` rajaveera madakari nayaka, - chitraloka.com | Kannada Movie News, Reviews | Image

rajaveera madakari nayaka,

 • ಅಕ್ಟೋಬರ್‍ನಲ್ಲಿ ಮತ್ತೆ ಶುರು ಮದಕರಿ ಘರ್ಜನೆ

  Rajaveera Madakari Nayaka Film Shoot To Resume In October

  ಕೊರೊನಾದಿಂದಾಗಿ ಬ್ರೇಕ್ ತೆಗೆದುಕೊಂಡಿದ್ದ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಅಕ್ಟೋಬರ್ ಶುಭ ಘಳಿಗೆಯಾಗುತ್ತಿದೆ. ಈಗಾಗಲೇ ರಾಜಸ್ಥಾನದಲ್ಲಿ ಒಂದು ಹಂತದ ಶೆಡ್ಯೂಲ್ ಮುಗಿಸಿರೋ ಚಿತ್ರತಂಡ, 2ನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ತಿದೆ. ಚಿತ್ರದುರ್ಗ, ಬೆಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ 2ನೇ ಶೆಡ್ಯೂಲ್ ಅಕ್ಟೋಬರ್‍ನಲ್ಲಿ ಶುರುವಾಗಲಿದೆ.

  ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಚಿತ್ರದಲ್ಲಿ ಮದಕರಿ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ. ಮದಕರಿ ನಾಯಕನ ತಾಯಿಯ ಪಾತ್ರದಲ್ಲಿ ರಾಜಮಾತೆಯಾಗಿ ನಟಿಸುತ್ತಿರುವುದು ಸುಮಲತಾ ಅಂಬರೀಷ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ, ಕೊರೊನಾ, ಲಾಕ್‍ಡೌನ್‍ನಿಂದಾಗಿ ಕಳೆದ 6 ತಿಂಗಳಿಂದ ಬ್ರೇಕ್ ತೆಗೆದುಕೊಂಡಿದೆ.

 • ಗಂಡುಗಲಿ ಅಲ್ಲ.. ರಾಜವೀರ ಮದಕರಿ ನಾಯಕ : ರಾಜಮಾತೆ ಸುಮಲತಾ

  gandugali madkari nayaka titled changed

  ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿನಯದ ದುರ್ಗದ ಪಾಳೆಗಾರ ಮದಕರಿನಾಯಕನ ಜೀವನ ಚರಿತ್ರೆಯ ಸಿನಿಮಾಗೆ ಚಾಲನೆ ಸಿಕ್ಕಿದೆ. ಇದುವರೆಗೆ ಚರ್ಚೆಯಾಗಿದ್ದಂತೆ ಚಿತ್ರದ ಹೆಸರು ಗಂಡುಗಲಿ ಮದಕರಿ ನಾಯಕ ಅಲ್ಲ, ರಾಜವೀರ ಮದಕರಿ ನಾಯಕ.

  ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಮುನಿರತ್ನ, ಸಂಸದೆ ಸುಮಲತಾ ಅಂಬರೀಷ್, ಶ್ರೀನಿವಾಸ ಮೂರ್ತಿ.. ಸೇರಿದಂತೆ ಚಿತ್ರತಂಡದವರು ಭಾಗವಹಿಸಿದ್ದರು.

  ಅಂದಹಾಗೆ ಚಿತ್ರದಲ್ಲಿ ದರ್ಶನ್ ಅವರ ತಾಯಿಯಾಗಿ, ರಾಜಮಾತೆಯಾಗಿ ನಟಿಸುತ್ತಿರುವುದು ಸುಮಲತಾ ಅಂಬರೀಷ್. ಇದೇ ವೇಳೆ ನಿಮ್ಮ ದತ್ತು ಮಗ ದರ್ಶನ್ ಜೊತೆ ನಟಿಸುತ್ತಿದ್ದೀರಿ ಎಂಬ ಪ್ರಶ್ನೆಗೆ `ಅವನು ನನಗೆ ದತ್ತು ಮಗನಲ್ಲ, ಸ್ವಂತ ಮಗ' ಎಂದಿದ್ದಾರೆ ಸುಮಲತಾ.

