` jayanna combines, - chitraloka.com | Kannada Movie News, Reviews | Image

jayanna combines,

 • Haripriya Signs Jayanna Combines Next

  haripriya signs jayanna cmbines next

  Sandalwood's current top actress Hariprriya has signed her next, which is being produced by the popular Jayanna-Bhoghendra of Jayanna Combines. The actress who is back from a month's long vacation after completing Ellidde Ilitanaka and Kannad Gottilla, is paired opposite Gurunandan of First Rank Raju fame in her latest venture.

  The film which is being directed by Vijay Kiran, who recently did 'Singa' starring Chiranjeevi Sarja and Aditi Prabhudeva. This one which is yet to be titled is the remake of Tamil hit film - Kappal.

  Excited over her association with Jayanna Combines, the actress has shared that she is happy to work again with such visionary filmmakers. It was Jayanna Combines who had distributed 'Bell Bottom' which plwebt onto become a blockbuster. Even Bullet Basya starring Sharan and Hariprriya was produced by Jayanna Combines.

  The shooting of the film is currently underway, as the team is planning for an early 2020 release.

 • ಜಯಣ್ಣ-ಭೋಗೇಂದ್ರ ಜೋಡಿಯ ದಿನಕರ್ ಸಿನಿಮಾ ಶುರು

  ಜಯಣ್ಣ-ಭೋಗೇಂದ್ರ ಜೋಡಿಯ ದಿನಕರ್ ಸಿನಿಮಾ ಶುರು

  ಡೈರೆಕ್ಟರ್ : ದಿನಕರ್ ತೂಗುದೀಪ.

  ಹೀರೋ : ಕಿಸ್ ಖ್ಯಾತಿಯ ವಿರಾಟ್

  ನಿರ್ಮಾಪಕರು : ಜಯಣ್ಣ ಮತ್ತು ಭೋಗೇಂದ್ರ

  ಬ್ಯಾನರ್ : ಜಯಣ್ಣ ಫಿಲಮ್ಸ್‍ನ 23ನೇ ಸಿನಿಮಾ

  ದಿನಕರ್ ತೂಗುದೀಪ್ ಸುದೀರ್ಘ ಗ್ಯಾಪ್ ನಂತರ ಮತ್ತೊಮ್ಮೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ವಿರಾಟ್ ಹೀರೋ ಆಗಿರುವ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಮೀನಾ ತೂಗುದೀಪ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.

  ಪ್ಲಾನ್ ಪ್ರಕಾರ ದಿನಕರ್, ಜಯಣ್ಣ ಅವರಿಗಾಗಿಯೇ ಪುನೀತ್ ಸಿನಿಮಾ ನಿರ್ದೇಶಿಸಬೇಕಿತ್ತು. ಪುನೀತ್ ಅಕಾಲಿಕ ನಿಧನದ ನಂತರ ದಿನಕರ್ ಮತ್ತೊಂದು ಕಥೆ ಸಿದ್ಧಪಡಿಸಿದ್ದು, ಆ ಚಿತ್ರಕ್ಕೆ ವಿರಾಟ್ ಆಯ್ಕೆಯಾಗಿದ್ಧಾರೆ.

  ಕಿಸ್ ಸೂಪರ್ ಹಿಟ್ ಆದ ನಂತರ ವಿರಾಟ್, ಎ.ಪಿ.ಅರ್ಜುನ್ ಅವರೊಂದಿಗೆ ಅದ್ಧೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ಸುದೀರ್ಘ ಗ್ಯಾಪ್ ನಂತರ ದಿನಕರ್ ಡೈರೆಕ್ಟರ್ ಆಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆಯೂ ಹೆಚ್ಚಿದೆ.

 • ದಿನಕರ್-ಜಯಣ್ಣ ರಾಯಲ್ ಸಿನಿಮಾ : ವಿರಾಟ್ ಹೀರೋ

  ದಿನಕರ್-ಜಯಣ್ಣ ರಾಯಲ್ ಸಿನಿಮಾ : ವಿರಾಟ್ ಹೀರೋ

  ಎಲ್ಲವೂ ಸರಿಯಾಗಿ ಆಗಿದ್ದರೆ ಇಷ್ಟೊತ್ತಿಗೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ಅಭಿನಯದ ಚಿತ್ರ ತೆರೆಗೆ ಬಂದು ಅದ್ಧೂರಿ ಸಂಭ್ರಮದಲ್ಲಿರಬೇಕಿತ್ತು. ಆಗಲಿಲ್ಲ. ಅದಾದ ಮೇಲೆ ಜಯಣ್ಣ-ಭೋಗೇಂದ್ರ ಸ್ವಲ್ಪ ದಿನ ಮೌನಕ್ಕೆ ಶರಣಾಗಿದ್ದರು. ಪ್ರಾಜೆಕ್ಟ್ ಕೈಬಿಟ್ಟಿರಲಿಲ್ಲ. ಕಥೆ ಬೇರೆಯದನ್ನು ಆಯ್ಕೆ ಮಾಡಿ ದಿನಕರ್ ತೂಗುದೀಪ ನಿರ್ದೇಶನದಲ್ಲೇ ಹೊಸ ಚಿತ್ರ ಘೋಷಿಸಿದ್ದರು. ವಿರಾಟ್ ಹೀರೋ ಆಗಿ ಆಯ್ಕೆಯಾಗಿದ್ದರು. ಈಗ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಚಿತ್ರಕ್ಕೆ ರಾಯಲ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದ ಟೈಟಲ್ ಲಾಂಚ್ ಮಾಡಿದ್ದು ಅಶ್ವಿನಿ ಪುನೀತ್ ರಾಜಕುಮಾರ್.

  ಜಯಣ್ಣ-ಭೋಗೇಂದ್ರ ಬ್ಯಾನರ್‍ನ ಚಿತ್ರದ ಟೈಟಲ್ ಲಾಂಚ್‍ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು ಹೊಂಬಾಳೆಯ ವಿಜಯ್ ಕಿರಗಂದೂರು. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ಕಿಸ್ ಖ್ಯಾತಿಯ ವಿರಾಟ್‍ಗೆ ದೊಡ್ಡ ಅವಕಾಶವಂತೂ ಇದೆ. ಹೀರೋಯಿನ್ ಆಗಿ ಸಂಜನಾ ಆನಂದ್ ಆಯ್ಕೆಯಾಗಿದ್ದು ಶೀಘ್ರದಲ್ಲೇ ಚಿತ್ರೀಕರಣವೂ ಶುರುವಾಗಲಿದೆ. ಅಂದಹಾಗೆ ಇದು ಜಯಣ್ಣ-ಭೋಗೇಂದ್ರ ನಿರ್ಮಾಣದ 23ನೇ ಸಿನಿಮಾ.

 • ಮತ್ತೆ ಟಗರು ಜೋಡಿ.. ಸೂರಿ..ಜಯಣ್ಣ ಒಂದಾದ್ರು ನೋಡಿ..

  ಮತ್ತೆ ಟಗರು ಜೋಡಿ.. ಸೂರಿ..ಜಯಣ್ಣ ಒಂದಾದ್ರು ನೋಡಿ..

  ಟಗರು. ಶಿವಣ್ಣ ಕೆರಿಯರಿನಲ್ಲಿಯೇ ವಿಭಿನ್ನವಾದ ಸಿನಿಮಾಗಳಲ್ಲೊಂದು. ಪೊಲೀಸ್ ಪಾತ್ರಕ್ಕೆ ಹೊಸದೇ ಮೆರುಗು ಕೊಟ್ಟ ಟಗರು, ಅದೇ ಚಿತ್ರದಿಂದ ಸ್ಟಾರ್ ಆದ  ಡಾಲಿ ಧನಂಜಯ, ಚಿಟ್ಟೆ ವಸಿಷ್ಠ ಸಿಂಹ, ಟಗರು ಬಂತು ಟಗರು ಹಾಡಿನ ಮೂಲಕ ಚರಣ್`ರಾಜ್, ಟಗರುಪುಟ್ಟಿ ಎಂದೇ ಖ್ಯಾತರಾದ ಕೆಂಡಸಂಪಿಗೆ ಮಾನ್ವಿತಾ.. ಹೀಗೆ ಚಿತ್ರದ ಸ್ಟಾರ್`ಗಳ ಪಟ್ಟಿ ತುಂಬಾ ದೊಡ್ಡದು. ಇದೀಗ ದುನಿಯಾ ಸೂರಿ ಮತ್ತು ಜಯಣ್ಣ ಮತ್ತೆ ಒಂದಾಗಿದ್ಧಾರೆ.

  ಬಹಳ ದಿನಗಳ ನಂತರ ನಿರ್ದೇಶಕ ಸೂರಿ ಮತ್ತು ನಿರ್ಮಾಪಕರಾದ ಜಯಣ್ಣ ಹಾಗೂ ಬೋಗೇಂದ್ರ ಹೊಸ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಕಿಸ್ ಸಿನಿಮಾ ಖ್ಯಾತಿಯ ನಟ ವಿರಾಟ್ ನಟನೆಯ ಚಿತ್ರಕ್ಕಾಗಿ ಟಗರು ನಿರ್ದೇಶಕ ಸೂರಿ ಮತ್ತು ಜಯಣ್ಣ ಫಿಲಂಸ್ ಕೈಜೋಡಿಸಲಿದ್ದಾರೆ.

  ಇದೇ ಸಂಸ್ಥೆಯಲ್ಲಿ ದಿನಕರ್ ತೂಗುದೀಪ ನಿರ್ದೇಶನದ ಚಿತ್ರವೊಂದರಲ್ಲೂ ನಟಿಸುತ್ತಿರುವ ವಿರಾಟ್, ಅದು ಮುಗಿದ ನಂತರ ದುನಿಯಾ ಸೂರಿ ಚಿತ್ರದಲ್ಲಿ ನಟಿಸಲಿದ್ದಾರೆ.

  ತಮ್ಮ ಚೊಚ್ಚಲ ನಿರ್ದೇಶನದ ದುನಿಯಾ ಚಿತ್ರದಿಂದಲೂ ನಿರ್ಮಾಪಕ ಜಯಣ್ಣ ಅವರೊಂದಿಗೆ ಸುದೀರ್ಘ ಒಡನಾಟವಿದೆ. ವಾಸ್ತವವಾಗಿ, ಜಯಣ್ಣ ಅವರ ಬೆಂಬಲವಿಲ್ಲದೆ ದುನಿಯಾ ಚಿತ್ರಮಂದಿರಗಳಿಗೆ ಬರುತ್ತಿರಲಿಲ್ಲ. ಅವರು ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ತರಲು ನನಗೆ ಸಹಾಯ ಮಾಡಿದರು. ಅಂದಿನಿಂದ, ನಾವು ಸ್ನೇಹ ಸಂಬಂಧ ಹೊಂದಿದ್ದೇವೆ. ಅವರು ನನ್ನ ಚಿತ್ರಗಳಿಗೆ ವಿತರಕರಾಗಿದ್ದಾರೆ ಮತ್ತು ನನ್ನ ಯೋಜನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎನ್ನುತ್ತಾರೆ.ಬ್ಯಾಡ್ ಮ್ಯಾನರ್ಸ್ ನಿರ್ಮಾಪಕ ಸುಧೀರ್ ಅವರ ಉತ್ತಮ ಸ್ನೇಹಿತರಾಗಿರುವ ಜಯಣ್ಣ ಅವರು ಆ ಚಿತ್ರದ ಥಿಯೇಟರ್ ರಿಲೀಸ್ ಅನ್ನು ಸಹ ನೋಡಿಕೊಳ್ಳುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಬ್ಯಾನರ್ ನನ್ನ ಹೋಮ್ ಬ್ಯಾನರ್`ನಂತೆಯೇ ಎಂದು ಪ್ರೀತಿಯಿಂದ ಹೇಳುತ್ತಾರೆ ಸೂರಿ.

  ಸುರೇಂದ್ರನಾಥ್ ಮತ್ತು ಅಮ್ರಿ ಈಗಾಗಲೇ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀರೋ ವಿರಾಟ್ ಈಗಾಗಲೇ ಜಾಕಿ ಜಾಕಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರಂತೆ. ನನಗೆ ಅವರು ನೆಚ್ಚಿನ ನಿರ್ದೇಶಕ. ಅವರ ಜೊತೆ ಸಿನಿಮಾ ಮಾಡುವ ಅವಕಾಶ ಮಾಡಿಕೊಟ್ಟಿರುವ ಜಯಣ್ಣ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎನ್ನುವುದು ಹೀರೋ ವಿರಾಟ್ ಮಾತು.