ಯಾರೆ ಯಾರೇ.. ನೀನು ನಂಗೆ..
ಹೊತ್ತಿಲ್ಲದ ಹೊತ್ತು.. ತುತ್ತಿಲ್ಲದೆ ನಿಂತು. ಕಾದಿದ್ದೆ ನಿನಗಾಗಿ ಯಾಕೆ.. ಹೇಳು ಯಾಕೆ..
ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳು ಭಗವಂತ..
ಒಂದರ ಹಿಂದೊಂದು ಬಂದ ಮೂರು ಹಾಡುಗಳೂ ಹಿಟ್ ಆಗಿವೆ. ಎಲ್ಲವೂ ಜೋಗಿ ಪ್ರೇಮ್ ಮತ್ತು ಅರ್ಜುನ್ ಜನ್ಯಾ ಮ್ಯಾಜಿಕ್. ಪ್ರತಿ ಹಾಡೂ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಹಾಡುಗಳ ಹ್ಯಾಟ್ರಿಕ್ ನಂತರ 4ನೇ ಹಾಡಿಗೂ ರೆಡಿಯಾಗಿದ್ದಾರೆ ಪ್ರೇಮ್. 4ನೇ ಹಾಡು ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ…
ಇದು ಪ್ರೀತಿಯ ಹಾಡಂತೆ. ಗವಾಯಿಗಳ ಶಿಷ್ಯ ಬರೆದಿರೋ ಪ್ರೀತಿಯ ಹಾಡಿನ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ಆ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡೋ ಪ್ಲಾನ್ ಹಾಕಿದ್ದಾರೆ ಪ್ರೇಮ್.
ಏಕ್ ಲವ್ ಯಾದಲ್ಲಿ ಇದೇ ಮೊದಲ ಬಾರಿಗೆ ನಟಿ ರಕ್ಷಿತಾ ಸಹೋದರ ರಾಣಾ ಹೀರೋ ಆಗಿದ್ದಾರೆ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಇಬ್ಬರೂ ಹೀರೋಯಿನ್ಸ್. ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂನಲ್ಲೂ ಏಕಕಾಲಕ್ಕೆ ಜನವರಿಯಲ್ಲೇ ರಿಲೀಸ್ ಆಗುತ್ತಿದೆ. ಸಂಕ್ರಾಂತಿ ಸಂಭ್ರಮ ಹೆಚ್ಚಿಸಲಿದೆ. ಕನ್ನಡದಲ್ಲಿ ಮಾತ್ರ ಪ್ರೇಮ್ ಅವರೇ ವಿತರಣೆ ಮಾಡಲಿದ್ದು, ಬೇರೆ ಭಾಷೆಗಳಿಗೆ ಈಗಾಗಲೇ ಮಾರಾಟ ಮಾಡಿದ್ದಾರಂತೆ.