 • ರಾಜವೀರ ಮದಕರಿ ಸ್ಕ್ರಿಪ್ಟ್ ಮುಗೀತು.. NEXT..

  rajaveera madakari nayaka script completed

  ಕನ್ನಡ ಚಿತ್ರರಂಗದ ಐತಿಹಾಸಿಕ ಚಿತ್ರ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ. ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದ್ದ ಚಿತ್ರ, ಈಗ ಸ್ಕ್ರಿಪ್ಟ್ ವರ್ಕ್ ಮುಗಿದಿದೆ ಎಂದು ಘೋಷಿಸಿದೆ. ಸ್ವತಃ ಚಿತ್ರದ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಅವರೇ ಅಧಿಕೃತವಾಗಿ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ ಎಂದು ಘೋಷಿಸಿದ್ದಾರೆ.

  ಐತಿಹಾಸಿಕ ಚಿತ್ರವೊಂದು ತೆರೆಯ ಮೇಲೆ ಬರುವ ಮುನ್ನ ಬರವಣಿಗೆ ಕೆಲಸವೇ ಅತ್ಯಂತ ಮಹತ್ವದ್ದು. ಹೀಗಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಸಿದ್ಧಮಾಡಿಕೊಂಡೇ ಶೂಟಿಂಗ್ ಶುರು ಮಾಡಲು ಮುಂದಾಗಿದೆ ಚಿತ್ರತಂಡ.

  ರಾಜವೀರ ಮದಕರಿಯಾಗಿ ದರ್ಶನ್ ನಟಿಸುತ್ತಿದ್ದು, ಸುಮಲತಾ ಅಂಬರೀಷ್ ರಾಜಮಾತೆಯಾಗಿ ನಟಿಸುತ್ತಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ ಪ್ರಧಾನ ಪಾತ್ರದಲ್ಲಿದ್ದಾರೆ. ಬಿ.ಎಲ್. ವೇಣು ಚಿತ್ರಕಥೆ, ಸಂಭಾಷಣೆ ವಹಿಸಿಕೊಂಡಿದ್ದು, ಹಂಸಲೇಖ ಈ ಐತಿಹಾಸಿಕ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

 • ರಾಜವೀರ ಮದಕರಿಗೆ ಡಿಸೆಂಬರ್`ವರೆಗೂ ಬ್ರೇಕ್

  rajaveera madakari nayaka takes a ling break

  ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‍ಲೈನ್ ವೆಂಕಟೇಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕಾಂಬಿನೇಷನ್ ಸಿನಿಮಾ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಸುದೀರ್ಘ ಬ್ರೇಕ್ ಬಿದ್ದಿದೆ. ಈಗಾಗಲೇ ಚಿತ್ರದ ಕೆಲವು ಪೋರ್ಷನ್ ಶೂಟಿಂಗ್ ನಡೆದಿರುವ ಚಿತ್ರಕ್ಕೆ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಸಿಗುವುದೇ ಕಷ್ಟವಾಗುತ್ತಿದೆ. ಇದು ಬೇರೆ ಚಿತ್ರದ ಹಾಗಲ್ಲ. ಐತಿಹಾಸಿಕ ಚಿತ್ರವಾದ್ದರಿಂದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ಅನಿವಾರ್ಯ. ಆದರೆ.. ಇದಕ್ಕೆ ಕೋವಿಡ್ 10 ಬಿಡುತ್ತಿಲ್ಲ. ಹೀಗಾಗಿಯೇ ಸದ್ಯಕ್ಕೆ ಬ್ರೇಕ್ ಕೊಟ್ಟಿದ್ದಾರೆ ರಾಕ್‍ಲೈನ್.

  ವೈರಸ್ ಅಟ್ಟಹಾಸ ನೋಡುತ್ತಿದ್ದರೆ, ರಾಂಗ್ ಟೈಂನಲ್ಲಿ ಚಿತ್ರ ಕೈಗೆತ್ತಿಕೊಂಡೆ ಎನಿಸುತ್ತಿದೆ ಎಂದಿದ್ದರು ರಾಕ್‍ಲೈನ್ ವೆಂಕಟೇಶ್. ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಇದು ಸಕಾಲವಲ್ಲ ಎನ್ನುವುದು ಅವರ ವಾದವಾಗಿತ್ತು. ಅದಕ್ಕೆ ತಕ್ಕಂತೆ ದರ್ಶನ್ ಕೂಡಾ ಡಿಸೆಂಬರ್`ವರೆಗೂ ತಲೆ ಕೆಡಿಸಿಕೊಳ್ಳೋದು ಬೇಡ. ಎಲ್ಲ ಸರಿಯಾಗಲಿ ಎಂದಿದ್ದಾರಂತೆ. ಈ ವರ್ಷ ದರ್ಶನ್ ಫ್ಯಾನ್ಸ್ ರಾಬರ್ಟ್ ಚಿತ್ರಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery