ಕರ್ನಾಟಕ ಮುಳುಗುತ್ತಿದೆ. ಎಲ್ಲೆಲ್ಲೂ ನೀರು. ಇಡೀ ಕರ್ನಾಟಕದ ಜನ ಸಂತ್ರಸ್ತರ ನೆರವಿಗೆ ಧಾವಿಸುತ್ತಿದ್ದಾರೆ. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಲ್ಲ. ಕೆಲವು ನಟರು ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ದರೆ, ಇನ್ನೂ ಕೆಲವರು ಅಭಿಮಾನಿ ಸಂಘಗಳ ಮೂಲಕ ನೆರವು ನೀಡುತ್ತಿದ್ದಾರೆ. ಸ್ವತಃ ಪರಿಹಾರ ಕಾರ್ಯಾಚರಣೆ ಧುಮುಕಿದ್ದಾರೆ.
ನಟ ಉಪೇಂದ್ರ 5 ಲಕ್ಷ ರೂ, ನಟಿ ಸುಧಾರಾಣಿ 1 ಲಕ್ಷ ರೂ. ನಟಿ ತಾರಾ 1 ಲಕ್ಷ ರೂ. ನೆರವು ನೀಡಿದ್ದಾರೆ. ಸುದೀಪ್ ತಮ್ಮ ಅಭಿಮಾನಿ ಸಂಘಗಳನ್ನು ಸಂಘಟಿಸಿದ್ದಾರೆ. ಬೆಂಗಳೂರಿನಿಂದ ನೆರವು ಕಳುಹಿಸುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಶಿವಣ್ಣ, ಪುನೀತ್, ದರ್ಶನ್ ಅಭಿಮಾನಿ ಸಂಘಗಳೂ ನೆರೆ ಸಂತ್ರಸ್ತರ ಜೊತೆಯಲ್ಲಿವೆ.
ರಕ್ಷಿತ್ ಶೆಟ್ಟಿ, ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರತಂಡ ಸ್ವತಃ ನೆರವು ಸಂಗ್ರಹಿಸಿ ಕಳಿಸಿದ್ದರೆ, ನಟಿ ಹರಿಪ್ರಿಯಾ ಅಗತ್ಯ ವಸ್ತುಗಳನ್ನು ಖರೀದಿಸಿ ಸ್ವತಃ ತಾವೇ ಹೊರಡಲು ಸಿದ್ಧರಾಗಿದ್ದಾರೆ.
ಭರಾಟೆ ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬದ ದಿನವೇ ರಿಲೀಸ್ ಮಾಡಿದ ಹಾಡಿನ ಸಂಪೂರ್ಣ ಲಾಭವನ್ನು ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದೆ. ಪ್ರವಾಹ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಇನ್ನಷ್ಟು ನೆರವು ಘೋಷಿಸುವುದಾಗಿ ಭರವಸೆ ಕೊಟ್ಟಿದ್ದಾರೆ.
Related Articles :-
Celebrities Requests Fans To Support Flood Hit Areas