` umapathy gowda - chitraloka.com | Kannada Movie News, Reviews | Image

umapathy gowda

 • KFCC Felicitates National Award Winners

  kfcc honoring national award winners image

  The Karnataka Film Chamber of Commerce on Friday evening felicitated the National award winners. The National film awards for the year 2018 was announced recently and Kannada film industry has got a record 13 awards in various categories. This is the first time, in the history of National film awards that any film industry is getting so many awards for its contribution. The award function will be held soon. Meanwhile, the Karnataka Film Chamber of Commerce had organised a small event and felicitated the National award winners.

  Rishab Shetty, Mansore, Child artiste Rohith, Umapathy Gowda, Udayaravi Hegade and others were present at the occasion. President Jairaj, past presidents Sa Ra Govindu, S A Chinnegowda and others were also present at the occasion.

 • Lyrical Video of Jai Sri Ram From Roberrt 

  lyricla video of jai sri ram from roberrt

  Another treat for the die hard fans of Challenging Star Darshan is in the offing as the Roberrt film team is releasing the lyrical video of the song 'Jai Sri Ram' from the film on Anand Audio's official YouTube Channel, starting from 12 pm today.

  Dr. V Nagendra Prasad has penned the song to which magical composer Arjun Janya has composed it and is sung by Divya Kumar. It is learnt that the song which praises Lord Ram, is a significant sequence in the film for which the song exemplifies it in a musical note.

  Directed by Tharun Kishore Sudhir, the film is produced by Umapathy Srinivas Gowda under the banner Umapathy Films, which stars Darshan, Vinod Prabhakar, Asha Bhat, Jagapathi Babu, Ravikishan and others.

   

 • ಉಮಾಪತಿ ಪ್ರೊಡ್ಯೂಸರ್ : ಚಿಕ್ಕಣ್ಣ ಹೀರೋ : ಮಾಸ್ಟರ್ ಪೀಸ್ ಡೈರೆಕ್ಟರ್

  chikkanna's next is with manju mandavya

  ಕನ್ನಡ ಚಿತ್ರರಂಗದ ಕಾಮಿಡಿ ಸ್ಟಾರ್ ಚಿಕ್ಕಣ್ಣ. ಈಗಾಗಲೇ ಕೆಲವು ಚಿತ್ರಗಳಲ್ಲಿ ಲೀಡ್ ರೋಲ್‍ಗಳಲ್ಲಿ ನಟಿಸಿದ್ದರೂ, ಅಧಿಕೃತವಾಗಿ ಹೀರೋ ಆಗಿ ನಟಿಸಿಲ್ಲ. ಅಂಥಾದ್ದೊಂದು ಸಾಧನೆಗೆ ಹತ್ತಿರವಾಗಿದ್ದಾರೆ ಚಿಕ್ಕಣ್ಣ. ರಾಬರ್ಟ್ ಚಿತ್ರ ನಿರ್ಮಿಸುತ್ತಿರುವ ಉಮಾಪತಿ ನಿರ್ಮಾಣದ ಹೊಸ ಚಿತ್ರಕ್ಕೆ ಚಿಕ್ಕಣ್ಣ ಹೀರೋ. ಮಾಸ್ಟರ್ ಪೀಸ್ ಮತ್ತು ಭರತ ಬಾಹುಬಲಿ ನಿರ್ದೇಶಕ ಮಂಜು ಮಾಂಡವ್ಯ, ಚಿಕ್ಕಣ್ಣ ಹೀರೋ ಆಗುತ್ತಿರುವ ಚಿತ್ರಕ್ಕೆ ನಿರ್ದೇಶಕ.

  `ಚಿತ್ರರಂಗಕ್ಕೆ ಬಂದು 10 ವರ್ಷಗಳಾದವು. ವೃತ್ತಿ ಜೀವನದಲ್ಲಿ ಒಂದು ಮೆಟ್ಟಿಲು ಮೇಲೇರಿದ್ದೇನೆ ಎನ್ನುವುದಷ್ಟೇ ಸಮಾಧಾನ. ಮುಂದಿನ ತಿಂಗಳಿಂದ ಶೂಟಿಂಗ್ ಶುರು ಎಂದಿದ್ದಾರೆ ಚಿಕ್ಕಣ್ಣ.

