` 3rd class, - chitraloka.com | Kannada Movie News, Reviews | Image

3rd class,

 • 3rd Class Review: Chitraloka Rating 3.5/ 5*

  3rd class movie review

  Seems like the love season has already begun in Sandalwood with romantic tales rushing to theaters. Among st them, 3rd Class directed by Ashoka Dev starring the debutant Nam Jagadeesh along with the pretty Roopika and Divya Rao in the lead is a power-packed triangular love story. Avinash in the role of a home minister delivers yet another notable performance.

  Despite the love story revolving around the rich girl who is in love with a mechanic, 3rd is high on entertainment quotient. It has all necessary ingredients to make this romantic journey a likable one with decent making, soothing melodies and some thunderous action to add on to it.

  When opposed by the girl's father, a home minister, the protagonist takes upon the powerful politician for his love. Jagadeesh makes an impressive debut with this one, scoring a near perfection in almost every other department. 

  Will Jaggi be able to survive against the onslaught of his lover's influential minister forms the rest of the action. Another lovely film to watch with your loved one this valentines day.

 • ಥರ್ಡ್ ಕ್ಲಾಸ್ ತಂದೆ ಮಗಳ ಬಾಂಧವ್ಯದ ಕಥೆ

  3rd class is a story of father daughter bonding

  ಇದೇ ವಾರ ರಿಲೀಸ್ ಆಗುತ್ತಿರುವ ಥರ್ಡ್ ಕ್ಲಾಸ್ ಚಿತ್ರ ತಂಡ ಈಗಾಗಲೇ ಸೋಷಿಯಲ್ ವರ್ಕ್‍ಗಳಿಂದ ರಾಜ್ಯದ ಗಮನ ಸೆಳೆದಿದೆ. ಬಾದಾಮಿ ತಾಲೂಕಿನ ನೆರೆ ಪೀಡಿತ ಗ್ರಾಮವೊಂದನ್ನು ದತ್ತು ಪಡೆದಿರುವ ಚಿತ್ರತಂಡ, ಅಂಧ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ನೆರವು ನೀಡುವ, 50 ಸಾವಿರ ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸಿದೆ ಚಿತ್ರತಂಡ.

  ಇಷ್ಟಕ್ಕೂ ಚಿತ್ರದಲ್ಲಿರೋ ಕಥೆ ಏನು ಎಂದರೆ ಸಿಗುವ ಉತ್ತರ ಅಪ್ಪ ಮಗಳ ಬಾಂಧವ್ಯದ ಕಥೆ ಎನ್ನುವುದು. ಒಂದು ಪುಟ್ಟ ಲವ್ ಸ್ಟೋರಿ ಮತ್ತು ಬಾಂಧವ್ಯದ ಕಥೆ ಚಿತ್ರದಲ್ಲಿದೆಯಂತೆ.

  ಅಶೋಕ್ ದೇವ್ ನಿರ್ದೇಶನದ ಚಿತ್ರದಲ್ಲಿ ಜಗದೀಶ್ ಮತ್ತು ರೂಪಿಕಾ ಪ್ರಧಾನ ಪಾತ್ರದಲ್ಲಿದ್ದಾರೆ. ರೂಪಿಕಾಗೆ ಇದು 15ನೇ ಸಿನಿಮಾ ಎನ್ನುವುದು ವಿಶೇಷ.

 • ಥರ್ಡ್ ಕ್ಲಾಸ್ ಮಾರ್ನಿಂಗ್ ಶೋ ಫ್ರೀ

  third class first day first show is free

  ಇದೇ ವಾರ ರಿಲೀಸ್ ಆಗುತ್ತಿರುವ ಥರ್ಡ್ ಕ್ಲಾಸ್ ಸಿನಿಮಾ ತಂಡ, ಪ್ರೇಕ್ಷಕರಿಗೆ ಸ್ಪೆಷಲ್ ಆಫರ್ ಕೊಟ್ಟಿದೆ. ಈಗಾಗಲೇ ಬಾದಾಮಿಯಲ್ಲೊಂದು ಗ್ರಾಮವನ್ನು ದತ್ತು ತೆಗೆದುಕೊಂಡು, 50 ಸಾವಿರ ಆಟೋ, ಕ್ಯಾಬ್ ಚಾಲಕರಿಗೆ ಇನ್ಷೂರೆನ್ಸ್ ಮಾಡಿಸಿರುವ ಚಿತ್ರತಂಡ ವಿಭಿನ್ನವಾಗಿಯೇ ಚಿತ್ರದ ಪ್ರಚಾರ ಹಮ್ಮಿಕೊಂಡಿದೆ. ಈಗ ಅದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ ಥರ್ಡ್ ಕ್ಲಾಸ್ ಸಿನಿಮಾ ಟೀಂ.

