` amrutha iyengar, - chitraloka.com | Kannada Movie News, Reviews | Image

amrutha iyengar,

 • ಅಪ್ಪನ ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿ ರೈಡರ್ ಗಿಫ್ಟ್

  ಅಪ್ಪನ ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿ ರೈಡರ್ ಗಿಫ್ಟ್

  ಡಿಸೆಂಬರ್ 16. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಸಖತ್ ಸ್ಪೆಷಲ್. ಅಪ್ಪನ ಹುಟ್ಟುಹಬ್ಬದಂದೇ ನಿಖಿಲ್ ಅಭಿನಯಿಸಿರೋ ರೈಡರ್ ಟ್ರೇಲರ್ ರಿಲೀಸ್ ಆಗಿದೆ. ಡಿಸೆಂಬರ್ 24ರಂದು ತೆರೆಗೆ ಬರುತ್ತಿರೋ ರೈಡರ್ ಚಿತ್ರದ ಟ್ರೇಲರ್ ಆ್ಯಕ್ಷನ್, ಲವ್ ಮತ್ತು ಮಾಸ್ ಕಥೆಗಳಿರೋ ಸಿಗ್ನಲ್ ಕೊಟ್ಟಿದೆ.

  ಮುದ್ದು ಮುದ್ದಾಗಿ ಕಾಣಿಸೋ ಕಾಶ್ಮೀರ ಪರದೇಶಿ ಎದುರು ನಿಖಿಲ್ ಲವ್ವರ್ ಬಾಯ್ ಆಗಿದ್ದರೆ, ತಂದೆ ಪಾತ್ರಧಾರಿ ಅಚ್ಯುತ್ ಕುಮಾರ್ ಜೊತೆ ಅಪ್ಪಟ ಮಗನಾಗಿದ್ದಾರೆ. ವಿಲನ್ ಗರುಡ ರಾಮ್ ಎದುರು ರಗಡ್ ಆಗಿದ್ದಾರೆ. ಫೀಲ್ಡಿನಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿಯೂ ವ್ಹಾವ್ ಎನಿಸುತ್ತಾರೆ. ಫೈಟಿಂಗ್‍ನಲ್ಲೂ ಮಸ್ತ್ ಎನಿಸುತ್ತಾರೆ. ಒಟ್ಟಾರೆ ಇಲ್ಲಿ ನಿಖಿಲ್ ಅವರದ್ದು ಫುಲ್ ಪ್ಯಾಕೇಜ್.

  ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಢಾಳಾಗಿ ಕಾಣಿಸುತ್ತವೆ. ನಿರ್ಮಾಪಕರಾದ ಚಂದ್ರು ಮನೋಹರನ್ ಮತ್ತು ಸುನಿಲ್ ಗೌಡ ಚಿತ್ರವನ್ನು ಅದ್ಧೂರಿಯಾಗಿಯೇ ಮಾಡಿರುವುದು ಎದ್ದು ಕಾಣುತ್ತದೆ.

 • ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಆಟೋ ಡ್ರೈವರ್ ಸ್ಟೋರಿ

  ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಆಟೋ ಡ್ರೈವರ್ ಸ್ಟೋರಿ

  ಬಡವ ರಾಸ್ಕಲ್ ಆಟೋ ಡ್ರೈವರ್ ಲವ್ ಸ್ಟೋರಿಯೂ ಹೌದು. ಡಾಲಿ ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್ ನಾಯಕಿ. ನಾಯಕ ಹಾಳಾಗಿರೋದೇ ಅವನ ಸ್ನೇಹಿತರಿಂದ ಅಂತ ನಂಬಿರೋ ಅವನ ಗರ್ಲ್‍ಫ್ರೆಂಡ್ ಪಾತ್ರ. ಹೀರೋ ಆಟೋ ಡ್ರೈವರ್.  ಒಂದೊಂದು ಕಥೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕನೆಕ್ಟ್ ಆಗುತ್ತೆ. ಚಿತ್ರದ ಕಥೆ ಕೇಳಿದಾಗ ಅಮೃತಾಗೆ ನೆನಪಾಗಿದ್ದು ಅವರ ಮಾವಂದಿರು.

