` katha sangama, - chitraloka.com | Kannada Movie News, Reviews | Image

katha sangama,

 • 'Katha Sangama' Trailer On November 4th

  katha sangama trailer on nov 4th

  Rishab Shetty's new productional venture 'Katha Sangama', is finally complete and the trailer of the film is all set to be released by Puttanna Kanagal's wife Lakshmi Puttanna Kanagal. Earlier, Puttanna Kanagal had directed an anthology film called 'Katha Sangama' and now Rishab has not only produced a film by that name, but also has dedicated the film to the legendary director Puttanna Kanagal.

  The new 'Katha Sangama' is an Anthology film which has seven different stories. Each story is directed by a different directors and the film boasts of seven directors and same number of music directors, cinematographers and editors working for the film.

  The film stars Rishab Shetty, Haripriya and others in prominent roles. The film si jointly produced by Rishab Shetty, H K Prakash and Pradeep N R, while the films are directed by Kiran Raj, Shashikumar, Chandrajith Belliappa and other

 • 'Katha Sangama' Trailer Released

  katha sanagama trailer released

  Kannada's third anthology film after 'Katha Sangama' is all set to release in the month of December. Meanwhile, the trailer of the film was released in Bangalore on Monday.

  'Katha Sangama' is an anthology film comprising of seven different stories. Its a one film with seven stories, directed by seven directors. Seven DOPs and music directors have worked for this film.

  The film which is dedicated to Puttanna Kanagal has been produced by Rishab Shhetty, H K Prakash and Pradeep N R.The film stars Rishab Shetty, Haripriya, Yajna Shetty, Kishore, Prakash Belawadi, Balaji Manohar, Sowmya Jaganmurthy, Raj B Shetty and others in prominent roles.

 • ೭ ನಿರ್ದೇಶಕರು.. ೭ ಕಥೆ.. ಕಥಾ ಸಂಗಮದ ವಿಭಿನ್ನ ಟ್ರೇಲರ್

  katha sangama trailer released

  ರಿಷಬ್ ಶೆಟ್ಟಿ ಬ್ಯಾನರಿನಲ್ಲಿ ಹೊಸದೊಂದು ಪ್ರಯೋಗದ ಮೊದಲ ಝಲಕ್ ಹೊರಬಿದ್ದಿದೆ. ೭ ಮಂದಿ ನಿರ್ದೇಶಕರು, ೭ ಕಥೆಗಳು.. ಅವುಗಳೆಲ್ಲವನ್ನೂ ಸೇರಿಸಿ ಒಂದು ಸಿನಿಮಾ. ಈ ಪ್ರಯೋಗದ ಕಥೆಯೇ ಕಥಾ ಸಂಗಮ. ವಿಶೇಷವೆಂದರೆ ಈ ೭ ಕಥೆಗಳಲ್ಲಿ ಯಾವೊಂದು ಕಥೆಗೂ ರಿಷಬ್ ಡೈರೆಕ್ಷನ್ ಇಲ್ಲ. ಆದರೆ ಒಂದು ಕಥೆಯಲ್ಲಿ ಹುಚ್ಚನಾಗಿ ಕಾಣಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

  ಫ್ಯಾಮಿಲಿ ಮ್ಯಾನ್ ಕಿಶೋರ್, ನರಳುವ ಪ್ರೇಮಿಯಾಗಿ ರಾಜ್ ಬಿ.ಶೆಟ್ಟಿ, ಹುಚ್ಚ ಅಲೆಮಾರಿಯಾಗಿ ರಿಷಬ್ ಶೆಟ್ಟಿ ಇದ್ದಾರೆ. ಹರಿಪ್ರಿಯಾ, ರಿಷಬ್ ಪಾತ್ರಕ್ಕೆ ಮುಖಾಮುಖಿಯಾಗುತ್ತಾರೆ. ಪ್ರಕಾಶ್ ಬೆಳವಾಡಿ ಬೆರಗು ಹುಟ್ಟಿಸುತ್ತಾರೆ. ಅಲ್ಲೊಂದು ತಾಯಿ ಮಗುವಿನ ಕಥೆಯೂ ಇದೆ. ವಿಭಿನ್ನ ಕಥಾ ಹಂದರ ಹೊಂದಿರುವ ಕಥಾ ಸಂಗಮ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.

 • ಕಥಾ ಸಂಗಮದ ೭ ಸ್ವಾರಸ್ಯ

  interesting factors in kathe sangama

  ಕಥಾ ಸಂಗಮ, ೭ ನಿರ್ದೇಶಕರು, ೭ ಸಂಗೀತ ನಿರ್ದೇಶಕರು ಮತ್ತು ೭ ಕಥೆಗಳ ಸಂಗಮ. ಟ್ರೇಲರ್ ಹೊರಬಂದು ಕುತೂಹಲವನ್ನಂತೂ ಸೃಷ್ಟಿಸಿದೆ. ಇಷ್ಟಕ್ಕೂ ಇಂಥಾದ್ದೊAದು ಐಡಿಯಾ ಬರೋಕೆ ಕಾರಣ ಪುಟ್ಟಣ್ಣ ಕಣಗಾಲ್. ಚಿತ್ರದ ೭ ಮಂದಿ ನಿರ್ದೇಶಕರಿಗೂ ಪುಟ್ಟಣ್ಣ ಅವರೇ ಸ್ಫೂರ್ತಿಯಂತೆ. ಕಥಾ ಸಂಗಮಕ್ಕೆ ಅವರೇ ಪ್ರೇರಣೆ. ಕಥಾ ಸಂಗಮ ಅನ್ನೋ ಟೈಟಲ್ ಕೂಡಾ ಪುಟ್ಟಣ್ಣ ಚಿತ್ರದ ಟೈಟಲ್ಲೇ.

  ಚಿತ್ರದಲ್ಲಿ ಮಗಳ ಆಸೆ ಪೂರೈಸಲು ಶ್ರಮಿಸುವ ಅಪ್ಪ, ಸ್ವಾತಂತ್ರö್ಯ ಪೂರ್ವದ ಬ್ರಿಟಿಷ್ ಅಧಿಕಾರಿಯ ಕಥೆ, ತಾಯಿ ಮಗನ ಸೆಂಟಿಮೆAಟ್ ಕಥೆ, ನಿವೃತ್ತನಾಗುವ ಸರ್ಕಾರಿ ಅಧಿಕಾರಿಯ ಒಂಟಿತನದ ಕಥೆ, ಪ್ರೇಮಿಗಳ ಭಾವುಕತೆ ಎಲ್ಲವೂ ಇರುವ ಚಿತ್ರವಿದು.

 • ಡಿಸೆಂಬರ್ ಸಿನಿಮೋತ್ಸವ ; ಸ್ಟಾರ್ ಸ್ಟಾರ್ ಸ್ಟಾರ್ ಎಲ್ನೋಡಿ ಸ್ಟಾರ್..!

  december filled with satr movie releases

  ಡಿಸೆಂಬರ್ ತಿಂಗಳು ಬಂತೆAದರೆ.. ಅದೊಂದು ರೀತಿ ಸಂಭ್ರಮ. ಏಕೆಂದರೆ.. ಅದು ಒಂದು ವರ್ಷದ ಕೊನೆ.. ಹೊಸ ವರ್ಷಕ್ಕೆ ಮುಂಬಾಗಿಲು. ಈ ಬಾರಿಯಂತೂ.. ಡಿಸೆಂಬರ್ ಸ್ಟಾರ್ ತಿಂಗಳಾಗಲಿದೆ.

  ಸುಮ್ಮನೆ ನೋಡಿ.. ಡಿಸೆಂಬರ್ ಶುರುವಾಗುವುದು ರಿಷಬ್ ಶೆಟ್ಟಿ-ಹರಿಪ್ರಿಯಾ ಚಿತ್ರದಿಂದ. ಅದೂ.. 7 ನಿರ್ದೇಶಕರು, ಸಂಗೀತ ನಿರ್ದೇಶಕರು ಒಟ್ಟಿಗೇ ಸೇರಿ ಕಟ್ಟಿರುವ ಸಿನಿಮಾ.. ಕಥಾ ಸಂಗಮದ ಮೂಲಕ. ಜೊತೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಅಳಿದು ಉಳಿದವರು ರಿಲೀಸ್.

  ಅದರ ಮುಂದಿನ ವಾರ.. ಚಾಲೆಂಜಿAಗ್ ಸ್ಟಾರ್ ಒಡೆಯನ ದರ್ಬಾರ್ ಶುರು. ಅದೂ 700+ ಚಿತ್ರಮಂದಿರಗಳಲ್ಲAತೆ.. ಅಲ್ಲಿಗೇ ಮುಗಿಯುತ್ತಾ..? ನೋ ಚಾನ್ಸ್..

  ಡಿಸೆಂಬರ್ 20ಕ್ಕೆ ಸಲ್ಮಾನ್, ಸುದೀಪ್ ಕಾಂಬಿನೇಷನ್ನಿನ ದಬಾಂಗ್ 3 ಎಂಟ್ರಿ ಕೊಡುತ್ತೆ.

  ಅದರ ಮುಂದಿನ ವಾರವೇ ಇರೋದು ಇನ್ನೊಂದು ದೊಡ್ಡ ಹಬ್ಬ. ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ, ಶಾನ್ವಿ ಕಾಂಬಿನೇಷನ್ನಿನ ಚಿತ್ರ. ಪುಷ್ಕರ್ ಫಿಲಂಸ್‌ನ ಅವನೇ ಶ್ರೀಮನ್ನಾರಾಯಣ, ಚಿತ್ರವನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಡಿಸೆಂಬರ್ ತಿಂಗಳು.. ಎಲ್ಲಿ ನೋಡಿದರೂ.. ಯಾವಾಗ ನೋಡಿದರೂ.. ಸ್ಟಾರ್‌ಗಳೇ ಇರುತ್ತಾರೆ.

 • ಮಾತೇ ಇಲ್ಲದ ಪಾತ್ರಕ್ಕೆ ಹರಿಪ್ರಿಯಾ ಡಬ್ಬಿಂಗ್..!

  haripriya dubs for her silent role in katha sangama

  ಕಥಾ ಸಂಗಮ. ೭ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಮತ್ತೆ ಜೊತೆಯಾಗಿದ್ದಾರೆ. ಇದರಲ್ಲಿ ಹರಿಪ್ರಿಯಾ ಪಿಹೆಚ್‌ಡಿ ವಿದ್ಯಾರ್ಥಿನಿಯಾದರೆ, ರಿಷಬ್ ಶೆಟ್ಟಿಯದ್ದು ಮಾನಸಿಕ ಅಸ್ವಸ್ಥ ಭಿಕ್ಷÄಕನ ಪಾತ್ರ. ಜೊತೆಯಲ್ಲಿ ಒಂದ ನಾಯಿಯೂ ಇದೆ. ಇಷ್ಟೆಲ್ಲ ಇದ್ದರೂ, ಇಬ್ಬರ ಪಾತ್ರಕ್ಕೂ ಮಾತಿಲ್ಲ.. ಕಥೆಯಿಲ್ಲ. ಮೌನಂ ಶರಣಂ ಪಾತ್ರಾಮಿ.. ಆದರೂ ಈ ಪಾತ್ರಕ್ಕೆ ಹರಿಪ್ರಿಯಾ ಡಬ್ ಮಾಡಿದ್ದಾರಂತೆ.

  ನಿರ್ದೇಶಕರು ಒಂದು ದಿನ ಫೋನ್ ಮಾಡಿ ಡಬ್ಬಿಂಗ್‌ಗೆ ಬನ್ನಿ ಎಂದಾಗ ಆಶ್ಚರ್ಯವಾಯಿತು. ಸಂಭಾಷಣೆಯೇ ಇಲ್ಲದ ಪಾತ್ರಕ್ಕೆ ಯಾವ ಡಬ್ಬಿಂಗ್ ಎಂದುಕೊAಡೆ. ಆದರೆ, ಕೆಲವು ಉಸಿರು, ಶಬ್ಧಗಳನ್ನು ನನ್ನ ಧ್ವನಿಯಲ್ಲೇ ತೆಗೆದುಕೊಂಡರು. ಮಾತೇ ಇಲ್ಲದ ಈ ಪಾತ್ರದಲ್ಲಿ ನಾನು, ರಿಷಬ್ ಕಣ್ಣು, ಮುಖದಲ್ಲೇ ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ಹರಿಪ್ರಿಯಾ.

  ೨೯೭೬ರಲ್ಲಿ ಪುಟ್ಟಣ್ಣ ಕಣಗಾಲ್ ೩ ಕಥೆಗಳನ್ನಿಟ್ಟುಕೊಂಡು ಕಥಾಸಂಗಮ ಚಿತ್ರ ಮಾಡಿದ್ದರು. ಅವರ ಪ್ರೇರಣೆಯಿಂದಲೇ ಶುರುವಾದ ಈ ಕಥಾಸಂಗಮ ಚಿತ್ರದ ಟ್ರೇಲರ್‌ನ್ನು ಪುಟ್ಟಣ್ಣನವರ ಪತ್ನಿ ಲಕ್ಷಿö್ಮÃ ಕಣಗಾಲ್ ಅವರಿಂದ ರಿಲೀಸ್ ಮಾಡಿಸುತ್ತಿದೆ ಕಥಾಸಂಗಮ ಟೀಂ.