` sriimurali, - chitraloka.com | Kannada Movie News, Reviews | Image

sriimurali,

 • Murali Requests Upendra To Direct A Film For Him

  murali requests upendra to direct a film for him

  Actor Murali requested Upendra to direct a film for him and he is eagerly waiting to act in a film to be directed by Upendra.

  Murali was recently talking after the release of the hero introduction teaser of Niranjan's new film 'Superstar'. Niranjan is Upendra's nephew and this is his first solo film as a hero.

  'I have been a great fan of Upendra from childhood and have watched all his directorial films. During my college days, I have watched 'A' and 'Upendra' sitting in Gandhi class. The experience of watching the film in Gandhi Class is very unique. My ambition is to act in a film to be directed by Upendra and I request him to direct a film for me' said Murali.

 • Srii Murali's 20th Love Anniversary

  srii murali's 20th love anniversary

  Celebrating wedding anniversaries, birth anniversaries and so on are a thing for many, but amidst all of it we tend to forget the day we fell in love and even if we do remember, it is a rare occasion that we celebrate love as anniversaries. However, Roaring Star Srii Murali who fell in love with Vidya, who later became his better half, recently celebrated his 20th 'love anniversary'.

  On his love anniversary, the Ugramm actor shared a special photo along with a love message to his wife. The actor had on Dec 30, 1999, had proposed Vidya, expressing his love for her. Her writes that so many things unfolded in his life thereafter, but she Vidya stood like a rock next to him. He adds, Vidya, who was his college sweetheart and then his wife and mother to his two children. He adds that it has been a beautiful journey and that he shall continue to love her forever.

  His better half too responds saying that despite 20th year in love, both have grown younger, stronger, and with full of happiness.

 • ಭಾವ ಶ್ರೀಮುರಳಿ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ

  prashanth neel to produce sriimurali

  ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಭಾವ ಶ್ರೀಮುರಳಿಗೆ ಪ್ರಶಾಂತ್ ನೀಲ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಶ್ರೀಮುರಳಿಯ ಹೊಸ ಚಿತ್ರಕ್ಕೆ ಅವರೇ ಕಥೆ ಬರೆದಿರುವುದಷ್ಟೇ ಅಲ್ಲ, ಸ್ವತಃ ನಿರ್ಮಾಪಕರೂ ಆಗುತ್ತಿದ್ದಾರೆ. ಮದಗಜ ನಂತರ ಆ ಚಿತ್ರ ಸೆಟ್ಟೇರಲಿದೆ.

  ಲಕ್ಕಿ ಡೈರೆಕ್ಟರ್ ಸೂರಿ ನಿರ್ದೇಶನದ ಹೊಣೆ ಹೊತ್ತಿದ್ದು, ಪ್ರಶಾಂತ್ ನೀಲ್ ಅವರ ಸ್ವರ್ಣಲತಾ ಪ್ರೊಡಕ್ಷನ್ಸ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಮಾ ಉಗ್ರಂ. ಅದು ಶ್ರೀಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ. ಅದಾದ ನಂತರ ನಿರ್ದೇಶಿಸಿದ ಕೆಜಿಎಫ್, ದೇಶಾದ್ಯಂತ ಸದ್ದು ಮಾಡಿದೆ.

 • ಮದಗಜನಿಗೆ ಒಂದು ಕೋಟಿ ವೆಚ್ಚದ ಸೆಟ್

  madagaja team to set up 1 crore set

  ರೋರಿಂಗ್ ಸ್ಟಾರ್ ಶ್ರೀಮುರಳಿಯ ಮದಗಜ ಚಿತ್ರಕ್ಕೆ ಸುಮಾರು ಒಂದು ಕೋಟಿ ವೆಚ್ಚದ ಬೃಹತ್ ಸೆಟ್ ಹಾಕಿಸಲಾಗುತ್ತಿದೆ. ಹೆಚ್‍ಎಂಟಿಯಲ್ಲಿ ಸೆಟ್ ನಿರ್ಮಾಣವಾಗುತ್ತಿದ್ದು, ಸೆಪ್ಟೆಂಬರ್ ಫಸ್ಟ್ ವೀಕ್ ಶೂಟಿಂಗ್ ಶುರುವಾಗಲಿದೆ. ಫೈಟಿಂಗ್ ಸೀಕ್ವೆನ್ಸ್‍ಗಾಗಿ ಸೆಟ್ ಹಾಕಲಾಗುತ್ತಿದ್ದು, ರವಿವರ್ಮ ಖುದ್ದು ಹಾಜರಿದ್ದು, ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ.

  ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಮದಗಜ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಅಶಿಕಾ ರಂಗನಾಥ್ ನಾಯಕಿಯಾಗಿರುವ ಚಿತ್ರವಿದು. ಚಿತ್ರದ ರಷಸ್ ನೋಡಿರುವ ಶ್ರೀಮುರಳಿ, ಈ ಸಿನಿಮಾ ಬೇರೆಯದೇ ಲೆವೆಲ್‍ಗೆ ಹೋಗಲಿದೆ ಎಂದಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೈಬಿಚ್ಚಿ ಖರ್ಚು ಮಾಡುತ್ತಿದ್ದಾರೆ.

 • ಮದಗಜನಿಗೆ ಮಹಾರಾಣಿಯಾಗಲು ಅಶಿಕಾ ತೆಗೆದುಕೊಂಡ ರಿಸ್ಕ್..

  ashika takes a huge risk for the role of madagaa

  ಮದಗಜನ ಮಹಾರಾಣಿ ಯಾರು..? ಎಂಬ ಕುತೂಹಲವನ್ನಿಟ್ಟು ಒಂದಿಡೀ ದಿನ ಕಾಯಿಸಿದ್ದ ಮದಗಜ ಚಿತ್ರತಂಡ ಈಗ ಮದಗಜನ ಮಹಾರಾಣಿ ಯಾರು ಅನ್ನೋ ಗುಟ್ಟು ಬಿಟ್ಟುಕೊಟ್ಟಿದೆ. ಚುಟು ಚುಟು ಚೆಲುವೆ ಅಶಿಕಾ ರಂಗನಾಥ್ ಮದಗಜನ ಹೀರೋಯಿನ್. ಚಿತ್ರದಲ್ಲಿ ಅವರದ್ದು ಪಕ್ಕಾ ಹಳ್ಳಿ ಹುಡುಗಿ ಪಾತ್ರವಂತೆ.

  ವಿದ್ಯಾವಂತೆ. ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಇರುವ ಹುಡುಗಿ. ತುಂಬಾ ಬೋಲ್ಡ್, ರಫ್ & ಟಫ್ ಪಾತ್ರ. ರಾ ಲುಕ್ ಎಂದು ಪಾತ್ರದ ಬಗ್ಗೆ, ವಿಶೇಷತೆ ಬಗ್ಗೆ ಪ್ರೀತಿಯಿಂದ ಮಾತಾಡ್ತಾರೆ ಅಶಿಕಾ. ಪಾತ್ರಕ್ಕಾಗಿ ಸಿದ್ಧತೆ ಬೇಕಿದೆ. ನಿರ್ದೇಶಕರು ಕೆಲವು ಟಿಪ್ಸ್ ಕೊಟ್ಟಿದ್ದಾರೆ ಎನ್ನುವ ಅಶಿಕಾರನ್ನು ನಟ ಶ್ರೀಮುರಳಿ ಸ್ವಾಗತಿಸಿದ್ದಾರೆ.

  ಹಲವು ನಾಯಕಿಯರನ್ನು ನೋಡಿದೆವು. ಆದರೆ.. ಈ ಪಾತ್ರಕ್ಕೆ ಸೂಕ್ತ ಎನಿಸಿದ್ದು ಅಶಿಕಾ ರಂಗನಾಥ್ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಉಮಾಪತಿ ನಿರ್ಮಾಣದ ಚಿತ್ರಕ್ಕೆ ಫೆ.20ರಂದು ಮುಹೂರ್ತ ನಡೆಯಲಿದೆ.

  ಆದರೆ ವಿಷಯ ಇದ್ಯಾವುದೂ ಅಲ್ಲ. ಈ ಚಿತ್ರಕ್ಕಾಗಿ ಅಶಿಕಾ ಒಂದು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಅಶಿಕಾ ಇರೋದೇ ಬೆಳ್ಳಗೆ. ಆದರೆ ಈ ಪಾತ್ರಕ್ಕಾಗಿ ಅವರ ಮೈಬಣ್ಣ ಕಪ್ಪಾಗಬೇಕು. ಬಿಸಿಲಿನಲ್ಲಿ ನಿಂತು ಚರ್ಮವನ್ನು ಕಪ್ಪಾಗಿಸಿಕೊಳ್ಳಬೇಕು. ಅದಕ್ಕಾಗಿ ಫೆಬ್ರವರಿ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಇನ್ನು ಸಿನಿಮಾ ಮುಗಿದ ನಂತರ ಸ್ಕಿನ್ ಟೋನ್ ಮತ್ತೆ ಮೊದಲಿನಂತಾಗುವವರೆಗೆ ಬೇರೆ ಸಿನಿಮಾ ಮಾಡೋಕೂ ಆಗಲ್ಲ. ಅಷ್ಟರಮಟ್ಟಿಗೆ ಸಿನಿಮಾಗೆ ದೊಡ್ಡ ರಿಸ್ಕ್‍ನ್ನೇ ತೆಗೆದುಕೊಂಡಿದ್ದಾರೆ ಅಶಿಕಾ ರಂಗನಾಥ್.

 • ಯಾರವಳು.. ಮದಗಜನ ಮಹಾರಾಣಿ..?

  who is this mysterious madagaja heroine

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಸ ಸಿನಿಮಾ ಮದಗಜ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರ, ಈಗ ಚಿತ್ರರಸಿಕರ ತಲೆಗೆ ಹೊಸದೊಂದು ಹುಳ ಬಿಟ್ಟಿದೆ. ಹೀರೋಯಿನ್ ಯಾರು..?

  ತಲೆ ತುಂಬಾ ಹೂ.. ಸಾಂಪ್ರದಾಯಿಕ ಸೀರೆಯಲ್ಲಿರುವ ಚೆಲುವೆಯ ಫೋಟೋ ಹಾಕಿ ಮುಖವನ್ನು ತೋರಿಸಿಲ್ಲ. ಮದಗಜ ಚಿತ್ರದ ನಾಯಕಿ ದೊಡ್ಡ ನಟಿ. ಯಾರಿವರು ಊಹಿಸಿ ಎಂದು ವಿಭಿನ್ನವಾದ ಚಾಲೆಂಜ್ ಹಾಕಿದೆ ಚಿತ್ರತಂಡ.

  ಯಾರಿರಬಹುದು..? ಅಭಿಮಾನಿಗಳ ಉತ್ತರವೂ ಮಜವಾಗಿದೆ. ಅಶಿಕಾ ರಂಗನಾಥ್, ಸಮಂತಾ, ಶಾನ್ವಿ ಶ್ರೀವಾತ್ಸವ್, ಕೀರ್ತಿ ಸುರೇಶ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿವೆ. ಅಭಿಮಾನಿಗಳಿಂದ ಹೆಚ್ಚು ವೋಟ್ ಬಿದ್ದಿರೋದು ಚುಟು ಚುಟು ಸ್ಟಾರ್ ಅಶಿಕಾ ರಂಗನಾಥ್ ಅವರಿಗೆ. ಆದರೆ.. ಅವರೇನಾ..? ಗೊತ್ತಿಲ್ಲ. ನಿರ್ಮಾಪಕರಾಗಲೀ..ನಿರ್ದೇಶಕರಾಗಲೀ.. ಶ್ರೀಮುರಳಿಯಾಗಲೀ.. ಗುಟ್ಟು ಬಿಟ್ಟು ಕೊಡ್ತಾ ಇಲ್ಲ. ಶಿವರಾತ್ರಿಯ ದಿನ ಓಂ ನಮಃ ಶಿವಾಯ ಎನ್ನುವಾಗ ಮುಹೂರ್ತ ನಡೆಯಲಿದ್ದು, ಆ ದಿನವಂತೂ ಪಕ್ಕಾ ಗೊತ್ತಾಗುತ್ತೆ.

 • ರೋರಿಂಗ್ ಸ್ಟಾರ್ ಬೆವರ್ ಕಿತ್ಕೊಂಡ್ ಬರೋ ಕೆಲಸ ಮಾಡ್ತಾವ್ರೆ..

  srrimurali cleaning at kitchen during lockdown

  ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಕ್ರೀನ್ ಮೇಲೆ ಏನೇ ಇದ್ರೂ, ಹೆಂಡತಿ ಎದುರು ಅಪ್ಪಟ ಗಂಡ. ಅದು ಲಾಕ್ ಡೌನ್ ಟೈಮಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅವರೀಗ ಮನೆಯಲ್ಲಿ ಪಾತ್ರೆಯನ್ನು ಥಳಥಳ ಹೊಳೆಯುವಂತೆ ಬೆಳಗಿ ಕೊಡುತ್ತಿದ್ದಾರೆ.

  ಊಟ ಬೇಕಂದ್ರೆ ಪಾತ್ರೆ ಬೆಳಗಿಕೊಡು ಅಂದಿದ್ದಾರಂತೆ ವಿದ್ಯಾ ಮೇಡಮ್ಮು. ಹೆಂಡತಿಯ ಆಜ್ಞೆ ಧಿಕ್ಕರಿಸಿ ಬದುಕಿದ ಪತಿರಾಯ ಜಗತ್ತಿನಲ್ಲಿ ಎಲ್ಲಿದ್ದಾನೆ ಹೇಳಿ.. ಶ್ರೀಮುರಳಿಯೂ ಅದಕ್ಕೆ ಹೊರತಲ್ಲ. ಹೀಗಾಗಿಯೇ ಬೆವರು ಕಿತ್ಕೊಂಡ್ ಬರೋ ತರ ಕೆಲಸ ಮಾಡ್ತಿದ್ದೀನಿ ಅಂತಾ ಶ್ರೀಮುರಳಿ ಪೋಸ್ಟ್ ಹಾಕಿದ್ದಾರೆ.

 • ಶಿವಣ್ಣನಿಗೆ ಶ್ರೀಮುರಳಿ ಕೈ ತುತ್ತು

  sriimurali feeds shivanna food by hand

  ಶಿವಣ್ಣ, ಸಿಂಪಲ್ ಮನುಷ್ಯ. ಸ್ಟಾರ್ ಎನ್ನುವ ಹಮ್ಮು ಬಿಮ್ಮು ಇಲ್ಲವೇ ಇಲ್ಲ. ಇನ್ನು ಶ್ರೀಮುರಳಿ, ರೋರಿಂಗ್ ಸ್ಟಾರ್. ಇವರಿಬ್ಬರೂ ಚಿತ್ರರಂಗದಲ್ಲಿ ಕಲಾವಿದರಷ್ಟೇ ಅಲ್ಲ, ಸಂಬಂಧಿಗಳೂ ಹೌದು. ಆ ಪ್ರೀತಿ, ಬಾಂಧವ್ಯವನ್ನು ಇಂದಿಗೂ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ.

  ಶಿವರಾಜ್‌ಕುಮಾರ್ ಅವರಿಗೆ ಶ್ರೀಮುರಳಿ ಕೈ ತುತ್ತು ತಿನ್ನಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇತ್ತೀಚೆಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ನಡೆದಿರುವ ಘಟನೆ ಇದು. ಶ್ರೀಮುರಳಿ ಊಟ ಮಾಡುವಾಗ ಶಿವಣ್ಣ ಬರುತ್ತಾರೆ. ಪಕ್ಕದಲ್ಲಿ ಕುಳಿತ ಮಾಮನಿಗೆ ಶ್ರೀಮುರಳಿ ಕೈ ತುತ್ತು ತಿನಿಸುತ್ತಾರೆ.

  ಶಿವಣ್ಣ ಮತ್ತು ಶ್ರೀಮುರಳಿ ಒಟ್ಟಿಗೇ ಮಫ್ತಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರರಂಗವನ್ನೂ ಮೀರಿದ ಬಾಂಧವ್ಯವೊಂದು ಅವರಿಬ್ಬರ ಮಧ್ಯೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery