` rahul dravid, - chitraloka.com | Kannada Movie News, Reviews | Image

rahul dravid,

  • ದ್ರಾವಿಡ್ ಸುದೀಪ್ ಬಯೋಪಿಕ್`ಗೆ ಕಬೀರ್ ಖಾನ್ ರೆಡಿ

    ದ್ರಾವಿಡ್ ಸುದೀಪ್ ಬಯೋಪಿಕ್`ಗೆ ಕಬೀರ್ ಖಾನ್ ರೆಡಿ

    ರಾಹುಲ್ ದ್ರಾವಿಡ್, ಭಾರತೀಯ ಕ್ರಿಕೆಟ್‍ನ ದಂತಕಥೆಗಳಲ್ಲೊಬ್ಬರು. ಕಿಚ್ಚ ಸುದೀಪ್ ಕ್ರಿಕೆಟ್ ಪ್ರೇಮಿ. ಆಟಗಾರ ಹಾಗೂ ದ್ರಾವಿಡ್ ಪಾತ್ರ ಮಾಡುವ ಆಸೆಯಿಟ್ಟುಕೊಂಡಿರೋ ಕಲಾವಿದ. 83 ಸಿನಿಮಾ ಕನ್ನಡದಲ್ಲಿ ಬರುತ್ತಿರೋವಾಗ ದ್ರಾವಿಡ್ ಬಯೋಪಿಕ್ ವಿಚಾರ ಹಾಗೂ ಸುದೀಪ್ ಆಸೆಯ ಪ್ರಶ್ನೆ ರಪ್ಪನೆ ತೂರಿಬಂತು.

    ``ನಟಿಸೋಕೆ ನಾನ್ ರೆಡಿ. ನಿರ್ದೇಶಕ ಕಬೀರ್ ಖಾನ್ ಇಲ್ಲಿಯೇ ಇದ್ದಾರೆ. ಅವರನ್ನೇ ಕೇಳಿ. ನಾನಂತೂ ರೆಡಿ'' ಎಂದರು ಸುದೀಪ್.

    83 ಹೀರೋ ರಣ್‍ವೀರ್ ಸಿಂಗ್ ``ಹೀರೋ ಇಲ್ಲಿಯೇ ಇದ್ದಾರೆ. ಡೈರೆಕ್ಟರ್ ಇಲ್ಲಿಯೇ ಇದ್ದಾರೆ. ಪ್ರೊಡ್ಯೂಸರುಗಳೂ ಇಲ್ಲಿಯೇ ಇದ್ದಾರೆ. ಇನ್ನೇಕೆ ತಡ... ''ಎನ್ನುತ್ತಿದ್ದಂತೆ ಕಬೀರ್ ಖಾನ್ ಯೆಸ್ ಎಂದೇ ಬಿಟ್ಟರು. ಹಕ್ಕು ತಂದುಕೊಡೋ ಜವಾಬ್ದಾರಿಯನ್ನು ಮಾತ್ರ ಸುದೀಪ್ ಹೆಗಲಿಗೇ ವರ್ಗಾಯಿಸಿದ್ರು.

    83 ಚಿತ್ರದ ಪ್ರೀಇವೆಂಟ್ ಶೋನಲ್ಲಿ ಇಷ್ಟೆಲ್ಲ ನಡೆಯಿತು. 83 ಸಿನಿಮಾ ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ.

  • ಶಿವಾಜಿ ಸುರತ್ಕಲ್ ಚಿತ್ರ ವೀಕ್ಷಿಸಿದ ರಾಹುಲ್ ದ್ರಾವಿಡ್

    crickter rahul dravid watches shivaji suratkal movie

    ಶಿವಾಜಿ ಸುರತ್ಕಲ್ ಚಿತ್ರತಂಡ ಇಂದು ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಾದ  ರಾಹುಲ್ ದ್ರಾವಿಡ್ ಅವರಿಗೊಂದು ವಿಶೇಷ ಪ್ರದರ್ಶನ ಏರ್ಪಡಿಸಿತ್ತು.  ದ್ರಾವಿಡ್ ರವರು  ಅದಕ್ಕೆ ಒಪ್ಪಿಕೊಂಡು ಚಿತ್ರದ ಮೊದಲ ಪ್ರೆಕ್ಷಕರಾದದ್ದಕ್ಕೆ, ಚಿತ್ರತಂಡದ ಎಲ್ಲರಿಗೂ ಸಂತೋಷವಾಯಿತು.

    ಪ್ರದರ್ಶನದ ನಂತರ ಚಿತ್ರದ ನಾಯಕರಾದ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಅವರೊಂದಿಗೆ ಮಾತನಾಡಿದ ದ್ರಾವಿಡ್, ಮೆಚ್ಚುಗೆಯನ್ನು ಹಂಚಿಕೊಂಡರು. ರಮೇಶ್ ಅರವಿಂದ್ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಚಿತ್ರ ಅದ್ಭುತವಾಗಿದೆ ಎಂದರು. ಚಿತ್ರದ  climax  ತನ್ನನ್ನು ಬೆರಗುಗೊಳಿಸಿತು  ಎಂದರು.

    ವೀಕ್ಷಕರೆಲ್ಲರನ್ನೂ ಅದು ಆಶ್ಚರ್ಯ ಪಡಿಸುವುದು ಖಚಿತ ಎಂದು ಅಭಿಪ್ರಾಯ ಪಟ್ಟರು. ನಿರ್ದೇಶಕ ಆಕಾಶ್ ಅವರನ್ನು ಅಭಿನಂದಿಸುತ್ತಾ, ಚಿತ್ರವು ಖಂಡಿತ ಯಶಸ್ವಿಯಾಗುವುದು ಎಂದು ಹಾರೈಸಿದರು.