` sanchari vijay, - chitraloka.com | Kannada Movie News, Reviews | Image

sanchari vijay,

 • ಶೂಟಿಂಗ್ ಪ್ರಮಾದ.. ಸಂಚಾರಿ ವಿಜಯ್ ಬಚಾವ್

  sanchari vijay injured while shooting

  ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಒಂದು ಬಹುದೊಡ್ಡ ಅಪಘಾತದಿಂದ ಪಾರಾಗಿದ್ದಾರೆ. ಸಂಚಾರಿ ವಿಜಯ್ ಮಲಯಾಳಂನ ಥಿಯೇಟರ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣದ ವೇಳೆಪ್ರಮಾದವಾಗಿ ಹೋಗಿದೆ. ಕನ್ಯಾಕುಮಾರಿಯ ಮೊಟ್ಟಂ ಬೀಚ್ ಬಳಿ ಶೂಟಿಂಗ್ ನಡೆಯುತ್ತಿದ್ದ ವೇಳೆ, ವಿಜಯ್ ಜಾರಿ ಬಂಡೆಗಳ ಮೇಲೆ ಬಿದ್ದುಬಿಟ್ಟಿದ್ದಾರೆ.

  ತಕ್ಷಣ ಚಿತ್ರತಂಡದ ಸದಸ್ಯರು ವಿಜಯ್ ಅವರನ್ನು ರಕ್ಷಿಸಿದ್ದಾರೆ. ಸಮುದ್ರದಲ್ಲಿ ಬಂಡೆಗಳ ಮೇಲೆ ಬಿದ್ದ ರಭಸಕ್ಕೆ ವಿಜಯ್ ಅವರ ಮೈ, ಕೈಯ್ಯೆಲ್ಲ ತರಚಿದ ಗಾಯಗಳಾಗಿವೆ. ಸದ್ಯಕ್ಕೆ ವೈದ್ಯರು ವಿಜಯ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

   

   

 • ಸಂಚಾರಿ ವಿಜಯ್ ಈಗ ಪೋಲಿ ವಿಜಯ್

  sanchari vijay is naughty boy in padarasa

  ಸಂಚಾರಿ ವಿಜಯ್ ಅಂದ್ರೆ, ಎಲ್ಲರ ನೆನಪಿಗೆ ಬರೋದು ರಾಷ್ಟ್ರೀಯ ಪ್ರಶಸ್ತಿ. ಅವರೂ ಅಷ್ಟೆ, ನಾನು ಅವನಲ್ಲ ಅವಳು ಚಿತ್ರದಿಂದ ಬಂದ ಖ್ಯಾತಿಯನ್ನು ಉತ್ತಮ ಚಿತ್ರಗಳಲ್ಲಿ ನಟಿಸುವ ಮೂಲಕ ಉಳಿಸಿಕೊಂಡವರು. ಆದರೆ, ಈಗ ಪರಮಪೋಲಿಯಾಗಿಬಿಟ್ಟಿದ್ದಾರೆ. 

  ಸಂಚಾರಿ ವಿಜಯ್ ನಟಿಸುತ್ತಿರುವ ಹೊಸ ಸಿನಿಮಾ ಪಾದರಸ... ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಖಾಲಿ ಚಿತ್ರವಲ್ಲ.. ಪೋ..ಪೋ..ಪೋಲಿ ಚಿತ್ರ ಅಂತಾ. ಚಿತ್ರದ ಡೈಲಾಗುಗಳಲ್ಲಿ ಪೋಲಿತನವಿದೆ ಅನ್ನೋದನ್ನು ಒಪ್ಪಿಕೊಳ್ಳೋ ನಿರ್ದೇಶಕರು, ಡೈಲಾಗುಗಳು ತರ್ಲೆ ನನ್ಮಗ, ಉಪೇಂದ್ರ, ಮಠ, ನೀರ್‍ದೋಸೆ ಚಿತ್ರಗಳು ಕೊಟ್ಟ ಕಿಕ್ ಕೊಡಲಿವೆ ಅಂತಾರೆ. ಚಿತ್ರದ ಡೈರೆಕ್ಟರ್ ಹೃಷಿಕೇಶ್ ಜಂಬಗಿ.

