` sriimurali, - chitraloka.com | Kannada Movie News, Reviews | Image

sriimurali,

  • ಶ್ರೀಮುರಳಿ ಈಸ್ ಬ್ಯಾಕ್

    ಶ್ರೀಮುರಳಿ ಈಸ್ ಬ್ಯಾಕ್

    ಬಘೀರ ಚಿತ್ರದ ಚಿತ್ರೀಕರಣ ವೇಳೆಯಲ್ಲೇ ಗಾಯಗೊಂಡಿದ್ದ ನಟ ಶ್ರೀಮುರಳಿ ಚೇತರಿಸಿಕೊಂಡಿದ್ದಾರೆ. ಬಘೀರ ಚಿತ್ರದ ಸೆಟ್ನಲ್ಲಿ ಗಾಯಗೊಂಡು ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶ್ರೀ ಮುರಳಿ ಅವರು ಚೇತರಿಸಿಕೊಂಡಿದ್ದು, ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.

    ಬಘೀರ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ. ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಉಗ್ರಂ ನಂತರ ಮತ್ತೊಮ್ಮೆ ಅಫಿಷಿಯಲ್ಲಾಗಿ ಒಟ್ಟಾಗಿರುವ ಚಿತ್ರ ಬಘೀರ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ಬಹುಭಾಷಾ ಸಿನಿಮಾ ಬಘೀರದ ಭಾರಿ ನಿರೀಕ್ಷೆಗಳಿವೆ.

    ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರ ನಿರ್ದೇಶಿಸಿದ್ದ ಡಾ. ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಎಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ. ಮೂರು ತಿಂಗಳ ವಿರಾಮದ ನಂತರ ನಟ ಈಗ ಸೆಟ್ಗೆ ಮರಳಿದ್ದಾರೆ ಮತ್ತು ಶ್ರೀ ಮುರಳಿ ಅವರು ಹಿರಿಯ ನಟ ಪ್ರಕಾಶ್ ರಾಜ್ ಅವರೊಂದಿಗೆ ಕೆಲವು ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂದು  ಚಿತ್ರತಂಡ ಮಾಹಿತಿ ನೀಡಿದೆ. ಶ್ರೀಮುರಳಿ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್ , ಪುನೀತ್ ರುದ್ರನಾಗ್ ಮೊದಲಾದವರು ನಟಿಸಿದ್ದಾರೆ.

  • ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮ ಇಲ್ಲ

    ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮ ಇಲ್ಲ

    ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಬಾರಿಯೂ ಹುಟ್ಟುಹಬ್ಬವನ್ನು ಕೈಬಿಟ್ಟಿದ್ದಾರೆ. ಇವತ್ತು ಅರ್ಥಾತ್ ಡಿಸೆಂಬರ್ 17, ಶ್ರೀಮುರಳಿ ಹುಟ್ಟುಹಬ್ಬ.  ಅಭಿಮಾನಿಗಳಿಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಕಾರಣ ಏನೆಂದು ನಿಮಗೆಲ್ಲ ಗೊತ್ತು. ನಾನು ಊರಿನಲ್ಲಿಯೂ ಇರುವುದಿಲ್ಲ. ನಿಮ್ಮ ಪ್ರೀತಿ, ಆಶೀರ್ವಾದ ಇರಲಿ ಎಂದಿದ್ದಾರೆ ಶ್ರೀಮುರಳಿ.

    ಮದಗಜ ಚಿತ್ರದ ಸಕ್ಸಸ್ ಸಂಭ್ರಮವಿದ್ದರೂ, ಪುನೀತ್ ಅಗಲಿಕೆ ನೋವಿನಿಂದ ಶ್ರೀಮುರಳಿ ಇನ್ನೂ ಹೊರಬಂದಿಲ್ಲ. 

  • ಶ್ರೀಮುರಳಿಗೆ 15 ದಿನ ರೆಸ್ಟ್

    ಶ್ರೀಮುರಳಿಗೆ 15 ದಿನ ರೆಸ್ಟ್

    ರೋರಿಂಗ್ ಸ್ಟಾರ್ ಶ್ರೀಮುರಳಿ ಇನ್ನು 15 ದಿನ ಕಂಪ್ಲೀಟ್ ರೆಸ್ಟ್‍ನಲ್ಲೇ ಇರಬೇಕು. ಮದಗಜ ಚಿತ್ರದ ಚಿತ್ರೀಕರಣ ವೇಳೆ ಮುರಳಿ ಕಾಲಿಗೆ ಆಗಿರುವ ಪೆಟ್ಟು, ತೀವ್ರವಾಗಿದೆ. ಕಾಲಿನ ಲಿಗಮೆಂಟ್ ಟ್ವಿಸ್ಟ್ ಆಗಿದೆ. ಸ್ಸೋ.. ಇನ್ನು 15 ದಿನ ಶ್ರೀಮುರಳಿ ಹಾಸಿಗೆಯಲ್ಲೇ ಇರಬೇಕು.

    ಕಂಠೀರವ ಸ್ಟುಡಿಯೋದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. 40 ಸೆಕೆಂಡ್‍ನ ಸೀಕ್ವೆನ್ಸ್‍ನಲ್ಲಿ 10 ಜನ ಫೈಟರ್‍ಗಳು ಅಟ್ಯಾಕ್ ಮಾಡ್ತಾರೆ. ನಾಲ್ವರನ್ನು ಹೊಡೆದು ಐದನೆಯವರತ್ತ ನುಗ್ಗಿದಾಗ ಕಾಲು ಸ್ಲಿಪ್ ಆಗಿದೆ. ಲಿಗಮೆಂಟ್ ಟಿಯರ್  ಆಗಿದೆ ಎಂದು ಮಾಹಿತಿ ನೀಡಿದ್ದಾರೆ ಮಹೇಶ್ ಕುಮಾರ್.

    ಕಾಲಿಗೆ ಅಷ್ಟು ಪೆಟ್ಟಾಗಿದ್ದರೂ, ಶೂಟಿಂಗ್ ಸ್ಟಾಪ್ ಮಾಡೋದು ಬೇಡ. ನಿರ್ಮಾಪಕರಿಗೆ ಲಾಸ್ ಆಗುತ್ತೆ ಎಂದರಂತೆ ಮುರಳಿ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸದ್ಯಕ್ಕೆ ಚಿತ್ರೀಕರಣವನ್ನು 15 ದಿನಗಳ ಮಟ್ಟಿಗೆ ನಿಲ್ಲಿಸಿದ್ದಾರೆ.

  • ಶ್ರೀಮುರಳಿಗೆ ಆಪರೇಷನ್ : ಹೇಗಿದೆ ಕಂಡೀಷನ್?

    ಶ್ರೀಮುರಳಿಗೆ ಆಪರೇಷನ್ : ಹೇಗಿದೆ ಕಂಡೀಷನ್?

    ನಟ ಶ್ರೀಮುರಳಿ ಬಘೀರ ಚಿತ್ರದ ಚಿತ್ರೀಕರಣ ವೇಳೆ ಏಟು ಮಾಡಿಕೊಂಡಿದ್ದರು. ಪೆಟ್ಟು ಗಂಭೀರವಾಗಿಯೇ ಇತ್ತು. ತಕ್ಷಣ ಶ್ರೀಮುರಳಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶ್ರೀಮುರಳಿ ಅವರ ಮೊಣಕಾಲಿಗೆ ಆಪರೇಷನ್ ಮಾಡಲಾಗಿದ್ದು, ಡಾಕ್ಟರ್ಸ್ 6 ವಾರಗಳ ರೆಸ್ಟ್ ಹೇಳಿದ್ದಾರೆ. 6 ವಾರ ಅಂದ್ರೆ ಒಂದೂವರೆ ತಿಂಗಳು ಕಂಪ್ಲೀಟ್ ಬೆಡ್ ರೆಸ್ಟ್‍ನಲ್ಲಿಯೇ ಇರಬೇಕು. ನಂತರದ ಒಂದೂವರೆ ತಿಂಗಳಲ್ಲಿ ಮೊಣಕಾಲಿನ ಮೇಲೆ ಪ್ರೆಷರ್ ಹಾಕದೆ ಓಡಾಡಬಹುದು. ಅದಾದ ಮೇಲೆ ನಾರ್ಮಲ್ ಸ್ಟೇಜ್‍ಗೆ ಬಂದಿದ್ದಾರೆಯೇ ಇಲ್ಲವೇ ಎಂಬುದನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಿ ವೈದ್ಯರು ನಿರ್ಧರಿಸುತ್ತಾರೆ.

    ಅಂದ್ರೆ ಇನ್ನಾರು ತಿಂಗಳು ಶ್ರೀಮುರಳಿ ಫೈಟು, ಡಾನ್ಸು ಮಾಡುವಂತಿಲ್ಲ. ಅಲ್ಲಿಯವರೆಗೆ ಬಘೀರ ಚಿತ್ರದ ಚಿತ್ರೀಕರಣವೂ ನಡೆಯುವಂತಿಲ್ಲ. ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಕಡೆಯ ಹಂತದ ಚಿತ್ರೀಕರಣ ಕೊನೆಯ ಹಂತದಲ್ಲಿತ್ತು. ಕೆಲವೇ ಕೆಲವು ದೃಶ್ಯಗಳು ಬಾಕಿಯಿದ್ದವು. ಆದರೆ ದುರದೃಷ್ಟವಶಾತ್ ಈ ಅಪಘಾತ ನಡೆದು ಬಘೀರ ಚಿತ್ರಕ್ಕೂ ಬ್ರೇಕ್ ಬಿದ್ದಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನವರ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದೆ.

    ಮದಗಜ ಚಿತ್ರದ ಚಿತ್ರೀಕರಣ ವೇಳೆ ನಡೆದಿದ್ದ ಅಪಘಾತದ ಎಫೆಕ್ಟ್ ಇದು. ಆಗ ಎಡಗಾಲಿಗೆ ಪೆಟ್ಟು ಬಿದ್ದಿತ್ತು. ಆಗ ಆಪರೇಷನ್ ಬದಿಗೆ ಸರಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಮತ್ತೊಮ್ಮೆ ಅದೇ ಕಾಲಿಗೆ ಪೆಟ್ಟು ಬಿದ್ದು, ಸ್ಥಿತಿ ಗಂಭೀರವಾಗಿದೆ.

  • ಹೇಗಿದೆ ಬಘೀರ ಪೋಸ್ಟರ್?

    ಹೇಗಿದೆ ಬಘೀರ ಪೋಸ್ಟರ್?

    ಬಘೀರ. ಶ್ರೀಮುರಳಿ ನಟಿಸುತ್ತಿರೋ ಹೊಂಬಾಳೆ ಬ್ಯಾನರ್ ಸಿನಿಮಾ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಡೈರೆಕ್ಟರ್ ಅಲ್ಲ. ಕಥೆಗಾರ. ನಿರ್ದೇಶನದ ಹೊಣೆ ಡಾ.ಸೂರಿಯವರದ್ದು. ಉಗ್ರಂ ಬಳಿಕ ಪ್ರಶಾಂತ್ ನೀಲ್ ಅವರಷ್ಟೇ ಅಲ್ಲ, ಶ್ರೀಮುರಳಿ ಕೂಡ ಕಮ್ ಬ್ಯಾಕ್ ಮಾಡಿದ್ದು ನಿಜ. ಉಗ್ರಂ ಬಳಿಕ ಶ್ರೀಮುರಳಿ ಸೋಲನ್ನೇ ಕಂಡಿಲ್ಲ. ರಥಾವರ, ಮಫ್ತಿ, ಭರಾಟೆ ಮತ್ತು ಮದಗಜ ಚಿತ್ರಗಳು ಗೆದ್ದಿವೆ. ನಿರ್ಮಾಪಕರಿಗೆ ಲಾಭವನ್ನೇ ತಂದುಕೊಟ್ಟಿವೆ. ಆದರೆ.. ಉಗ್ರಂ ಹವಾಗೆ ಹೋಲಿಸಿದರೆ.. ಇನ್ನೂ ಇನ್ನೂ ಇನ್ನೂ ದೊಡ್ಡ ಮಟ್ಟದ ಗೆಲುವು ಬೇಕಿತ್ತು ಎನ್ನುವ ಆಸೆ ಅಭಿಮಾನಿಗಳದ್ದು. ಹೀಗಾಗಿಯೇ ಬಘೀರ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

    ಶ್ರೀಮುರಳಿ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಬಘೀರ ಚಿತ್ರದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ ಚಿತ್ರತಂಡ. ನೆರಳು ಬೆಳಕಿನ ಶೇಡ್‍ನಲ್ಲಿರೋ ವಿಚಿತ್ರ ಆಯುಧವನ್ನ ಕೈಲಿ ಹಿಡಿದಿರೋ ಉರಿಗಣ್ಣುಗಳ ಶ್ರೀಮುರಳಿ ಪೋಸ್ಟರ್ ಸಖತ್ತಾಗಿಯೇ ಇದೆ. ಆದರೆ ಹಳೆಯ ಪೋಸ್ಟರ್‍ಗೂ ಹೊಸ ಪೋಸ್ಟರ್‍ಗೂ ಅಂತಹ ದೊಡ್ಡ ಮಟ್ಟದ ವ್ಯತ್ಯಾಸಗಳೇನೂ ಕಾಣುತ್ತಿಲ್ಲ. ಇತ್ತೀಚೆಗೆ ಬಘೀರ ಚಿತ್ರದ ಕುರಿತು ಒಳ್ಳೆಯ ಸುದ್ದಿಗಳು ಹೊರಬಿದ್ದಿವೆ. ರುಕ್ಮಿಣಿ ವಸಂತ್ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗುವ ನಿರೀಕ್ಷೆಯೂ ಇದೆ.