ಎಂಟಿಬಿ ನಾಗರಾಜ್, ಅಧಿಕೃತವಾಗಿಯೇ 1000 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಶ್ರೀಮಂತ ಶಾಸಕ. ಇತ್ತೀಚೆಗೆ ಶಾಸಕ ಸ್ಥಾನದಿಂದ ಅನರ್ಹತೆಗೊಳಗಾಗಿರುವ ಎಂಟಿಬಿ ನಾಗರಾಜ್, ಚಿತ್ರರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ. ನಟ, ನಿರ್ದೇಶಕರಾಗಿ ಅಲ್ಲ.. ನಿರ್ಮಾಪಕರಾಗಿ.
ಎಂಟಿಬಿ ನಾಗರಾಜ್ ಅವರನ್ನು ಚಿತ್ರರಂಗಕ್ಕೆ ಕರೆತರುತ್ತಿರುವುದು ಬಿ.ಸಿ.ಪಾಟೀಲ್. ನಿಷ್ಕರ್ಷ ಚಿತ್ರವನ್ನು ರೀ-ರಿಲೀಸ್ ಮಾಡುತ್ತಿರುವ ಬಿ.ಸಿ.ಪಾಟೀಲ್, ಎಂಟಿಬಿ ನಾಗರಾಜ್ ಚಿತ್ರರಂಗಕ್ಕೆ ಬರಲು ಪ್ರೋತ್ಸಾಹಿಸಿದ್ದಾರೆ. ಕಥೆ ಕೇಳುತ್ತಿದ್ದಾರೆ, ನಿದೇರ್ಶಕರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ಎಂಟಿಬಿ ನಾಗರಾಜ್, ಉದ್ಯಮಿ. ರಾಜಕಾರಣಿ. ಎಂಟಿಬಿ ಬ್ರಾಂಡ್ ಇಟ್ಟಿಗೆ ನೆನಪಿದೆ ತಾನೇ.. ಅಲ್ಲಿಂದ ಶುರುವಾದ ನಾಗರಾಜ್ ಅವರ ಬ್ಯುಸಿನೆಸ್ ಲೈಫ್, ಹಲವು ಮಗ್ಗುಲು ಬದಲಿಸಿ ರಾಜಕಾರಣಿಯನ್ನಾಗಿಸಿತ್ತು. ಇತ್ತೀಚೆಗಷ್ಟೇ ರೋಲ್ಸ್ ರಾಯ್ ಕಾರು ಖರೀದಿಸಿ ಸುದ್ದಿ ಮಾಡಿದ್ದ ಎಂಟಿಬಿ ನಾಗರಾಜ್, ಈಗ ಸಿನಿಮಾ ನಿರ್ಮಾಪಕರೂ ಆಗುತ್ತಿದ್ದಾರೆ.