` revathi, - chitraloka.com | Kannada Movie News, Reviews | Image

revathi,

  • A Simple Wedding For Nikhil And Revathi On April 17 - Exclusive

    nikhil gowda, revathi image

    Actor and politician Nikhil Kumaraswamy, son of former chief minister H D Kumaraswamy will marry Ms.Revathi, as scheduled on April 17 in Bengaluru. However, the wedding ceremony will be a low key affair for the two families due to Coronavirus outbreak.

    Previously, former chief minister H D Kumaraswamy, son of former prime minister H D Deve Gowda had planned for a grand wedding at a placed located near Ramanagar but the plans were altered due to the outbreak of Coronavirus and lockdown announced across the country to fight the spread of the deadly virus.

    Chitraloka has learnt from a highly placed source that the wedding, scheduled on April 17 in Bengaluru will now be attended by family members only of upto 20 in number from both bride and bridegroom's family. The wedding will be held at Revathi's residence.

    Chitraloka wishes both Mr. Nikhil and Ms. Revathi on their marriage to be held on April 17.

    Also Read

    Sa Ra Govindu Hands Over Nikhil Kumarswamy's Cheque to Okkuta

    Ex-CM HDK To The Rescue Of Kannada Film Workers - Breaking News

    ಚೈನೀಸ್ ವೈರಸ್ ಎಫೆಕ್ಟ್ : ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಮದುವೆ ಶಿಫ್ಟ್

    ಇಂದು ನಿಖಿಲ್ ಕುಮಾರಸ್ವಾಮಿ-ರೇವತಿ ನಿಶ್ಚಿತಾರ್ಥ

    ಫೆಬ್ರವರಿ 18ಕ್ಕೆ ತಾಜ್ ವೆಸ್ಟ್ ಎಂಡ್‍ನಲ್ಲಿ ನಿಶ್ಚಿತಾರ್ಥ

    ನಿಖಿಲ್ ಮದುವೆ ಫಿಕ್ಸ್ : ಯಾರೀಕೆ ರೇವತಿ..?

    ನನ್ನವಳು ಕನ್ನಡದವಳು.. ಆದರೆ ಸಿನಿಮಾದವಳಲ್ಲ - ನಿಖಿಲ್ ಕುಮಾರಸ್ವಾಮಿ

  • ಇಂದು ನಿಖಿಲ್ ಕುಮಾರಸ್ವಾಮಿ-ರೇವತಿ ನಿಶ್ಚಿತಾರ್ಥ

    nikhil gowda revathi engagement today

    ಸ್ಯಾಂಡಲ್‍ವುಡ್‍ನ ಎಲಿಜಬೆಲ್ ಬ್ಯಾಚುಲರ್ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ತಾಜ್ ವೆಸ್ಟ್ ಎಂಡ್‍ನಲ್ಲಿ ವೇದಿಕೆ ಸಿದ್ಧವಾಗಿದೆ. ರೇವತಿ ಜೊತೆ ವಿವಾಹ ಬಂಧನಕ್ಕೆ ಕಾಲಿಡಲು ಸಿದ್ಧವಾಗಿದ್ದಾರೆ ನಿಖಿಲ್.

    ಲೇಔಟ್ ಮಂಜುನಾಥ್ ಅವರ ಮೊಮ್ಮಗಳು ರೇವತಿ, ಎಂಸಿಎ ಪದವೀಧರೆ. ಸದ್ಯಕ್ಕೆ ನಿಖಿಲ್ ಚಿತ್ರರಂಗದಲ್ಲಿ ಬ್ಯುಸಿ. ರಾಜಕಾರದಲ್ಲೂ ಇರೋ ನಿಖಿಲ್, ಎರಡೂ ದೋಣಿಗಳ ಮೇಲೆ ಪಯಣ ಮಾಡುತ್ತಿದ್ದಾರೆ.

    ಅಂದಹಾಗೆ ಇಬ್ಬರ ಮದುವೆ ಏಪ್ರಿಲ್ 17ರಂದು ನಡೆಯಲಿದೆ. ರಾಮನಗರದಲ್ಲಿ 54 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. 