  ಫೆಬ್ರವರಿ 7ರಂದು ರಿಲೀಸ್ ಆಗುತ್ತಿರುವ ಸಿನಿಮಾವನ್ನು ನೀವು ಫ್ರೀಯಾಗಿ ನೋಡಬಹುದು. ಚಿತ್ರ ಕೆಜಿ ರಸ್ತೆಯ ಅನುಪಮ ಥಿಯೇಟರಿನಲ್ಲಿ ರಿಲೀಸ್ ಆಗುತ್ತಿದೆ. ಆ ದಿನ, ಬೆಳಗಿನ ಆಟಕ್ಕೆ ಯಾರು ಬೇಕಾದರೂ ಹೋಗಬಹುದು. ಟಿಕೆಟ್ ಖರೀದಿಸಬೇಕಿಲ್ಲ. ಫುಲ್ ಫ್ರೀ.

  ಅಶೋಕ್ ದೇವ್ ನಿರ್ದೇಶನ ಚಿತ್ರದಲ್ಲಿ ಜಗದೀಶ್ ಹೀರೋ, ರೂಪಿಕಾ ನಾಯಕಿ. ಹಣೆ ಬರಹಕ್ಕೆ ಹೊಣೆ..? ಎಂಬ ಟ್ಯಾಗ್‍ಲೈನ್ ಇರೋ ಚಿತ್ರದಲ್ಲಿ ಒಂದು ಚೆಂದದ ಲವ್ ಸ್ಟೋರಿ ಇದೆ.

 • ಥರ್ಡ್ ಕ್ಲಾಸ್ ಸಕ್ಸಸ್ : NEXT ಜೋಪಾನ

  3rd class movie running successfully

  ಥರ್ಡ್ ಕ್ಲಾಸ್, ಹೆಸರಿನ ಕಾರಣಕ್ಕೇ ವಿಸ್ಮಯ ಮೂಡಿಸಿದ್ದ ಸಿನಿಮಾ. ಯಾರಾದರೂ ಇಂತಹ ಟೈಟಲ್ ಸಿನಿಮಾಗೆ ಇಡ್ತಾರಾ ಅನ್ನೋ ಪ್ರಶ್ನೆ ಹಾಕಿದ್ದ ಚಿತ್ರವಿದು. ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಸಕ್ಸಸ್ ಆಗಿದೆ.

  ರಿಲೀಸ್ ಆಗಿದ್ದು 100+ ಥಿಯೇಟರುಗಳಲ್ಲಿ. ಈಗ ಚಿತ್ರಮಂದಿರಗಳ ಸಂಖ್ಯೆ 35ಕ್ಕೆ ಇಳಿದಿದೆ. 2ನೇ ವಾರ ಪೂರೈಸಿರುವ ಚಿತ್ರ ಸಕ್ಸಸ್ ಎಂದು ಘೋಷಿಸಿಕೊಂಡಿದೆ ಥರ್ಡ್ ಕ್ಲಾಸ್ ಚಿತ್ರತಂಡ.  ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ ಬಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ಅಶೋಕ್.

  ಚಿತ್ರದ ಹೀರೋ ಕಮ್ ನಿರ್ಮಾಪಕ ಜಗದೀಶ್ ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಜೋಪಾನ ಎಂಬ ಹೆಸರಿನ ಹೊಸ ಚಿತ್ರ ಘೋಷಿಸಿದ್ದಾರೆ. ಹೊಸ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರಂತೆ.

  ಚಿತ್ರದ ನಾಯಕಿ ನಟಿ ರೂಪಿಕಾಗೂ ಚಿತ್ರದ ಗೆಲುವು ಖುಷಿ ಕೊಟ್ಟಿದೆ. ಚೆಲುವಿನ ಚಿಲಿಪಿಲಿ ನಂತರ ಗೆದ್ದ ಚಿತ್ರವಿದು ಎನ್ನುವುದೇ ನನಗೆ ಖುಷಿ. ಚಿತ್ರ ನೋಡಿದವರು ನನಗೆ ಮೆಸೇಜ್ ಮಾಡಿ ಚೆನ್ನಾಗಿ ನಟಿಸಿದ್ದೀರಾ ಎಂದು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಅಂತಾರೆ ರೂಪಿಕಾ.

  ಚಿತ್ರ ಬಿಡುಗಡೆಗೂ ಮುನ್ನ ಬಾದಾಮಿ ತಾಲೂಕಿನ ಊರೊಂದನ್ನು ದತ್ತು ಪಡೆದು, ಟ್ಯಾಕ್ಸಿ, ಆಟೋ ಚಾಲಕರಿಗೆ ವಿಮೆ ಮಾಡಿಸಿ ಜನಮೆಚ್ಚುವ ಕೆಲಸ ಮಾಡಿದ್ದ ಚಿತ್ರತಂಡ, ವಿಶೇಷ ರೀತಿಯಲ್ಲಿ ಸಮಾಜಸೇವೆಯ ಮೂಲಕ ಪ್ರಚಾರ ಮಾಡಿತ್ತು. ಈಗ ಚಿತ್ರವೂ ಗೆದ್ದು, ಚಿತ್ರತಂಡದ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದು ಖುಷಿಯಾಗಿದೆ.

 • ಪ್ರವಾಹ ಪೀಡಿತ ಗ್ರಾಮ ದತ್ತು ಪಡೆದ ಥರ್ಡ್ ಕ್ಲಾಸ್ ಚಿತ್ರ ತಂಡ

  3rd class movie team adopts flood affected ares in bagalkote

  ಇದೇ ತಿಂಗಳು ರಿಲೀಸ್ ಆಗುತ್ತಿರುವ ಚಿತ್ರ ಥರ್ಡ್ ಕ್ಲಾಸ್ ಒಂದು ಕಡೆ ಸಿನಿಮಾ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದು ಕಡೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಸಿನಿಮಾ ತಂಡ ಬಾಗಲಕೋಟೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ. ಇದು ಕಳೆದ ವರ್ಷದ ರಣಭೀಕರ ಪ್ರವಾಹದಲ್ಲಿ ನಲುಗಿರುವ ಗ್ರಾಮ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

  ಮಲಪ್ರಭೆಯ ಕೋಪಕ್ಕೆ ನಲುಗಿದ್ದ ಗ್ರಾಮದಲ್ಲಿ ಥರ್ಡ್ ಕ್ಲಾಸ್ ಚಿತ್ರ ತಂಡ ಗ್ರಾಮ ವಾಸ್ತವ್ಯ ಮಾಡಿದೆ. ಚಿತ್ರದ ಹೀರೋ ಜಗದೀಶ್, ನಾಯಕಿ ರೂಪಿಕಾ ಊರಿನಲ್ಲಿ ಗ್ರಾಮಸ್ಥರ ಜೊತೆ ರಾತ್ರಿಯಿಡೀ ಕಳೆದು ಖುಷಿ ಹಂಚಿದ್ದಾರೆ.

  ಸಿನಿಮಾ ಪ್ರಮೋಷನ್ ಎಂದರೆ ಸುದ್ದಿಗೋಷ್ಟಿ, ದೊಡ್ಡ ದೊಡ್ಡ ಕಾರ್ಯಕ್ರಮ ಎನ್ನುತ್ತಿರುವವರ ಮಧ್ಯೆ ಒಂದು ಜನ ಮೆಚ್ಚುವ ಕೆಲಸದ ಮೂಲಕ ಪ್ರಚಾರ ಮಾಡುತ್ತಿದೆ ಥರ್ಡ್ ಕ್ಲಾಸ್ ಸಿನಿಮಾ ಟೀಂ.

   

 • ಹೋಮ್ ಮಿನಿಸ್ಟರ್ ಮಗಳಿಗೂ.. ಗ್ಯಾರೇಜ್ ನಾಯಕನಿಗೂ `ಥರ್ಡ್ ಕ್ಲಾಸ್' ಪ್ರೀತಿ

  first class love story in 3rd class

  ಅವಳು.. ಅಂದರೆ ರೂಪಿಕಾ.. ಹೋಮ್ ಮಿನಿಸ್ಟರ್ ಮಗಳು. ಮುದ್ದಿನ ಮಗಳು. ಸಂಗೀತ ಎಂದರೆ ಪಂಚಪ್ರಾಣ. ಅವನು.. ಅಂದರೆ ಜಗದೀಶ್.. ಅನಾಥ. ಗ್ಯಾರೇಜಿನಲ್ಲಿ ಕೆಲಸ ಮಾಡುವ ಹುಡುಗ.

  ಅವರಿಬ್ಬರ ಮಧ್ಯೆ ಪ್ರೀತಿ ಹುಟ್ಟುತ್ತೆ. ಪ್ರೀತಿ, ಪ್ರೇಮ, ಹಣ, ಬಾಂಧವ್ಯದ ಸುತ್ತ ಕಥೆ ಹಬ್ಬಿಕೊಳ್ಳುತ್ತೆ. ಟೋಟ್ಟಲಿ ಇದು ಫಸ್ಟ್ ಕ್ಲಾಸ್ ಸಿನಿಮಾ. ಟೈಟಲ್ ಮಾತ್ರ ಥರ್ಡ್ ಕ್ಲಾಸ್ ಎನ್ನುತ್ತಾರೆ ರೂಪಿಕಾ.

  ಹೀರೋ ಜಗದೀಶ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಪಕರೂ ಆಗಿದ್ದಾರೆ. ಅಷ್ಟೇ ಅಲ್ಲ ಚಿತ್ರತಂಡದಿಂದ ಅಂಧ ಅನಾಥ ಮಕ್ಕಳಿಗೆ 2 ಲಕ್ಷ ರೂ. 50 ಸಾವಿರ ಆಟೋ, ಕ್ಯಾಬ್ ಚಾಲಕರಿಗೆ 1 ಲಕ್ಷ ರೂ. ಜೀವವಿಮೆ, ಥರ್ಡ್ ಕ್ಲಾಸ್ ನಡೆ ಗ್ರಾಮದ ಕಡೆ ಅಭಿಯಾನದ ಮೂಲಕ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿರುವ ಚಿತ್ರತಂಡ ಸಮಾಜ ಸೇವೆಯ ಮೂಲಕವೇ ಚಿತ್ರದ ಪ್ರಚಾರ ಮಾಡಿರುವುದು ವಿಶೇಷ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery