` big boss 7, - chitraloka.com | Kannada Movie News, Reviews | Image

big boss 7,

 • 18 Contestants Enter 'Big Boss' House

  18 contestants enter big boss house

  The seventh edition of the 'Big Boss' started from Sunday and 18 contestants have entered the house on Sunday night.

  This time, it was announced earlier that there won't be any commoners and only celebrities will be contesting in the show. Likewise, well known journalist Ravi Belagere, Kuri Prathap, Priyanka, Vasuki Vaibhav, Chandana, Deepika Das, Gurulinga Swamy, Jaijagadish, Bhumi Shhetty, Kishan, 'Duniya' Rashmi, Chandan Acharya, Sujatha Akshay, Raju Talikote, Chaitra Vasudevan, Chaitra Kottur, Shine Shetty and Harish Raj entered the house.

  This time there were no surprise entries and almost all of the contestants names were leaked by the media prior to the launch of the programme. The actual programme will start from Monday and will be aired in Colors Kannada at 9 PM every night.

 • Ravi Belagere To Be in 'Big Boss' For Only A Week

  ravi belegere to be in big boss for only a week

  Well known Journalist and editor of 'Hi Bangalore' weekly Ravi Belagere, who is a contestant in the seventh edition of the 'Big Boss' will be staying in the house for only a week and will be returning back by Sunday.

  Ravi Belagere had gone to the 'Big Boss' house along with 18 other contestants on Saturday. However, he came back just in a day because of poor health. After proper treatment, Ravi Belagere left for the house once again and has joined the contestants. Ravi Belagere is in the house currently and it has been announced that he will be staying in the house for just a week and will be returning back on Saturday.

  Meanwhile, he is one of the contestants who has been nominated for elimination.

 • ಜೈಜಗದೀಶ್ ಹೇಳಿದ ಮೊದಲ ಪತ್ನಿ, ಮಗಳ ಕಣ್ಣೀರ ಕಥೆ

  jai jagadeesh breaks down during big boss 7

  ಜೈಜಗದೀಶ್ ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್. ಆಕೆಯೂ ನಟಿ, ನಿರ್ದೇಶಕಿ, ನಿರ್ಮಾಪಕಿ. ಮಕ್ಕಳು ವೈಭವಿ, ವೈನಿಧಿ ಹಾಗೂ ವೈಸಿರಿ. ಆದರೆ ಬಹುತೇಕರಿಗೆ ಗೊತ್ತಿಲ್ಲದೇ ಇದ್ದ ತಮ್ಮ ಮೊದಲ ಪತ್ನಿ ಹಾಗೂ ಮಗಳ ಕಥೆಯನ್ನು ಸ್ವತಃ ಜೈಜಗದೀಶ್ ಅವರೇ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಜೈಗದೀಶ್ ತಮ್ಮ ಮೊದಲ ಮದುವೆ, ಮಗಳು, ಆಕೆ ಅನುಭವಿಸಿದ ನೋವು ಎಲ್ಲವನ್ನೂ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

  ಜೈಗದೀಶ್ ಅವರಿಗೆ ರೂಪಾ ಎಂಬುವವರ ಜೊತೆ ಮೊದಲು ಮದುವೆಯಾಗಿತ್ತು. ಅರ್ಪಿತಾ ಎಂಬ ಮಗಳೂ ಹುಟ್ಟಿದ್ದಳು. ಆದರೆ, ಸಣ್ಣ ವಿಷಯಕ್ಕೆ ವೈಮನಸ್ಯ ಬಂದು, ಹೆಂಡತಿ, ಮಗಳಿಂದ  ದೂರವಾದರು ಜೈಜಗದೀಶ್. ವಿಚ್ಛೇದನದ ನಂತರ ಮಗಳು ಮತ್ತು ಪತ್ನಿ ಬೇರೆಯೇ ಇದ್ದರು.

  ಅದಾದ ಮೇಲೆ ಮಗಳು ಅರ್ಪಿತಾ ಮದುವೆಯೂ ಆಯಿತು. ಆದರೆ, ಎಷ್ಟು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆಕೆಯ ಪತಿಗೆ ಮಕ್ಕಳು ಬೇಕಿರಲಿಲ್ಲ. ಅರ್ಪಿತಾಳ ಪ್ರೀತಿಯೂ ಬೇಕಿರಲಿಲ್ಲ. ಒಟ್ಟಿನಲ್ಲಿ ನನ್ನ ಮಗಳಿಗೆ ತಂದೆಯಾಗಿ ನಾನೂ ಪ್ರೀತಿ ಕೊಡಲಿಲ್ಲ. ಗಂಡನ ಪ್ರೀತಿಯೂ ಸಿಗಲಿಲ್ಲ. ಕ್ಷಮಿಸಿಬಿಡು ಮಗಳೇ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಜೈಜಗದೀಶ್.

 • ಬಿಗ್ ಬಾಸ್ ಮನೆಗೆ ಹೋದ ಎಲ್ಲ 18 ಸ್ಪರ್ಧಿಗಳ ಸ್ಪೆಷಾಲಿಟಿ ಏನು..?

  specialities of big boss 7 contestants

  ಬಿಗ್ ಬಾಸ್ ಮನೆಗೆ ಹೋಗೋರು ಯಾರು..? ಇದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಯಂಕರವಾಗಿ ಚರ್ಚೆಯಾಗುತ್ತಲೇ ಇತ್ತು. ಈಗ ಬಿಗ್ ಬಾಸ್ ಶುರುವಾಗಿದೆ. ಸಸ್ಪೆನ್ಸ್‍ಗೆ ತೆರೆ ಬಿದ್ದಿದೆ. 18 ಸ್ಪರ್ಧಿಗಳನ್ನು ದೊಡ್ಮನೆಗೆ ಕರೆಸಿಕೊಂಡಿದ್ದಾರೆ ಕಿಚ್ಚ ಸುದೀಪ್. ಆ 17 ಸ್ಪರ್ಧಿಗಳ ಸ್ಪೆಷಾಲಿಟಿ

  ಏನು.. ಇಲ್ಲಿದೆ ನೋಡಿ ಡೀಟೈಲ್ಸ್.

  1. ಕುರಿ ಪ್ರತಾಪ್ : ಕಿರುತೆರೆ ಮತ್ತು ಸಿನಿಮಾ. ಎರಡರಲ್ಲೂ ಗುರುತಿಸಿಕೊಂಡಿರುವ ಕಾಮಿಡಿ ನಟ. ಕಿರುತೆರೆಯ ಮಜಾ ಟಾಕೀಸ್, ಕುರಿ ಪ್ರತಾಪ್‍ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು

  2. ಚಂದ್ರಿಕಾ : ಅಗ್ನಿಸಾಕ್ಷಿ ಧಾರಾವಾಹಿಯ ವಿಲನ್ ಚಂದ್ರಿಕಾ ಪಾತ್ರದ ಖ್ಯಾತಿ.

  3.  ರವಿ ಬೆಳಗೆರೆ : ಪತ್ರಕರ್ತ, ಕಾದಂಬರಿಕಾರ, ಕಿರುತೆರೆ, ರೇಡಿಯೋ, ಸಿನಿಮಾ ಎಲ್ಲೆಡೆಯಲ್ಲೂ ಗುರುತಿಸಿಕೊಂಡಿರುವ ಸ್ಟಾರ್. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಇತ್ತೀಚೆಗೆ ಯೂ ಟ್ಯೂಬ್‍ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ಹಾಯ್ ಬೆಂಗಳೂರ್ ರವಿ ಬೆಳಗೆರೆ

  4. ಚಂದನ : ರಾಜಾ ರಾಣಿ ಧಾರಾವಾಹಿಯ ಚುಕ್ಕಿ ಪಾತ್ರದ ಖ್ಯಾತಿ

  5. ವಾಸುಕಿ ವೈಭವ್ : ಸಂಗೀತ ನಿರ್ದೇಶಕ. ರಾಮಾ ರಾಮಾ ರೇ, ಸರ್ಕಾರಿ ಹಿರಿಯ ಪ್ರಾ.ಪ್ರಾ. ಶಾಲೆ, ಒಂದಲ್ಲ ಎರಡಲ್ಲ ಚಿತ್ರಗಳ ಖ್ಯಾತಿ

  6. ದೀಪಿಕಾ ದಾಸ್ : ನಾಗಿಣಿ ಧಾರಾವಾಹಿಯ ನಾಗಕನ್ಯೆ ಖ್ಯಾತಿ

  7. ಜೈ ಜಗದೀಶ್ : ಸಿನಿಮಾ ನಟ, ನಿರ್ಮಾಪಕ, ನಿರ್ದೇಶಕ

  8. ಗುರುಲಿಂಗ ಸ್ವಾಮೀಜಿ : ಹಾವೇರಿಯ ಅಗಡಿ ಗ್ರಾಮದ ಅಕ್ಕಿ ಮಠದ ಸ್ವಾಮೀಜಿ. ಶೋನಲ್ಲಿ ಬರುವ ಸಂಪೂರ್ಣ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ

  9. ಭೂಮಿ ಶೆಟ್ಟಿ : ಕಿನ್ನರಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ. ಕುಂದಾಪುರದವರು

  10. ಕಿಶನ್ : ಸ್ಟೇಜ್ ಶೋಗಳಲ್ಲಿ ಡ್ಯಾನ್ಸರ್. ಚಿಕ್ಕಮಗಳೂರಿನವರು.

  11. ದುನಿಯಾ ರಶ್ಮಿ : ದುನಿಯಾ ಚಿತ್ರದಿಂದಲೇ ಕನ್ನಡಿಗರಿಗೆ ಪರಿಚಿತರಾದ ನಾಯಕಿ.

  12. ಚಂದನ್ : ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಾಯಕ. ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರಿಗೆ ಪರಿಚಯವಾದ ಕಲಾವಿದ

  13. ಸುಜಾತ : ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ಪಾತ್ರ ಸಿತಾರಾ ಖ್ಯಾತಿ

  14. ರಾಜು ತಾಳಿಕೋಟೆ : ಉ. ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ, ಸಿನಿಮಾ ನಟ.

  15. ಚೈತ್ರಾ ವಾಸುದೇವನ್ : ಕಿರುತೆರೆ ನಿರೂಪಕಿ

  16. ಚೈತ್ರಾ ಕೊಟ್ಟೂರ್ : ನಟಿ, ಸೂಜಿದಾರ ಚಿತ್ರದಲ್ಲಿ 2ನೇ ನಾಯಕಿಯಾಗಿ ಗಮನ ಸೆಳೆದಿದ್ದರು. ರಂಗಭೂಮಿ ಕಲಾವಿದೆ

  17. ಶೈನ್ ಶೆಟ್ಟಿ : ಕಿರುತೆರೆ ಮತ್ತು ಸಿನಿಮಾ ನಟ

  18. ಹರೀಶ್ ರಾಜ್ : ಲಿಮ್ಕಾ ದಾಖಲೆ ಸೃಷ್ಟಿಸಿರುವ ಕನ್ನಡ ನಟ. 

   

 • ಬಿಗ್‍ಬಾಸ್ 7 ಬದಲಾವಣೆ ಗೊತ್ತಾಯ್ತಾ..?

  big boss 7 will have celeb format only

  ಬಿಗ್‍ಬಾಸ್ ರಿಯಾಲಿಟಿ ಶೋ 7ನೇ ಸೀಸನ್‍ಗೆ ಕಾಲಿಟ್ಟಿದೆ. ಒನ್ಸ್ ಎಗೇಯ್ನ್ ಸುದೀಪ್ ಅವರೇ ನಿರೂಪಕ. ಅದರಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. ಉಳಿದಂತೆ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

  ಈ ಬಾರಿ ಬಿಗ್‍ಬಾಸ್ ಕಲರ್ಸ್ ಸೂಪರ್‍ನಲ್ಲಿ ಅಲ್ಲ, ಕಲರ್ಸ್‍ನಲ್ಲಿಯೇ ಪ್ರಸಾರವಾಗಲಿದೆ.

  ಕಳೆದ ಬಾರಿಯಂತೆ ಈ ಬಾರಿ ಕಾಮನ್ ಮ್ಯಾನ್ ಇರಲ್ಲ. ಜನಸಾಮಾನ್ಯರ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರದೇ ಇರುವ ಹಿನ್ನೆಲೆಯಲ್ಲಿ ಈ ಬದಲಾವಣೆ. ಅಂದರೆ 15ಕ್ಕೆ 15 ಜನರೂ ಸೆಲಬ್ರಿಟಿಗಳೇ ಆಗಿರುತ್ತಾರೆ.

  ಸೆ.11ರಂದು ಬಿಗ್‍ಬಾಸ್ ಪ್ರೋಮೋ ಶೂಟಿಂಗ್ ನಡೆಯಲಿದೆ. ಅಂದರೆ ಪೈಲ್ವಾನ್ ರಿಲೀಸ್ ಆಗುವ ಮುನ್ನಾ ದಿನ. ಸೆ.13ರಿಂದ ಪ್ರೋಮೋ ರಿಲೀಸ್ ಆಗಲಿದೆ. ಆಗಸ್ಟ್ 20ರಿಂದ ಬಿಗ್‍ಬಾಸ್ ಆರಂಭ.

 • ಬೆಳಗೆರೆ ದೊಡ್ಮನೆ ವಾಸ ಒಂದೇ ವಾರ..!

  ravi belegere o exit from big boss this weekend

  ಖ್ಯಾತ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಇರೋದು ಒಂದೇ ಒಂದು ವಾರ. ಅದನ್ನು ಬಿಗ್ ಬಾಸ್ ಅಧಿಕೃತವಾಗಿ ಪ್ರಕಟಿಸಿದೆ. ಬಿಗ್ ಮನೆ ಸೇರಿದ ಮೊದಲ ದಿನವೇ ಶುಗರ್ ಜಾಸ್ತಿಯಾಗಿದೆ ಎಂದು ಆಸ್ಪತ್ರೆ ಸೇರಿದ್ದ ರವಿ ಬೆಳಗೆರೆ, ಸಂಜೆ ವಾಪಸ್ ಆದ್ರು. ಮನೆಯವರೆಲ್ಲರ ಜೊತೆ ಖುಷಿ ಖುಷಿಯಾಗಿಯೇ ಇದ್ರು. ಈ ನಡುವೆಯೇ ಬಿಗ್ ಬಾಸ್ ಈ ಘೋಷಣೆ ಮೊಳಗಿಸಿದೆ.

  ರವಿ ಬೆಳಗೆರೆ ಈ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರನಡೆಯಲಿದ್ದಾರೆ. ವೈದ್ಯರ ಸೂಚನೆಯಂತೆ ಅವರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿರೋದು ಸಾಧ್ಯವಿಲ್ಲ. ಹೀಗಾಗಿ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಒಂದು ವಾರದ ಅತಿಥಿ ಅಷ್ಟೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery