` garuda gamana vrushabha vahana, - chitraloka.com | Kannada Movie News, Reviews | Image

garuda gamana vrushabha vahana,

  • 100 + ಗರುಡ ಗಮನ ವೃಷಭ ವಾಹನ + ಮುಗಿಲ್ ಪೇಟೆ

    100 + ಗರುಡ ಗಮನ ವೃಷಭ ವಾಹನ + ಮುಗಿಲ್ ಪೇಟೆ

    ಒಂದು ಫ್ಯಾಮಿಲಿ ಥ್ರಿಲ್ಲರ್. ಇನ್ನೊಂದು ಅಂಡರ್‍ವಲ್ರ್ಡ್ ಥ್ರಿಲ್ಲರ್. ಮತ್ತೊಂದು ಲವ್ಲೀ ಥ್ರಿಲ್ಲರ್. ಈ ವಾರದ ಸ್ಪೆಷಲ್ ಸಿನಿಮಾಗಳಿವು.

    100 ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನವಿದೆ. ಅವರೇ ಹೀರೋ. ರಚಿತಾ ರಾಮ್ ಮತ್ತು ಪೂರ್ಣ ನಾಯಕಿಯಾಗಿರೋ ಚಿತ್ರದಲ್ಲಿ ಸೈಬರ್ ಕ್ರೈಂ ಸ್ಟೋರಿ ಇದೆ. ಇದು ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿಯೇ ಜಗತ್ತು ನೋಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ನೋಡಬೇಕಾದ ಸಿನಿಮಾ.

    ಗರುಡ ಗಮನ ವೃಷಭ ವಾಹನ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಒಟ್ಟಿಗೇ ನಟಿಸಿರೋ ಸಿನಿಮಾ. ಮೊಟ್ಟೆ ನಂತರ ರಾಜ್ ಬಿ.ಶೆಟ್ಟಿ ನಿರ್ದೇಶನವನ್ನೂ ಮಾಡಿರುವ ಸಿನಿಮಾ. ಕರಾವಳಿ ಭೂಗತ ಜಗತ್ತನ್ನು ಬೇರೆಯದೇ ಶೇಡ್‍ನಲ್ಲಿ ತೋರಿಸಿರೋ ಚಿತ್ರದಲ್ಲಿ ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್, ಹಾಡು ಗಮನ ಸೆಳೆದಿವೆ.

    ಇದೇ ವಾರ ರಿಲೀಸ್ ಆಗುತ್ತಿರೋ ಯೂಥ್ ಲವ್ ಸ್ಟೋರಿ ಮುಗಿಲ್ ಪೇಟೆ. ಮನುರಂಜನ್ ರವಿಚಂದ್ರನ್, ಕಯಾದು ನಟಿಸಿರೋ ಚಿತ್ರದಲ್ಲಿ ಲವ್ ಫೀಲಿಂಗ್ ಸಖತ್ತಾಗಿಯೇ ಇದೆ. ಭರತ್ ಎಸ್.ನಾವುಂದ ನಿರ್ದೇಶನದ ಚಿತ್ರ ಪ್ರೇಮಿಗಳಿಗೆ ಪ್ರೀತಿಯ ಪರಾಕಾಷ್ಠೆ ತೋರಿಸೋ ನಿರೀಕ್ಷೆಯಂತೂ ಇದೆ. 

  • Garuda Gamana Vrushaba Vahana Movie Review, Chitraloka Rating 4/5

    Garuda Gamana Vrishaba Vahana Movie Review, Chitraloka Rating 4/5

    Film: Garuda Gamana Vrishaba Vahana

    Director: Raj B Shetty

    Cast: Rishab Shetty, Raj B Shetty, Gopal Deshpande, 

    Duration: 151 minutes 

    Certificate: A

    Stars: 4

    Review by - S Shyam Prasad 

    A slice of gangster lives 

    A raw, violent gangster movie would be an understatement for GGVV. It is for all purposes a gangster flick, but by capturing a slice of the local flavour (set in Mangaladevi, Mangaluru) and subtly exploring the friendship between two vastly different individuals, it becomes one of the best films on the gangster genre. 

    Raj B Shetty, the director who made a completly contrasting debut with Ondu Motteya Kathe, has come up with something so stunningly different. He brings to life characters so natural, the experience is immersive. In the backdrop of the emergece of a new gang buldozzing its way through Mangaluru, the story explores the changing perceptions of close friends as power and circumstances change them beyond recognition.

    Shiva and Hari, brought together by strange circumstances in childhood grow up more as siblings. Shiva, whose rather graphic childhood story makes him a loner and immune to his surroundings, suddenly turns out to be the hammer of Hari. The two go on to build a gang that threatens the existing order of the quiet underworld. That's the basic plot. It is the way it is narrated, that makes the film special. At the interval, wow, is the word that escaped most audience. 

    The second half takes a toll on the overall plot a bit. It loses its way a bit before finding its feet in a convincingly conceptualised climax. The lack of enough interaction between Hari and Shiva could be the reason for a little loss of excitement. However, the brilliant casting and some superlative performances keeps the engagement levels high. Raj B Shetty is so convincing that you will be left wondering if he shot his own life as a movie. Rishab Shetty shows that he can fit into any role but more than that, he has shown the willingness to be part of films where he is not a conventional 'hero'. 

    The process of bringing the coastal flavour to the mainstream of Kannada films, which started a decade ago, seems to have finally hit the bullseye with GGVV. There is also perfect sync in the design of the film. The sounds, colours, styles and words come together to build a very good movie. In time, GGVV may be considered a cult classic and it has all the trappings of garnering such a status.

     

    -Movie Review By S Shyam Prasad

  • ಗರುಡ ಗಮನ ಪರಭಾಷೆ ವಾಹನ : ರಾಜ್ ಬಿ.ಶೆಟ್ಟಿ ರೂಪಾಂತರ

    ಗರುಡ ಗಮನ ಪರಭಾಷೆ ವಾಹನ : ರಾಜ್ ಬಿ.ಶೆಟ್ಟಿ ರೂಪಾಂತರ

    ರಾಜ್ ಬಿ.ಶೆಟ್ಟಿ ರೂಪಾಂತರಗೊಂಡಿದ್ದಾರೆ. ಅದು ಪರಭಾಷೆಗಳಲ್ಲಿ. ರಾಜ್ ಬಿ.ಶೆಟ್ಟಿಯವರ ಗರುಡ ಗಮನ ವೃಷಭ ವಾಹನ ಹಿಟ್ ಆದ ಬೆನ್ನಲ್ಲೇ ವೆರೈಟಿ ವೆರೈಟಿ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಇದರ ಜೊತೆಗೆ ಮಾರುಕಟ್ಟೆಯೂ ದೊಡ್ಡದಾಗುತ್ತಿದೆ. ಗರುಡ ಗಮನ ಚಿತ್ರವನ್ನು ತಮಿಳಿನಲ್ಲಿ ರೀಮೇಕ್ ಮಾಡಲು ಮಾತುಕತೆ ಶುರುವಾಗಿದೆ. ರೀಮೇಕ್ ಹಕ್ಕು ಕೇಳಿರುವುದು ತಮಿಳಿನ ಸ್ಟಾರ್ ಡೈರೆಕ್ಟರ್ ಗೌತಮ್ ವಾಸುದೇವ್ ಮೆನನ್. ಉಳಿದ ಭಾಷೆಗಳಲ್ಲಿಯೂ ಮಾತುಕತೆ ಪ್ರಗತಿಯಲ್ಲಿದೆ.

    ಇದರ ನಡುವೆ ಮಂಗಳೂರು ಡಾನ್ ಶೆಟ್ಟಿ,  ಬೆಂಗಳೂರು ಡಾನ್ ಆಗಿದ್ದಾರೆ. ರೂಪಾಂತರ ಅನ್ನೋ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ನಟಿಸಿದ್ದು, ಚಿತ್ರೀಕರಣವೂ ಮುಗಿದಿದೆಯಂತೆ. ಮಿಥಿಲೇಶ್ ಕುಮಾರ್ ಎಡವಲದ್ ಎಂಬುವವರು ನಿರ್ದೇಶಿಸಿರುವ ಚಿತ್ರದಲ್ಲಿ  

    ಒಬ್ಬ ಮನುಷ್ಯ ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆಲ್ಲ ಬದಲಾಗುತ್ತಾನೆ ಎನ್ನುವ ಕಥೆ ಹೇಳಿದ್ದಾರಂತೆ. ಒಂದು ಮೊಟ್ಟೆಯ ಕಥೆ ನಿರ್ಮಾಪಕ ಸುಹಾಸ್ ಅವರೇ ಈ ಚಿತ್ರಕ್ಕೂ ಪ್ರೊಡ್ಯೂಸರ್.

  • ಗರುಡ ಗಮನ ವೃಷಭ ವಾಹನ ಯಶಸ್ವಿ 25ನೇ ದಿನ

    ಗರುಡ ಗಮನ ವೃಷಭ ವಾಹನ ಯಶಸ್ವಿ 25ನೇ ದಿನ

    ಸಿದ್ಧ ಸೂತ್ರಗಳಿಗಿಂತ ಹೊರತಾದ ಬೇರೆಯದೇ ರೀತಿಯ ಕಥೆ,  ನಿರೂಪಣೆಯಿಂದ ಗಮನ ಸೆಳೆದ ಗರುಡ ಗಮನ ವೃಷಭ ವಾಹನ ಯಶಸ್ವಿ 25ನೇ ದಿನ ಪೂರೈಸಿದೆ. ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರವಿದು. ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಇಬ್ಬರೂ ಪ್ರಧಾನ ಪಾತ್ರದಲ್ಲಿದ್ದ ಚಿತ್ರ ಕರಾವಳಿ ಭಾಗದ ಅಂಡರ್‍ವಲ್ರ್ಡ್ ಕಥೆಯನ್ನು ವಿಭಿನ್ನವಾಗಿ ಹೇಳಿದ್ದ ಚಿತ್ರ.

    ಒಂದೆಡೆ ಕ್ರೌರ್ಯ ಅತಿಯಾಯಿತು, ದೇವರ ಹಾಡು ಬಳಸಬಾರದಿತ್ತು ಎಂದು ಕೆಲವರು ವಾದಿಸುತ್ತಿದ್ದಾರೆ. ಕೆಲವರು ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದಾರೆ. ಬೇರೆಯವರಾಗಿದ್ದರೆ ಅದನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರೇನೋ.. ಆದರೆ ಈ ಶೆಟ್ಟಿ ಬ್ರದರ್ಸ್ ಆ ಕೆಲಸ ಮಾಡದೆ ಚಿತ್ರದ ಪಾಸಿಟಿವ್‍ಗಳನ್ನೇ ಪ್ರಚಾರ ಮಾಡಿ ಗೆದ್ದಿದ್ದಾರೆ.

  • ಗರುಡ ಗಮನ ವೃಷಭ ವಾಹನಕ್ಕೆ ಕೊರೊನಾ ವರವಾಗಿದ್ದು ಹೇಗೆ..?

    ಗರುಡ ಗಮನ ವೃಷಭ ವಾಹನಕ್ಕೆ ಕೊರೊನಾ ವರವಾಗಿದ್ದು ಹೇಗೆ..?

    ಗರುಡ ಗಮನ ವೃಷಭ ವಾಹನ. ಚಿತ್ರದ ಟ್ರೇಲರ್ ಮತ್ತು ಹಾಡು ನೋಡಿದವರಿಗೆ ಇದು ಕೊಡುತ್ತಿರೋ ಫೀಲಿಂಗೇ ಬೇರೆ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಇಬ್ಬರೂ ಇಲ್ಲಿ ಬೇರೆಯದೇ ಶೇಡ್ನಲ್ಲಿ ಕಾಣಿಸಿಕೊಳ್ತಾರೆ. ರಿಷಬ್ ಇಷ್ಟೊಂದು ಸೀರಿಯಸ್ಸಾಗಿ ಕಾಣಿಸಿಕೊಂಡಿದ್ದೇ ಇಲ್ಲ. ರಾಜ್ ಬಿ.ಶೆಟ್ಟಿ ಇಷ್ಟೊಂದು ಉಗ್ರವಾಗಿ ಕಾಣಿಸ್ತಿರೋದು ಇದೇ ಮೊದಲು.

    ನಮಗೆ ಆಕ್ಚುಯಲಿ ವರವಾಗಿದ್ದು ಕೊರೊನಾ ಮತ್ತು ಲಾಕ್ ಡೌನ್. ಹೀಗಾಗಿ ಚಿತ್ರ ನಿರ್ಮಾಣದಲ್ಲಿ ಎಲ್ಲಿಯೂ ನಾವು ಅವಸರಕ್ಕೆ ಬೀಳಲಿಲ್ಲ. ನಿಧಾನವಾಗಿ ಮಾಡಿದೆವು. ಪ್ರತಿಯೊಂದನ್ನೂ ತಿದ್ದಿ ತಿದ್ದಿ ಸರಿ ಮಾಡಿಕೊಳ್ಳೋಕೆ ಸಾಕಷ್ಟು ಕಾಲಾವಕಾಶ ಸಿಗುತ್ತಾ ಹೋಯ್ತು. ನಡುವೆ ಪರಿಶೀಲಿಸಿ ಇಂಪ್ರೂವೈಸ್ ಮಾಡಿಕೊಳ್ಳೋಕೆ ಅವಕಾಶಗಳೂ ಸಿಕ್ಕವು. ಸಮಯವೂ ಸಿಕ್ಕಿತು. ಆ ದೃಷ್ಟಿಯಿಂದ ನೋಡಿದರೆ ಲಾಕ್ ಡೌನ್ ನಮಗೆ ವರವಾಯಿತು ಎನ್ನುತ್ತಾರೆ ಹೀರೋ ಕಂ ಡೈರೆಕ್ಟರ್ ರಾಜ್ ಬಿ.ಶೆಟ್ಟಿ.

    ಇಷ್ಟೆಲ್ಲ ಕುತೂಹಲ ಹುಟ್ಟಿಸಿರೋ ಚಿತ್ರ ಈಗ ರಿಲೀಸ್ ಆಗಿದ್ದು, ರಕ್ಷಿತ್ ಶೆಟ್ಟಿ ಚಿತ್ರವನ್ನು ವಿತರಣೆ ಮಾಡಿದ್ದಾರೆ. ಲಾಕ್ ಡೌನ್ ನಂತರ ಜಗತ್ತಿನ ಹಲವೆಡೆ ರಿಲೀಸ್ ಆಗುತ್ತಿರೋ ಮೊದಲ ಕನ್ನಡ ಸಿನಿಮಾ ಗರುಡ ಗಮನ ವೃಷಭ ವಾಹನ.

  • ಗರುಡ ಗಮನ.. ರಕ್ಷಿತ್ ಶೆಟ್ಟಿ ವಾಹನ..

    ಗರುಡ ಗಮನ.. ರಕ್ಷಿತ್ ಶೆಟ್ಟಿ ವಾಹನ..

    ಗರುಡ ಗಮನ ವೃಷಭ ವಾಹನ. ಪರಂವಾ ಸ್ಟುಡಿಯೋಸ್‍ನ ಸಿನಿಮಾ. ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಟಿಸಿ, ನಿರ್ದೇಶಿಸಿರುವ ಸಿನಿಮಾ. 2020ರಲ್ಲೇ ರಿಲೀಸ್ ಆಗಬೇಕಿದ್ದ ಚಿತ್ರವಿದು. ಕೊರೊನಾ, ಲಾಕ್‍ಡೌನ್ ಕಾರಣದಿಂದಾಗಿ ನಿಂತಿದ್ದ ಚಿತ್ರದ ಮೇಲೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗಮನ ಹರಿಸಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ವಿತರಣೆಯ ಹಕ್ಕನ್ನೂ ಪಡೆದುಕೊಂಡಿದ್ದಾರೆ.

    ರಾಜ್ ಬಿ.ಶೆಟ್ಟಿಯವರ ಪ್ರತಿಭೆಯನ್ನು ಹೊಗಳಿರುವ ರಕ್ಷಿತ್ ಶೆಟ್ಟಿ, 3 ಗಂಟೆಗಳ ಕಾಲ ನಮ್ಮನ್ನು ಹಿಡಿದಿಟ್ಟುಕೊಂಡು, ನಂತರ ಕಾಡುವ ಶಕ್ತಿ ಗರುಡ ಗಮನ ವೃಷಭ ವಾಹನ ಚಿತ್ರಕ್ಕಿದೆ ಎಂದಿದ್ದಾರೆ.

  • ಚಾಮರಾಜನಗರ ಕೋರ್ಟ್ ಮೆಟ್ಟಿಲೇರಿದ ಗರುಡ ಗಮನ ವೃಷಭ ವಾಹನ ಚಿತ್ರದ ವಿವಾದ.,..

    ಚಾಮರಾಜನಗರ ಕೋರ್ಟ್ ಮೆಟ್ಟಿಲೇರಿದ ಗರುಡ ಗಮನ ವೃಷಭ ವಾಹನ ಚಿತ್ರದ ವಿವಾದ.,..

    ಕ್ರೌರ್ಯ ಮೆರೆಯುವ ದೃಶ್ಯ ಕ್ಕೆ ಮಹದೇಶ್ವರನ ಜನಪದ ಹಾಡು ಬಳಕೆ... ‘ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ.. ಚಿತ್ರತಂಡದ ವಿರುದ್ಧ ಮೊಕದ್ದಮೆ ಹೂಡಿದ ಹಾಕಿದ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ..

    ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ ಮಹಾಸಭಾ ರಾಜ್ಯಾಧ್ಯಕ್ಷ ವಿಜಯಕುಮಾರ್... ಮಹದೇಶ್ವರ ನ ಹಾಡು ತೆಗೆಯಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಅರ್ಜಿ...

    ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ ಬಿ.ವಿ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿರುವ ವಿಜಯ ಕುಮಾರ್... ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿ ಗೀತೆಯನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ.... ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ..

    ಇಂದು   ವಿಚಾರಣೆಗೆ ನಡೆಸಲಿರುವ ನ್ಯಾಯಾಲಯ.. ಭಕ್ತಿಗೀತೆಯಾಗಿರುವ ಸೂಜುಗಾದ ಸೂಜುಮಲ್ಲಿಗೆ ಹಾಡನ್ನು ಕ್ರೌರ್ಯದ ದೃಶ್ಯಕ್ಕೆ ಬಳಕೆ ಮಾಡಿಕೊಂಡು ಜನಪದ ಸಂಸ್ಕೃತಿಗೆ ಧಕ್ಕೆ.... ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ...

    ಇದರ ಜೊತೆ ಮಾದಪ್ಪನ ಭಕ್ತರು  ಸಹ ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು...

  • ನ.19ಕ್ಕೆ ಪ್ರೇಕ್ಷಕ ಗಮನ ಥಿಯೇಟರ್ ವಾಹನ

    ನ.19ಕ್ಕೆ ಪ್ರೇಕ್ಷಕ ಗಮನ ಥಿಯೇಟರ್ ವಾಹನ

    ಗರುಡ ಗಮನ ವೃಷಭ ವಾಹನ. ತನ್ನ ಟೈಟಲ್ಲಿನಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರ. ಶೆಟ್ಟಿ + ಶೆಟ್ಟಿ ಕಾಂಬಿನೇಷನ್ ಸಿನಿಮಾ. ಯೆಸ್, ಇದು ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸಿರೋ ಸಿನಿಮಾ. ಚಿತ್ರದ ನಿರ್ದೇಶಕರೂ ಸ್ವತಃ ರಾಜ್ ಬಿ.ಶೆಟ್ಟಿ. ಪ್ರೇಕ್ಷಕರ ಬಾಯಲ್ಲಿ ಗರುಡ ಗಮನ ವೃಷಭ ವಾಹನ ಅನ್ನೋ ಟೈಟಲ್ ಈಗ ಸಿಂಪಲ್ಲಾಗಿ ಜಿಜಿವಿವಿ ಆಗಿ ಹೋಗಿದೆ. ಈ ಚಿತ್ರವೀಗ ನವೆಂಬರ್ 19ರಂದು ತೆರೆಗೆ ಬರುತ್ತಿದೆ.

    ಈಗಾಗಲೇ ಚಿತ್ರದ ಟ್ರೇಲರ್ ಹೊರಬಿದ್ದಿದೆ. ರೆಗ್ಯುಲರ್ ಸ್ಟೈಲ್‍ಗಿಂತ, ಶೈಲಿಗಿಂತ ಬೇರೆಯದೇ ಆದ ಸಿನಿಮಾ ಈ ಜಿಜಿವಿವಿ ಅನ್ನೋ ಫೀಲಿಂಗ್ ಕೊಟ್ಟಿದೆ ಚಿತ್ರದ ಟ್ರೇಲರ್. ಗ್ಯಾಂಗ್‍ಸ್ಟರ್, ಫ್ರೆಂಡ್‍ಶಿಪ್ ಮತ್ತು ಗ್ಯಾಂಗ್‍ವಾರ್.. ಎಲ್ಲವನ್ನೂ ಕರಾವಳಿ ಬ್ಯಾಕ್‍ಗ್ರೌಂಡ್‍ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ.

    ರಿಷಬ್ ಮತ್ತು ರಾಜ್ ಇಬ್ಬರ ಕಾಂಬಿನೇಷನ್ನೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. 

  • ನಿರ್ದೇಶಕರೇ ಮೆಚ್ಚಿದ ನಿರ್ದೇಶಕರ ಸಿನಿಮಾ ಗಗವೃವಾ

    ನಿರ್ದೇಶಕರೇ ಮೆಚ್ಚಿದ ನಿರ್ದೇಶಕರ ಸಿನಿಮಾ ಗಗವೃವಾ

    ಒಂದು ಚಿತ್ರವನ್ನು ಸಿದ್ಧ ಮಾಡಿ ತೆರೆಗೆ ತರುವ ಪ್ರತಿಯೊಬ್ಬರಿಗೂ ಒಂದು ಆಸೆ ಸಹಜವಾಗಿಯೇ ಇರುತ್ತದೆ. ತಮ್ಮ ಕ್ಷೇತ್ರದ ಸಾಧಕರೆಲ್ಲರೂ ಈ ಚಿತ್ರವನ್ನು ಮೆಚ್ಚಬೇಕು ಎನ್ನುವುದು. ಸದ್ಯಕ್ಕೆ ರಾಜ್ ಬಿ.ಶೆಟ್ಟಿ ಆ ಸಾಧನೆ ಮಾಡಿದ್ದಾರೆ. ಒಂದು ಕಡೆ ಗರುಡ ಗಮನ ವೃಷಭ ವಾಹನವನ್ನು ಪ್ರೇಕ್ಷಕರು, ವಿಮರ್ಶಕರು ಮೆಚ್ಚಿದ್ದಾರೆ. ಬಾಕ್ಸಾಫೀಸ್ ದಾಖಲೆ ಬರೆಯುತ್ತಿದೆ. ಸಿನಿಮಾ ಚೆನ್ನಾಗಿದೆಯಾ..? ಕೆಟ್ಟದಾಗಿಯಾ..? ಓಕೆನಾ..? ಆವರೇಜ್ ಮೂವಿನಾ..? ಎಕ್ಸ್‍ಟ್ರಾರ್ಡನರಿ ಸಿನಿಮಾನಾ..? ಹೀಗೆ.. ಪರ ವಿರೋಧ ಎರಡೂ ಚರ್ಚೆಗಳು ಚಾಲ್ತಿಯಲ್ಲಿವೆ. ಇದೆಲ್ಲದರ ಮಧ್ಯೆ ರಾಜ್ ಬಿ.ಶೆಟ್ಟಿಗೆ ಚಿತ್ರರಂಗದ ನಿರ್ದೇಶಕರಿಂದ ಪ್ರಶಂಸೆಗಳು ಸಿಗುತ್ತಿವೆ.

    ಚಿತ್ರದಲ್ಲಿ ನಟಿಸಿರುವ ಇನ್ನೊಬ್ಬ ಹೀರೋ ರಿಷಬ್ ಶೆಟ್ಟಿ, ಸ್ವತಃ ಹಿಟ್ ಡೈರೆಕ್ಟರ್ ಅನ್ನೋದನ್ನು ಮರೆಯುವಂತಿಲ್ಲ. ಚಿತ್ರವನ್ನು ವಿತರಣೆ ಮಾಡಿದವರಲ್ಲಿ ಒಬ್ಬರಾದ ರಕ್ಷಿತ್ ಶೆಟ್ಟಿ ಕೂಡಾ ಸ್ಟಾರ್ ನಿರ್ದೇಶಕರೇ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡಾ ಚಿತ್ರದ ಬಗ್ಗೆ ಚೆಂದದ ಮಾತನಾಡಿದ್ದಾರೆ.

    ಅವರಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಪುಟ್ಟ ಪತ್ರವನ್ನೇ ಬರೆದು ರಾಜ್ ಬಿ.ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಶಶಾಂಕ್, ಅನೂಪ್ ಭಂಡಾರಿ, ಸತ್ಯ ಪ್ರಕಾಶ್, ಹೇಮಂತ್ ರಾವ್.. ಹೀಗೆ ಚಿತ್ರವನ್ನು ನೋಡಿದವರೆಲ್ಲ ಗರುಡ ಗಮನ ವೃಷಭ ವಾಹನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

  • ಬಾಲಿವುಡ್ ಸ್ಟಾರ್ ಡೈರೆಕ್ಟರ್ ಮೆಚ್ಚಿದ ಗ.ಗ.ವೃ.ವಾ.

    ಬಾಲಿವುಡ್ ಸ್ಟಾರ್ ಡೈರೆಕ್ಟರ್ ಮೆಚ್ಚಿದ ಗ.ಗ.ವೃ.ವಾ.

    ಒಂದು ಮೊಟ್ಟೆಯ ಕಥೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ರಾಜ್ ಬಿ. ಶೆಟ್ಟಿ, ಈಗ ಗರುಡ ಗಮನ ವೃಷಭ ವಾಹನದಿಂದ ಬಾಲಿವುಡ್ ತಲುಪಿದ್ದಾರೆ. ಸಿನಿ ರಸಿಕರ ಮೆಚ್ಚುಗೆ ಗಳಿಸಿರುವ ಚಿತ್ರವನ್ನೀಗ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮೆಚ್ಚಿದ್ದಾರೆ.

    ಗರುಡ ಗಮನ ವೃಷಭ ವಾಹನ ಸಿನಿಮಾ ಸೃಷ್ಟಿಸಿದ ಸಂಚಲನ ಅನುರಾಗ್ ಕಶ್ಯಪ್ ಅವರಿಗೂ ಮುಟ್ಟಿ, ಅವರು ಸಿನಿಮಾ ನೋಡಿ ರಾಜ್ ಬಿ.ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದಾರೆ.

    ಕೇವಲ 32 ದಿನದಲ್ಲಿ ಶೂಟಿಂಗ್ ಮುಗಿಸಿದೆವು ಎಂಬುದನ್ನು ಕೇಳಿ ಅನುರಾಗ್ ಕಶ್ಯಪ್ ಇನ್ನಷ್ಟು ಥ್ರಿಲ್ ಆದರು. ತಮ್ಮ ಅಂಗಮಾಲಿ ಡೈರೀಸ್ ಮತ್ತು ಗ್ಯಾಮಗ್ ಆಫ್ ವಸೇಪು್ ಚಿತ್ರಗಳಿಗಿಂತ ಇದು ಭಿನ್ನವಾಗಿದೆ ಎಂದರು ಎಂದು ರಾಜ್ ಬಿ.ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಮಾತುಕತೆಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ರಾಜ್ ಶೆಟ್ಟಿಯವರ ಸಿನಿಮಾ ಮೇಕಿಂಗ್ ಶೈಲಿ ಬಗ್ಗೆ ಉತ್ಸುಕತೆ ತೋರಿ ಮುಂಬೈಗೆ ಬನ್ನಿ ಮಾತನಾಡೋಣ ಎಂದು ಕರೆದಿದ್ದಾರಂತೆ ಅನುರಾಗ್ ಕಶ್ಯಪ್.

    ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಅಭಿನಯಕ್ಕೆ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದಾರೆ. ಎಂಥ ಸಾವಾ.. ಬ್ಯಾವರ್ಸಿ.. ಪದಗಳು ಈಗ ಕರುನಾಡಿನ ಮನೆ ಮನೆಯನ್ನೂ ತಲುಪುತ್ತಿರೋದು ವಿಶೇಷ. ಹರಿ ಮತ್ತು ಶಿವನ ಪಾತ್ರಗಳ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳೂ ಶುರುವಾಗಿವೆ. ಅಲ್ಲಿಗೆ ಗ.ಗ.ವೃ.ವಾ. ಗೆದ್ದಿದೆ.

  • ಭೋಲೇನಾಥ್ ಶಿವನಾಗಿ ರಾಜ್ ಬಿ. ಶೆಟ್ಟಿ. ರಿಷಬ್ ಶೆಟ್ಟಿ ಪಾತ್ರವೇನು?

    ಭೋಲೇನಾಥ್ ಶಿವನಾಗಿ ರಾಜ್ ಬಿ. ಶೆಟ್ಟಿ. ರಿಷಬ್ ಶೆಟ್ಟಿ ಪಾತ್ರವೇನು?

    ಮುಗ್ಧನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊಟ್ಟೆ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈಗ ಭೂಗತ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಡೈರೆಕ್ಟರ್. ಅವರೇ ಪ್ರೊಡ್ಯೂಸರ್. ಕಥೆ ಹೊಸದಾಗಿದೆ ಎನ್ನುವ ಸಿಗ್ನಲ್ ಟ್ರೇಲರ್‍ನಲ್ಲಿ ಸಿಕ್ಕಿದೆ.

    ಶಿವನನ್ನು ಭೋಲೆನಾಥ್ ಎನ್ನುತ್ತಾರೆ. ಭೋಲೆ ಎಂದರೆ ಮುಗ್ಧ ಎಂದರ್ಥ. ಹೀಗಾಗಿಯೇ ಶಿವನಿಗೆ ಮುಗ್ಧತೆ ಮತ್ತು ಕೋಪ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿತ್ರದಲ್ಲಿ ನನ್ನ ಪಾತ್ರವೂ ಅಂತಹುದೇ. ಮುಗ್ಧ ಮತ್ತು ಸಿಟ್ಟು ಎರಡನ್ನೂ ತುಂಬಿಕೊಂಡಿರೋ ಮುಗ್ಧ ಮೃಗ. ತನ್ನ ತಂಟೆಗೆ ಬಂದವರ ಮೇಲೆ ಕ್ರೂರವಾಗಿ ದಾಳಿ ಮಾಡುವ ಮೃಗದಂತವನು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.

    ರಿಷಬ್ ಶೆಟ್ಟಿ ಚಿತ್ರದಲ್ಲಿ ಹರಿ ಅನ್ನೋ ಪಾತ್ರ ಮಾಡಿದ್ದಾರೆ. ನನ್ನ ಪಾತ್ರ ಮತ್ತು ಅವರ ಪಾತ್ರ ಫ್ರೆಂಡ್ಸ್. ರಿಯಲ್ಲಾಗಿ ನಾವಿಬ್ಬರೂ ಫ್ರೆಂಡ್ಸ್. ಅಷ್ಟೇ ಅಲ್ಲ, ಇತ್ತೀಚೆಗೆ ಕಾಮಿಡಿ ಶೇಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸುತ್ತಿದ್ದ ರಿಷಬ್ ಶೆಟ್ಟಿ ಇಲ್ಲಿ ಸ್ವಲ್ಪ ಸೀರಿಯಸ್ ಆಗಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್‍ಗಳಿವೆ ಎನ್ನುತ್ತಾರೆ ರಾಜ್ ಬಿ.ಶೆಟ್ಟಿ. ಸಿನಿಮಾ ರಿಲೀಸ್ ಆಗೋಕೆ ಸಮಯ ಫಿಕ್ಸ್ ಆಗಿದೆ. ವೇಯ್ಟ್ & ಸೀ.

  • ಮೊಟ್ಟೆ + ಕಿರಿಕ್ ಸ್ಟಾರ್ = ಗರುಡ ಗಮನ ವೃಷಭ ವಾಹನ

    shetty and shetty joins hands for new venture

    ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಟಾರ್ ಆದವರು ನಟ ರಿಷಬ್ ಶೆಟ್ಟಿ. ಒಂದು ಮೊಟ್ಟೆಯ ಮೂಲಕ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈ ಎರಡೂ ಒಟ್ಟಿಗೇ ಸೇರಿದಾಗ ಸೃಷ್ಟಿಯಾಗಿದ್ದು ಗರುಡ ಗಮನ ವೃಷಭ ವಾಹನ. ಇದು ಹೊಸ ಸಿನಿಮಾ. ಒಂದು ಮೊಟ್ಟೆಯ ಕಥೆ ನಂತರ ರಾಜ್ ಬಿ.ಶೆಟ್ಟಿ ಮತ್ತೆ ನಿರ್ದೇಶಕರಾಗಿರುವ ಚಿತ್ರವಿದು.

    ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ನಟಿಸುತ್ತಿದ್ದಾರೆ. ಇಲ್ಲಿ ಎರಡು ಪಾತ್ರಗಳಿವೆ. ಒಂದು ಕ್ರೋಧದ ಪ್ರತಿರೂಪ. ಶಿವನಂತೆ. ಇನ್ನೊಂದು ನಿಯಂತ್ರಣದ ಪ್ರತಿರೂಪ. ವಿಷ್ಣು ಇದ್ದಂತೆ. ಈ ಇಬ್ಬರೂ ಒಂದಾದರೆ ಯಾವ ಹಂತಕ್ಕೆ ಬೆಳೆಯಬಹುದು ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರೆ ರಿಷಬ್ ಶೆಟ್ಟಿ.

    ಮೊದಲು ಹರಿಹರ ಎಂದೇ ಹೆಸರಿಡುವ ಆಲೋಚನೆ ಇತ್ತಂತೆ. ಆನಂತರ ಇವರು ಹರಿ ಹರ ಅಲ್ಲ, ಅವರ ಅಂಶಗಳಿರೋ ಪಾತ್ರಗಳು ಎನ್ನಿಸಿದ್ದರಿಂದ ಗರುಡಗಮನ ಹರಿ, ವೃಷಭವಾಹನ ಶಿವ ಎಂದು ಹೆಸರಿಟ್ಟರಂತೆ. ವಿಶೇಷವೆಂದರೆ ಚಿತ್ರದ ಶೂಟಿಂಗ್ ಮುಗಿದಿದೆ. ಜೂನ್‍ನಲ್ಲಿ ರಿಲೀಸ್.

  • ವಿವಾದ : ಆ ದೃಶ್ಯಕ್ಕೆ ಮಾದಪ್ಪನ ಹಾಡು ಬೇಕಿತ್ತಾ?

    ವಿವಾದ : ಆ ದೃಶ್ಯಕ್ಕೆ ಮಾದಪ್ಪನ ಹಾಡು ಬೇಕಿತ್ತಾ?

    ಗರುಡ ಗಮನ ವೃಷಭ ವಾಹನ. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರೋ ಸಿನಿಮಾ. ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೋಡಿ ಮೋಡಿಯನ್ನೇ ಮಾಡಿಬಿಟ್ಟಿದೆ. ನಿರ್ದೇಶಕರಾಗಿ, ನಟರಾಗಿ..ಎರಡೂ ವಿಭಾಗಗಳಲ್ಲಿ ಬೆರಗು ಹುಟ್ಟಿಸಿರುವ ರಾಜ್ ಬಿ.ಶೆಟ್ಟಿ ಈಗ ವಿವಾದವನ್ನೂ ಎದುರಿಸುವಂತಾಗಿದೆ. ಅದಕ್ಕೆಲ್ಲ ಕಾರಣವಾಗಿರೋದು ಚಿತ್ರದ ದೃಶ್ಯವೊಂದರಲ್ಲಿ ಬಳಸಿರುವ ಮಾದಪ್ಪನ ಹಾಡು.

    ಸೋಜುಗಾದ ಸೂಜುಮಲ್ಲಿಗೆ.. ಮಲೆ ಮಹದೇಶ್ವರನ ಕುರಿತು ಭಕ್ತಿಯ ಜನಪದ ಗೀತೆ.  ಚಿತ್ರದಲ್ಲಿ ಕೊಲೆ ಮಾಡಿದ ನಂತರ ಶಿವನ ಪಾತ್ರ ವಿಕೃತವಾಗಿ ಕುಣಿಯುವಾಗ ಬ್ಯಾಕ್‍ಗ್ರೌಂಡ್‍ನಲ್ಲಿ ಸೋಜುಗಾದ ಸೂಜುಮಲ್ಲಿಗೆ ಹಾಡು ಪ್ಲೇ ಆಗುತ್ತೆ. ಆ ದೃಶ್ಯಕ್ಕೆ ಇಂತಹ ಹಾಡು.. ಅದೂ ಮಾದಪ್ಪನ ಹಾಡು ಬೇಕಿತ್ತಾ? ಅಗತ್ಯವಿತ್ತಾ? ಎಂಬ ಪ್ರಶ್ನೆ ಎದ್ದಿದೆ.

    ಕುಸುಮಾ ಆಯರಹಳ್ಳಿ, ಸ್ವಾಮಿ ಪೊನ್ನಾಚಿಯಂತಹ ಸಾಹಿತಿ, ಲೇಖಕರು ಸೋಷಿಯಲ್ ಮೀಡಿಯಾದಲ್ಲೇ ಈ ಪ್ರಶ್ನೆ ಎತ್ತಿದ್ದಾರೆ. 

  • ಸಂಕ್ರಾಂತಿಗೆ ಮನೆ ಮನೆಗೆ ಗರುಡ ಗಮನ ವೃಷಭ ವಾಹನ

    ಸಂಕ್ರಾಂತಿಗೆ ಮನೆ ಮನೆಗೆ ಗರುಡ ಗಮನ ವೃಷಭ ವಾಹನ

    2021ರ ಸೂಪರ್ ಹಿಟ್ ಚಿತ್ರ ಗರುಡ ಗಮನ ವೃಷಭ ವಾಹನ ಈಗ ಮನೆ ಮನೆಗೂ ಬರಲಿದೆ. ನ.19ರಂದು ರಿಲೀಸ್ ಆಗಿದ್ದ ಜಿಜಿವಿವಿ ಬಾಕ್ಸಾಫೀಸ್‍ನಲ್ಲಿ ಅದ್ಭುತ ಕಲೆಕ್ಷನ್ ಮಾಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರ ಮೆಚ್ಚುಗೆಯನ್ನೂ ಪಡೆದಿದ್ದ ಗರುಡ ಗಮನ ವೃಷಭ ವಾಹನ ಓಟಿಟಿಯಲ್ಲಿ ಬರಲಿದೆ. ಸಂಕ್ರಾಂತಿಗೆ.

    ರಾಜ್ ಬಿ.ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿದ್ದರು. ಜೀ5ನಲ್ಲಿ ರಿಲೀಸ್ ಆಗುತ್ತಿರುವ ಗರುಡ ಗಮನ ವೃಷಭ ವಾಹನ ಜನವರಿ 15ರಂದು ಓಟಿಟಿಯಲ್ಲಿ ಪ್ರಸಾರವಾಗಲಿದೆ.

  • ಸಿದ್ಧ ಸೂತ್ರಗಳನ್ನು ಮುರಿದವನೇ ಮಹಾಶೂರ : ಗಗವೃವಾ ಸೂಪರ್ ಸಕ್ಸಸ್

    ಸಿದ್ಧ ಸೂತ್ರಗಳನ್ನು ಮುರಿದವನೇ ಮಹಾಶೂರ : ಗಗವೃವಾ ಸೂಪರ್ ಸಕ್ಸಸ್

    ಗರುಡ ಗಮನ ವೃಷಭ ವಾಹನ. ಈ ಸಿನಿಮಾ ನೋಡಿದವರಿಗೆ ಮೊದಲ ಶಾಕ್.. ಪ್ರೇಕ್ಷಕರು ಊಹಿಸಿಯೂ ಇರದ ಭೂಗತ ಜಗತ್ತು. ಹಾಗೆ ಶಾಕ್ ಕೊಡುವ ರಾಜ್ ಬಿ.ಶೆಟ್ಟಿ ಮತ್ತೊಮ್ಮೆ ಗಾಂಧಿನಗರದ ಸಿದ್ಧ ಸೂತ್ರಗಳನ್ನೆಲ್ಲ ಮುರಿದು ಮೂಟೆ ಕಟ್ಟಿದ್ದಾರೆ. ಅದು ಪ್ರೇಕ್ಷಕರಿಗೂ ಇಷ್ಟವಾಗಿದೆ. ಸಿನಿಮಾ ಗೆದ್ದುಬಿಟ್ಟಿದೆ.

    ಮೊದಲ ದಿನ 150 ಥಿಯೇಟರಿನಲ್ಲಿ ರಿಲೀಸ್ ಆದ ಸಿನಿಮಾ 2ನೇ ದಿನಕ್ಕೇ ಥಿಯೇಟರ್ ಹೆಚ್ಚಿಸಿಕೊಂಡಿತ್ತು. ಮಳೆ ನಡುವೆಯೂ ಪ್ರೀಮಿಯರ್ ಶೋಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ಕೇರಳ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲೂ ರಿಲೀಸ್ ಆಗಿದ್ದ ಚಿತ್ರಕ್ಕೆ ಅಲ್ಲಿಯೂ ಹೌಸ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಈಗ ವಿದೇಶಗಳಿಂದ ಬೇಡಿಕೆ ಬರೋಕೆ ಶುರುವಾಗಿದೆ. ಆ ಖುಷಿಯಲ್ಲೇ ಚಿತ್ರತಂಡ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು.

    ನಾವಿಬ್ಬರೂ ಗುಡ್ ಫ್ರೆಂಡ್ಸ್. ದೊಡ್ಡವನು ಚಿಕ್ಕವನು ಅನ್ನೋ ಭೇದಭಾವ ಇಲ್ಲ. ಅಹಂ ಇಲ್ಲ. ಒಂದು ಸಿನಿಮಾವನ್ನು ಪ್ರಾಮಾಣಿಕವಾಗಿ ಮಾಡಬೇಕು. ಚೆನ್ನಾಗಿ ಮಾಡಬೇಕು. ಚೆನ್ನಾಗಿ ರೀಚ್ ಮಾಡಿಸಬೇಕು. ಹೀಗಾಗಿಯೇ ಗೆದ್ದಿದ್ದೇವೆ ಎಂದರು ರಿಷಬ್ ಶೆಟ್ಟಿ.

    ರೌದ್ರಾವತಾರದ ಶಿವನಾಗಿ ರಾಜ್ ಬಿ.ಶೆಟ್ಟಿ, ಚಾಣಾಕ್ಷನಾಗಿ ಗೆಲ್ಲುವ ಹರಿಯಾಗಿ ರಿಷಬ್ ಶೆಟ್ಟಿ.. ಅವರಿಬ್ಬರ ನಡುವಿನ ಸ್ನೇಹ.. ಸ್ನೇಹದಲ್ಲೂ ಲೆಕ್ಕ ಹಾಕುವ ಹರಿ, ಸ್ನೇಹವನ್ನು ಬಿಟ್ಟು ಬೇರೇನನ್ನೂ ಯೋಚಿಸದ ಶಿವ.. ಎಲ್ಲವೂ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ. ಈ ಹಿಂದೆ ಮೊಟ್ಟೆ ಸ್ಟೋರಿಯಲ್ಲೂ ರೂಲ್ಸ್ ಬ್ರೇಕ್ ಮಾಡಿ ಗೆದ್ದಿದ್ದ ರಾಜ್ ಬಿ.ಶೆಟ್ಟಿ, ಈ ಬಾರಿ ಮತ್ತೊಮ್ಮೆ ಸಿದ್ಧಸೂತ್ರಗಳನ್ನು ಮುರಿಯುವವನೇ ಮಹಾಶೂರ ಎಂದು ಸಾಬೀತು ಮಾಡಿದ್ದಾರೆ.

  • ಸ್ನೇಹಿತರಿಂದ.. ಸ್ನೇಹಿತರಿಗಾಗಿ.. ಸ್ನೇಹಿತರ ಕಥೆ : ಗರುಡ ಗಮನ ವೃಷಭ ವಾಹನ

    ಸ್ನೇಹಿತರಿಂದ.. ಸ್ನೇಹಿತರಿಗಾಗಿ.. ಸ್ನೇಹಿತರ ಕಥೆ : ಗರುಡ ಗಮನ ವೃಷಭ ವಾಹನ

    ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬರು ರಿಷಬ್ ಶೆಟ್ಟಿ. ಮತ್ತೊಬ್ಬರು ರಾಜ್ ಬಿ.ಶೆಟ್ಟಿ. ಇವರಿಬ್ಬರಲ್ಲಿ ತೆರೆಯ ಹಿಂದೆಯೂ ಹೀರೋ ಆಗಿ ಡೈರೆಕ್ಟ್ ಮಾಡಿರೋದು ರಾಜ್ ಬಿ.ಶೆಟ್ಟಿ. ಈ ಇಬ್ಬರ ಜೊತೆ ಇನ್ನೂ ಒಬ್ಬರು ಸ್ಟಾರ್ ಇದ್ದಾರೆ. ಅದು ರಕ್ಷಿತ್ ಶೆಟ್ಟಿ. ಚಿತ್ರದ ವಿತರಣೆ ಅವರದ್ದೇ. ವಿಶೇಷವೆಂದರೆ ಈ ಮೂವರೂ ಹೀರೋಗಳೇ. ಮೂವರೂ ನಿರ್ಮಾಪಕರೇ. ಮೂವರೂ ನಿರ್ದೇಶಕರೇ. ಮೂವರೂ ಪರಸ್ಪರ ಗೆಳೆಯರೇ.

    ಹೀಗಾಗಿ ಇದನ್ನು ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರೇ ಮಾಡಿರುವ ಸ್ನೇಹಿತರ ಕಥೆ ಎನ್ನಬಹುದು. ಏಕೆಂದರೆ ಚಿತ್ರದಲ್ಲಿ ಬರೋ ಹರಿ ಮತ್ತು ಹರ ಇಬ್ಬರೂ ಗೆಳೆಯರು. ಆ ಗೆಳೆಯರ ನಡುವಿನ ಕಥೆಯೇ ಗರುಡ ಗಮನ ವೃಷಭ ವಾಹನ. ಇದೇ ವಾರ ರಿಲೀಸ್ ಆಗುತ್ತಿದೆ.