  ಚಿಕ್ಕಣ್ಣ ಹೀರೋ ಆದರೆ, ದ್ವಾರಕೀಶ್, ಜಗ್ಗೇಶ್, ಕೋಮಲ್, ಶರಣ್ ಸಾಲಿಗೆ ಸೇರಲಿದ್ದಾರೆ.

 • ಜೈ ಶ್ರೀರಾಮ್ ರಾಬರ್ಟ್ ಜಪ

  roberrt chants jai shri ram mantra

  ರಾಬರ್ಟ್‍ಗೂ ರಾಮನಿಗೂ ಎತ್ತಣೆಂದೆತ್ತಣ ಸಂಬಂಧ ಎನ್ನುವ ಹಾಗೆಯೇ ಇಲ್ಲ. ಏಕೆಂದರೆ ನಾವು ಹೇಳ್ತಿರೋದು ದರ್ಶನ್ ರಾಬರ್ಟ್ ಬಗ್ಗೆ. ಇತ್ತೀಚೆಗಷ್ಟೇ ಬಾ ಬಾ ಬಾ ರೆಡಿ ಆಡಿಯೋ ರಿಲೀಸ್ ಮಾಡಿದ್ದ ರಾಬರ್ಟ್ ಟೀಂ, ಈಗ ಶ್ರೀರಾಮನ ಜಪ ಮಾಡುತ್ತಿದೆ. ಇದೇ ಹೋಳಿ ಹಬ್ಬಕ್ಕೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

  ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜೈ ಶ್ರೀರಾಮ್ ಹಾಡು ರಿಲೀಸ್ ಆಗಲಿದೆ. ನಿರ್ದೇಶಕ ತರುಣ್ ಸುಧೀರ್ ಅವರಂತೂ ಇದು ನನ್ನ ಹೃದಯಕ್ಕೆ ಹತ್ತಿರವಾದ ಗೀತೆ. ಇದನ್ನು ಕೇಳುತ್ತಿದ್ದರೆ ಅಗಾಧ ಶಕ್ತಿ ದೊರೆತಂತೆ ಭಾಸವಾಗುತ್ತೆ ಎಂದಿದ್ದಾರೆ.

  ದರ್ಶನ್‍ಗೆ ಹನುಮನ ವೇಷ ಹಾಕಿಸಿದ್ದ ತರುಣ್, ಜೈ ಶ್ರೀರಾಮ್ ಹಾಡನ್ನು ಯಾವ ರೀತಿ ಪ್ರೆಸೆಂಟ್ ಮಾಡಿದ್ದಾರೆ ನೋಡಬೇಕು. ಅರ್ಜುನ್ ಜನ್ಯ ಸಂಗೀತದ ರಾಬರ್ಟ್ ಚಿತ್ರದ ಒಂದು ಹಾಡು ಈಗಾಗಲೇ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಜೈ ಶ್ರೀರಾಮ್ ಎನ್ನುತ್ತಾ ಹೋಳಿಗೆ ಬರುತ್ತಿದ್ದಾನೆ ರಾಬರ್ಟ್. ಜೈ ಶ್ರೀರಾಮ್.

 • ಡಿ ಬಾಸ್ ಹನುಮನ ಅವತಾರ

  robert image

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಹನುಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕುರುಕ್ಷೇತ್ರದಲ್ಲಿ ಮಹಾಭಾರತದ ಕಿಚ್ಚು ಹೊತ್ತಿಸಿದ್ದ ದರ್ಶನ್, ರಾಬರ್ಟ್ ಚಿತ್ರದ ಈ ಒಂದು ಪೋಸ್ಟರ್ ಮೂಲಕ ರಾಮಾಯಣದ ಗುಂಗು ಹಿಡಿಸಿದ್ದಾರೆ.