  ನನ್ನ ಅಮ್ಮನಿಗೆ ಇಬ್ಬರು ತಮ್ಮಂದಿರು. ಇಬ್ಬರೂ ಆಟೋ ಓಡಿಸ್ತಾ ಇದ್ರು. ನಮ್ಮದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ನನಗೆ ನಿದ್ರೆ ಬರದೆ ಅಳೋಕೆ ಶುರು ಮಾಡಿದ್ರೆ ಮಾವಂದಿರಿಬ್ರೂ ಆಟೋದಲ್ಲಿ ಕೂರಿಸಿಕೊಂಡು ರೌಂಡ್ ಹಾಕ್ತಿದ್ರು. ಎರಡು ರೌಂಡ್ ಮುಗಿಯೋದ್ರಲ್ಲಿ ನಿದ್ದೆ ಹೋಗಿಬಿಡ್ತಿದ್ದೆ. ಅವರಿಬ್ಬರೂ ಈಗ ಇಲ್ಲ. ಚಿತ್ರದ ಕಥೆ ಕೇಳಿದಾಗ ಅವರಿಬ್ಬರೂ ನೆನಪಾದರು ಎಂದು ಭಾವುಕರಾಗುತ್ತಾರೆ ಅಮೃತಾ ಅಯ್ಯಂಗಾರ್.

  ಡಾಲಿ ಧನಂಜಯ್ ಹೀರೋ ಮತ್ತು ನಿರ್ಮಾಪಕ ಎರಡೂ ಆಗಿರೋ ಬಡವ ರಾಸ್ಕಲ್ ಸಖತ್ತಾಗಿಯೇ ಸೌಂಡ್ ಮಾಡ್ತಿದೆ. ಹಾಡುಗಳು ವ್ಹಾವ್ ಎನ್ನಿಸಿವೆ. ಡೈಲಾಗುಗಳು ಪಡ್ಡೆಗಳ ಹೃದಯ ತಟ್ಟಿವೆ. ಶಂಕರ್ ಗುರು ಕಥೆ ಮತ್ತು ನಿರ್ದೇಶನದಲ್ಲಿ ಚೆನ್ನಾಗಿಯೇ ವರ್ಕೌಟ್ ಮಾಡಿದ್ದಾರೆ.

 • ಅಮೃತಾಗೆ 2020ರ ಮಾರ್ಚ್‍ನಲ್ಲೇ ಹ್ಯಾಟ್ರಿಕ್

  amrutha iyendar's hat trick is shivarjuna

  ಅಮೃತಾ ಅಯ್ಯಂಗಾರ್, ಈಗಿನ್ನೂ ಕನ್ನಡ ಚಿತ್ರರಂದಲ್ಲಿ ಛಾಪು ಒತ್ತುತ್ತಿರುವ ಯುವ ಪ್ರತಿಭೆ. ಈ ಚೆಲುವೆ 2020ರ ಮೊದಲ ಮೂರು ತಿಂಗಳಲ್ಲೇ ಹ್ಯಾಟ್ರಿಕ್ ಬಾರಿಸುತ್ತಿದ್ದಾರೆ. ಇಷ್ಟಕ್ಕೂ ಕಥೆಯೇನಪ್ಪಾ ಅಂದ್ರೆ, ಈ ವಾರ ರಿಲೀಸ್ ಆಗುತ್ತಿರುವ ಶಿವಾರ್ಜುನ, ಅಮೃತಾ ಅವರ ಈ ವರ್ಷದ 3ನೇ ಸಿನಿಮಾ.

  ವರ್ಷದ ಆರಂಭದಲ್ಲಿ ಲವ್ ಮಾಕ್‍ಟೇಲ್ ಬಂತು. ಹೆಸರು ಕೊಟ್ಟಿತು. ಅದಾದ ನಂತರ ರಿಲೀಸ್ ಆಗಿದ್ದು ಪಾಪ್‍ಕಾರ್ನ್ ಮಂಕಿ ಟೈಗರ್, ಒನ್ಸ್ ಎಗೇಯ್ನ್ ಆ ಚಿತ್ರದಲ್ಲೂ ಜನ ನನ್ನನ್ನು ನಾನು ನಟಿಸಿದ್ದ ಪಾತ್ರದ ಹೆಸರಿಂದ ಗುರುತಿಸಿದರು. ಈಗ ಶಿವಾರ್ಜುನ, ಖಂಡಿತಾ ಈ ಪಾತ್ರವೂ ಜನರಿಗೆ ಇಷ್ಟವಾಗುತ್ತೆ ಎನ್ನುತ್ತಾರೆ ಅಮೃತಾ.

  ಅಮೃತಾ ನಟಿಸಿರುವ ಇನ್ನೂ ಕೆಲವು ಚಿತ್ರಗಳು ರೆಡಿ ಇವೆ. ಜೊತೆಗೆ ಬಡವ ರ್ಯಾಸ್ಕಲ್, ಶೀತಲ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾ ಹೀಗೆ ಹಲವು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ ಅಮೃತಾ.

 • ಒಟಿಟಿಗೆ ಬಡವ ರಾಸ್ಕಲ್. ಜ.26ಕ್ಕೆ

  ಒಟಿಟಿಗೆ ಬಡವ ರಾಸ್ಕಲ್. ಜ.26ಕ್ಕೆ

  ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಭರ್ಜರಿಯಾಗಿ ಹಿಟ್ ಆದ ಸಿನಿಮಾ ಬಡವ ರಾಸ್ಕಲ್. ಥಿಯೇಟರುಗಳಲ್ಲಿ ಅಬ್ಬರ ಮುಗಿಯುವ ಹೊತ್ತಿಗೆ ಒಟಿಟಿಗೆ ಬರುತ್ತಿದೆ. ಇದೇ ಗಣರಾಜ್ಯೋತ್ಸವಕ್ಕೆ ಬಡವ ರಾಸ್ಕಲ್ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ವೂಟ್ ಸೆಲೆಕ್ಟ್‍ನಲ್ಲಿ..

  ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್, ಧನಂಜಯ್ ಅವರ ನಿರ್ಮಾಣದ ಮೊದಲ ಸಿನಿಮಾ ಆಗಿತ್ತು. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಪ್ರೇಕ್ಷಕರಂತೂ ಬಡವ ರಾಸ್ಕಲ್‍ನನ್ನು ಅಪ್ಪಿ ಮುದ್ದಿಸಿದ್ದರು. ಈಗ ಮನೆ ಮನೆಗೆ... ಮೊಬೈಲ್ ಮೊಬೈಲ್‍ಗೆ ಬರುತ್ತಿದೆ.. ಜನವರಿ 26ಕ್ಕೆ.

 • ಬಡವ ರಾಸ್ಕಲ್ ``ಅಕ್ಷರ'' ಮಹಾತ್ಮೆ..

  ಬಡವ ರಾಸ್ಕಲ್ ``ಅಕ್ಷರ'' ಮಹಾತ್ಮೆ..

  ಒಂದು ಸಿನಿಮಾವನ್ನು ಜನರಿಗೆ ತಲುಪಿಸೋಕೆ ಯಾವ್ಯಾವ ರೀತಿ ಕ್ರಿಯೇಟಿವ್ ಆಗಿ ಯೋಚಿಸಬೇಕು ಅನ್ನೋಕೆ ಬಡವ ರಾಸ್ಕಲ್`ಗಿಂತ ಉದಾಹರಣೆ ಬೇಕಿಲ್ಲ. ಬಡವ ರಾಸ್ಕಲ್ ಚಿತ್ರದ ಪ್ರಚಾರ ಶುರುವಾಗಿದ್ದೇ ಫುಟ್‍ಪಾತುಗಳಿಂದ. ಇದೂವರೆಗೆ ಯಾರೂ ಟಚ್ ಕೂಡಾ ಮಾಡದೇ ಇದ್ದ ತಳ್ಳುವ ಗಾಡಿ, ಫುಟ್‍ಪಾತ್ ಹೋಟೆಲು, ಎಳನೀರು ಅಂಗಡಿ, ದಿನಸಿ ಅಂಗಡಿ.. ಹೀಗೆ ಬಡವ ಮತ್ತು ಮಧ್ಯಮ ವರ್ಗದವರು ಹೆಚ್ಚು ಹೆಚ್ಚು ಹೋಗುವ ಜಾಗಗಳಲ್ಲಿ ಚಿತ್ರದ ಪ್ರಚಾರ ಮಾಡಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಬಡವ ರಾಸ್ಕಲ್ಸ್.

  ಇಂತಹ ಅಂಗಡಿಗಳಿಗೆ ಪ್ರತಿನಿತ್ಯ ಹೋಗಿ ಬರುವ ಅಜ್ಜಿ ಬಡವ ರಾಸ್ಕಲ್ ಮತ್ತು ರಿಲೀಸ್ ಡೇಟ್ ಬರೆಯೋದನ್ನೇ ಕಲಿತು ಬಿಟ್ಟ ಕಥೆಯನ್ನು ಸ್ವಲ್ಪ ತಮಾಷೆಯಾಗಿ ಮಾಡಿ ವಿಡಿಯೋ ಬಿಟ್ಟಿದ್ದಾರೆ ಬಡವ ರಾಸ್ಕಲ್ಸ್. ಅ ಎಂಬುದೇ ಬರೆಯುವುದಕ್ಕೆ ಆಗದ ಅಜ್ಜಿ ಬಡವ ರಾಸ್ಕಲ್ ಬರೆದಿದ್ದು ಹೇಗೆ ಅನ್ನೋದನ್ನ ತಿಳ್ಕೋಬೇಕು ಅಂದ್ರೆ ಡಿ.24ಕ್ಕೆ ಥಿಯೇಟರಿಗೆ ಹೋಗಿ ನೋಡಬೇಕು.

  ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ತಾರಾ, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ಶಂಕರ್ ಗುರು ಡೈರೆಕ್ಟರ್. ಡಾಲಿ ಬ್ಯಾನರ್‍ನ ಮೊದ ಚಿತ್ರವಿದು. ಆರಂಭದಿಂದಲೂ ಕ್ರಿಯೇಟಿವ್ ಆಗಿಯೇ ಪ್ರೇಕ್ಷಕರನ್ನು ರೀಚ್ ಆಗುತ್ತಿರೋ ಚಿತ್ರತಂಡ ಸಖತ್ತಾಗಿಯೇ ಸಿನಿಮಾ ಪ್ರಮೋಷನ್ ಮಾಡುತ್ತಿದೆ.

 • ಬಡವ ರಾಸ್ಕಲ್ ಫಾರಿನ್ ಟೂರ್ ಶುರು

  ಬಡವ ರಾಸ್ಕಲ್ ಫಾರಿನ್ ಟೂರ್ ಶುರು

  ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ರಾಜ್ಯಾದ್ಯಂತ ಥಿಯೇಟರುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರೋ ಬಡವ ರಾಸ್ಕಲ್ ವಿದೇಶ ಪ್ರವಾಸ ಹೊರಟಿದ್ದಾನೆ. ಚಿತ್ರವೀಗ ವಿದೇಶಗಳಲ್ಲಿಯೂ ರಿಲೀಸ್ ಆಗೋಕೆ ಸಿದ್ಧವಾಗಿದೆ. ಮೊದಲ ಹಂತವಾಗಿ ಜರ್ಮನಿಯಲ್ಲಿ..

  ಬಡವ ರಾಸ್ಕಲ್‍ಗೆ ಕನ್ನಡಿಗರು ಹೆಚ್ಚಿರುವ ಅಮೆರಿಕ, ದುಬೈ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಥಿಯೇಟರುಗಳಲ್ಲಿ ಯಶಸ್ವೀ 25ನೇ ದಿನದತ್ತ ದಾಪುಗಾಲಿಟ್ಟಿದೆ. ಡಾಲಿ ಧನಂಜಯ್ ಫುಲ್ ಹ್ಯಾಪಿ. ಯಾಕಂದ್ರೆ ಚಿತ್ರಕ್ಕೆ ಅವರು ಹೀರೋ ಅಷ್ಟೇ ಅಲ್ಲವಲ್ಲ.. ನಿರ್ಮಾಪಕರೂ ಹೌದು. ಸಿನಿಮಾವನ್ನು  ಹೆಚ್ಚು ಹೆಚ್ಚು ಜನ ನೋಡಿದಷ್ಟೂ ಡಾಲಿ ಜನಪ್ರಿಯತೆಯ ಜೊತೆ, ಕಲೆಕ್ಷನ್ನೂ ಹೆಚ್ಚಲಿದೆ.

 • ಬಡವ ರಾಸ್ಕಲ್ ವಿಜಯಯಾತ್ರೆ..

  ಬಡವ ರಾಸ್ಕಲ್ ವಿಜಯಯಾತ್ರೆ..

  ಬಡವ ರಾಸ್ಕಲ್ ರಿಲೀಸ್ ದಿನವೇ ಸೂಪರ್ ಹಿಟ್ ಅನ್ನೋದು ಗೊತ್ತಾಗಿತ್ತು. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ಹೊರ ಬರುವಾಗ ಕೊಟ್ಟ ರಿಯಾಕ್ಷನ್ಸ್ ಹಾಗಿತ್ತು. ಕ್ರಿಯೇಟಿವ್ ಪ್ರೊಮೋಷನ್ ಮೂಲಕ ಚಿತ್ರವನ್ನು ಜನರಿಗೆ ಪರಿಚಯಿಸಿದ್ದವರು ಬಡವ ರಾಸ್ಕಲ್ಸ್. ಆದರೆ, ಚಿತ್ರ ನೋಡಿ ಬಂದವರು ಚಿತ್ರದ ಬಗ್ಗೆ ಸ್ವತಃ ಪ್ರಚಾರಕ್ಕಿಳಿದರು. ಡಾಲಿ ಗೆದ್ದಿದ್ದು ಅಲ್ಲಿ. ಹೀಗಾಗಿ ಚಿತ್ರತಂಡ ವಿಜಯ ಯಾತ್ರೆ ಮಾಡಿದೆ.

  ಬೆಂಗಳೂರು, ಚನ್ನಪಟ್ಟಣ, ಹಾಸನ, ಅರಸೀಕೆರೆ,  ಮಳವಳ್ಳಿ, ಮಂಡ್ಯ, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ.. ಹೀಗೆ ಸದ್ಯಕ್ಕೊಂದು ಪುಟ್ಟ ವಿಜಯಯಾತ್ರೆ ಮಾಡಿಕೊಂಡು ಬಂದಿದೆ ಬಡವ ರಾಸ್ಕಲ್ ಟೀಂ. ಅಫ್‍ಕೋರ್ಸ್.. ಇದು ಒಂದು ದಿನದ ಯಾತ್ರೆಯಷ್ಟೇ.. ಯಾತ್ರೆ ಇನ್ನೂ ಹಲವು ಕಡೆ ಹೋಗೋದು ಬಾಕಿ ಇದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಡಾಲಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ.

  ಅಂದಹಾಗೆ ಈ ಸಿನಿಮಾ ಗುಜ್ಜಲ್ ಪ್ರೊಡಕ್ಷನ್ಸ್ ಜೊತೆ ಜಂಟಿ ನಿರ್ಮಾಣದಲ್ಲಿ ಶುರುವಾಗಿತ್ತು. ನಂತರ ಗುಜ್ಜಲ್ ಪ್ರೊಡಕ್ಷನ್ಸ್ ಹಿಂದೆ ಸರಿದಿತ್ತು. ಧನಂಜಯ್ ಇಡೀ ಚಿತ್ರವನ್ನು ಹೆಗಲಿಗೇರಿಸಿಕೊಂಡಿದ್ದರು. ಈಗ ಸಿಂಗಲ್ ಆಗಿಯೇ ಗೆದ್ದಿದ್ದಾರೆ.

 • ಬಡವ ರಾಸ್ಕಲ್ ವಿಜಯಯಾತ್ರೆ..

  ಬಡವ ರಾಸ್ಕಲ್ ವಿಜಯಯಾತ್ರೆ..

  ವರ್ಷದ ಕೊನೆಯ ಬ್ಲಾಕ್ ಬಸ್ಟರ್ ಬಡವ ರಾಸ್ಕಲ್. ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರಿಗೆ ಬಂದೇ ಬರುತ್ತಾರೆ ಎನ್ನುವುದನ್ನು ಸಾಬೀತು ಮಾಡಿ ಗೆದ್ದ ಸಿನಿಮಾ. ಡಾಲಿ ಧನಂಜಯ್ ನಿರ್ಮಾಣದ ಮೊದಲ ಸಿನಿಮಾ. ಚಿತ್ರತಂಡದ ವಿಜಯಯಾತ್ರೆ ಮುಂದುವರೆಯುತ್ತಿದೆ.

  ರಾಮನಗರ, ಚೆನ್ನಪಟ್ಟಣ, ಅರಸೀಕೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಇಳಕಲ್, ಗದಗ, ಹುಬ್ಬಳ್ಳಿ.. ಹೀಗೆ ಎಲ್ಲೆಡೆ ಇಡೀ ಚಿತ್ರತಂಡ ವಿಜಯಯಾತ್ರೆ ಮಾಡಿದೆ. ಹೋದ ಕಡೆಯಲ್ಲೆಲ್ಲ ಅಪ್ಪುಗೆಯ ಅಭಿಮಾನ.

  ಒಂದು ಮೂಲದ ಪ್ರಕಾರ ಚಿತ್ರದ ಕಲೆಕ್ಷನ್ 15 ಕೋಟಿಯನ್ನೂ ದಾಟಿದೆ. ಚಿತ್ರದ ಹೀರೋ ಧನಂಜಯ್, ಹೀರೋಯಿನ್ ಅಮೃತಾ ಅಯ್ಯಂಗಾರ್, ಡೈರೆಕ್ಟರ್ ಶಂಕರ್ ಗುರು ಎಲ್ಲರಿಗೂ ಚಿತ್ರರಂಗದ ಸೀನಿಯರ್ಸ್ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

 • ಬಡವ ರಾಸ್ಕಲ್`ಗೆ ತೆಲುಗು, ತಮಿಳಿನಲ್ಲಿ ಡಿಮ್ಯಾಂಡ್

  ಬಡವ ರಾಸ್ಕಲ್`ಗೆ ತೆಲುಗು, ತಮಿಳಿನಲ್ಲಿ ಡಿಮ್ಯಾಂಡ್

  ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗುವ ಒಂದು ವಾರ ಮುನ್ನ ಪುಷ್ಪ ರಿಲೀಸ್ ಆಗಿತ್ತು. ತೆಲುಗಿನಲ್ಲಷ್ಟೇ ಅಲ್ಲ, ಎಲ್ಲ ಭಾಷೆಗಳಲ್ಲೂ ಹಿಟ್ ಆದ ಸಿನಿಮಾ ಪುಷ್ಪ. ಆ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಬೆಂಕಿ ಹಚ್ಚಿದ್ದವರು ನಮ್ಮ ಡಾಲಿ ಧನಂಜಯ್. ಅತ್ತ ಪುಷ್ಪ ಹಿಟ್ ಆಗುತ್ತಿದ್ದಂತೆಯೇ ಕನ್ನಡದಲ್ಲೂ ಹಿಟ್ ಆಗಿರುವ ಬಡವ ರಾಸ್ಕಲ್‍ಗೆ ಫುಲ್ ಡಿಮ್ಯಾಂಡ್ ಬಂದಿದೆ.

