕ್ ವಿಷಯ ಸುಳ್ಳು ಎಂದಿದ್ದಾರೆ.

    ಅಂದಹಾಗೆ ಅಸುರನ್ ಕಾದಂಬರಿ ಆಧರಿತ ಚಿತ್ರ. ತಮಿಳಿನ ವೆಕ್ಕೈ ಎಂಬ ಕಾದಂಬರಿ ಆಧರಿಸಿ ರೂಪಿಸಿದ್ದ ಸಿನಿಮಾ.

  • ಕನ್ನಡದ ಅಸುರನ್ ಶಿವಣ್ಣ, ಡೈರೆಕ್ಟರ್ ಫಿಕ್ಸ್

    asuran remake confirmed

    ತಮಿಳಿನಲ್ಲಿ ಕಳೆದ ವರ್ಷ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ ಅಸುರನ್. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲಿದ್ದು, ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರದ ಬಗ್ಗೆ ಡಿಸ್ಕಷನ್ ನಡೆದಿರುವುದು ನಿಜ. ಇನ್ನೂ ಫೈನಲ್ ಆಗಿಲ್ಲ ಎಂದು ಸ್ವತಃ ಶಿವಣ್ಣ ಹೇಳಿದ್ದರು. ಈಗ ಬಂದಿರೋ ಸುದ್ದಿಯ ಪ್ರಕಾರ, ಚಿತ್ರಕ್ಕೆ ಡೈರೆಕ್ಟರ್ ಕೂಡಾ ಫಿಕ್ಸ್ ಆಗಿದ್ದಾರೆ.

    ಕನ್ನಡ ಚಿತ್ರರಂಗದ ಸಂವೇದನಾ ಶೀಲ ಕಮರ್ಷಿಯಲ್ ಡೈರೆಕ್ಟರ್ ಜೇಕಬ್ ವರ್ಗಿಸ್ ಈ ಚಿತ್ರಕ್ಕೆ ನಿರ್ದೇಶಕರಂತೆ. ಪೃಥ್ವಿ, ಸವಾರಿಯಂತಹ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿರುವ ಜೇಕಬ್ ವರ್ಗಿಸ್, ಅಸುರನ್ ಚಿತ್ರದ ರೀಮೇಕ್ ನಿರ್ದೇಶನಕ್ಕೆ ಓಕೆ ಎಂದಿದ್ದಾರಂತೆ. ಅಸುರನ್‍ನ್ನು ತಮಿಳಿನಲ್ಲಿ ನಿರ್ದೇಶಿಸಿದ್ದ ವೆಟ್ರಿಮಾರನ್, ಕನ್ನಡದ ಅಸುರನ್‍ಗೆ ನಿರ್ಮಾಪಕರಾಗಲಿದ್ದಾರೆ ಎಂಬ ಸುದ್ದಿಯಿದೆ. ಅಧಿಕೃತವಾಗಿಲ್ಲ ಅಷ್ಟೆ.

Shivarjun Movie Gallery

Actor Bullet Prakash Movie Gallery