  ಹುಟ್ಟು ಅನಾಥ ಹುಡುಗರು ಸಮಾಜದಲ್ಲಿ ಹೇಗೆ ಬದುಕುತ್ತಾರೆ ಅನ್ನೋದು ಚಿತ್ರದ ಕಥೆಯಂತೆ. ಐಷಾರಾಮಿ ಜೀವನಕ್ಕಾಗಿ ಅಡ್ಡದಾರಿ ಹಿಡಿಯುವ ಹುಡುಗರು ಹಾಗೇಕೆ ಮಾಡಿದರು ಅನ್ನೋದೇ ಸಿನಿಮಾ ಕಥೆ.

 • ಸಾಹಸ..ಸಸ್ಪೆನ್ಸ್..ಕ್ರೈಂ..ಥ್ರಿಲ್ಲರ್..ಸಂದೇಶಗಳ 6ನೇ ಮೈಲಿ

  6ne maili is perfect suspense thriller

  ಒಂದು ತಂಡ.. ಪಶ್ಚಿಮ ಘಟ್ಟದ ಕಾಡಿನಲ್ಲಿ ಟ್ರಕ್ಕಿಂಗ್‍ಗೆ ಹೊರಡುತ್ತೆ. ಅಲ್ಲಿ 6ನೇ ಮೈಲಿಗಲ್ಲಿದೆ. ಅ ಜಾಗದಿಂದ ಟ್ರಕ್ಕಿಂಗ್‍ಗೆ ಹೋದವರು ಮಿಸ್ಸಾಗ್ತಾ ಹೋಗ್ತಾರೆ. ಅವರೆಲ್ಲಿ ಮಿಸ್ ಆದ್ರು..? ಅವರನ್ನು ಯಾರಾದರೂ ಕಿಡ್ನಾಪ್ ಮಾಡಿದರಾ..? ಕೊಂದರಾ..? ಆಗಬಾರದ ಅನಾಹುತವೇನಾದರೂ ಆಯಿತಾ..? ಕಾಡಿನಲ್ಲಿ ದಾರಿ ತಪ್ಪಿದರಾ..? ನಕ್ಸಲರ ಜಾಲಕ್ಕೆ ಸಿಕ್ಕರಾ..? ನೂರಾರು ಪ್ರಶ್ನೆಗಳು. ಕುತೂಹಲಗಳು. ಹುಡುಕುತ್ತಾ ಹೊರಟವರಿಗೆ ಕಾಣುವ ಸತ್ಯಗಳೇನು ಅನ್ನೋದೇ ಚಿತ್ರದ ಕಥೆ.

  ಕೆಆರ್‍ಜೆ ಫಿಲಮ್ಸ್‍ನ ಮೊದಲ ಸಿನಿಮಾ 6ನೇ ಮೈಲಿ. ನಿರ್ಮಾಪಕ ಡಾ.ಶೈಲೇಂದ್ರ ಕುಮಾರ್‍ಗೆ ಇದು ಮೊದಲ ಸಿನಿಮಾ. ನಿರ್ದೇಶಕ ಸೀನಿ ಈ ಚಿತ್ರದಿಂದ ದೊಡ್ಡ ಬ್ರೇಕ್‍ನ ನಿರೀಕ್ಷೆಯಲ್ಲಿದ್ದಾರೆ. ಸಂಚಾರಿ ವಿಜಯ್, ಆರ್‍ಜೆ ನೇತ್ರಾ, ರಘು, ಆರ್‍ಜೆ ಸುದ್ದೇಶ್.. ಹೀಗೆ ಹಲವು ಯುವ ಮತ್ತು ಮಾಗಿದ ಕಲಾವಿದರ ಸಮ್ಮಿಲನ 6ನೇ ಮೈಲಿ.

  ಸಿಂಪಲ್ಲಾಗ್ ಹೇಳ್ಬೇಕಂದ್ರೆ ಇದು ರೆಗ್ಯುಲರ್ ಸಿನಿಮಾ ಅಲ್ಲ. ಹೀಗಾಗಿಯೇ ಕುತೂಹಲ ಹುಟ್ಟಿಸಿದೆ ಈ ಸಿನಿಮಾ.

Adi Lakshmi Purana Movie Gallery

Rightbanner02_butterfly_inside

Yaana Movie Gallery