ಈ ಚಿತ್ರದಲ್ಲಿ ರಾಜ್ಯ ಕಂಡ ಮೂವರು ಮಾಜಿ ಸಿಎಂಗಳನ್ನು ನೆನಪಿಸುವ ಪಾತ್ರಗಳಿವೆ. ಇಬ್ಬರು ವಿವಾದಿತ ಸ್ವಾಮಿಗಳನ್ನು ಹೋಲುವ ಕಥೆ ಇದೆ. ಅದು ವಿವಾದವಾದರೂ ಆಗಬಹುದು.
ಹೀಗೊಂದು ವಿವಾದದ ಸುಳಿವನ್ನು ಚಿತ್ರ ರಿಲೀಸ್ ಆಗುವ ವೇಳೆ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ. ಮತ್ತೆ ಉದ್ಭವ ಥಿಯೇಟರುಗಳಲ್ಲಿ ಉದ್ಭವವಾಗಿರುವ ಸಮಯವಿದು. ಅವರು ಯಾರು..? ಅದು ನಿಮಗೆ ಸರಳವಾಗಿ ಅರ್ಥವಾಗುತ್ತೆ. ಊಹೆ ನಿಮಗೇ ಬಿಟ್ಟಿದ್ದು ಎನ್ನುವ ಕೂಡ್ಲು, ಅಪ್ಪಿತಪ್ಪಿಯೂ ವಿವಾದವನ್ನು ಕೆದಕಿ.. ಗಾಯ ಮಾಡಿಕೊಂಡು..ಮೈಮೇಲೆ ಎಳೆದುಕೊಳ್ಳೋಕೆ ಹೋಗೋದಿಲ್ಲ. ಒಬ್ಬ ನಿರ್ದೇಶಕನಾಗಿ ಹೇಳಬೇಕಾದ್ದನ್ನು ಹೇಳಿ ತಣ್ಣಗೆ ಕುಳಿತಿದ್ದಾರೆ ಕೂಡ್ಲು.
ಪ್ರಮೋದ್, ರಂಗಾಯಣ ರಘು, ಮಿಲನ ನಾಗರಾಜ್, ಮೋಹನ್ ನಟಿಸಿರುವ ಚಿತ್ರಕ್ಕೆ ಕಾಫಿತೋಟ ಚಿತ್ರ ನಿರ್ಮಿಸಿದ್ದ ನಿತ್ಯಾನಂದ ಬಂಡವಾಳ ಹೂಡಿದ್ದಾರೆ.