ಹಡಗು ಹಿಡಿದು ಪಡೆಯೆ ಬರಲಿ..
ಹೊಸಕಿ ಬಿಡುವೆ ಕಾಲಡಿ.. ಡಿಡಿಡಿ..
ಗುಡುಗು ಸಿಡಿಲು ಜೊತೆಗೆ ಬರಲಿ..
ಕೆಡವಿ ಹೊಡೆಯೋ ಗಾರುಡಿ.. ಡಿಡಿಡಿ..
ಮೀಸೆ ತಿರುವದೆ ಪೊಗರು ಅದುಮಿಡಿ..
ಅಹಂಕಾರ ಅನುವುದ ಮೊದಲು ಹೊರಗಿಡಿ..
ಕಾಲು ಕೆರೆದರೆ ಎಲುಬು ಪುಡಿ ಪುಡಿ..
ಚಾರ್ಜು ಮಾಡೋ ಪವರಿದೆ.. ಇವನು ಎವರೆಡಿ..
ಬಾ ಬಾ ಬಾ ನಾನ್ ರೆಡಿ...
ಹಾಡಿನ ತುಂಬಾ ಡಿ.. ಡಿ..ಡಿ.. ಹಾಡು ರಿಲೀಸ್ ಮಾಡೋಕೂ ಮುನ್ನ ತರುಣ್ ಸುಧೀರ್ ಒಂದು ಟ್ವೀಟ್ ಮಾಡಿದ್ದರು. ಡಿ ಅನ್ನೋದು ಹಲವರಿಗೆ ಅಕ್ಷರವೇ ಇರಬಹುದು ಆದರೆ ಡಿ ಬಾಸ್ ಅಭಿಮಾನಿಗಳಿಗೆ ಅದೊಂದು ಎಮೋಷನ್ ಎಂದಿದ್ದರು. ಅದಕ್ಕೆ ತಕ್ಕಂತೆ ಡಿ ಬಾಸ್‍ಗೆ ಹಬ್ಬದೂಟ ಕೊಟ್ಟಿದ್ದಾರೆ ತರುಣ್ ಸುಧೀರ್.
ರಾಬರ್ಟ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ಇದು. 3 ನಿಮಿಷದ ಹಾಡಿಗೆ ಸಾಹಿತ್ಯ ಬರೆದಿರೋದು ನಾಗೇಂದ್ರ ಪ್ರಸಾದ್. ಪ್ರತಿ ಸಾಲೂ ಕೊನೆಯಾಗೋದು ಡಿ ಯಿಂದ ಅನ್ನೋದ್ರಲ್ಲೇ ನಾಗೇಂದ್ರ ಪ್ರಸಾದ್ ಟಚ್ ಇದೆ. ವ್ಯಾಸರಾಜ್ ಘೋಸಲೆ ಹಾಡಿರುವ ಹಾಡಿಗೆ ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.
ವ್ಯಾಸರಾಯ ಜೊತೆಗೆ ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಾಲ್ಗುಣ ಮತ್ತು ನಿಖಿಲ್ ಪಾರ್ಥ ಸಾರಥಿ ಕೂಡಾ ಹಾಡಿದ್ದಾರೆ. ದರ್ಶನ್ ಸ್ಪೆಷಲ್ ಲುಕ್ಕುಗಳ ಸ್ಟಿಲ್‍ಗಳು ವ್ಹಾವ್ ಎನ್ನುವಂತಿದೆ. ಉಮಾಪತಿ ನಿರ್ಮಾಣದ ರಾಬರ್ಟ್ ಏಪ್ರಿಲ್ 9ರಂದು ತೆರೆ ಮೇಲೆ ರಾರಾಜಿಸಲಿದೆ.