  ಮೂಲಗಳ ಪ್ರಕಾರ ಈ ಚಿತ್ರದಲ್ಲಿ ದರ್ಶನ್ 3 ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳಲ್ಲಿ ಎರಡು ಶೇಡ್ ರಿವೀಲ್ ಆಗಿದೆ. ಒಂದು ರಾಬರ್ಟ್ ಪಾತ್ರ, ಮತ್ತೊಂದು ಸಂಜಯ್ ಪಾತ್ರ ರಿವೀಲ್ ಆಗಿವೆ. ಅಂದಹಾಗೆ ನಿರ್ದೇಶಕ ತರುಣ್ ಸುಧೀರ್ ಇದುವರೆಗೆ ಟೀಸರ್ ಕೊಟ್ಟಿಲ್ಲ. ಕೇವಲ ಪೋಸ್ಟರುಗಳಲ್ಲೇ ಆಟವಾಡುತ್ತಿದ್ದರೂ, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಸೃಷ್ಟಿಸಿದ್ದಾರೆ.

  ಉಮಾಪತಿ ನಿರ್ಮಾಣದ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿದ್ದು, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ ಕೂಡಾ ಪ್ರಧಾನ ಪಾತ್ರಗಳಲ್ಲಿದ್ದಾasರೆ. ಡಬ್ಬಿಂಗ್ ಕೆಲಸದಲ್ಲಿ ನಿರತವಾಗಿರುವ ಚಿತ್ರ, ಏಪ್ರಿಲ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 • ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಕಾಣಿಕೆ

  roberrt team gifts teaser for darshan't birthday

  ದರ್ಶನ್ ಹುಟ್ಟುಹಬ್ಬ ಎಂದಿನಂತೆ ಈ ಬಾರಿಯೂ ಸಮಾಜಸೇವೆಯ ಕೆಲಸಗಳೊಂದಿಗೆ ನಡೆಯಲಿದೆ. ಅಭಿಮಾನಿಗಳು ದರ್ಶನ್ ಮನೆಗೆ ಆಗಮಿಸಿ ಶುಭ ಕೋರುತ್ತಾರೆ. ಕೇಕ್ ಚೆಲ್ಲಾಡುವುದಿಲ್ಲ. ಪಟಾಕಿ ಸಿಡಿಯುವುದಿಲ್ಲ. ಹಾರಾಟ.. ಕೂಗಾಟ.. ಇರುವುದಿಲ್ಲ. ಬದಲಿಗೆ ಅಭಿಮಾನಿಗಳು ಧವಸಧಾನ್ಯ ಸಂಗ್ರಹಿಸಿ ಅನಾಥಾಶ್ರಮ, ಮಠ, ವೃದ್ಧಾಶ್ರಮಗಳಿಗೆ ತಲುಪಿಸುವ ಕೈಂಕರ್ಯ ಮಾಡುತ್ತಾರೆ. ಇದೆಲ್ಲದರ ಜೊತೆಗೆ ರಾಬರ್ಟ್ ಚಿತ್ರತಂಡ ಒಂದು ಉಡುಗೊರೆ ಕೊಡುತ್ತಿದೆ. ರಾಬರ್ಟ್ ಟೀಸರ್ ರಿಲೀಸ್ ಮಾಡುತ್ತಿದೆ.

  ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಬರ್ಟ್ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಫೆ.16ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಟೀಸರ್ ರಿಲೀಸ್ ಆಗಲಿದೆ.

  ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ದರ್ಶನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಲು ಪ್ಲಾನ್ ಮಾಡಿದ್ದಾರೆ.

 • ರಾಬರ್ಟ್ ರಂಜಾನ್ ಗೆಟಪ್

  roberrt's ramadhan special poster creates senston

  ಪ್ರತಿ ಹಬ್ಬಕ್ಕೂ ಒಂದೊಂದು ಸ್ಪೆಷಲ್ ಟ್ರೀಟ್‍ಮೆಂಟ್ ಕೊಡುತ್ತಲೇ ಬಂದ ರಾಬರ್ಟ್, ರಂಜಾನ್ ಹಬ್ಬಕ್ಕೆ ವಿಶೇಷ ಪೋಸ್ಟರ್ ಜೊತೆ ಕಿಕ್ ಕೊಟ್ಟಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್ ಮತ್ತು ಉಮಾಪತಿ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಚಿತ್ರಮಂದಿರಗಳಲ್ಲಿ ದೂಳೆಬ್ಬಿಸಬೇಕಿದ್ದ ಸಿನಿಮಾ ಲಾಕ್ ಡೌನ್ ಮುಕ್ತಿಗೆ ಕಾಯುತ್ತಿದೆ.

  ಪೋಸ್ಟರ್ ರಿಲೀಸ್ ಮಾಡಿರುವ ದರ್ಶನ್, ಎಲ್ಲರ ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಈ ಚಿತ್ರ ನಿಮ್ಮ ಮಡಿಲು ಸೇರಲಿದೆ. ಮನೆಯಲ್ಲೇ ಇರಿ, ಮನೆಯಲ್ಲಿರುವವರಿಗೆ ಜಾಗೃತವಾಗಿರಿ ಎಂದು ಸಂದೇಶ ನೀಡಿದ್ದಾರೆ.

 • ರಾಬರ್ಟ್ ರಿಲೀಸ್ ಆಗೋಕೂ ಮೊದಲೇ ಸೂಪರ್ ಹಿಟ್

  even before the movie release roberrt is super hit

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವ ಇನ್ನೊಂದು ಬಿರುದೇ ಬಾಕ್ಸಾಫೀಸ್ ಸುಲ್ತಾನ. ಅದು ರಾಬರ್ಟ್ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗುವ ಸೂಚನೆಗಳಿವೆ. ಏಕೆಂದರೆ ರಾಬರ್ಟ್ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.

  ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರದ ಡಿಸ್ಟ್ರಿಬ್ಯೂಷನ್ ಹಕ್ಕುಗಳು 35 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆಯಂತೆ. ಚಿತ್ರದ ಆಡಿಯೋ, ಸ್ಯಾಟಲೈಟ್, ಡಬ್ಬಿಂಗ್ ರೈಟ್ಸ್ ಎಲ್ಲವನ್ನೂ ಲೆಕ್ಕ ಹಾಕಿದರೆ ಬಿಸಿನೆಸ್ ಮೊತ್ತ 50 ಕೋಟಿಗೂ ಹೆಚ್ಚು.

  ದರ್ಶನ್ ಅವರಿಗೆ ಇದೇ ಮೊದಲ ಬಾರಿಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿನೋದ್ ಪ್ರಭಾಕರ್ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಶಾ ಭಟ್, ಸೋನಲ್ ಮಂಥೆರೋ ಕೂಡಾ ಪ್ರಧಾನ ಪಾತ್ರಗಳಲ್ಲಿರೋ ಚಿತ್ರ ಏಪ್ರಿಲ್ 9ರಂದು ರಿಲೀಸ್ ಆಗಲಿದೆ.

   

 • ರಾಬರ್ಟ್ ಸಾಂಗ್ ಶೂಟಿಂಗ್ ಈಗ ಎಲ್ಲಿ ಗೊತ್ತಾ..?

  roberrt song shoot location hunt in india itself

  2020ರ ಸೆನ್ಸೇಷನ್ ಆಗಲಿರುವ ಸಿನಿಮಾ ರಾಬರ್ಟ್. ಏಪ್ರಿಲ್ 9ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ರಾಬರ್ಟ್ ಟೀಂ, ಈಗ ಚಿತ್ರದ ಬಹುಮುಖ್ಯ ಹಾಡಿನ ಶೂಟಿಂಗ್‍ಗೆ ಗುಜರಾತ್‍ನತ್ತ ಹೊರಟಿದೆ.

  ಹಾಡಿಗಾಗಿ ವಿದೇಶಕ್ಕೆ ಹೋಗಬೇಕಿದ್ದ ರಾಬರ್ಟ್ ಟೀಂ, ಕೊರೋನಾ ವೈರಸ್ ಕಾರಣದಿಂದಾಗಿ ಶೂಟಿಂಗ್ ಕ್ಯಾನ್ಸಲ್ ಮಾಡಿತ್ತು. ಸದ್ಯಕ್ಕೆ ಕೊರೋನಾ ರಿಲ್ಯಾಕ್ಸ್ ನೀಡದ ಹಿನ್ನೆಲೆ ಲೊಕೇಷನ್ ಶಿಫ್ಟ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.


  ರಾಬರ್ಟ್ ಚಿತ್ರದ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಗುಜರಾತ್‍ನ ಕಛ್ ಪ್ರದೇಶದಲ್ಲ ನಡೆಯಲಿದೆಯಂತೆ. ದರ್ಶನ್ ಎದುರು ಆಶಾ ಭಟ್ ನಾಯಕಿ. ಸೋನಲ್ ಮಂಥೆರೋ ಕೂಡಾ ಚಿತ್ರದಲ್ಲಿದ್ದಾರೆ. ರೊಮ್ಯಾಂಟಿಕ್ ಸಾಂಗ್ ಜೋಡಿ ಯಾರು..? ಸಸ್ಪೆನ್ಸ್.. ಸಸ್ಪೆನ್ಸ್..

 • ರಾಬರ್ಟ್ ಹನುಮನ ಹೆಗಲ ಮೇಲಿದ್ದ ರಾಮ ಯಾರು..?

  Robert Boy jesan image

  ರಾಬರ್ಟ್ ರಾಮಾಯಣ ದರ್ಶನ್ ಅಭಿಮಾನಿಗಳು ಥ್ರಿಲ್ಲಾಗುವಂತೆ ಮಾಡಿದೆ. ದರ್ಶನ್ ಇದುವರೆಗೆ ಇಂತಹ ಗೆಟಪ್ಪಿನಲ್ಲಿ ಕಾಣಿಸಿಕೊಂಡೇ ಇರಲಿಲ್ಲ. ಇದೇ ಮೊದಲು.. ದರ್ಶನ್ ಅವರ ಆಂಜನೇಯನ ಗೆಟಪ್‍ನಲ್ಲಿ ಅಷ್ಟೇ ಕುತೂಹಲ ಸೃಷ್ಟಿಸಿ ಬೆರಗು ಹುಟ್ಟಿಸಿರುವುದು ದರ್ಶನ್ ಹೆಗಲ ಮೇಲಿರೋ ರಾಮ ಅರ್ಥಾತ್ ಬಾಲರಾಮ.

  ಈ ಬಾಲರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಹುಡುಗನ ಹೆಸರು ಜೇಸನ್. ಬಾಂಬೆಯ ಹುಡುಗ. ಅಕ್ಷಯ್ ಕುಮಾರ್, ಶಾರೂಕ್ ಅಭಿನಯದ ಚಿತ್ರಗಳಲ್ಲಿ ನಟಿಸಿರುವ ಬಾಲ ಕಲಾವಿದ. 10 ವರ್ಷದ ಈ ಹುಡುಗ ಕೆಲವು ಜಾಹೀರಾತುಗಳಲ್ಲೂ ನಟಿಸಿದ್ದಾನೆ.

  ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ 3 ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಭಟ್ ನಾಯಕಿ. ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ ಕೂಡಾ ಪ್ರಮುಖ ಪಾತ್ರಗಳಲ್ಲಿದ್ದು, ಜಗಪತಿ ಬಾಬು ಖಳನಾಯಕ. ಉಮಾಪತಿ ನಿರ್ಮಾಣದ ಚಿತ್ರ, ಬೇಸಗೆ ರಜೆಗೆ ಬರುವ ಸಾಧ್ಯತೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery