` ranganayaka, - chitraloka.com | Kannada Movie News, Reviews | Image

ranganayaka,

 • 'Ranganayaka' Teaser Released

  ranganayaka teaser released

  The hit combination of actor Jaggesh and director Guruprasad is back with a third film called 'Ranganayaka'. Though the film is yet to be launched, the teaser of the film was released on Tuesday night in Bangalore.

  The first press conference as well as the teaser release event of the film was held at the Kalavidara Sangha Auditorium in Bangalore and the team members of the film was present during the occasion. A different teaser and the teaser is getting good response from all over.

  'Ranganayanayaka' is being written and directed by Guruprasad, while Vikyath who is currently busy with 'Inspector Vikram' is the producer. Manohar Joshi is the cinematographer, while Anup Seelin is the music director.

 • ನಿರ್ದೇಶಕ ಗುರುಗೆ ಜಗ್ಗೇಶ್ ಹಾಕಿರೋದು ಅದೊಂದೇ ಕಂಡೀಷನ್

  ranganayaka teaser launched

  ನವರಸ ನಾಯಕ ಜಗ್ಗೇಶ್ ಅವರ ನವರಸ ಪ್ರತಿಭೆಗಳನ್ನೂ ತೋರಿಸಿದ ಪ್ರತಿಭೆ ಗುರುಪ್ರಸಾದ್. ಜಗ್ಗೇಶ್ ಅವರ ವೃತ್ತಿ ಜೀವನದ ಅತಿ ದೊಡ್ಡ ಹಿಟ್ ಕೊಟ್ಟ ನಿರ್ದೇಶಕ ಗುರು ಪ್ರಸಾದ್. ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ರಂಗನಾಯಕ ಚಿತ್ರದಲ್ಲಿ. 9 ವರ್ಷಗಳ ನಂತರ ಬರುತ್ತಿರುವ ಜೋಡಿ ಟೀಸರ್ ಹೊರಬಿಟ್ಟು ಖುಷಿ ಪಟ್ಟಿದೆ. ಆದರೆ ಚಿತ್ರ ಶುರು ಮಾಡುವ ಮುನ್ನ ಜಗ್ಗೇಶ್ ಗುರು ಪ್ರಸಾದ್ ಅವರಿಗೆ ಕಂಡೀಷನ್ ರೀತಿಯಲ್ಲೆ ಒಂದು ಬುದ್ದಿ ಮಾತು ಹೇಳಿದ್ದಾರಂತೆ.

  ಕೇವಲ ಕಮರ್ಷಿಯಲ್ ಇದ್ರೆ ಸಾಕಾಗಲ್ಲ, ಚಿತ್ರದಲ್ಲಿ ಬೇರೇನೋ ತತ್ವ ಇರಬೇಕು ಅಲ್ಲಿ. ಒಳ್ಳೆ ಕಥೆ ಮಾಡು, ನನ್ನ ಮಾನ ಮಾತ್ರ ಕಳೆಯಬೇಡ, ಸುಮ್ಮನಿದ್ದರೂ ಪರವಾಗಿಲ್ಲ ಎಂದಿದ್ದರಂತೆ ಜಗ್ಗೇಶ್. ಅದನ್ನು ರಂಗನಾಯಕ ಟೀಸರ್ ಬಿಡುಗಡೆ ವೇಳೆ ನೆನಪಿಸಿಕೊಂಡಿದ್ದಾರೆ ಗುರು ಪ್ರಸಾದ್. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ. ಅದು ನಮ್ಮ ನಮ್ಮ ತತ್ವಗಳಲ್ಲಿ ಮಾತ್ರ. ಉಳಿದಂತೆ ಅವರು ನನ್ನ ಪಾಲಿಗೆ ಅಣ್ಣನಿದ್ದ ಹಾಗೆ ಎಂದಿದ್ದಾರೆ ಗುರು.

