` pushkar mallikarjunaiah - chitraloka.com | Kannada Movie News, Reviews | Image

pushkar mallikarjunaiah

 • ಮಂಕಿ ಟೈಗರ್ ಚಿತ್ರಕ್ಕೆ ಪುಷ್ಕರ್ ಪವರ್

  popcorn monkey tiger gets pushkar's power

  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆಗೋಕೆ ರೆಡಿ. ಟಗರು ನಂತರ ಸೂರಿ ನಿರ್ದೇಶಿಸಿರುವ ಚಿತ್ರವಾದ್ದರಿಂದ ಕುತೂಹಲ ಬೆಟ್ಟದಷ್ಟಿದೆ. ಜೊತೆಗೆ ಡಾಲಿ ಧನಂಜಯ್ ಅವರ ಭಯಂಕರ ಲುಕ್ಕೂ ಕಿಕ್ಕು ಕೊಟ್ಟಿದೆ. ಹೀಗಿರುವಾಗಲೇ ಚಿತ್ರಕ್ಕೆ ಇನ್ನೊಂದು ಭರ್ಜರಿ ಪವರ್ ಸಿಕ್ಕಿದೆ.

  ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಸ್ಟಾರ್ ಪಟ್ಟಕ್ಕೇರಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ. ಶಿವರಾತ್ರಿಗೆ ಮಂಕಿ ಟೈಗರ್ ದರ್ಶನವಾಗಲಿದೆ. ಥಿಯೇಟರುಗಳಲ್ಲಿ, ಟಿವಿಗಳಲ್ಲಿ ಹಾಗೂ ಡಿಜಿಟಲ್ ಮಾರ್ಕೆಟ್ಟಿನಲ್ಲೂ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇದೆ.

  ಬಿಡುಗಡೆಗೆ ಮುನ್ನವೇ ಚಿತ್ರ 10 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆಯಂತೆ. ಡಾಲಿ ಧನಂಜಯ್ ಜೊತೆಗೆ ನಿವೇದಿತಾ, ಅಮೃತಾ ನಟಿಸಿದ್ದಾರೆ. ಅಂದಹಾಗೆ ಟಗರು ಫೆ.23ರಂದು ರಿಲೀಸ್ ಆಗಿತ್ತು. ಮಂಕಿ ಟೈಗರ್ ಫೆಬ್ರವರಿ 23ಕ್ಕೆ ರಿಲೀಸ್ ಆಗುತ್ತಿದೆ.

   

 • ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಅನುಷಾ ರಂಗನಾಥ್ ಜೋಡಿ

  anusha ranganath image

  ವಿನಯ್ ರಾಜ್‍ಕುಮಾರ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರಿನ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿದೆ ತಾನೇ. ಆ ಚಿತ್ರಕ್ಕಾಗಿ ವಿನಯ್ ಪ್ರತಿದಿನ ಬಾಕ್ಸಿಂಗ್ ತರಬೇತಿ ಮಾಡುತ್ತಿದ್ದಾರೆ. ಕರಮ್ ಚಾವ್ಲಾ ನಿರ್ದೇಶನದ ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಇತ್ತಾದರೂ, ಆಯ್ಕೆ ಮುಗಿದಿರಲಿಲ್ಲ. ನಟಿ ಅನುಷಾ ರಂಗನಾಥ್ ಈಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  ಚಿತ್ರದಲ್ಲಿ ನನ್ನದು ಪ್ರಬುದ್ಧ ಹುಡುಗಿಯ ಪಾತ್ರ. ಹೀರೋ ಮತ್ತು ನಾನು ಇಬ್ಬರೂ ಅನಾಥರು. ಒಬ್ಬರಿಗೊಬ್ಬರು ಆಸರೆಯಾಗಿರುತ್ತೇವೆ. ಗಟ್ಟಿಯಾದ ಪಾತ್ರ ಎಂದಿದ್ದಾರೆ ಅನುಷಾ. 

  ಅಡಿಷನ್ ಮೂಲಕವೇ ಆಯ್ಕೆಯಾಗಿರುವ ಅನುಷಾ ರಂಗನಾಥ್, ಚಿತ್ರದ ರಿಹರ್ಸಲ್‍ನಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ರಿಹರ್ಸಲ್ ಕೂಡಾ ಶುರುವಾಗಿದೆ.

   

Shivarjun Movie Gallery

Popcorn Monkey Tiger Movie Gallery