ದರ್ಶನ್ ಹೆಸರಲ್ಲಿ 25 ಕೋಟಿಗೆ ಸಾಲಕ್ಕೆ ಅರ್ಜಿ ಹಾಕಿದ್ದಾರಂತೆ. ಶ್ಯೂರಿಟಿ ಹಾಕಿದ್ದಾರಂತೆ. ಅದು ದರ್ಶನ್ಗೆ ಗೊತ್ತೇ ಇರಲಿಲ್ಲವಂತೆ.. ಅದನ್ನೆಲ್ಲ ಮಾಡಿದ್ದು.. ಮಾಡಿಸಿದ್ದು ಉಮಾಪತಿಯಂತೆ.. ಮೇಲ್ನೋಟಕ್ಕೆ ನೋಡಿದರೆ ಏನೋ ಮೋಸವಾಗಿದೆ ಅನ್ನಿಸೋದು ಸಹಜ. ಆದರೆ.. ಇಡೀ ಪ್ರಕರಣವನ್ನು ತಲೆಕೆಳಕಾಗಿಟ್ಟುಕೊಂಡು ನೋಡಿದರೂ.. ಫೈನಲ್ಲಾಗಿ ಒಂದ್ ಲೈನ್ನಲ್ಲಿ ಇಡೀ ಕೇಸ್ ಏನು ಅಂತಾ ಹೇಳಿ ಅಂದ್ರೆ, ಪಳಗಿದ ಪತ್ರಕರ್ತನೂ ಹೇಳಲಾರ. ಕಾರಣ.. ಇಡೀ ಕೇಸ್ನಲ್ಲಿ ಅರ್ಥವಾದ ಪ್ರಶ್ನೆಗಳಿಗಿಂತ ಉತ್ತರ ಸಿಗದ.. ಗೊಂದಲ ಹುಟ್ಟಿಸುವ ಪ್ರಶ್ನೆಗಳೇ ಹೆಚ್ಚಿವೆ.
ಕನ್ಫ್ಯೂಷನ್ 1 : ಅರುಣಾ ಕುಮಾರಿ ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಉಮಾಪತಿ, ದರ್ಶನ್, ದರ್ಶನ್ ಗೆಳೆಯರ ಸಂಪರ್ಕಕ್ಕೆ ಬಂದಿದ್ದಾಳೆ.
ಆದರೆ, ಕೆನರಾ ಬ್ಯಾಂಕಿನವರು ಇದೂವರೆಗೆ ಶಾಸ್ತ್ರಕ್ಕೂ ಕೂಡಾ ಒಂದು ಕಂಪ್ಲೇಂಟ್ ಕೊಟ್ಟಿಲ್ಲ. ಬ್ಯಾಂಕ್ ಹೆಸರು ದುರ್ಬಳಕೆ ವಿಚಾರದಲ್ಲಿ ಕೆನರಾ ಬ್ಯಾಂಕಿನವರು ಸೈಲೆಂಟ್ ಆಗಿದ್ದಾರೆ.
ಕನ್ಫ್ಯೂಷನ್ 2 : ದರ್ಶನ್ ಗೆಳೆಯ ಹರ್ಷ ಪಡೆಯುತ್ತಿರುವ 25 ಕೋಟಿ ಸಾಲಕ್ಕೆ ದರ್ಶನ್ ಶ್ಯೂರಿಟಿ ಹಾಕಿದ್ದಾರೆ. ಡಾಕ್ಯುಮೆಂಟ್ ಚೆಕ್ ಮಾಡಬೇಕು ಎಂದು ಬಂದಿದ್ದಳು ಅಂದಿದ್ದಾರೆ ದರ್ಶನ್.
ಆದರೆ, ಅವರೇ ಹೇಳಿಕೊಂಡಿರೋ ಪ್ರಕಾರ ದರ್ಶನ್ ಗೆಳೆಯರು ಸಾಲಕ್ಕೆ ಅರ್ಜಿಯನ್ನೇ ಹಾಕಿಲ್ಲ. ಶ್ಯೂರಿಟಿ ಹಾಕೋದಾದರೂ ಎಲ್ಲಿಂದ? ಕ್ರೈಮ್ ಎಲ್ಲಾಗಿದೆ?
ಕನ್ಫ್ಯೂಷನ್ 3 : ಅರುಣಾ ಕುಮಾರಿಯನ್ನು ಪರಿಚಯಿಸಿದ್ದು ಉಮಾಪತಿ ಎನ್ನುತ್ತಾರೆ ದರ್ಶನ್. ಹೌದು ಎನ್ನುತ್ತಾರೆ ಉಮಾಪತಿ.
ಆದರೆ, ದರ್ಶನ್ ಪ್ರಕಾರ ಉಮಾಪತಿಯೇ ತಪ್ಪಿತಸ್ಥರಾಗಿದ್ದರೆ, ಅವರಾದರೂ ಏಕೆ ಪೊಲೀಸ್ ಕಂಪ್ಲೇಂಟ್ ಕೊಡುತ್ತಿದ್ದರು. ಪ್ರಕರಣವನ್ನು ಗಂಭೀರ ಸ್ವರೂಪಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅರ್ಥವಾಗುತ್ತಿಲ್ಲ.
ಕನ್ಫ್ಯೂಷನ್ 4 : ಅರುಣಾ ಕುಮಾರಿ ಬ್ಯಾಂಕ್ ಮ್ಯಾನೇಜರ್ ಅಲ್ಲ ಎಂದು ಗೊತ್ತಾದ ಬಳಿಕ ಕಂಪ್ಲೇಂಟ್ ಕೊಟ್ಟು ಅರೆಸ್ಟ್ ಮಾಡಿಸಿದ್ದರೆ ಕೇಸ್ ಮುಗಿದೇ ಹೋಗುತ್ತಿತ್ತೇನೋ..
ಆದರೆ.. ಅದು ಏಕೋ ಏನೋ ಅನಗತ್ಯವಾಗಿ ಎಳೆದಾಡಲಾಗುತ್ತಿದೆ. ಏಕೆ.. ಇದರ ಹಿಂದೆ ಯಾರಿದ್ದಾರೆ ಅನ್ನೋದೇ ನಿಗೂಢ.
ಕನ್ಫ್ಯೂಷನ್ 5 : ಅರುಣಾ ಕುಮಾರಿ ಬಳಿ ದರ್ಶನ್ ಅವರ ಯಾವುದೇ ದಾಖಲೆ ಇಲ್ಲ. ತಿರುಚಿದ ಡಾಕ್ಯುಮೆಂಟ್ಸ್ ಕೂಡಾ ಇಲ್ಲ.
ಹಾಗಾದರೆ.. ಕಂಪ್ಲೇಂಟ್ ಕೊಟ್ಟಿದ್ದು ಯಾಕೆ?
ಕನ್ಫ್ಯೂಷನ್ 6 : ದರ್ಶನ್ ಗೆಳೆಯರು ಯಾವ ಬ್ಯಾಂಕಿನಲ್ಲೂ ಸಾಲಕ್ಕೆ ಅರ್ಜಿ ಹಾಕಿಲ್ಲ. ದರ್ಶನ್ ಶ್ಯೂರಿಟಿಯನ್ನೂ ಹಾಕಿಲ್ಲ. ತನಿಖೆಗೆ ಬಂದಿದ್ದ ಅರುಣಾ ಕುಮಾರಿ ಬ್ಯಾಂಕ್ ಅಧಿಕಾರಿಯೂ ಅಲ್ಲ.
ಆದರೂ.. ಅರ್ಜಿಯನ್ನೇ ಹಾಕದ ಸಾಲಕ್ಕೆ.. ಗೊತ್ತಿಲ್ಲದ ಶ್ಯೂರಿಟಿಗೆ.. ನಕಲಿ ಅಧಿಕಾರಿ ಬಂದಿದ್ದ ಕೇಸ್ಗೆ ಇಷ್ಟೊಂದು ಚಿತ್ರ ವಿಚಿತ್ರ ಆಯಾಮ ಸಿಕ್ಕಿದ್ದಾದರೂ ಹೇಗೆ?
ಕನ್ಫ್ಯೂಷನ್ 7 : ಉಮಾಪತಿ ಜೊತೆಗಿನ ವಾಟ್ಸಪ್ ಚಾಟ್ ಕೂಡಾ ಅಷ್ಟೆ. ಅರುಣಾ ಕುಮಾರಿ ಪ್ರಚೋದಿಸುತ್ತಾಳಾದರೂ.. ಉಮಾಪತಿ ಸಂಯಮದಿಂದಲೇ ಮಾತನಾಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಆದರೂ.. ವಾಟ್ಸಪ್ ಚಾಟ್ ಬಹಿರಂಗವಾಗಿದ್ದೇಕೆ?
ಕನ್ಫ್ಯೂಷನ್ 8 : ದರ್ಶನ್ ಕಾಲ್ಶೀಟ್ಗಾಗಿ ಕೋಟಿ ಕೋಟಿ ಕೊಡೋಕೆ ನಿರ್ಮಾಪಕರು ತುದಿಗಾಲಲ್ಲಿ ನಿಂತಿರುತ್ತಾರೆ. ಅಂತಾದ್ದರಲ್ಲಿ ರಾಬರ್ಟ್ನಂತಾ ಹಿಟ್ ಚಿತ್ರ ಕೊಟ್ಟು, ಇನ್ನೂ 2 ಚಿತ್ರಕ್ಕೆ ಕಾಲ್ ಶೀಟ್ ಪಡೆದಿರೋ ಉಮಾಪತಿ ಆಫ್ಟರಾಲ್ 25 ಕೋಟಿಗೆ ದರ್ಶನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ನೇಹ ಕಳೆದುಕೊಳ್ತಾರಾ?
ಊಹೂಂ.. ಪ್ರಕರಣ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.
ಕನ್ಫ್ಯೂಷನ್ 9 : ಉಮಾಪತಿ ಬಡವರಲ್ಲ. ಹುಟ್ಟಾ ಶ್ರೀಮಂತ. ಆಸ್ತಿಯನ್ನೆಲ್ಲ ತೂಕ ಹಾಕಿದರೆ ಸಾವಿರ ಕೋಟಿ ದಾಟಬಹುದು. ಅಫ್ಕೋರ್ಸ್.. ನನ್ನ 5 ಸೈಟ್ ಮಾರಿದರೆ.. 25 ಕೋಟಿ ಬರುತ್ತೆ ಅಂದಿದ್ದಾರಲ್ಲ.. ಉಮಾಪತಿ. ಅದು ಸತ್ಯ ಕೂಡಾ.
25 ಕೋಟಿ ಉಮಾಪತಿಗೆ ಆಫ್ಟರಾಲ್.. ಹೀಗಿರುವಾಗ..
ಕನ್ಫ್ಯೂಷನ್ 10 : ಬೆಂಗಳೂರಿನಲ್ಲಿ ಆ ಮಹಿಳೆ ಹರ್ಷ ಹೆಸರನ್ನೂ.. ಮೈಸೂರಿನಲ್ಲಿ ಉಮಾಪತಿ ಹೆಸರನ್ನೂ ಹೇಳಿದ್ದಾರೆ. ಇನ್ನು ಆ ಮಹಿಳೆಗೆ ದರ್ಶನ್ರ ಆಧಾರ್, ಪಾನ್ ಕಾರ್ಡ್ ನಂಬರ್ ಕೊಟ್ಟಿರೋದು ಉಮಾಪತಿಯಂತೆ. ಈ ವಿಚಾರ ಸತ್ಯವಾಗಿದ್ದರೆ.. ಉಮಾಪತಿ ಮೇಲೆ ಅನುಮಾನ ಬರೋದು ಸಹಜ. ಒನ್ಸ್ಎಗೇಯ್ನ್.. ಅದೇ ಪ್ರಶ್ನೆ.. ಕೇವಲ ಒಂದು ಆಧಾರ್.. ಪಾನ್ ಕಾರ್ಡ್ ಇಟ್ಟುಕೊಂಡು ಬ್ಯಾಂಕ್ ಅಧಿಕಾರಿಯೇ ಅಲ್ಲದ ಮಹಿಳೆಯ ಕೈಗೆ ಕೊಟ್ಟು.. ಅದರಿಂದ 25 ಕೋಟಿ ಸಾಲ ಪಡೆಯಬಹುದು ಅಂದುಕೊಳ್ಳುವಷ್ಟು ದಡ್ಡರಾ ಇವರು..?
ಒಟ್ಟಾರೆ ಇಡೀ ಪ್ರಕರಣ ನೋಡಿದರೆ.. ಅರ್ಥವಾಗುವುದಕ್ಕಿಂತ ಅರ್ಥವಾಗದ ಪ್ರಶ್ನೆಗಳೇ ಹೆಚ್ಚಾಗಿ ಕಣ್ಣಿಗೆ ರಾಚುತ್ತವೆ. ಈಗಲೂ.. ಈ ಕ್ಷಣಕ್ಕೂ ಈ ಪ್ರಕರಣವನ್ನು ಸರಳವಾಗಿ ಹೇಳಿ ಅಂದರೆ ಹೇಳೋಕೆ ಪತ್ರಕರ್ತರೂ ತಡಕಾಡುತ್ತಾರೆ. ತಡಕಾಡುತ್ತಿದ್ದಾರೆ. ಬಹುಶಃ.. ಇಡೀ ಪ್ರಕರಣದಲ್ಲಿ ಎಲ್ಲಾದರೂ ಒಂದು ಕ್ರೈಂ ನಿಜಕ್ಕೂ ನಡೆದಿದ್ದರೆ.. ಅಥವಾ.. ನಡೆಯುವ ಹಂತದಲ್ಲಿ ಒಂದು ಹೆಜ್ಜೆಯನ್ನಾದರೂ ಇಟ್ಟಿದ್ದರೆ.. ಎಲ್ಲ ? ಮಾರ್ಕುಗಳನ್ನೂ ಒಟ್ಟಾಗಿ ಸೇರಿಸಿ ಕಥೆ ಇಷ್ಟೇ ಎನ್ನಬಹುದಿತ್ತು. ಅಪರಾಧ ನಡೆಯದೇ ಇರುವುದು ಅಥವಾ ಅಪರಾಧದ ಒಂದು ಹೆಜ್ಜೆಯೂ ಕಾಣದಿರುವುದೇ ಎಲ್ಲ ? ಕ್ವಶ್ಚನ್ ಮಾರ್ಕುಗಳಿಗೂ ಕಾರಣ.