    ಚಿತ್ರದಲ್ಲಿ ಮಂಗಳೂರಿನ ಭೂಗತ ಜಗತ್ತಿನ ಕಥಾ ಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭ ವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ಕೋಪಿಷ್ಠ ಸ್ವಭಾವ. ಇಂಥ  ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವುದೇ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಪರಂವಃ ಸ್ಟುಡಿಯೋ ಮೂಲಕ ಚಿತ್ರ ರಿಲೀಸ್ ಆಗುತ್ತಿದೆ.

  • ಹರಿಗೆ ರಿಷಬ್ ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ : ರಾಜ್ ಬಿ ಶೆಟ್ಟಿ

    ಹರಿಗೆ ರಿಷಬ್ ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ : ರಾಜ್ ಬಿ ಶೆಟ್ಟಿ

    ಗರುಡ ಗಮನ ವೃಷಭ ವಾಹನ. ಸದ್ಯಕ್ಕೆ ಜಿಜಿವಿವಿ ಎಂದೇ ಜನಪ್ರಿಯವಾಗುತ್ತಿರೋ ಸಿನಿಮಾ. ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆದರೆ, ಕುತೂಹಲವನ್ನಂತೂ ಸೃಷ್ಟಿಸಿದೆ. ಚಿತ್ರದ ಹೀರೋ ಕಂ ಡೈರೆಕ್ಟರ್ ರಾಜ್ ಬಿ ಶೆಟ್ಟಿ. ಮೊಟ್ಟೆಯ ಕಥೆಗಿಂತ ವಿಭಿನ್ನವಾಗಿ.. ಮೊಟ್ಟೆ ಪಾತ್ರಕ್ಕೆ ತದ್ವಿರುದ್ಧವಾಗಿ ಕಾಣಿಸಿದ್ದಾರೆ. ಅವರದ್ದು ಶಿವನ ಪಾತ್ರ. ಜಗಳಗಂಟನ ಪಾತ್ರವಂತೆ.

    ಅವರಿಗೆ ಎದುರಾಗಿರೋದು ರಿಷಬ್ ಶೆಟ್ಟಿ. ಗಡ್ಡದ ಮುಖದಲ್ಲಿ ಮುಗ್ಧನಂತೆ ಕಾಣಿಸುತ್ತಿದ್ದ ರಿಷಬ್ ಶೆಟ್ಟಿಯವರಿಗೆ ಇಲ್ಲಿ ಗಡ್ಡ, ಮೀಸೆ ಎರಡನ್ನೂ ತೆಗೆಸಿದ್ದಾರೆ ರಾಜ್ ಶೆಟ್ಟಿ.

    ಹರಿಯ ಪಾತ್ರಕ್ಕೆ ರಿಷಬ್ ಶೆಟ್ಟಿ ಬಿಟ್ಟು ಬೇರೆ ಆಯ್ಕೆಯೇ ನನ್ನ ಮುಂದೆ ಇರಲಿಲ್ಲ. ಕಣ್ಣ ಮುಂದೆ ಇನ್ನೊಬ್ಬರ ಮುಖವೂ ಬರಲಿಲ್ಲ. ಮಂಗಳೂರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕಿತ್ತು. ಅದೇ ಆದ್ಯತೆಯಾಗಿತ್ತು. ಅಲ್ಲದೆ ಗಡ್ಡ ಮೀಸೆ ತೆಗೆದಾಗ ರಿಷಬ್ ಶೆಟ್ಟಿ ಮುಗ್ದನಂತೆ ಕಾಣಿಸುತ್ತಾರೆ. ಗಡ್ಡ ಮೀಸೆ ಬಿಟ್ಟರೆ ಅದರ ಖದರು ಬೇರೆ. ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದಿದ್ದಾರೆ ರಾಜ್ ಬಿ. ಶೆಟ್ಟಿ. 

  • ಹಾಸ್ಯ..  ಕ್ರೌರ್ಯ.. ಸಂಭ್ರಮ.. ಏನಿದು ವೃಷಭ ವಾಹನ?

    ಹಾಸ್ಯ..  ಕ್ರೌರ್ಯ.. ಸಂಭ್ರಮ.. ಏನಿದು ವೃಷಭ ವಾಹನ?

    ಅವನ ಹೆಸರು ಶಿವ : ರಾಜ್ ಬಿ.ಶೆಟ್ಟಿ. ವೃಷಭ ವಾಹನ

    ಇವನ ಹೆಸರು ಹರಿ : ರಿಷಬ್ ಶೆಟ್ಟಿ.ಗರುಡ ಗಮನ

    ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರವಿದು. ಒಂದಿಷ್ಟು ಹಾಸ್ಯ.. ಒಂದಿಷ್ಟು ಕ್ರೌರ್ಯ.. ಒಂದಿಷ್ಟು ಸಂಭ್ರಮ.. ಬೇಜಾನ್ ಕುತೂಹಲ. ಬೆರಗು ಹುಟ್ಟಿಸುವುದು ರಾಜ್ ಬಿ.ಶೆಟ್ಟಿ. ಅವರ ಪಾತ್ರಕ್ಕೊಂದು ರೆಬಲ್ ಇಮೇಜ್ ಇದೆ. ರಿಷಬ್ ಶೆಟ್ಟಿಗೊಂದು ಅಂಡರ್ ವರ್ಲ್ಡ್ ಡಾನ್ ಫೀಲ್ ಇದೆ. ಟ್ರೇಲರ್ ಉದ್ದಕ್ಕೂ ಬರೋ ಫೀಲಿಂಗ್ ಮ್ಯೂಸಿಕ್, ಹುಲಿ ಕುಣಿತ, ಕರಾವಳಿ ಸಂಸ್ಕೃತಿಯ ಹಿನ್ನೆಲೆ ಕಥೆಯಲ್ಲಿ ಬೇರೇನೋ ಇದೆ ಅನ್ನೋ ಕುತೂಹಲವನ್ನಂತೂ ಹುಟ್ಟಿಸುತ್ತೆ. ಮಿದುನ್ ಮುಕುಂದನ್ ಮ್ಯೂಸಿಕ್ ಬೇರೆಯದ್ದೇ ಟ್ರ್ಯಾಕ್ನಲ್ಲಿದೆ. ಸಂಥಿಂಗ್ ಡಿಫರೆಂಟ್. ಪರಂವಾ ಸ್ಟುಡಿಯೋಸ್ ನಿರ್ಮಾಣದ ಚಿತ್ರವಿದು. ನವೆಂಬರ್ 19ಕ್ಕೆ ರಿಲೀಸ್ ಡೇಟ್ ಘೋಷಿಸಿಕೊಂಡಿದೆ.