  ಒಳ್ಳೆಯ ರೇಟ್‍ಗೆ ಬಡವ ರಾಸ್ಕಲ್‍ನ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿವೆ

  ಎನ್ನಲಾಗಿದೆ. ಅಮೌಂಟ್ ಎಷ್ಟು ಅನ್ನೋದು ಅಧಿಕೃತವಾಗಿ ಗೊತ್ತಾಗಿಲ್ಲ. ಡಬ್ಬಿಂಗ್ ಕೂಡಾ ಶುರುವಾಗಿದೆ. ತಮಿಳಿನಲ್ಲಿ ಬಡವ ರಾಸ್ಕಲ್ ಡೈರೆಕ್ಟ್ ಓಟಿಟಿಗೇ ಬರುತ್ತಿದೆ. ಅಲ್ಲಿಯೂ ಡಬ್ಬಿಂಗ್ ಕೆಲಸ ನಡೆಯುತ್ತಿದೆ.

  ಶಂಕರ್ ಗುರು ನಿರ್ದೇಸನದ ಬಡವ ರಾಸ್ಕಲ್, ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ನಟಿಸಿರೋ ಸಿನಿಮಾ. ಧನಂಜಯ್ ಕೂಡಾ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.

 • ವಿಂಡೋ ಸೀಟ್ ಅಷ್ಟೆಲ್ಲ ಅವಾಂತರ ಮಾಡುತ್ತಾ?

  ವಿಂಡೋ ಸೀಟ್ ಅಷ್ಟೆಲ್ಲ ಅವಾಂತರ ಮಾಡುತ್ತಾ?

  ಚಿತ್ರದ ಹೀರೋ ತಾಳಗುಪ್ಪ ರಘು. ಆತ ಪ್ರತಿನಿತ್ಯ ಸಾಗರದಿಂದ ತಾಳಗುಪ್ಪಕ್ಕೆ ರೈಲಿಲ್ಲಿ ಓಡಾಡುತ್ತಿರುತ್ತಾನೆ. ಆತನಿಗೆ ವಿಂಡೋ ಸೀಟ್ ಎಂದರೆ ಇಷ್ಟ. ಯಾವಾಗಲೂ ವಿಂಡೋಸೀಟ್ ಇಷ್ಟಪಡುವ ಆತನ ಬಯಕೆಯೇ ಆತನಿಗೆ ಸಂಕಷ್ಟ ತಂದೊಡ್ಡುತ್ತದೆ. ಆತ ಅದನ್ನೆಲ್ಲ ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ.

  ನೀವ್ ನೋಡ್ತಿದ್ದೀರಾ ಟಿವಿ 9. ನಾನು ಶೀತಲ್ ಶೆಟ್ಟಿ ಎನ್ನುತ್ತಿದ್ದ ಆಂಕರ್ ಶೀತಲ್ ಶೆಟ್ಟಿ, ಈಗ ನಿರ್ದೇಶಕಿಯಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ಸಿನಿಮಾ ಇದು. ಒಂದು ವಿಂಡೋ ಸೀಟ್ ಇಟ್ಟುಕೊಂಡು ಏನು ಕಥೆ ಮಾಡಬಹುದಪ್ಪಾ ಎನ್ನುವವರಿಗೆ ಟ್ರೇಲರಿನಲ್ಲೇ ಝಲಕ್ ತೋರಿಸಿದ್ದಾರೆ.

  ರಂಗಿತರಂಗ ನಿರೂಪ್ ಭಂಡಾರಿ ಹೀರೋ ಆಗಿರುವ ಚಿತ್ರವಿದು. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಇಬ್ಬರು ನಾಯಕಿಯರು. ಜುಲೈ 1ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. 

 • ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ

  ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ

  ಶಿವರಾಜ್‍ಕುಮಾರ್, ಹಂಸಲೇಖ, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ವಸಿಷ್ಠ ಸಿಂಹ, ರಚಿತಾ ರಾಮ್, ನಿಧಿ ಸುಬ್ಬಯ್ಯ..

  ಇವರೆಲ್ಲ ಬಡವ ರಾಸ್ಕಲ್ ಚಿತ್ರತಂಡದಲ್ಲಿಲ್ಲ. ಆದರೆ ಡಾಲಿಯ ಅಭಿಮಾನದ ಬಳಗದಲ್ಲಿರುವವರು. ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ನಿರ್ಮಾಪಕರೂ ಆಗಿರುವ ಚಿತ್ರ ಬಡವ ರಾಸ್ಕಲ್ ಚಿತ್ರಕ್ಕೆ ಶುಭ ಕೋರಲೆಂದು ಬಂದಿದ್ದವರು... ಡಾಲಿ ಧನಂಜಯ್ ಚಿತ್ರರಂಗದಲ್ಲಿ ಗಳಿಸಿರೋ ಆಸ್ತಿ ಬಡವ ರಾಸ್ಕಲ್ ಈವೆಂಟ್‍ನಲ್ಲಿ ಕಾಣುತ್ತಿತ್ತು.

  ಟಗರು ಮಾಡಿದಾಗ ಸಿನಿಮಾ ನೋಡಿದವರೆಲ್ಲ ನಿಮಗಿಂತ ಡಾಲಿ ಪಾತ್ರ ಚೆನ್ನಾಗಿದೆ ಎಂದಾಗ ಖುಷಿಯಾಯ್ತು. ಒಬ್ಬನೇ ಮೆರೆಯೋ ಆಸೆ ನನಗಿಲ್ಲ. 35 ವರ್ಷ ಆಗಿ ಹೋಗಿದೆ. ಈಗ ಧನಂಜಯ್ ನಿರ್ಮಾಪಕರಾಗಿದ್ದಾರೆ. ಒಳ್ಳೆಯದಾಗಲಿ. ನಾನು 24ನೇ ತಾರೀಕು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಆ ದಿನವೇ ಸಿನಿಮಾ ನೋಡಿ ಹೇಗಿದೆ ಅನ್ನೋದನ್ನ ಹೇಳ್ತೀನಿ ಎಂದು ವೇದಿಕೆಯಲ್ಲೇ ಭರವಸೆ ಕೊಟ್ಟರು ಶಿವ ರಾಜ್ ಕುಮಾರ್.

  ನಾನು ನನ್ನ ಚಿತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ.. ಎಂದು ಹಾಕಿಕೊಂಡಿದ್ದೇನೆ ಎಂದರೆ ಅವರು ನನಗೆ  ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಅಪ್ಪು ಸರ್ ಕೂಡಾ ನನಗೆ ಗೈಡ್ ಮಾಡಿದ್ದರು. ಪ್ರೊಡಕ್ಷನ್ ವೇಳೆ ಹಣ ಖರ್ಚು ಮಾಡುವಾಗ ಎಚ್ಚರಿಕೆಯಿರಲಿ, ಬಿಸಿನೆಸ್ ಮೇಲೆ ನಿಗಾ ಇರಲಿ ಎಂದಿದ್ದರು. ಮುಹೂರ್ತಕ್ಕೆ ಬರೋಕೆ ಆಗಲಿಲ್ಲ ಎಂದು ಕರೆಸಿಕೊಂಡು ಅವರೇ ಪೋಸ್ಟರ್ ರಿಲೀಸ್ ಮಾಡಿ ಬೆನ್ನು ತಟ್ಟಿದ್ದರು ಎಂದು ನೆನಪಿಸಿಕೊಂಡರು ಡಾಲಿ ಧನಂಜಯ್.

  ಬಡವ ರಾಸ್ಕಲ್ ಇದೇ ವಾರ ರಿಲೀಸ್ ಆಗುತ್ತಿದ್ದು, ಶಂಕರ್ ಗುರು ಡೈರೆಕ್ಷನ್ ಇದೆ. ಅಮೃತಾ ಅಯ್ಯಮಗಾರ್, ತಾರಾ, ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು.. ಮೊದಲಾದವರು ನಟಿಸಿರೋ ಸಿನಿಮಾ. ಹಾಡುಗಳು ಕ್ಲಿಕ್ ಆಗಿವೆ. ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಜಸ್ಟ್ ಎಂಜಾಯ್..