  • ಏ.17ರ ಮದುವೆಗೆ ಶಿವರಾತ್ರಿ ದಿನದಂದೇ ಭೂಮಿಪೂಜೆ

    nikhil revathi wedding preparations started from shivarathri

    ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮಂಜುನಾಥ್ ಮದುವೆಗೆ ಈಗಾಗಲೇ ಎಂಗೇಜ್‍ಮೆಂಟ್ ಆಗಿದೆ. ಏಪ್ರಿಲ್ 17ಕ್ಕೆ ಮದುವೆ. ಇನ್ನೂ ಸುಮಾರು 2 ತಿಂಗಳು ಟೈಂ ಇರುವಾಗಲೇ ಸಿದ್ಧತೆ ಶುರುವಾಗಿದೆ. ಮದುವೆ ಕಾರ್ಯಕ್ಕಾಗಿ ರಾಮನಗರದ ಜಾನಪದ ಲೋಕದಲ್ಲಿ ಸುಮಾರು 90 ಎಕರೆ ಪ್ರದೇಶದಲ್ಲಿ ಸಿದ್ಧತೆ ಹಮ್ಮಿಕೊಳ್ಳಲಾಗಿದೆ.

    ಮದುವೆಯ ಸಿದ್ಧತೆಗೆ ಭೂಮಿ ಪೂಜೆ ನೆರವೇರಿದ್ದು, ಕುಮಾರಸ್ವಾಮಿ-ಅನಿತಾ ದಂಪತಿ ಹಾಗೂ ಮಂಜುನಾಥ್-ಶ್ರೀದೇವಿ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.

    ಮದುವೆಗೆ ಎಲ್ಲರಿಗೂ ಮುಕ್ತ ಆಹ್ವಾನವಿದೆ. ನಮ್ಮ ಪಕ್ಷದ ಕಾರ್ಯಕರ್ತರು, ಮತದಾರರು ಎಲ್ಲರೂ ಬಂದು ಹಾರೈಸಬೇಕು ಎಂದು ಮನವಿ ಮಾಡಿದ್ದಾರೆ ಕುಮಾರಸ್ವಾಮಿ. 

  • ಚೈನೀಸ್ ವೈರಸ್ ಎಫೆಕ್ಟ್ : ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಮದುವೆ ಶಿಫ್ಟ್

    nikhil kumaraswamy's wedding venue moved to bangalore from ramnagar

    ನಭೂತೋ ನಭವಿಷ್ಯತಿ ಎಂಬಂತೆ ನಡೆಸಲು ಯೋಜಿಸಲಾಗಿದ್ದ ನಿಖಿಲ್ ಕುಮಾರಸ್ವಾಮಿ ಮದುವೆಗೆ ಚೈನೀಸ್ ವೈರಸ್ ಬ್ರೇಕ್ ಹಾಕಿದೆ. ಏಪ್ರಿಲ್ 17ರಂದು ರಾಮನಗರದಲ್ಲಿ 100 ಎಕರೆ ಜಾಗದಲ್ಲಿ ನಡೆಯಬೇಕಿದ್ದ ಮದುವೆ ಶಿಫ್ಟ್ ಆಗಿದೆ. ಈಗಾಗಲೇ ಮಂಟಪ ಕಟ್ಟಲು ನಡೆಯುತ್ತಿದ್ದ ಕೆಲಸವನ್ನು ನಿಲ್ಲಿಸಲಾಗಿದೆ.

    ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮದುವೆಯನ್ನು ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಸುವ ಯೋಜನೆ ಇದೆ. ಆದರೆ ಎಲ್ಲಿ ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ ಎಂದಿದ್ದಾರೆ ನಿಖಿಲ್.

    ಏ.17ರಂದು ನಿಖಿಲ್-ರೇವತಿ ಮದುವೆ ನಿಶ್ಚಯವಾಗಿತ್ತು. ಕೆಲವರಿಗೆ ಲಗ್ನಪತ್ರಿಕೆಯನ್ನೂ ಹಂಚಲಾಗಿತ್ತು. ಆದರೆ, ಈಗ ಎಲ್ಲದಕ್ಕೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಕೊರೋನಾ ಬ್ರೇಕ್.

  • ತೋಟದ ಮನೆಯಲ್ಲಿ ನಿಖಿಲ್ ಮದುವೆ ; ಯಾರೂ ಹೋಗಬೇಡಿ ಪ್ಲೀಸ್

    nikhil revathi wedding venue shifed

    ಕೊರೋನಾ ಕಾಟವೊಂದು ಇಲ್ಲದೇ ಹೋಗಿದ್ದರೆ, ಇಷ್ಟು ಹೊತ್ತಿಗೆ ಕರ್ನಾಟಕದ ತುಂಬೆಲ್ಲ ನಿಖಿಲ್ ಕುಮಾರಸ್ವಾಮಿ ಮದುವೆಯದ್ದೇ ಸುದ್ದಿ ಇರುತ್ತಿತ್ತು. ರಾಮನಗರದಲ್ಲಿ 100 ಎಕರೆ ಜಾಗದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮದುವೆ ಸಂಭ್ರಮ, ಶಾಸ್ತ್ರ ಇಷ್ಟು ಹೊತ್ತಿಗೆ ಶುರುವಾಗಿಬಿಡುತ್ತಿತ್ತು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಆದರೆ, ಮದುವೆ ನಿಂತಿಲ್ಲ.

    ಏ.17ರಂದು ನಿಖಿಲ್ ಮದುವೆ ರೇವತಿ ಅವರ ಜೊತೆ ನೆರವೇರಲಿದೆ. ರಾಮನಗರದಲ್ಲಿರುವ ಅವರ ಫಾರ್ಮ್ ಹೌಸ್ ಅರ್ಥಾತ್ ತೋಟದ ಮನೆಯಲ್ಲಿ ಮದುವೆ ನಡೆಯಲಿದೆ. ಎರಡೂ ಕುಟುಂಬದ ಕಡೆಯ ಆಪ್ತ ಬಂಧುಗಳಷ್ಟೇ ಮದುವೆಯಲ್ಲಿರುತ್ತಾರೆ.

    ಲಾಕ್ ಡೌನ್ ನಡುವೆ ಈ ಮದುವೆ ಬೇಕಿತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ. 20ಕ್ಕೂ ಹೆಚ್ಚು ಜನ ಒಂದೆಡೆ ಸೇರುವುದು ಈ ಸಂದರ್ಭದಲ್ಲಿ ನಿಷಿದ್ಧ. ದೊಡ್ಡಗೌಡರ ಕೌಟುಂಬಿಕ ಬಳಗವೇ ದೊಡ್ಡದು. ಒಟ್ಟಿನಲ್ಲಿ ಕುಮಾರಸ್ವಾಮಿಯವರ ಆಸೆಯಂತೆ ಅದ್ಧೂರಿಯಾಗಿ ಮದುವೆ ನಡೆಯುತ್ತಿಲ್ಲ ಎನ್ನುವುದಂತೂ ಸತ್ಯ.

     

    --

  • ನಿಖಿಲ್ ಕುಮಾರಸ್ವಾಮಿ ಪುತ್ರನ ಹೆಸರು ಅವ್ಯನ್ ದೇವ್ : ಏನಿದರ ಅರ್ಥ?

    ನಿಖಿಲ್ ಕುಮಾರಸ್ವಾಮಿ ಪುತ್ರನ ಹೆಸರು ಅವ್ಯನ್ ದೇವ್ : ಏನಿದರ ಅರ್ಥ?

    ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿಯ ಮೊದಲ ಮಗನಿಗೆ ಅವ್ಯನ್ ದೇವ್ ಎಂದು ನಾಮಕರಣ ಮಾಡಿದ್ದಾರೆ. ವಿಶೇಷವಾದ ಹೆಸರಿದು. ಜೆಪಿ ನಗರದ ವೆಂಕಟೇಶ್ವರ ದೇಗುಲದಲ್ಲಿ ಶಾಸ್ತ್ರೋಕ್ತವಾಗಿ ನಡೆದ ನಾಮಕರಣ ಮಹೋತ್ಸವದಲ್ಲಿ ಅವರವರ ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು. ಪ್ರಪೌತ್ರ ಜನನ ಶಾಂತಿ ಹಾಗೂ ದೇವೇಗೌಡ ದಂಪತಿಗೆ ಕನಕಾಭಿಷೇಕ ಮಾಡಲಾಯಿತು.

    ಅನಿತಾ ಕುಮಾರಸ್ವಾಮಿ ಮೊಮ್ಮಗನಿಗೆ ಚಿನ್ನದ ಸರ, ಬಳೆಗಳನ್ನು ಉಡುಗೊರೆಯಾಗಿ ಕೊಟ್ಟರು. ದೇವೇಗೌಡ, ಚೆನ್ನಮ್ಮ ದಂಪತಿಗೆ ತಟ್ಟೆ ತುಂಬಾ ಚಿನ್ನವನ್ನಿಟ್ಟು ಕನಕಾಭಿಷೇಕ ಮಾಡಲಾಯಿತು.

    ಅಂದಹಾಗೆ ಅವ್ಯನ್ ದೇವ್ ಎಂದರೆ ಅರ್ಥವೇನು ಗೊತ್ತೇ? ಇದು ಗಣೇಶ ಮತ್ತು ವಿಷ್ಣುವಿನ ಇನ್ನೊಂದು ಹೆಸರು. ಇದಕ್ಕೆ ಇನ್ನೊಂದು ಅರ್ಥವೂ ಇದೆ. ಅದೃಷ್ಟವಂತ ಮಗು ಎನ್ನುವುದು ಅವ್ಯನ್ ದೇವ್ ಪದದ ಇನ್ನೊಂದು ಅರ್ಥ. ಮಗುವಿಗೆ  ಹೆಸರು ಫೈನಲ್ ಮಾಡಿದ್ದು ರೇವತಿ ಅವರಂತೆ. ನ್ಯೂಮರಾಲಜಿ ಪ್ರಕಾರವೂ ಈ ಹೆಸರು ಸೂಕ್ತವಾಗಿದೆ ಎಂದಿದ್ದಾರೆ ನಿಖಿಲ್-ರೇವತಿ ದಂಪತಿ.

  • ನಿಖಿಲ್ ಮದುವೆ ಫಿಕ್ಸ್ : ಯಾರೀಕೆ ರೇವತಿ..?

    nikhil kumaraswamy's wedding fixed with revathi

    ರಚಿತಾ ರಾಮ್ ಜೊತೆ ಮದುವೆಯಂತೆ. ಆಂಧ್ರಪ್ರದೇಶದ ಕೋಟ್ಯಧಿಯೊಬ್ಬರ ಮಗಳ ಜೊತೆ ಎಂಗೇಜ್‍ಮೆಂಟ್ ಅಂತೆ. ಡಿಕೆ ಶಿವಕುಮಾರ್ ಕುಮಾರಸ್ವಾಮಿಯ ಬೀಗರಾಗ್ತಾರಂತೆ. ಇಂತಹ ಅಂತೆಕಂತೆಗಳಿಗೆಲ್ಲ ತೆರೆ ಬೀಳುವ ಸುದ್ದಿ ಹತ್ತಿರ ಬಂದಿದೆ. ನಿಖಿಲ್ ಮದುವೆಯಾಗುತ್ತಿರುವ ಹುಡುಗಿ ರೇವತಿ.

    ಈ ರೇವತಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಮೊಮ್ಮಗಳಾಗಬೇಕು. ರೇವತಿ ಎಂಸಿಎ ಪದವೀಧರೆಯಾಗಿದ್ದು, ಮಲ್ಲತ್‍ಹಳ್ಳಿಯಲ್ಲಿ ವಧುವಿನ ಮನೆ ಇದೆ.

    ವಧುವಿನ ಮನೆಗೆ ದೊಡ್ಡಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ನಿಖಿಲ್, ದೇವೇಗೌಡರ ಮನೆಯ ಹೆಣ್ಣು ಮಕ್ಕಳು ಹೋಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೇ ತಿಂಗಳಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ. ಮೇ 17, 18ಕ್ಕೆ ಮದುವೆ ಫಿಕ್ಸ್ ಆಗುವ ಸಾಧ್ಯತೆಗಳಿವೆ.

  • ಫೆಬ್ರವರಿ 18ಕ್ಕೆ ತಾಜ್ ವೆಸ್ಟ್ ಎಂಡ್‍ನಲ್ಲಿ ನಿಶ್ಚಿತಾರ್ಥ

    nikhil revathi's engagemt in february at taj west end

    ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಮದುವೆಯಾಗುತ್ತಿದ್ದಾರೆ. ಲೇಔಟ್ ಮಂಜುನಾಥ್ ಅವರ ಮೊಮ್ಮಗಳು ರೇವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಫೆಬ್ರವರಿ 10ರಂದು ನಡೆಯಲಿದ್ದು, ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಶ್ಚಿತಾರ್ಥಕ್ಕೆ ಬುಕ್ ಆಗಿದೆ.

    5 ಸಾವಿರಕ್ಕೂ ಹೆಚ್ಚು ಜನ ನಿಶ್ಚಿತಾರ್ಥದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮದುವೆ ರಾಮನಗರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ ಎಂದು ಕುಮಾರಸ್ವಾಮಿಯೇ ತಿಳಿಸಿದ್ದಾರೆ.