` dwarkish, - chitraloka.com | Kannada Movie News, Reviews | Image

dwarkish,

 • Shanvi Heroine To Ishan - Exclusive

  shanvi is the heroine for ishan

  Actress Shanvi Srivatsa has be selected as heroine for CR Manohar's nephew Ishan movie temporarily selected movie as Amma I Love U. The film will be directed by KM Chaitanya and it is the 51st production of Dwarkish Films.

  Speaking to Chitraloka producer Yogish Dwarkish told Today we have finalized Shanvi Srivatsava as the heroine. Movie shooting will start in October. Amma I Love you title is a working title only. Still we have not finalized the final title. Will give more details soon said Yogi Dwarkish 

 • Varamahalakshmi Sentiment For Aatagara - Exclusive

  aatagara image

  Dwarakish Chitra is banking on the Varamahalakshmi festival sentiment for its new film Aatagara. The KM Chaitanya-directed film is ready for release and would have been released a week or two ago. But the film makers held it back so that it could be released on August 28.

  The reason for this being that Dwarakish Chitra's comeback film in 2004 was Apthamitra that released on Varamahalakshmi festival that year. Producer Yogish wants to therefore release Aatagara on the same festival. It is only a sentimental issue and the success of the film will ultimately depend on the how people accept it. I am more than confident about the content and its appeal," he says.

  Aatagara has 10 actors with equal screen space and disregards the idea of a lead pair though Chiranjeevi Sarja and Meghana Raj are in a sense the traditional 'lead actors'. 

 • ಕಾಲವನ್ನು ತಡೆಯೋರು ಯಾರೂ ಇಲ್ಲ - ಕನ್ನಡಿಗರ ಕುಳ್ಳನಿಗೆ 75

  dwarkish 75 years

  ನೆಗೆಟಿವ್ ಆಲೋಚನೆ ಬಿಟ್ಟು, ಪಾಸಿಟಿವ್ ಆಗಿ ಯೋಚಿಸಲು ತೊಡಗಿದರೆ ಏನಾಗಬಹುದು. ಉತ್ತರ : ದ್ವಾರಕೀಶ್

  ತಮ್ಮಲ್ಲಿನ ನ್ಯೂನತೆಗಳನ್ನೇ ಶಕ್ತಿಯಾಗಿಸಿ ಗೆಲ್ಲುವುದು ಹೇಗೆ?. ಉತ್ತರ : ದ್ವಾರಕೀಶ್

  ಎತ್ತರವಿಲ್ಲದ, ಕುಳ್ಳ ದೇಹವನ್ನೇ ತಮ್ಮ ಶಕ್ತಿಯನ್ನಾಗಿಸಿಕೊಂಡು ಕನ್ನಡದ ಕುಳ್ಳನಾಗಿ ಮೆರೆದ ದ್ವಾರಕೀಶ್ ಜೀವನ, ಆತ್ಮವಿಶ್ವಾಸದ ಕೊರತೆಯಿಂದ ನರಳುವವರಿಗೆ ಸ್ಫೂರ್ತಿಯ ಚಿಲುಮೆಯಾಗಬಲ್ಲದು. ಆ ಸ್ಫೂರ್ತಿಯ ಚಿಲುಮೆಗೀಗ 75 ವರ್ಷ.

  ಬಂಗಲ್ ಶ್ಯಾಮರಾವ್ ದ್ವಾರಕಾನಾಥ್ ಎಂಬುದು ಅವರ ಮೂಲ ಹೆಸರು. ಅಪ್ಪ ಹೇಳಿದಂತೆ ಕೇಳಿಕೊಂಡು ಅಂಗಡಿ ನಡೆಸಿಕೊಂಡು ಇದ್ದಿದ್ದರೆ, ಮೈಸೂರಿನಲ್ಲಿ ಆಟೋ ಸ್ಪೇರ್ಸ್ ಮಾರುತ್ತಾ ಬದುಕಿಬಿಡುತ್ತಿದ್ದರೇನೋ. ಆದರೆ, ಸಿನಿಮಾ ನೋಡುವ, ಸಿನಿಮಾ ಸೇರುವ ಹಠ ಬೆನ್ನುಹತ್ತಿತ್ತು. ಮಾವ ಹುಣಸೂರು ಕೃಷ್ಣಮೂರ್ತಿ ಬೆನ್ನು ಹತ್ತಿದ ದ್ವಾರಕೀಶ್, ವೀರಸಂಕಲ್ಪ ಚಿತ್ರದಲ್ಲೊಂದು ಪುಟ್ಟ ಪಾತ್ರ ಗಿಟ್ಟಿಸಿದರು. 

  ಆ ಚಿತ್ರದಲ್ಲಿ ಅವರು ಎದುರಿಸಿದ ಮೊದಲ ಶಾಟ್, ಸಿಂಹಾಸನ ಹತ್ತುವ ದೃಶ್ಯ. ಅದೇನು ಅಮೃತ ಗಳಿಗೆಯೋ.. ದ್ವಾರಕೀಶ್ ಕನ್ನಡಿಗರ ಹೃದಯ ಸಿಂಹಾಸನದ ಮಹಾರಾಜನಾಗಿ ಮೆರೆದರು. ಅವರ ಜೀವನದಲ್ಲಿ ಏರುಪೇರುಗಳಾದವು ನಿಜ. ಆದರೆ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ದ್ವಾರಕೀಶ್ ಸ್ಥಾನ ಅಲುಗಾಡಲಿಲ್ಲ.

  ಹಾಸ್ಯ ನಟನಾದವನು ಹೀರೋ ಆಗಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದೇ ದ್ವಾರಕೀಶ್. ಕನ್ನಡ ಚಿತ್ರಗಳನ್ನು ವಿದೇಶದಲ್ಲಿ ಚಿತ್ರೀಕರಿಸಿದ ಮೊದಲಿಗ ದ್ವಾರಕೀಶ್. ಲಂಡನ್ ಸ್ಟುಡಿಯೋಗಳಲ್ಲಿ ಚಿತ್ರದ ಸಾಂಗ್ ರೆಕಾರ್ಡಿಂಗ್ ಮಾಡಿಸಿದ ಧೀರ ದ್ವಾರಕೀಶ್. 

  ಕನ್ನಡದ ಹೆಮ್ಮೆಯ ನಿರ್ದೇಶಕ ಸಿದ್ದಲಿಂಗಯ್ಯ ನಿರ್ದೇಶಕರಾದದ್ದು ದ್ವಾರಕೀಶ್ ಚಿತ್ರದಿಂದ. ದ್ವಾರಕೀಶ್ ನಿರ್ಮಾಪಕರಾದಾಗ ಅವರಿಗೆ ವಯಸ್ಸಾದರೂ ಎಷ್ಟು..? ಕೇವಲ 23. ಈಗ ಅವರಿಗೆ 75. 52 ವರ್ಷ ನಿರ್ಮಾಪಕರಾಗಿದ್ದ ದ್ವಾರಕೀಶ್ ಸಂಸ್ಥೆಯ 50ನೇ ಚಿತ್ರವೇ ಚೌಕ.

  ಚೌಕ ಚಿತ್ರ ದ್ವಾರಕೀಶ್ ಜೀವನಕ್ಕೆ ಸರಿಯಾಗಿ ಹೊಂದುವ ಹಾಗಿದೆ. ಜೀವನದ ನಾಲ್ಕೂ ಮಗ್ಗುಲುಗಳನ್ನು ಮುಟ್ಟಿ ಬಂದಿದ್ದಾರೆ ದ್ವಾರಕೀಶ್. ಅವಕಾಶಕ್ಕಾಗಿ ಅಲೆಮಾರಿಯಾಗಿದ್ದ ದ್ವಾರಕೀಶ್. ಚಿತ್ರರಂಗದ ಸಾಮ್ರಾಟನಾಗಿ ಮೆರೆದ ದ್ವಾರಕೀಶ್. ಎಲ್ಲವನ್ನೂ ಕಳೆದುಕೊಂಡು, ಏನೂ ಇಲ್ಲದಂತಾಗಿ ಹೋದ ದ್ವಾರಕೀಶ್. ಮತ್ತೆ ಎಲ್ಲವನ್ನೂ ಗಳಿಸಿ, ಬದುಕು ಕಟ್ಟಿಕೊಂಡ ದ್ವಾರಕೀಶ್. ಅದಕ್ಕೇ ಹೇಳಿದ್ದು, ದ್ವಾರಕೀಶ್ ಜೀವನವೆಂಬುದು, ಆತ್ಮವಿಶ್ವಾಸ ಇಲ್ಲದವರು ಓದಲೇಬೇಕಾದ ಲೈಫು. ಅದರಲ್ಲಿ ಸ್ಫೂರ್ತಿಯಿದೆ..ಛಲವಿದೆ. ಆಫ್ರಿಕಾದಲ್ಲಿ ಶೀಲ ಚಿತ್ರ ಮಾಡಿ ಮೈತುಂಬಾ ಸಾಲ ಮಾಡಿಕೊಂಡ ದ್ವಾರಕೀಶ್, ಮತ್ತೊಮ್ಮೆ ಜೀವನದಲ್ಲಿ ಗೆಲುವಿನ ನಗೆ ನಕ್ಕಿದ್ದು ಆಪ್ತಮಿತ್ರನಿಂದಲೇ.

  ದ್ವಾರಕೀಶ್ ಜೀವನದ ಆಪ್ತಮಿತ್ರ ವಿಷ್ಣುವರ್ಧನ್. ಅದೇಕೋ.. ಏನೋ.. ಅವರಿಬ್ಬರ ಸ್ನೇಹ ಎಷ್ಟು ಗಾಢವಾಗಿತ್ತೋ.. ಅಷ್ಟೇ ನಿಗೂಢವಾಗಿ ದೂರವೂ ಆಗಿಹೋಯ್ತು. ಹೀಗೇಕಾಯ್ತು ಎನ್ನುವುದು ದ್ವಾರಕೀಶ್‍ಗೆ ಗೊತ್ತಿಲ್ಲ. ಏನಾಯ್ತು ಎನ್ನುವುದನ್ನು ವಿಷ್ಣುವರ್ಧನ್ ಹೇಳಿ ಹೋಗಲಿಲ್ಲ.

  ಅವರ ಚಿತ್ರಗಳಲ್ಲಿ ರಾಜ್, ವಿಷ್ಣು, ಶಂಕರ್‍ನಾಗ್, ರಜಿನಿಕಾಂತ್, ಶ್ರೀನಾಥ್.. ನಾಯಕರಾಗಿದ್ದರು. ಕನ್ನಡ, ತಮಿಳು, ಹಿಂದಿ.. ಎಲ್ಲ ಭಾಷೆಗೂ ನುಗ್ಗಿದ್ದ ದ್ವಾರಕೀಶ್, ಕನ್ನಡ ಚಿತ್ರರಂಗದಲ್ಲಿ ಊರಿದ್ದು ವಾಮನ ಪಾದ. ಗೆಲುವು ಹತ್ತಿದರೆ, ಹಿಮಾಲಯಕ್ಕೆ ಕೊಂಡೊಯ್ಯುತ್ತೆ. ಸೋಲು ಸುತ್ತಿದರೆ ಪಾತಾಳಕ್ಕೆ ನೂಕಿಬಿಡುತ್ತೆ ಅಂತಾರಲ್ಲ..ಹಾಗೆ ಹಿಮಾಲಯ ಮತ್ತು ಪಾತಾಳ ಎರಡನ್ನೂ ಕಂಡು ಬಂದವರು ದ್ವಾರಕೀಶ್.

  ದ್ವಾರಕೀಶ್ ಲೈಫನ್ನು ಹೇಳುತ್ತಾ ಹೋದರೆ, ಚಿತ್ರರಂಗದ ಇತಿಹಾಸವನ್ನೇ ಹೇಳಿದಂತೆ. ಆದರೆ, ದ್ವಾರಕೀಶ್ ಹಾಸ್ಯನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗೆದ್ದಿದ್ದು ಸಾಧನೆಯಲ್ಲ. ಅದಕ್ಕಿಂತ ಮಿಗಿಲಾದ ಸಾಧನೆ ಒಬ್ಬ ವ್ಯಕ್ತಿಯಾಗಿ ಸಾಧಿಸಿದ್ದು. ಅವರು ಗುರುತಿಸಿದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗವನ್ನು ಆಳಿದವು. 

  ಸ್ಫೂರ್ತಿಯ ಕಥೆಗಳಿಗಾಗಿ ಅಮೆರಿಕ, ಬ್ರಿಟನ್, ಹಾಲಿವುಡ್, ಬಾಲಿವುಡ್.. ಹೀಗೆ ಎಲ್ಲೆಲ್ಲೋ ಅಲೆದು, ಅವರಿಗೇ ಗೊತ್ತಿಲ್ಲದ ವಿಶೇಷಣಗಳನ್ನೆಲ್ಲ ತುಂಬಿ, ಅವರನ್ನು ಹೀರೋಗಳಂತೆ ಬಿಂಬಿಸುವವರು ಒಂದ್ಸಲ ದ್ವಾರಕೀಶ್ ಜೀವನ ನೋಡಬೇಕು.

 • ದ್ವಾರಕೀಶ್ ಬ್ಯಾನರ್‍ಗೂ, ಅಮ್ಮನಿಗೂ ಅದೇನೋ ನಂಟು..!

  relationship between dwarkish banner and mother's sentiment

  ದ್ವಾರಕೀಶ್ ಬ್ಯಾನರ್‍ನ ಮತ್ತೊಂದು ಚಿತ್ರ ಅಮ್ಮ ಐ ಲವ್ ಯು. ಇದು ತಾಯಿಯ ಕುರಿತಾದ ಚಿತ್ರ. ತಾಯಿಗಾಗಿ ಸಕಲವನ್ನೂ ತ್ಯಾಗ ಮಾಡುವ ಮಗ, ಭಿಕ್ಷೆಯನ್ನೂ ಬೇಡುತ್ತಾನೆ. ಅದೇ ಚಿತ್ರದ ಹೈಲೈಟ್. ಆದರೆ, ಅದಕ್ಕಿಂತ ಇಂಟ್ರೆಸ್ಟಿಂಗ್ ಎಂದರೆ, ತಾಯಿಯ ಬಗ್ಗೆ ದ್ವಾರಕೀಶ್ ಬ್ಯಾನರ್‍ಗೆ ಇರುವ ವಿಶೇಷ ಪ್ರೀತಿ.

  ದ್ವಾರಕೀಶ್ ಚಿತ್ರ ಬ್ಯಾನರ್‍ನ ಮೊದಲ ಸಿನಿಮಾ, ಮಮತೆಯ ಬಂಧನ. ಹೆಸರೇ ಹೇಳುವಂತೆ ಅದು ಮಾತೃ ವಾತ್ಸಲ್ಯದ ಕಥೆ. ಡಾ.ರಾಜ್‍ಗಾಗಿ ನಿರ್ಮಿಸಿದ್ದ ಸಿನಿಮಾ, ಡಾ.ರಾಜ್ ಮತ್ತು ಬಿ.ಸರೋಜಾದೇವಿ ಅಭಿನಯದ ಭಾಗ್ಯವಂತರು. ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು. ನೀ ಬರೆದ ಕಾದಂಬರಿ, ಡ್ಯಾನ್ಸ್ ರಾಜಾ ಡ್ಯಾನ್ಸ್, ಗಂಡ ಮನೆ ಮಕ್ಕಳು. 

  ದ್ವಾರಕೀಶ್ ಚಿತ್ರಗಳಲ್ಲಿ ಅಮ್ಮನ ಕುರಿತ  ಹಾಡುಗಳೂ ವಂಡರ್‍ಫುಲ್. ಅಮ್ಮಾ ಎಂದರೆ ಏನೋ ಹರುಷವೂ.. ಗೀತೆ ಅಮ್ಮನ ದಿನದಂದು ಕೇಳಿಸುತ್ತಲೇ ಇರುತ್ತೆ. ಡಾನ್ಸ್ ರಾಜಾ ಡಾನ್ಸ್ ಚಿತ್ರದ ಅಮ್ಮಾ.. ಅಮ್ಮಾ.. ನಿನ್ನಾ ಸ್ನೇಹಕೆ.. ಹಾಡು, ಭಾಗ್ಯವಂತರು ಚಿತ್ರದ ಭಾಗ್ಯವಂತರು ನಾವೆ ಭಾಗ್ಯವಂತರು, ನೀ ಮೀಟಿದಾ ನೆನಪೆಲ್ಲವು.. ನೀ ಬರೆದ ಕಾದಂಬರಿಯಿಂದ.. ಹೀಗೆ ತಾಯಿಯ ಹಾಡುಗಳಿಗೆ ದ್ವಾರಕೀಶ್ ಚಿತ್ರಗಳಲ್ಲಿ ಬೇರೆಯದ್ದೇ ಸ್ಥಾನಮಾನ. ಈಗ ಅಮ್ಮ ಐ ಲವ್ ಯೂ ಚಿತ್ರದಲ್ಲೂ ಅಂಥದ್ದೇ ಹಾಡಿದೆ. ಅಮ್ಮಾ.. ನನ್ನ ಈ ಜನುಮ ಎಂಬ ಹಾಡು, ಮಕ್ಕಳ ಕಣ್ಣಲ್ಲಿ ನೀರು ತಂದರೆ ಅಚ್ಚರಿಯಿಲ್ಲ.

  ಈ ಸಿನಿಮಾ ನನ್ನ ಅಜ್ಜಿಗೆ ಅರ್ಪಣೆ ಎಂದಿದ್ದಾರೆ ನಿರ್ದೇಶಕ ಚೈತನ್ಯ. ಚೈತನ್ಯ ಅವರ ಅಜ್ಜಿ, ಯಾವಾಗಲೂ ಸಿನಿಮಾ ಮಾಡು ಎಂದು ಹೇಳುತ್ತಿದ್ದರಂತೆ. ಹಾಗೆಯೇ ಆ ದಿನಗಳು ಚಿತ್ರ ಮಾಡಿದಾಗ, ಪ್ರತಿಯೊಬ್ಬರೂ ನಿನ್ನ ಸಿನಿಮಾ ನೋಡಿ ಕಣ್ಣೀರಿಡಬೇಕು, ಭಾವುಕರಾಗಬೇಕು ಅಂತಾ ಸಿನಿಮಾ ಮಾಡು ಎನ್ನುತ್ತಿದ್ದರಂತೆ. ಈಗ ಅಮ್ಮ ಐ ಲವ್ ಯು ಅಂತಹ ಸಿನಿಮಾ. ಆದರೆ, ಕಳೆದ ವರ್ಷವಷ್ಟೇ ಅಜ್ಜಿಯನ್ನು ಕಳೆದುಕೊಂಡಿದ್ದಾರೆ ಚೈತನ್ಯ. 

  ಇಂತಹ ಕಥೆಯುಳ್ಳ ಸಿನಿಮಾ ಮಾಡೋಕೆ ಅವರೇ ಪ್ರೇರಣೆ. ಹೀಗಾಗಿ ಈ ಚಿತ್ರ ಅವರಿಗೇ ಅರ್ಪಣೆ ಎಂದಿದ್ದಾರೆ ಚೈತನ್ಯ. ಯೋಗಿ ದ್ವಾರಕೀಶ್, ಚೈತನ್ಯ ಮತ್ತು ಚಿರಂಜೀವಿ ಸರ್ಜಾ, ಆಟಗಾರ ಚಿತ್ರದ ನಂತರ ಮತ್ತೊಮ್ಮೆ ಒಂದಾಗಿದ್ದಾರೆ. ಸಿತಾರಾ, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಇದೇ ವಾರ ರಿಲೀಸ್.

 • ದ್ವಾರಕೀಶ್, ಗುರುಕಿರಣ್ ಹೊಸ ಆಡಿಯೋ ಸಂಸ್ಥೆ

  dwarkish and gurukiran launch audio company

  ದ್ವಾರಕೀಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಕನ್ನಡದ ಕುಳ್ಳ ದ್ವಾರಕೀಶ್, ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಆಡಿಯೋ ಸಂಸ್ಥೆ ಕಟ್ಟುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ ದ್ವಾರಕೀಶ್. ಈ ಸಾಹಸಕ್ಕೆ ಕೈ ಜೋಡಿಸಿರುವುದು ಸಂಗೀತ ನಿರ್ದೇಶಕ ಗುರುಕಿರಣ್.

  ಇಬ್ಬರೂ ಸಹಭಾಗಿತ್ವದಲ್ಲಿ ಡಿಜಿಕೆ ಅನ್ನೋ ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ. ದ್ವಾರಕೀಶ್ ಮತ್ತು ಗುರುಕಿರಣ್ ಹೆಸರಿನ ಅಕ್ಷರಗಳೇ ಕಂಪೆನಿಯ ಹೆಸರು. ಈ ಆಡಿಯೋ ಸಂಸ್ಥೆ ಮೂಲಕ ಹೊರ ತಂದಿರುವ ಮೊದಲ ಆಡಿಯೋ ಅಮ್ಮ ಐ ಲವ್ ಯೂ ಚಿತ್ರದ್ದು. ಅದು ಸ್ವತಃ ದ್ವಾರಕೀಶ್ ಬ್ಯಾನರ್‍ನ ಸಿನಿಮಾ. ಅಲ್ಲದೆ ಈ ಚಿತ್ರದ ಸಂಗೀತ ನಿರ್ದೇಶಕ ಸ್ವತಃ ಗುರುಕಿರಣ್. ಶುಭವಾಗಲಿ.

  Related Articles :-

  Dwarakish And Gurukiran Launch Audio Company

 • ಶಿವರಾಜ್‍ಕುಮಾರ್ ಹೀರೋ..ದ್ವಾರಕೀಶ್ ನಿರ್ಮಾಣ.. ಪಿ.ವಾಸು ನಿರ್ದೇಶನ..

  super hit combination joine hands

  ಈ ಕಾಂಬಿನೇಷನ್ನೇ ಕುತೂಹಲ. ಪಿ.ವಾಸು, ಕನ್ನಡದಲ್ಲಿ ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ, ಶಿವಲಿಂಗದಂತಹಾ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ. ಶಿವರಾಜ್‍ಕುಮಾರ್ ಸೆಂಚುರಿ ಸ್ಟಾರ್. ಕನ್ನಡಿಗರ ಪ್ರೀತಿಯ ಕುಳ್ಳ ದ್ವಾರಕೀಶ್, ಈಗಾಗಲೇ 51 ಸಿನಿಮಾ ನಿರ್ಮಿಸಿರುವ ನಿರ್ಮಾಪಕ. ಇವರೆಲ್ಲರೂ ಒಂದಾಗುತ್ತಿರುವುದೇ ಈ ಬಾರಿಯ ವಿಶೇಷ.

  ದ್ವಾರಕೀಶ್ ಅವರ 52ನೇ ಸಿನಿಮಾಗೆ ನಿರ್ದೇಶನದ ಹೊಣೆ ಹೊತ್ತಿರುವುದು ಪಿ.ವಾಸು. ಆಪ್ತಮಿತ್ರ ನಂತರ ದ್ವಾರಕೀಶ್ ಬ್ಯಾನರ್‍ನಲ್ಲಿ ಮಾಡುತ್ತಿರುವ ಸಿನಿಮಾ ಅದು. ಹೀರೋ, ಶಿವರಾಜ್‍ಕುಮಾರ್. ಶಿವಣ್ಣಂಗೆ ಇದು ದ್ವಾರಕೀಶ್ ಬ್ಯಾನರ್‍ನಲ್ಲಿ ಮೊದಲ ಸಿನಿಮಾ ಹಾಗೆಯೇ ಶಿವಲಿಂಗ ನಂತರ ವಾಸು ಜೊತೆ 2ನೇ ಸಿನಿಮಾ. ಸೂಪರ್ ಹಿಟ್ ಕಾಂಬಿನೇಷನ್ ಜೊತೆಗೂಡಿದಾಗ, ನಿರೀಕ್ಷೆಗಳು ಕೂಡಾ ಆಕಾಶದೆತ್ತರಕ್ಕೇ ಇರುತ್ತವೆ.

Geetha Movie Gallery

Ombattane Dikku Launch Meet Gallery