  ಮಠ ನನ್ನ 100ನೇ ಸಿನಿಮಾ. ಎದ್ದೇಳು ಮಂಜುನಾಥ ಮಾಡಿ, ಗುರು ನನ್ನನ್ನು ಹಾಳು ಮಾಡಿಬಿಟ್ರು ಎಂದು ಪ್ರೀತಿಯಿಂದಲೇ ಹೇಳಿರುವ ಜಗ್ಗೇಶ್, ಅದಕ್ಕೆ ಕಾರಣವನ್ನೂ ಹೇಳ್ತಾರೆ. ಅವರು ಎಲ್ಲಿಯೇ ಹೋದರೂ ಎದ್ದೇಳು ಮಂಜುನಾಥ ತರಹದ ಸಿನಿಮಾ ಮಾಡಿ ಅಂತಾ ದುಂಬಾಲು ಬೀಳ್ತಾರಂತೆ.

  ನಾನೂ ಒಂದೇ ರೀತಿ ಸಿನಿಮಾ ಎಷ್ಟಂತ ಮಾಡ್ಲಿ, ನಾನು ಟೈಮ್‌ ನಂಬುವ ಮನುಷ್ಯ. ನಾನು ಮತ್ತು ಗುರು ಸಿನಿಮಾ ಮಾಡ್ತೀವಿ ಅಂತ ಅನೌನ್ಸ್ ಮಾಡಿದ್ದಕ್ಕೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಹೀಗಾಗಿ ನಿರೀಕ್ಷೆ ಜಾಸ್ತಿ ಇದೆ ಎಂದಿದ್ದಾರೆ ಜಗ್ಗೇಶ್.

  ಬಿಲ್ಡಪ್ ಬೇಡ. ಒಳ್ಳೆಯ ಕಥೆ ಇದ್ದರೆ ಸಾಕು. ನಿರ್ದೇಶಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ. ನಿರ್ದೇಶಕರಿಗೆ ಅವರ ಕೆಲಸವನ್ನು ಮಾಡೋದಕ್ಕೆ ಬಿಡಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ ಜಗ್ಗೇಶ್.

 • ರಂಗನಾಯಕ ಜಗ್ಗೇಶ್

  ranaganayaka jaggesh

  ನವರಸ ನಾಯಕ ಜಗ್ಗೇಶ್ ರಂಗನಾಯಕರಾಗುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಇಬ್ಬರು ರಂಗನಾಯಕಿಯರಿದ್ದಾರೆ. ಒಬ್ಬರು ಆರತಿ, ಇನ್ನೊಬ್ಬರು ಆದಿತಿ. ಈಗ ರಂಗನಾಯಕ. ಜಗ್ಗೇಶ್‍ರನ್ನು ರಂಗನಾಯಕರನ್ನಾಗಿಸಿರುವುದು ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಿರ್ದೇಶಕ ಗುರು ಪ್ರಸಾದ್. ದಶಕಗಳ ನಂತರ ಇಬ್ಬರೂ ಮತ್ತೆ ಒಗ್ಗೂಡಿದ್ದಾರೆ.

  ಹಿಟ್ ಜೋಡಿಯನ್ನು ಒಂದುಗೂಡಿಸಿದ ಕೀರ್ತಿ ಪುಷ್ಪಕವಿಮಾನ ಚಿತ್ರ ನಿರ್ಮಿಸಿದ್ದ ವಿಖ್ಯಾತ್ ಅವರದ್ದು. ಗುರುಪ್ರಸಾದ್ ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಎನಿಸಿತು. ಈಗ ನಮ್ಮ ಬ್ಯಾನರ್‍ನಲ್ಲಿ ಅವರು ಹ್ಯಾಟ್ರಿಕ್ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಕಥೆ ಮಜವಾಗಿದೆ ಎಂದಿದ್ದಾರೆ ವಿಖ್ಯಾತ್.

Shivarjun Movie Gallery

Actor Bullet Prakash Movie Gallery