` one love 2, - chitraloka.com | Kannada Movie News, Reviews | Image

one love 2,

  • ಒಂದ್ ಲವ್ವು.. 2 ಸ್ಟೋರಿ.. ಏನ್ರೀ ಇದು ಮಿಸ್ಟರಿ..?

    what is the mystery in one love 2 mvoie

    ಒನ್ ಲವ್.. 2 ಸ್ಟೋರಿ.. ಚಿತ್ರದ ಟೈಟಲ್ಲು ನೋಡಿದವರಿಗೆ ಕನ್‍ಫ್ಯೂಸ್ ಆಗೋದು ಕಾಮನ್ನೇ ಬಿಡಿ. ಅದು ಮೋಸ್ಟ್ ಲೀ 2 ಲವ್ ಸ್ಟೋರಿ ಇರ್ಬೇಕು ಎನ್ನಿಸುತ್ತೆ. ಆದರೆ, ಟ್ರೇಲರ್ ನೋಡಿದ್ರೆ ಹಾಗನ್ನಿಸಲ್ಲ.

    ಇದು ಗಾಂಧಿನಗರದ ಮಂದಿಯ ಕಥೆಯೋ.. ಹರೆಯದ ಮಕ್ಕಳ ಪ್ರೇಮಕಥೆಯೋ.. ಗೊತ್ತಾಗಲ್ಲ.  ಸಂತು, ಮಧು, ಪ್ರಕೃತಿ, ವಚನ ನಟಿಸಿರೋ ಚಿತ್ರಕ್ಕೆ ವಸಿಷ್ಠ ಬಂಟನೂರು ನಿರ್ದೇಶಕ. ಅವರಿಗಿದು ಮೊದಲ ಚುಂಬನ. ಸಿಲ್ವರ್ ಸ್ಕ್ರೀನ್ಸ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್‍ನ ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗ್ತಿದೆ.

     

  • ಒನ್ ಲವ್ 2 ಸ್ಟೋರಿ ಹೀರೋಗೆ ಅಪ್ಪುನೇ ಸ್ಫೂರ್ತಿ

    one love 2 hero's role model is puneeth rajkumar

    ಒನ್ ಲವ್ 2 ಸ್ಟೋರಿ ಅನ್ನೋ ಚಿತ್ರ ಈ ವಾರ ರಿಲೀಸ್ ಆಗ್ತಿದೆ. ಚಿತ್ರದ ಹೀರೋ ಸಂತೋಷ್. ಸಿನಿಮಾ ಆಸಕ್ತಿ ಮೊದಲಿನಿಂದಲೇ ಇದ್ದ ಸಂತುಗೆ ಪುನೀತ್ ರಾಜ್‍ಕುಮಾರ್ ಎಂದ್ರೆ ಪಂಚಪ್ರಾಣ. ಮನೆಯವರ ಒತ್ತಾಯಕ್ಕೆ ಮಣಿದು ಎಂಜಿನಿಯರಿಂಗ್ ಮಾಡಿ ಐಟಿಯಲ್ಲಿ ಕೆಲಸಕ್ಕೂ ಸೇರಿದರು. ಕೈತುಂಬಾ ಸಂಬಳವಿದ್ದರೂ ಸಿನಿಮಾ ಹಲೋ.. ಹಲೋ ಎನ್ನುತ್ತಲೇ ಇತ್ತು.

    ಸಂತೋಷ್ ಹಾಗೂ ನಿರ್ದೇಶಕ ವಸಿಷ್ಠ ಇಬ್ಬರೂ ಬಹುಕಾಲದ ಗೆಳೆಯರು. ಕಥೆಯೂ ಇಷ್ಟವಾಯ್ತು. ಕಾಲ ಕೂಡಿ ಬಂತು. ಸಂತೋಷ್ ಹೀರೋ ಆದ್ರೆ, ವಸಿಷ್ಠ ಡೈರೆಕ್ಟರ್ ಆದ್ರು. ಅವರಿಬ್ಬರ ಒನ್ ಲವ್ 2 ಸ್ಟೋರಿ ಇದೇ ವಾರ ತೆರೆಗೆ ಬರುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery